ಸ್ನೇಹ ಎಂಬ ನಂದಾದೀಪ: ಮಂಜು ಎಂ. ದೊಡ್ಡಮನಿ

 
ಅಲ್ಲಿ ಎಲ್ಲಿಯೂ ಎಳ್ಳಷ್ಟು ನಿಮ್ಮ ತಪ್ಪು ಇರುವುದಿಲ್ಲ, ಇದ್ದರೂ ನೀವು ಬೇಕೆಂದು ತಪ್ಪು ಮಾಡಿರುವುದಿಲ್ಲ ನಿಮ್ಮ ಗಮನಕ್ಕೆ ಬಾರದೆ ಆದ ಸಣ್ಣದೊಂದು ತಪ್ಪನ್ನು ಅವರು ದೊಡ್ಡದಾಗಿಸಿ ನಿಮ್ಮದೇ ತಪ್ಪು ಎನ್ನುವಂತೆ ತಮ್ಮನ್ನು ತಾವು  ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮೆದುರು ನಿಂತು ಪ್ರತಿಪಾದಿತ್ತಾರೆ, ಇಲ್ಲ ಸಲ್ಲದ ಆರೋಪಗಳನ್ನು ನಿಮ್ಮ ಮೇಲೆ ಹೊರಿಸುತ್ತಾರೆ, ಕಿಂಚಿಂತು ಬೆಲೆ ಕೊಡದೆ ಫುಲ್ ಸ್ಟಾಪ್ ಇಲ್ಲದೆ ಬಡ ಬಡ ಮಾತಾಡಿ, ಬಾಯಿಗೆ ಬಂದಂತೆ ಉವಾಚಿಸುತ್ತಾರೆ, ನೀವು ಎಷ್ಟೇ ಕಾರಣಕೊಟ್ಟರು ಏನೇ ಹೇಳಿದರು ಕೊನೆಗೆ ಸ್ವಾಭಿಮಾನ ಮರೆತು ಮಾಡದ ತಪ್ಪಿಗೆ ಕ್ಷಮೆ ಕೇಳಿದರೂ  ಅವರು ನಿಮ್ಮ  ಯಾವುದೇ justification ಅಥವಾ reason ಗಳನ್ನ ಒಪ್ಪಿಕೊಳ್ಳಲ್ಲು ತಯಾರಿರುವುದಿಲ್ಲ ಬದಲಿಗೆ ನಿಮ್ಮನ್ನು ಒಂದು ರೀತಿ ಅಪರಾಧಿ ಸ್ಥಾನದಲ್ಲಿ ನೋಡುತ್ತಾರೆ, ಕೊನೆಗೆ ನಿಮ್ಮ ತಾಳ್ಮೆಯ ಕಟ್ಟೆ ಹೊಡೆದು ನೀವು ಕೂಡ ಅವರೊಂದಿಗೆ ವಾದಕ್ಕೆ ಇಳಿದುಬಿಡುತ್ತೀರಿ, ಇಲ್ಲದ ಆರೋಪಗಳನ್ನು ನೀವು ಅವರ ಮೇಲೆ  ಹಾಕುತ್ತಿರಿ, ಮಿತಿಯಿಲ್ಲದ ಮಾತಿನ ಚಕಮಕಿಯಿಂದ ಮನಸ್ತಾಪ ಬೆಳೆದು, ನಿಮ್ಮ ಮುಖ ಅವರನ್ನು ಅವರ ಮುಖ ನಿಮ್ಮನ್ನು ನೋಡುವುದೇ ದೊಡ್ಡ ತಪ್ಪು ಎಂಬ ನಿರ್ಧಾರಕ್ಕೆ ಬಂದುಬಿಡುತ್ತೀರಿ, ಅಂದೇ ನಿಮ್ಮಿಬ್ಬರ ಕೊನೆಯ ಭೇಟಿಯಂತೆ ನಿಮಗೆ ನೀವೇ ತೀರ್ಮಾನಿಸಿ ಗುಡ್ಬಾಯ್ ಫಾರ್ ಯುವರ್ ಫ್ರೆಂಡ್ ಶಿಪ್ ಅಂತ ಸಂದೇಶ ಕಳುಹಿಸೇ ಬಿಡುತ್ತಿರಿ, ಅದೆಷ್ಟೋ ವರ್ಷಗಳ ಸ್ನೇಹಕ್ಕೆ ತಿಲಾಂಜಲಿ ಇಟ್ಟು ಕೊರಗುತ್ತೀರಿ. ಮುಂದೊಂದು ದಿನ ನಿಮ್ಮಲ್ಲಿ ಗಿಲ್ಟಿನೆಸ್ ಹುಟ್ಟಿ ಕಳೆದು ಹೋದ ಅವರೊಂದಿಗಿನ ನೆನಪುಗಳ ಬೆಂಕಿ ನಿಮ್ಮನ್ನು  ಪ್ರತಿ ಕ್ಷಣವೂ ಸುಡುತ್ತದೆ ಎಂಬುದ ಮರೆತು, ಸ್ನೇಹದ ಪವಿತ್ರ ಮಡಿಲಲ್ಲಿ ಹಗೆತನದ ಕಿಡಿಯನ್ನ ನಂದಿಸದೆ ಜ್ವಾಲೆಯಾಗಿ ಉರಿಯಲು ಬಿಡುತ್ತೀರಿ.

ಇಲ್ಲಿಯ ಅವರೆನ್ನುವ ಅವರು ಬೇರೆ ಯಾರು ಆಗಿರುವುದಿಲ್ಲ ನಿಮ್ಮ ಕನಸುಗಳಿಗೆ ನೀರೆರೆದು ಜೊತೆಯಾದ ನಿಮ್ಮ ಮಾತುಗಳಲ್ಲಿ ಮಾತಾದ, ವರ್ಷಾನುವರ್ಷಗಳಿಂದಲೂ ನಿಮ್ಮ ಎಲ್ಲಾ ಭಾವನೆ, ಕಲ್ಪನೆ, ಸಾಧನೆ, ಕಷ್ಟ -ಸುಖ, ದುಃಖ-ದುಮ್ಮಾನ ಗಳ ಜೊತೆ ಬೆರೆತು ಸ್ನೇಹದ ಸೇತುವೆಯಂತಿದ್ದ ಆತ್ಮೀಯ ಗೆಳೆಯ/ಗೆಳತಿಯರೇ ಆಗಿರುತ್ತಾರೆ. ನಿಮ್ಮ ಮತ್ತು ಅವರ ನಡುವೆ ಹಿಂದೆ ಅದೆಷ್ಟೋ ಇಂತಹ ಸಣ್ಣ ಪುಟ್ಟ ಜಗಳಗಳು ಉದ್ಭವಿಸಿ ಒಂದೆರಡು ದಿನಗಳವರೆಗೆ ಮಾತು ಬಿಟ್ಟು ದೂರಾಗಿ ಮತ್ತೆ ನಿಮಗೆ ನೀವೇ ಎಲ್ಲವನ್ನು ಮರೆತು compromise ಆಗಿರುತ್ತಿರಿ, ಆದರೆ ಪ್ರತಿ ಬಾರಿಯೂ ಪ್ರತಿ ಜಗಳದ ನಂತರವೂ ಮತ್ತೆ ಒಂದಾಗುವ ಮಾತು ಬರುವುದಿಲ್ಲ, ಕೆಲವೊಂದು ಕೆಲವೊಮ್ಮೆ ಅತಿರೇಕದ ಘಟ್ಟಕ್ಕೆ ನಿಮ್ಮನ್ನು ತಲುಪಿಸಿ, ನಿಮಗೆ ತಿಳಿಯದೆ ನಿಮ್ಮಲ್ಲಿ Ego ಅನ್ನೋವ ನಂಜಿನ ಗಿಡವೊಂದು ಚಿಗುರೊಡೆದಿರುತ್ತದೆ. ಅದು ನಿಮ್ಮ ಸ್ನೇಹವನ್ನು ಮತ್ತೆ ಬೆಸೆಯಲು ಬಿಡುವುದಿಲ್ಲ.

ಸ್ವಲ್ಪ ಯೋಚಿಸಿ ನಿಮ್ಮ ಪಾಲಿಗೆ ಅವರೇ ನಿಮ್ಮ  ಬೆಸ್ಟ್ ಫ್ರೆಂಡ್  ಆಗಿರಬಹುದು ಆದರೆ ಅವರ ಪಾಲಿಗೆ ನೀವೇ ಅವರ ಬೆಸ್ಟ್ ಫ್ರೆಂಡ್  ಎಂಬುದು ಎಷ್ಟರ ಮಟ್ಟಿಗೆ ನಿಜ ? ನೀವಲ್ಲದೇ ಇನ್ಯಾರೋ ಅವರಿಗೆ ಬೆಸ್ಟ್ ಫ್ರೆಂಡ್ ಆಗಿರಲೂ ಬಹುದು,      ಇದರ ಬಗ್ಗೆ  ನೀವು ಯೋಚಿಸಿದ್ದಿರ, ಎಲ್ಲರೂ ಎಡವುವುದೇ ಇಲ್ಲಿ ತಮ್ಮ ತಮ್ಮ ಸ್ನೇಹದ ಸ್ಥಾನವನ್ನು ಅರಿಯದೆ ಅದರ ಇತಿಮಿತಿಯನ್ನು ತಿಳಿಯದೆ ಸ್ನೇಹವನ್ನು ತಲೆಯ ಮೇಲಿಟ್ಟುಕೊಂಡು ಮೆರೆಯುತ್ತಾರೆ. ಕೊನೆಗೊಂದು ದಿನ ತೀರ ಸಣ್ಣ ಕಾರಣಗಳಿಗೆ ಬೇರಾಗಿ ಬಿಡುತ್ತಾರೆ ಅದರ ಬದುಲು ಸ್ನೇಹವನ್ನ ಅಪ್ಪಿಕೊಳ್ಳಿ,  ಸ್ನೇಹದಲ್ಲಿ ನಂಬಿಕೆ ಬೆಳಸಿಕೊಳ್ಳಿ, ತಪ್ಪು  ಯಾರದೇ ಇರಲಿ ಹೇಗೆ ಇರಲಿ ಏನೇ ಇರಲಿ ಅದು ಮುಖ್ಯವಲ್ಲ ಎಲ್ಲದಕ್ಕೂ ಸಹಾನುಭೂತಿ ತೋರಿಸುವ ಸಾಮರ್ಥ ಮೈಗೂಡಿಸಿಕೊಳ್ಳಿ  ಸ್ನೇಹದಲ್ಲಿ ಅದು ಅತಿ ಮುಖ್ಯ,  ತಪ್ಪು ಸಣ್ಣದಿರಲಿ ದೊಡ್ಡದಿರಲಿ  ಮೊದಲು ತಿದ್ದಿಕೊಳ್ಳುವ ಮತ್ತೊಮ್ಮೆ ಆ ತಪ್ಪು ನಡೆಯದಂತೆನಿಗಾವಹಿಸಿ,  ಸ್ನೇಹದಲ್ಲಿ ಮೂರನೆಯವರಿಗೆ ಹೆಚ್ಚು ಆಧ್ಯತೆ ನೀಡ ಬೇಡಿ ಮೂರನೆಯವರ ಸಣ್ಣದೊಂದು ಮಾತಿನಿಂದಲೂ ನಿಮ್ಮ ಸ್ನೇಹ ಕಮರಿ ಬಿಡುವ ಸಾದ್ಯತೆ ಇರುತ್ತದೆ, ನೀವು ಏನೇ ಮಾಡಿದರು ಅವರು ಸಹಿಸಿಕೊಳ್ಳುತ್ತಾರೆ ನನ್ನ ಜೊತೆ ನಿಂತು ನನ್ನನ್ನೇ ಸಪೋರ್ಟ್ ಮಾಡುತ್ತಾರೆ ಅವಳು/ಅವನು ನನ್ನ ಫ್ರೆಂಡ್ ಎಂಬ ಅತಿಯಾದ ನಂಬಿಕೆಯೇ ನಿಮ್ಮನ್ನು ದಾರಿ ತಪ್ಪಿಸುತ್ತದೆ ಹಾಗಾಗದಂತೆ ನೋಡಿಕೊಳ್ಳಿ, ನಿನ್ನೆ ಮೊನ್ನೆ ಹುಟ್ಟಿಕೊಂಡ ಹೊಸ ಗೆಳತನದ ಪರಿಚಯವೂ ಸಹ ಅವರ ಮತ್ತು ನಿಮ್ಮ  ಸ್ನೇಹದಲ್ಲಿ ಬಿರುಕು ಮೂಡಲು ಒಂದು ರೀತಿ ಕಾರಣವಾಗಬಹುದು.
 
ಸ್ನೇಹವೆಂಬುದು ಈ ಧರೆಯಲ್ಲಿರುವ ಅತಿದೊಡ್ಡ ಆಲದಮರ ಅದರ ನೆರಳಿನಾಸರೆ ಇರುವವರೆಗೂ ನಾವು ಕ್ಷೇಮವಾಗಿರುತ್ತೇವೆ ಆ ನೆರಳಿನ ಆಸರೆಎಲ್ಲರಿಗೂ ಬೇಕು,  ಸ್ನೇಹವಿಲ್ಲದೆ ಬದುಕುವ ಬದುಕು ಬದುಕಲ್ಲಾ ಬದುಕಲು ಸಾಧ್ಯವೂ ಇಲ್ಲ,  ಕಳೆದುಕೊಂಡ ನಿಮ್ಮ ಸ್ನೇಹವನ್ನ ಒಮ್ಮೆ ಹುಡುಕಿ ಹಿಮ್ಪಡೆಯಿರಿ, ನಿರ್ಮಲವಾದ ಸ್ನೇಹ ಸಣ್ಣ ಕಾರಣಗಳಿಗೆ ಎಂದೂ ಕಳೆದು ಹೋಗುವುದಿಲ್ಲ ಕಳೆದು ಹೋಗಲು ಅದೇನು ಜೇಬಲ್ಲಿರುವ ಚಿಲ್ಲರೆಯಲ್ಲ,  ನಿಮ್ಮಲ್ಲಿರುವ ego ತೊರೆದು ಸ್ನೇಹ ವೃತ್ತದಿಂದದೂರಾದ ನಿಮ್ಮ ಸ್ನೇಹವನ್ನೊಮ್ಮೆ ಮರಳಿ ಕರೆದುನೋಡಿ ಸೋತು ಗೆಲ್ಲುವುದರಲ್ಲಿ ಹೇಳಲಾರದ ಸುಖವಿದೆ, ನಿಮ್ಮ ಸ್ನೇಹ ನಿಮ್ಮ ಕೈಯಲ್ಲಿರುವ ಉಂಗುರವಾಗಲಿ ಏಕೆಂದರೆ ಆ ಉಂಗುರಕ್ಕೆ ತುದಿ ಅಥವಾ ಕೊನೆ ಎಂಬುದಿರುವುದಿಲ್ಲ, ಮನದ ಗುಡಿಯ ಒಳಗೆ ವರ್ಷಾನುವರ್ಷಗಳ ಕಾಲ ದ್ವೇಷದ ದೀಪ ಉರಿಸುವ ಬದಲು ಅಲ್ಪಕಾಲವಾದರು ಪ್ರಜ್ವಲಿಸುವ ಶಾಂತವಾದ ನಂದಾದೀಪವಾಗಿ ಬೆಳಗೋಣ…
 
-ಮಂಜು.ಎಂ.ದೊಡ್ಡಮನಿ

     

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
sharada.m
sharada.m
10 years ago

nice

Manju
Manju
10 years ago
Reply to  sharada.m

Tq

Utham Danihalli
10 years ago

Sneha anodu akshya pathre adre ali yavudhe neerikshe erbardu snehakiro 2 dodda shathrugallu andre sullu mathe aahankara
Yardo melina dhveshakke olle fndsna dura madoddu thappu
Olle lekana adre ennu baribohodithu

Manju
Manju
10 years ago

Sullu matthe Aahankaara Hecchagi Hudugiralli Irutte avar idanna artha maadkondre saaku…
antaha hudugiyarige ee sanna lekhana saaku anisutte….  

4
0
Would love your thoughts, please comment.x
()
x