ಪ್ರಶ್ನೆಗಳು
೧. ಕಲ್ಯಾಣ ಚಾಲುಕ್ಯರ ವಿಕ್ರಮಾದಿತ್ಯ ಆರಂಭಿಸಿದ ಹೊಸ ಕಾಲಗಣನೆ ಯಾವುದು?
೨. ಯು.ಎನ್.ಐ ನ ವಿಸ್ತೃತ ರೂಪವೇನು?
೩. ನ್ಯಾಷನಲ್ ಜಿಯೋಫಿಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಎಲ್ಲಿದೆ?
೪. ಸಾವಿರ ಸರೋವರಗಳ ನಾಡು ಎಂದು ಯಾವುದನ್ನು ಕರೆಯುತ್ತಾರೆ?
೫. ’ಬುಲ್ಸ್’ ’ಬೇರ್ಸ್’ ಎಂಬ ಪದಗಳು ಯಾವ ಉದ್ಯಮಕ್ಕೆ ಸಂಬಂಧಿಸಿವೆ?
೬. ಅರ್ಥಶಾಸ್ತ್ರವು ಮಾನವ ಜೀವನದ ದೈನಂದಿನ ವ್ಯವಹಾರಗಳನ್ನು ಕುರಿತು ಅಧ್ಯಯನವಾಗಿದೆ. ಈ ವ್ಯಾಖ್ಯೆ ನೀಡಿದವರು ಯಾರು?
೭. ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?
೮. ಪರಿಸರ ವಿಜ್ಞಾನಗಳ ಶಾಸ್ತ್ರವನ್ನು ಇಂಗ್ಲೀಷ್‌ನಲ್ಲಿ ಏನೆಂದು ಕರೆಯುತ್ತಾರೆ?
೯. ಉಕಾಯ್ ನೀರಾವರಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
೧೦. ಲೋಕಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡುವವರು ಯಾರು?
೧೧. ರಕ್ತದ ಒತ್ತಡವನ್ನು ಪರೀಕ್ಷಿಸಲು ಬಳಸುವ ಉಪಕರಣ ಯಾವುದು?
೧೨. ಟೆರಕೋಟಾ ಕಲಾ ಪ್ರಚಾರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಕಲಾವಿದೆ ಯಾರು?
೧೩. ಅತಿವೇಗವಾಗಿ ಬೆಳೆಯುವ ಮರ ಯಾವುದು?
೧೪. ಭಾರತೀಯ ರಸಾಯನ ಸಂಸ್ಥೆಯ ಸಂಸ್ಥಾಪಕರು ಯಾರು?
೧೫. ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡ ಪ್ರಥಮ ರಾಷ್ಟ್ರ ಯಾವುದು?
೧೬. ತಲ್ವಾಡಿ ಇದು ಯಾವ ವ್ಯಕ್ತಿಗೆ ಸಂಬಂಧಿಸಿದ ಸ್ಥಳವಾಗಿದೆ?
೧೭. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುವ ಅತಿದೊಡ್ಡ ನದಿ ಯಾವುದು?
೧೮. ಕೃಷಿಯಲ್ಲಿ ಅಧಿಕ ಇಳುವರಿ ವೈವಿಧ್ಯಮಯ ಕಾರ್ಯಕ್ರಮ ಜಾರಿಗೆ ಬಂದ ವರ್ಷ ಯಾವುದು?
೧೯. ಮಹಾಭಾರತವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ ಕವಿ ಯಾರು?
೨೦. ಕರ್ನಾಟಕದ ಕಬೀರ ಎಂದು ಯಾರನ್ನು ಕರೆಯುತ್ತಾರೆ?
೨೧. ಸ್ವತಂತ್ರ ಕಾಲದ ದಿನ ಪತ್ರಿಕೆಯಾದ ಯುಗಾಂತರ ಪತ್ರಿಕೆಯ ಸಂಪಾದಕರು ಯಾರಾಗಿದ್ದರು?
೨೨. ಪ್ರಾಥಮಿಕ ವಿದ್ಯಾಭಿವೃದ್ದಿಗಾಗಿ ಕೇಂದ್ರ ಸರ್ಕಾರ ಏರ್ಪಾಡು ಮಾಡಿದ ನಿಧಿಯ ಹೆಸರೇನು?
೨೩. ಮೂತ್ರ ಜನಕಾಂಗದಲ್ಲಿ ಯಾವ ಆಮ್ಲವು ಗಟ್ಟಿಯಾಗುವುದರಿಂದ ಕಲ್ಲುಗಳು ಉಂಟಾಗುತ್ತದೆ.
೨೪. ೧೯೪೩-೧೯೪೯ ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?
೨೫. ಪೆನ್ಸಿಲಿನ್ ಎಂಬ ಜೀವನಿರೋಧಕವನ್ನು ಯಾವ ಶಿಲೀಂಧ್ರದಿಂದ ಪಡೆಯಲಾಗಿದೆ?
೨೬. ಪೋಲೋ ಆಟದಲ್ಲಿ ಎಷ್ಟು ಜನ ಆಟಗಾರರಿರುತ್ತಾರೆ?
೨೭. ಕುವೈತ್‌ನ ಸಂಸತ್ತಿನ ಹೆಸರೇನು?
೨೮. ವಿಶ್ವದಲ್ಲಿ ಅತೀ ಹೆಚ್ಚು ವಲಸಿಗ ಜನಸಂಖ್ಯೆ ಇರುವ ದೇಶ ಯಾವುದು?
೨೯. ಭಾರತದಲ್ಲಿ ಮೊದಲ ಬಾರಿಗೆ ಸುನಾಮಿ ಕಂಡುಬಂದ ವರ್ಷ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ದ ದಿನಾಚರಣೆಗಳು
ಜನವರಿ – ೨೫ – ಭಾರತ ಪ್ರವಾಸೋದ್ಯಮ ದಿನ
ಜನವರಿ -೨೬ – ಗಣರಾಜ್ಯೋತ್ಸವ, ವಿಶ್ವ ಶುಂಕ ದಿನ
ಜನವರಿ – ೩೦ – ಹುತಾತ್ಮರ ದಿನ, ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ
ಉತ್ತರಗಳು:-
೧. ವಿಕ್ರಮಶಕೆ
೨. ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ
೩. ಹೈದರಾಬಾದ್
೪. ಫಿನ್ಲೆಂಡ್
೫. ಷೇರು, ಸೆಕ್ಯುರಿಟಿಗಳ ಮಾರುಕಟ್ಟೆ
೬. ಆಲ್ಪ್ರೆಡ್ ಮಾರ್ಷಲ್
೭. ಕಾನ್ಪುರ (ಉತ್ತರ ಪ್ರದೇಶ)
೮. ಇಕಾಲಜಿ
೯. ತಪತಿ
೧೦. ಪ್ರಧಾನಮಂತ್ರಿ
೧೧. ಸ್ಪೈಗೋ ಮಾನೋವೀಟರ್
೧೨. ಎನ್.ಪುಷ್ಪಮಾಲ
೧೩. ಬಿದಿರು
೧೪. ಆಚಾರ್ಯ.ಪಾ.ಸಾ.ರೇ.
೧೫. ಭಾರತ
೧೬. ಗುರುನಾನಕ್
೧೭. ಅಮೇಜಾನ್
೧೮. ೧೯೬೬
೧೯. ಅಬುಲ್ ಫೈಜಿ
೨೦. ಶಿಶುನಾಳ ಷರೀಪರು
೨೧. ಬರೀಂದ್ರ ಕುಮಾರ್ ಘೋಷ್
೨೨. ಪ್ರಾಥಮಿಕ ಶಿಕ್ಷಕೋಶ
೨೩. ಯೂರಿಕ್ ಆಮ್ಲ
೨೪. ದೇಶಮುಖ
೨೫. ಪೆನಿನಿಲಿಯಂ ನೋಟೀಟಮ್
೨೬. ೪
೨೭. ನ್ಯಾಷನಲ್ ಅಸೆಂಬ್ಲಿ
೨೮. ಅಮೇರಿಕಾ
೨೯. ೧೯೪೧
೩೦. ಮಂಜುಳ ಸೂದ್ (ಬ್ರಿಟನ್‌ನಲ್ಲಿ ಮೇಯರ್ ಆದ ಮೊದಲ ಭಾರತೀಯ ಮಹಿಳೆ)