(ಇಲ್ಲಿಯವರೆಗೆ…)
ರಾಜೇಶ ಇನ್ನು ಮನೆಗೆ ಬಂದಿರಲಿಲ್ಲ. ಆಗ ಪದ್ಮಮ್ಮ ರೇಖಾಳಿಗೆ ಬಾರಮ್ಮ ಬಾ ನಿನ್ನಿಂದ ಒಂದು ಉಪಕಾರ ಆಗಬೇಕಾಗಿದೆ ಎಂದಳು. ನಮ್ಮ ರಾಜೇಶ ಸುಧಾಳ ನೆನಪಲ್ಲೆ ಹುಚ್ಚನ ಹಾಗಾಗಿದ್ದಾನೆ. ನಿನ್ನ ಮಾತಿಗೆ ಆತ ಗೌರವ ಕೊಡುತ್ತಾನೆ ದಯವಿಟ್ಟು ಅವನಿಗೆ ಮೊದಲಿನ ರಾಜೇಶ ಅಗೋಕೆ ಹೇಳಮ್ಮ. ಇದ್ದ ಒಂದು ವಂಶದ ಕುಡಿನು ದ್ವೇಷಿಸೋಕೆ ಕಲಿತಿದ್ದಾನೆ. ಏನು ಮಾಡಬೇಕು ಅಂತ ತಿಳಿತಿಲ್ಲಾ ಎಂದರು ಪದ್ಮಮ್ಮ. ಆದರೆ ಅಂದು ಎಷ್ಟು ಹೊತ್ತಾದರು ರಾಜೇಶ ಬಾರದಿರುವುದನ್ನ ಕಂಡು ರೇಖಾ ವಾಪಸ ಮನೆಗೆ ಬಂದಳು. ಇಲ್ಲಿ ರಾಧಮ್ಮ ಎಲ್ಲಿಗೆ ಹೋಗಿದ್ದೆ ಎಂದು ಗದರಿಸಿ ಕೇಳಿದಳು. ಏನಮ್ಮಾ ಹೀಗೆ ಕೇಳ್ತಾ ಇದ್ದಿಯಾ ನಾನು ಸುಧಾಳ ಗಂಡನ ಮನೆಗೆ ಹೋಗಿದ್ನಮ್ಮಾ ಎಂದಳು. ನಿನಗೆ ಅಲ್ಲೆನೆ ಕೆಲಸಾ ನಿನ್ನ ಗೆಳತಿನೆ ಹೋದ ಮೇಲೆ ಎಂದಳು ರಾಧಮ್ಮ. ಏನಮ್ಮಾ ದುಃಖದಲ್ಲಿರೊರಿಗೆ ಸ್ವಾಂತನದ ಮಾತು ಹೇಳಬಾರದಾ ಎಂದಳು. ಅದನ್ನ ನಾವು ಹಿಂದೆನೆ ಮಾಡಿದ್ದಿವಿ. ಈಗ ನೀನೆನು ಮಾಡಬೇಕಾಗಿಲ್ಲ ಇನ್ನು ನಿನ್ನ ಬದುಕಿನ ಬಗ್ಗೆ ಚಿಂತೆ ಮಾಡು ಎಂದು ಒಳಹೋದರು. ರೇಖಾಳಿಗೆ ರಾಧಮ್ಮನ ವರ್ತನೆ ವಿಚಿತ್ರವೆನಿಸಿತು.
ರಾಜೇಶ ತುಂಬಾ ತಡವಾಗಿ ಮನೆಗೆ ಬಂದುದನ್ನು ಕಂಡು ಪದ್ಮಮ್ಮ ಬಯ್ಯಲು ಶುರುಮಾಡಿದರು. ಆದರೆ ರಾಜೇಶ ಅದು ತನಗಲ್ಲವೆಂಬಂತೆ ತನ್ನ ರೂಮಿಗೆ ಹೋಗಿ ಬಾಗಿಲು ಮುಚ್ಚಿದ. ಪದ್ಮಮ್ಮನಿಗೆ ಮಗನನ್ನು ನೋಡಿ ಸಂಕಟವಾಗುತ್ತಿತ್ತು. ಯಾವಾಗಲು ನಗೆಯ ಬುಗ್ಗೆಯಂತಿದ್ದ ಅವನ ನಗೆ ಮಾಯವಾಯಿತು. ಊಟಕ್ಕೆ ಬಡಿಸಿದರು ಅಮ್ಮನ ಒತ್ತಾಯಕ್ಕ ಊಟ ಮಾಡುತ್ತಿದ್ದ. ಎನೊ ಬದುಕಬೇಕಲ್ಲ ಎನ್ನುವಂತೆ ನಾಲ್ಕು ತುತ್ತು ತಿಂದು ಉಂಡ ಶಾಸ್ತ್ರ ಮಾಡುತ್ತಿದ್ದ ಅವನನ್ನು ನೋಡಿದರೆ ಅವಳಿಗೆ ಕರಳು ಕಿವಚಿದಷ್ಟು ಸಂಕಟವಾಗುತ್ತಿತ್ತು. ಮಗನಿಗೆ ಹೇಗೆ ಸಮಾಧಾನ ಮಾಡಬೇಕು ಅವನು ಮತ್ತೆ ಮೊದಲಿನ ತರಹ ಯಾವಗ ಆಗ್ತಾನೆ ದೇವರೆ ನನ್ನ ಮಗನನ್ನು ಮತ್ತೆ ಮೊದಲಿನ ರಾಜೇಶ ಆಗುವ ಹಾಗೆ ಮಾಡಪ್ಪ ಎಂದು ದೇವರನ್ನು ಪ್ರಾರ್ಥಿಸಿದಳು. ರಾಜೇಶನಿಗೆ ಸುಧಾ ಇಲ್ಲದ ಈ ಜೀವನ ಶೂನ್ಯ ಅನಿಸುತ್ತಿತು. ಯಾವದರಲ್ಲಿ ಆಸಕ್ತಿ ಇರಲಿಲ್ಲ.
ಎಲ್ಲ ಯಾಂತ್ರಿಕವೆಂಬಂತೆ ಮಾಡುತ್ತಿದ್ದ. ಆಫಿಸಿನಲ್ಲಿ ಇವನ ಸಹದ್ಯೋಗಿ ಮತ್ತು ಇವನಿಗೆ ಆತ್ಮೀಯ ಗೆಳೆಯನಾಗಿದ್ದ ಶ್ರೀಕಾಂತನಿಗೂ ಇವನ ಮನಸ್ಸಿನಲ್ಲಿಯೆ ಸಂಕಟ ಪಡುತ್ತಿರುವುದು ಆರ್ಥವಾಗುತ್ತಿತ್ತು. ಇವರಿಬ್ಬರ ಜೋಡಿ ಅದೆಷ್ಟು ಚೆನ್ನಾಗಿತ್ತು ಪಾಪ ದೇವರು ಅನ್ಯಾಯವಾಗಿ ಇವನ ಪ್ರೀತಿಯನ್ನ ಕಿತ್ತುಕೊಂಡ. ದೇವರು ಅದೆಷ್ಟು ನಿರ್ದಯಿ ಎಂದುಕೊಂಡ. ಕೆಲಸದ ಒತ್ತಡದಲ್ಲಿ ಹೆಂಡತಿಯ ಕಡೆ ಗಮನ ಕೊಡದೆ ಇರುವ ಸಂಗತಿಯನ್ನು ರಾಜೇಶ ನನ್ನ ಹತ್ತಿರ ಹೇಳಿಕೊಂಡಿದ್ದ. ಆದರೆ ಅವನ ಬಾಳಿನಲ್ಲಿ ವಿಧಿ ಈ ತರಹ ಆಟವಾಡಬಾರದಾಗಿತ್ತು. ಯಾವಾಗಲು ನಗು ನಗುತ್ತಾನೆ ಇರುವ ರಾಜೇಶ ಈಗ ಜೀವಂತ ಶವದ ತರಹ ಆಗಿರೋದು ಶ್ರೀಕಾಂತನಿಗೆ ಸಂಕಟವಾಗುತ್ತಿತ್ತು. ಮರುದಿನ ರೇಖಾ ಮನೆ ಹತ್ತಿರದ ಕ್ವಾಯಿನ್ ಬಾಕ್ಸ್‌ಗೆ ಹೋಗಿ ರಾಜೇಶನ ಬ್ಯಾಂಕಿಗೆ ಫೋನ್ ಮಾಡಿದಳು. ಹಲೋ ಎಂದು ಅತ್ತ ರಾಜೇಶನ ಧ್ವನಿ ಕೇಳುತ್ತಲೆ ನಾನು ರೇಖಾ ಮಾತಾಡ್ತಿದಿನಿ. ಹೇಗಿದ್ದೀರಾ ರಾಜೇಶ ಎಂದಳು. ಹೇಗಿರಬೇಕೂಂತ ನೀವೆ ಹೇಳಿ ಸುಧಾ ಹೋದ ಮೇಲೆ ಜೀವನಾನೆ ಬೇಸರ ಆಗಿದೆ ಎಂದಳು. ಅದಕ್ಕೆ ರೇಖಾ ರಾಜೇಶ ನಾನು ನಿಮ್ಮ ಹತ್ತಿರ ಸ್ವಲ್ಪ ಮಾತಾಡಬೇಕಿತ್ತು ಇವತ್ತು ಸಾಯಂಕಾಲ ನಿಮ್ಮ ಬ್ಯಾಂಕ್ ಹತ್ತಿರ ಬರಲಿ ಎಂದು ಕೇಳಿದಳು. ಹಾಗೆ ಮಾಡಿ ರೇಖಾ ನಾನು ಕಾಯ್ತಿರ್‍ತಿನಿ ಐದೂವರೆಗೆ ಬನ್ನಿ ಎಂದು ಫೋನ್ ಕೆಳಗಿಟ್ಟ.
ಸಾಯಂಕಾಲ ಐದೂವರೆಗೆ ಸರಿಯಾಗಿ ರೇಖಾ ಬ್ಯಾಂಕಿನ ಹತ್ತಿರ ಬಂದಿದ್ದಳು. ಕೆಲಸ ಮುಗಿಯುತ್ತಲೆ ರಾಜೇಶ ಹೋರಗೆ ಬಂದ. ರೇಖಾ ಕಾಯುತ್ತಿದ್ದದನ್ನು ಕಂಡು ಬಹಳ ಹೋತ್ತಾಯಿತಾ ಬಂದು ಎಂದು ಕೇಳಿದ. ಇಲ್ಲ ಈಗ ತಾನೆ ಬಂದೆ ಎಂದಳು. ಇಬ್ಬರು ಮಾತಾಡುತ್ತಾ ಹೊರಟರು. ರೇಖಾ ರಾಜೇಶನ್ನು ನೋಡಿದಳು. ತುಂಬಾ ಇಳಿದು ಹೋಗಿದ್ದಾರೆ ಅನಿಸಿತು. ಮುಖದಲ್ಲಿ ಕುರುಚಲು ಗಡ್ಡ, ಕಳೆಗುಂದಿದ ಮುಖ. ನಿಶ್ಚಿತಾರ್ಥದಲ್ಲಿ ತಾನು ನೋಡಿದ ರಾಜೇಶ ಇವರೇನಾ ಎಂದು ಕೊಳ್ಳುವಷ್ಟು ಬದಲಾವಣೆ ಇತ್ತು. ತುಂಬಾ ನೊಂದಿರುವ ಜೀವಕ್ಕೆ ಎನೆಂದು ಹೇಳಲಿ ನನ್ನ ಮಾತಿಗೆ ಇವರ ಪ್ರತಿಕ್ರಿಯೆ ಹೇಗಿರತ್ತೋ ಗೊತ್ತಿಲ್ಲ ಕೋಪ ಮಾಡಿಕೊಂಡು ತನ್ನನ್ನು ಏನಾದರು ಅಂದರೆ ಎಂದು ಒಂದು ಕ್ಷಣ ಯೋಚಿಸಿ ಮಾತಿಗಾರಂಬಿಸಿದಳು. ಆಗ ರೇಖಾ ರಾಜೇಶ ಈ ಸಮಯದಲ್ಲಿ ನೀವು ಮಗೂನ ಬಿಟ್ಟಿರಬಾರದು ಎಂದಳು. ಆ ಮಗುವಿನಿಂದಾನೆ ನನ್ನ ಸುಧಾ ನನ್ನಿಂದ ಶಾಶ್ವತವಾಗಿ ದೂರ ಆಗಿದ್ದು ಎಂದ ಕೋಪದಿಂದ. ರಾಜೇಶ ನೀವು ಓದಿರೋರು ನೀವೆ ಹೀಗೆ ಮಾತಾಡಿದರೆ ಹೇಗೆ. ಏನು ಅರಿಯದೆ ಇರುವ ಕಂದನಿಗೆ ಇಷ್ಟು ದೊಡ್ಡ ಅಪವಾದವೆ? ಅದು ಈಗಾಗಲೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದೆ. ಹೀಗಿರುವಾಗ ತಂದೆಯಾಗಿ ನೀವು ಅದನ್ನ ದೂರ ಮಾಡಿದರೆ ಹೇಗೆ ಹೇಳಿ. ಈಗ ನೀವೆ ತಂದೆಯ ಜೊತೆಗೆ ತಾಯಿಯ ಸ್ಥಾನವನ್ನು ಅದಕ್ಕೆ ನೀಡಬೇಕು. ಸುಧಾಳಿಗೆ ಈ ಭೂಮಿಯ ಋಣ ಅಷ್ಟೆ ಇತ್ತು ಅವಳು ಹೋದಳು. ಆದರೆ ಹೋಗುವಾಗ ನಿಮಗೋಸ್ಕರ ತನ್ನ ಪ್ರತಿರೂಪಾನೆ ಬಿಟ್ಟು ಹೋಗಿದ್ದಾಳೆ. ಅದು ನಿಮ್ಮ ವಂಶದ ಕುಡಿ. ಅದಕ್ಕೆ ತಂದೆಯ ಪ್ರೀತಿ ನೀಡಿ ಬೆಳೆಸಿ. ಇದು ನಿಮ್ಮ ವೈಯಕ್ತಿಕ ವಿಷಯವಾದರೂ ನನ್ನ ಗೆಳತಿಯ ಮಗು ಹೀಗೆ ಅನಾಥವಾಗಿರೋದು ಯಾಕೋ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಅದಕ್ಕೆ ಹೇಳೋಣಾಂತ ಬಂದೆ. ನೀವು ಆ ಮಗೂನ ತಬ್ಬಲಿ ಮಾಡಿದರೆ ಸುಧಾಳ ಆತ್ಮಕ್ಕೆ ಶಾಂತಿ ಸಿಗೋದಾದರೂ ಹೇಗೆ. ಇಷ್ಟರ ಮೇಲೆ ನಿಮಿಷ್ಟ ಎಂದು ಮಾತಿಗೆ ಅವಕಾಶ ಕೊಡದೆ ಹೋದಳು ಆದರೆ ರಾಜೇಶ ಎಷ್ಟೊ ಹೊತ್ತು ಶಿಲಾಪ್ರತಿಮೆಯಂತೆ ನಿಂತೆ ಇದ್ದ. ಆತನ ಮನಸ್ಸಿನಲ್ಲಿ ತಾನು ತಪ್ಪಿತಸ್ಥ ಎಂಬ ಅರಿವಾಗತೊಡಗಿತು. ಬದುಕಿದ್ದಾಗ ನಾನು ಸುಧಾಳನ್ನು ಚೆನ್ನಾಗಿ ನೋಡಿಕೊಳ್ಳಲಾಗಲಿಲ್ಲ. ಸತ್ತ ಮೇಲಾದರೂ ಅವಳು ನೆಮ್ಮದಿಯಾಗಿರಲಿ ಎಂದೆನಿಸಿತು ಅವನಿಗೆ.
ಅವನು ಆ ಕ್ಷಣವೇ ನೇರವಾಗಿ ಅತ್ತೆ ಮನೆಗೆ ಬಂದ. ಕಾವೇರಮ್ಮ ಮಗುವನ್ನು ತೊಟ್ಟಿಲಲ್ಲಿ ಹಾಕಿ ದೇವರ ಮುಂದೆ ದೀಪ ಹಚ್ಚುತ್ತಿದ್ದಳು. ರಾಜೇಶ ಬಂದು ಅತ್ತೆ ಎಂದು ಕೂಗಿದ ಕಾವೇರಮ್ಮ ಬರುವುದರೊಳಗಾಗಿ ತೊಟ್ಟಿಲಲ್ಲಿದ್ದ ಮಗುವನ್ನು ಎತ್ತಿಕೊಂಡು ಮುದ್ದಿಸುತ್ತಿದ್ದಾ ನನ್ನ ಕ್ಷಮಿಸು ಕಂದಾ ಎನ್ನುತ್ತಿದ್ದ ಕಂಬನಿ ಅವನ ಕಣ್ಣಿಂದ ಧಾರಾಕಾರವಾಗಿ ಸುರಿಯುತ್ತಿತ್ತು ಜೊತೆಗೆ ಇಷ್ಟು ದಿನ ಇದ್ದ ದ್ವೇಷದ ಹೊಗೆಯಿಂದ ಹೊರಗೆ ಬಂದು ತಂದೆಯ ಮಮತೆ ಜಾಗೃತವಾಗಿತ್ತು ಅವನಲ್ಲಿ. ಈ ದೃಶ್ಯವನ್ನು ನೋಡಿದ ಕಾವೇರಮ್ಮ ಅಳಿಯಂದ್ರೆ ಅಂದಳು ಆಶ್ಚರ್ಯದಿಂದ ಆಗ ರಾಜೇಶ ಅತ್ತೆ ನನ್ನಿಂದ ತುಂಬಾ ತಪ್ಪಾಗಿದೆ. ಆ ತಪ್ಪನ್ನು ಈಗ ತಿದ್ದಿಕೊಬೇಕೂಂತ ಇದ್ದೀನಿ. ನನ್ನ ಮಗುಗೆ ತಂದೆಯ ಸ್ಥಾನ ನೀಡಬೇಕೂಂತ ಇದ್ದಿನಿ. ನಾನು ನಿಮ್ಮ ಮನಸ್ಸನ್ನು ತುಂಬಾ ನೋಯಿಸಿದ್ದಿನಿ ದಯವಿಟ್ಟು ನನ್ನ ಕ್ಷಮಿಸಿ ಅತ್ತೆ. ಇಷ್ಟು ದಿನ ಕತ್ತೆಲೆಯಲ್ಲಿದ್ದ ನನಗೆ ಬೆಳಕು ತೋರಿಸಿ ನನ್ನ ಕಣ್ಣು ತೆರೆಸಿದಳು ರೇಖಾ ಎಂದ ರಾಜೇಶ. ಆಗ ಕಾವೇರಮ್ಮ ಮನಸ್ಸಿನಲ್ಲಿಯೆ ಆಕೆಗೆ ವಂದಿಸಿದಳು.
ರಾತ್ರಿ ರೇಖಾಳಿಗೆ ಬೇಗ ನಿದ್ದೆ ಹತ್ತಲಿಲ್ಲ. ಅವಳು ಮಂಚದ ಮೇಲೆ ಅತ್ತಿಂದಿತ್ತ ಹೊರಳಾಡುತ್ತಾ ಮಲಗಿದಳು. ಹಳೆಯದೆಲ್ಲ ಅವಳಿಗೆ ಒಂದೊಂದಾಗಿ ನೆನಪಾಗುತ್ತಾ ಇತ್ತು. ಅವಳಿಗೆ ಸುಧಾಳದೆ ನೆನಪು. ಆಗ ಎದುರುಗಡೆ ಒಮ್ಮಿಂದೊಮ್ಮೆಲೆ ಸುಧಾ ಬಂದು ನಿಂತಂತಾಯಿತು. ರೇಖಾ ಅವಳನ್ನು ನೋಡಿ ಎದ್ದು ಕೂತಳು. ರೇಖಾ ನಿನ್ನಿಂದ ತುಂಬಾ ಉಪಕಾರವಾಗಿದೆ. ನಿನ್ನ ಋಣವನ್ನು ಬದುಕಿದ್ದಾಗ ತೀರಿಸಲು ಆಗಲಿಲ್ಲ. ನನಗೆ ಇನ್ನು ಒಂದು ಜನ್ಮಾಂತ ಇದ್ದರೆ ನಿನ್ನ ಹೊಟ್ಟೆಯಲ್ಲಿ ಮಗು ಆಗಿ ಹುಟ್ಟಿ ನಿನ್ನ ಋಣ ತೀರಿಸುತ್ತೇನೆ ಎಂದು ಹೇಳಿದಳು. ಋಣದ ಮಾತಾಡಬೇಡಾ ಸುಧಾ ನೀನಿಲ್ಲದೆ ಹೇಗೆ ಬದುಕಲಿ ಎಂದಳು ರೇಖಾ ಅಷ್ಟೊತ್ತಿಗೆ ಬಾಗಿಲ ಬಡಿದ ಶಬ್ದವಾಯಿತು. ರೇಖಾ ಎದ್ದು ಹೋಗಿ ಬಾಗಿಲ ತೆಗೆದಳು. ಎದುರಿಗೆ ರಾಧಮ್ಮ ನಿಂತಿದ್ದರು. ಏನೇ ಇಷ್ಟೊತ್ತಿನಲ್ಲಿ ಯಾರ ಜೊತೆ ಮಾತಾಡ್ತಾ ಇದ್ದೆ ಎಂದು ಒಳಗೆ ಬಂದರು ಯಾರು ಇರಲಿಲ್ಲ. ಆಗ ರೇಖಾ ಸುಧಾ ಇಲ್ಲದಿರುವುದು ಕಂಡು ಇಷ್ಟೊತ್ತು ತಾನು ನೋಡಿದ್ದು ನಿಜವೋ ಸುಳ್ಳೊ ಅಥವಾ ನನ್ನ ಭ್ರಮೆನೊ ಎಂದು ಚಿಂತಿಸುತ್ತದ್ದಳು. ಏನೇ ನಾನು ಕೇಳ್ತಾನೆ ಇದ್ದಿನಿ ನೀನು ಸುಮ್ಮನೇನಿ ಇದ್ದಿಯಲ್ಲ ಏನಾಗಿದೆ ನಿನಗೆ ಎಂದರು ರಾಧಮ್ಮ. ಯಾರು ಇಲ್ಲಮ್ಮ ನಾನು ಸುಮ್ನೆ ಹೀಗೆ ಎಂದು ಹೇಳಲು ಹೋದಳು, ಅಷ್ಟರಲ್ಲಿ ಸರಿ ಸರಿ ಲೈಟ ಆರಿಸಿ ಮಲಗು ಎಂದು ಹೇಳಿ ಹೋದಳು ರಾಧಮ್ಮ. ಆಮೇಲೆ ಬಾಗಿಲ ಹಾಕಿ ರೇಖಾ ಮಲಗಲು ಬಂದಳು. ಅಷ್ಟೊತ್ತಾದರು ಸುಧಾ ಮತ್ತೆ ಬರಲೆ ಇಲ್ಲ. ಅವಳ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದುಕೊಂಡಳು ರೇಖಾ. ಅವಳ ಮುಖದಲ್ಲಿ ಮುಗುಳ್ನಗೆಯೊಂದು ಮೂಡಿತು.
(ಮುಗಿಯಿತು…)
ಸಹೃದಯಿಗಳೇ,
ನಾಗರತ್ನಾ ಗೋವಿಂದನ್ನವರ ಸ್ನೇಹ ಭಾಂದವ್ಯ ಕಾದಂಬರಿಯನ್ನು ನೀವು ಓದಿ ಅವರ ಮೊದಲ ಪ್ರಯತ್ನವನ್ನು ಪ್ರೋತ್ಸಾಹಿಸಿದ್ದೀರಿ. ಸತತ 12 ವಾರ ಪಂಜುವಿನಲ್ಲಿ ಪ್ರಕಟವಾದ ಈ ಕಾದಂಬರಿ ಪುಸ್ತಕ ರೂಪವನ್ನೂ ಕಾಣಲಿ. ಜೊತೆಗೆ ಅವರ ಸಾಹಿತ್ಯ ಕೃಷಿ ಹೀಗೆಯೇ ಸಾಗಲಿ ಎಂದು ಪಂಜು ಬಳಗ ಹಾರೈಸುತ್ತದೆ.
ಧನ್ಯವಾದಗಳೊಂದಿಗೆ
-ಸಂಪಾದಕ ಮಂಡಳಿ
ನನ್ನ ಕಾದಂಬರಿಯನ್ನು ಪ್ರಕಟಿಸಿದ ಪಂಜು ಬಳಗದವರಿಗೆ ನಾನು ಚಿರಋಣಿ.
kaadambari tumba chennagi moodibandide … heege nimma prayatna munduvariyali … All the best
Kaadambari tumba chennagi moodibandide ..nimma prayatna heege munduvariyali ..All the best ..Thanks for Panju magazine also.. for supporting new talent
Tumba chenagide ..keep up the good work ..sambashane tumba chenagide … next novel ge wait madta iddivi … Thanks Ratna and Thanks Panju magazine for supporting the new talent
Novel alli olle message ide friend ship bagge ,,,heege message iruvantaha kathe nim inda expect madtivi …
i wish good luck……
Nimma kadambari chennagide.kateyannu munduvaresuva riti, kate saguva pari …….
Kannadakobba hosa kadambarigarti sikka santosha mattu hemme.
-L H Ravi
JNV MAdikeri
Kadambari tumba chennagide moodibandide… Friendship bagge antu tumbane chennagi baredidira… Kelavondu sanchikeyannu odabekadre tumba ne feel aitu… Nivu kate henediro riti really i like it… Keep it up…
Heege future li nimminda mattastu kadambarigalu moodibarali… All the best…!
Special thanks to PANJU team for supporting the new talent….!
Regards,
Mahesh
ಕಾದಂಬರಿಯನ್ನು ತಾಳ್ಮೆಯಿಂದ ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಮತ್ತೆ ಬರವಣಿಗೆಯನ್ನು ಮುಂದುವರೆಸಲು ಸ್ಫೂರ್ತಿ ತುಂಬಿದ ನಿಮಗೆಲ್ಲರಿಗೂ ಧನ್ಯವಾದಗಳು.
Nice story……………all the best.
I wish you a fruitful future .All the very very best to U
Nice one keep publishing new story like this.i wish you all the best.
good work
It’s nice but i read little bit & excellent keep witting
Its nice , keep writing….Good Luck!!!
Gud work..,, Keep moving forward..,, All the best..
ಕಾದಂಬರಿ ಇಷ್ಟವಾಯಿತು. ಕೆಲವು ಸಾಲುಗಳು ಇಷ್ಟವಾದರೂ ಮನಸಿಗೆ ಕಷ್ಟವಾದವು… ನಿಮ್ಮ ಸಾಲುಗಳನ್ನು ಓದುತ್ತಿದ್ದರೆ ಬರೆಯುವ ಆಸೆಯಾಗುತ್ತೆ…
ಧನ್ಯವಾದಗಳು