ಚುಟುಕ

ಹಂಬಲ


ಹಂಬಲ

ಈ ದಾರಿಯ ತಿರುವಲ್ಲಿ

ಒಂದು ಗುಡಿಸಲಿರಲಿ..

ಒಳಗೆ ಮಣ್ಣ ನೆಲದ ಮೇಲೆ ಚಿತ್ತಾರ ಅರಳಿರಲಿ…

ಒಳಗಿನ ತಮ ಹೋಗಿಸುವಷ್ಟು ಬೆಳಕಿರಲಿ..

ಅನ್ನಪಾತ್ರೆ ಖಾಲಿಯಾದರೂ ಚಿಂತೆ ಇಲ್ಲ…

ಒಡಕಲು ಮಡಿಕೆಯ ಕೆಳಗೆ ನಾಲ್ಕು ಹನಿ ಮಧು ಇರಲಿ..

ಸಖಿ ಅಲ್ಲಿ ನಿನ್ನ ನೆರಳಿರಲಿ…

-ಉಮೇಶ್ ದೇಸಾಯಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಹಂಬಲ

  1. ಕವನ ಚೆನ್ನಾಗಿದೆ. "ಅನ್ನ ಪಾತ್ರೆ ಖಾಲಿಯಾದರೂ ಚಿಂತೆಯಿಲ್ಲ" ಇಂತಹ ಕೆಳ ಮಟ್ಟದ ( ಈ ಶಬ್ದವನ್ನು ತಪ್ಪು ಅರ್ಥ ಮಾಡದಿರಿ) ಯೋಚನೆ ಖುಶಿ ಕೊಡಲಿಲ್ಲ. ಯಾವಾಗಲೂ ದೊಡ್ಡದನ್ನೇ ಯೋಚಿಸಿ. ಮುಂದಿನ ಸಾಲಿನ ಕೊನೆ ತುಂಬಾ ಚೆನ್ನಾಗಿದೆ. (ಹಿಂದಿನ ಸಾಲಿಗೆ ಪೂರಕ ವಾಗಿದೆ). ಕವನ ಚೆನ್ನಾಗಿದೆ ಎಂದು ಪುನಹ ಹೇಳಲು ಇಚ್ಚಿಸುತ್ತೇನೆ.

  2. ಒಡಕಲು ಮಡಿಕೆಯ ಕೆಳಗೆ ನಾಲ್ಕು ಹನಿ ಮಧು ಇರಲಿ..
    ಸಖಿ ಅಲ್ಲಿ ನಿನ್ನ ನೆರಳಿರಲಿ…
    ಜೀವನದ ಸಾರ್ಥಕತೆ ಯಾರ್ಯಾರು ಎಲ್ಲೆಲ್ಲಿ ಕಂಡುಕೊಳ್ಳಲು ಬಯಸುತ್ತಾರೆ೦ದು ಬಲ್ಲವರಾರು?
    ಚೆನ್ನಾಗಿದೆ ನಿಮ್ಮ ರಚನೆ 🙂

Leave a Reply

Your email address will not be published. Required fields are marked *