ಸಾಹಿತ್ಯ ಸಮಾಜದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿಯಾಗಿದೆ. ನಿತ್ಯ ಪರಿವರ್ತನಾ ಶೀಲವಾದ ಸಮಾಜವು ವ್ಯಕ್ತಿಗಳ ಪರಸ್ಪರ ಸಂಬಂಧಗಳ ಕೊಂಡಿಯಾಗಿದೆ. ವ್ಯಕ್ತಿಗಳ ಸಂಬಂಧಗಳು ವಿವಿಧ ರೀತಿಯಲ್ಲಿ ಬದಲಾವಣೆಗಳನ್ನು ಹೊಂದುತ್ತವೆ. ಸಾಮಾಜಿಕ ಬದಲಾವಣೆ ಎಂದರೆ ಸಾಮಾಜಿಕ ಸಂಬಂಧಗಳಲ್ಲಿ ಆಗುವ ಬದಲಾವಣೆ ಎಂಬುದಾಗಿದೆ. ಈ ಬದಲಾವಣೆಗಳು ಸರ್ವವ್ಯಾಪಕವಾದುದರಿಂದ ನಾವು ಸಮಾಜವನ್ನು ನಿತ್ಯ ಪರಿವರ್ತನಾಶೀಲವೆಂದು ಕರೆಯುತ್ತೇವೆ. ಸಾಹಿತ್ಯ ಒಂದರ್ಥದಲ್ಲಿ ಜನಜೀವನದ ಪ್ರತಿಬಿಂಬ ಎಂಬ ಮಾತಿದೆ. ಒಬ್ಬ ಅಥವಾ ಹಲವರ ಸೃಜನಶೀಲವಾದ ಮನಸ್ಸಿನ ಅಭಿವ್ಯಕ್ತಿ ಸಾಹಿತ್ಯವಾಗಿ ಅದು ಸಹೃದಯದಲ್ಲಿ ವ್ಯಾಪಕವಾಗುತ್ತದೆ. ಸಾಹಿತ್ಯದ […]
ಜೋಗುಳ ಹಾಡುವ ತಾಯಿಯ ಇಂಪಾದ ಧನಿಗೆ ತೊಟ್ಟಿಲ ಮಗು ನಿದ್ರೆಗೆ ಜಾರುವುದರೊಂದಿಗೆ ತೆರೆದುಕೊಳ್ಳುವ ಪುರಾಣ, ಇತಿಹಾಸ ಮತ್ತು ಸಮಕಾಲೀನಗಳ ಸಮಾಗಮದ ಸಂದರ್ಭಗಳ ಸಮ್ಮೀಶ್ರಣದ ಹದವಾದ ಪಾಕದಂತಹ ನಾಟಕ ಪ್ರದರ್ಶನ. ಕಾಲಬೇಧ ಮತ್ತು ಭಾಷಾಬೇಧಗಳಿಲ್ಲದೇ ಮಹಿಳಾ ಆಲಾಪದ ಕಲಾಪಗಳು ರಂಗದಲ್ಲಿ ನಡೆಯುತ್ತಾ, ಹಲವಾರು ಪ್ರಸಂಗಗಳ ಚರ್ಚೆ, ವಿಮರ್ಶೆಯ ಗಂಭೀರ ಕಥನವು ಕುತೂಹಲವನ್ನು ಹುಟ್ಟಿಸುತ್ತಲೇ ಪ್ರೇಕ್ಷಕ ಪ್ರಭುವಿನ ಗ್ರಹಿಕೆಯನ್ನು ವಿಸ್ತರಿಸುತ್ತಾ ಸಾಗುವ “ಮಹಿಳಾ ಭಾರತ” ನಾಟಕ ಪ್ರದರ್ಶನವು ಅದ್ಬುತವಾಗಿ ಇತ್ತೀಚೆಗೆ (03.01.2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ […]
ʼನೆಲದ ದನಿಗಳ ಹುಡುಕಾಟʼ ಇದು ಈ ಬಾರಿಯ ʼಸಿನಿಹಬ್ಬʼದ ವಿಷಯ. ಡಾ ಬಿ ಆರ್ಅಂಬೇಡ್ಕರ್ವಿದ್ಯಾರ್ಥಿಗಳ ಕಲ್ಯಾಣ ಸಂಘ, ಕೃಷಿ ಮಹಾವಿದ್ಯಾಲಯ, ಧಾರವಾಡ ಹಾಗೂ ಮನುಜಮತ ಸಿನಿಯಾನ ಸಹಯೋಗದಲ್ಲಿ ಧಾರವಾಡದಲ್ಲಿ ಎರಡು ದಿನಗಳ ʼಸಿನಿಹಬ್ಬʼ ಮೇ 20 ಮತ್ತು 21ರಂದು ಜರಗಿತು. ನೆಲದ ದನಿಗಳ ಹುಡುಕಾಟಕ್ಕೆ 542 ಹೆಕ್ಟೇರುಗಳ ವಿಶಾಲ ಹಸಿರು ಪ್ರದೇಶದಲ್ಲಿ ಹರಡಿಕೊಂಡಿರುವ ಕೃಷಿ ಮಹಾವಿದ್ಯಾಲಯದ ಆವರಣಕ್ಕಿಂತ ಸೂಕ್ತವಾದ ಜಾಗ ಇಲ್ಲವೇನೋ ಎನ್ನುವಂತಿತ್ತು ಸಿನಿಹಬ್ಬದ ಜಾಗ. ಮೇ 20 ರ ಮುಂಜಾನೆ ಆಹ್ಲಾದಕರ ವಾತಾವರಣದಲ್ಲಿ ʼಸಿನಿಹಬ್ಬʼ […]