ಪ್ರಶ್ನೆಗಳು
1. ಸಳನಿಗೆ ಹುಲಿಯನ್ನು ಕೊಲ್ಲಲು ಆಜ್ಞಾಪಿಸಿದ ಜೈನ ಮುನಿಯ ಹೆಸರೇನು?
2. ಪಿ.ಎಮ್.ಯು.ಪಿ.ಇ.ಪಿ. ನ ವಿಸ್ತøತರೂಪವೇನು?
3. ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರಾಗಿದ್ದಾರೆ?
4. ಬಾಹ್ಯಾಕಾಶದಿಂದ ಬರುವತರಾಂಗಾಂತರ ವಿಕಿರಣಗಳ ಹೆಸರೇನು?
5. ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಇರುವ ಪರ್ವತ ಶ್ರೇಣಿ ಯಾವುದು?
6. ಕತ್ತಲಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ ಯಾವುದು?
7. ಪ್ರಪಂಚದಲ್ಲಿ ಅತ್ಯಂತ ಕಡಿಮೆ ಮರಣ ಪ್ರಮಾಣವುಳ್ಳ ರಾಷ್ಟ್ರ ಯಾವುದು?
8. ಸಂಭವಾಮಿಯುಗೇಯುಗೇ ಇದು ಭಗವದ್ಗೀತೆಯು ಎಷ್ಟನೇ ಅಧ್ಯಾಯದಲ್ಲಿದೆ?
9. ಕೋಗಿಲೆ ಹೊರಡಿಸುವ ಸ್ವರ ಯಾವುದು?
10. ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ ಯಾವುದು?
11. ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಎಲ್ಲಿದೆ?
12. ಬಹಮನಿ ಅರಸರ ಕಾಲದಲ್ಲಿ ಖಗೋಳ ಮತ್ತು ಗಣಿತದಲ್ಲಿ ಪಂಡಿತರಾಗಿದ್ದವರು ಯಾರು?
13. ಎತ್ತರದ ಜಲಪಾತಗಳಲ್ಲೊಂದಾದ ಊಟಿಗೋರ್ಡ್ ಜಲಪಾತ ಯಾವ ರಾಷ್ಟ್ರದಲ್ಲಿದೆ?
14. ಬೆಂಗಳೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯಜ್ಞಾನ ವಿಜ್ಞಾನ ಸಹಿತಂ ಎಂಬುದಾಗಿದೆ ಈ ವಾಕ್ಯ ಯಾವ ಗ್ರಂಥದಲ್ಲಿ ಬರುತ್ತದೆ?
15. ಪ್ರತಿಮಾ ಲೋಕದಲ್ಲೊಂದು ಪಯಣ ಇದು ಯಾವ ಕಲಾವಿದರ ಕುರಿತು ಸಾಕ್ಷ್ಯಾ ಚಿತ್ರವಾಗಿದೆ?
16. ಬ್ರಿಟನ್‍ನ ಬಕಿಂಗ್‍ಹ್ಯಾಮ್ ಅರಮನೆಯಲ್ಲಿ ಎಷ್ಟು ಕೋಣೆಗಳಿವೆ?
17. ಸಾಂಚಿ ಮ್ಯೂಸಿಯಂ ಎಲ್ಲಿದೆ?
18. 12000ಸೆ ವರೆಗಿನ ಉಷ್ಣತೆಯನ್ನು ಅಳೆಯುವ ಸಾಧನ ಯಾವುದು?
19. ಜೀವಕೋಶದ ಮೂಲ ಘಟಕಕ್ಕೆ ಜೀವಕೋಶ ಎಂದು ಹೆಸರಿಸಿದವರು ಯಾರು?
20. ಸಾಹಾ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಜಿಕ್ಸ್ ಎಲ್ಲಿದೆ?
21. ಯುರೋಪಿನ ಆಟದ ಮೈದಾನವೆಂದು ಯಾವ ರಾಷ್ಟ್ರವನ್ನು ಕರೆಯುತ್ತಾರೆ?
22. ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ದರ್ಬಾರಿ ಕಾನಡ ರಾಗವನ್ನು ಸಾಂಪ್ರದಾಯಕವಾಗಿ ಯಾವ ಹೊತ್ತಿನಲ್ಲಿ ಹಾಡುತ್ತಾರೆ?
23. ಯುರೇನಸ್ ಗ್ರಹವನ್ನು ಮೊಟ್ಟಮೊದಲು ದೂರದರ್ಶಕದಲ್ಲಿ ಗುರುತಿಸಿದವರು ಯಾರು?
24. ಕೋಲ್ಕತ್ತಾ ನಗರವನ್ನು ಮೊದಲು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?
25. ಒಂಟಿಕೊಂಬಿನ ಘೆಂಡಾಮೃಗಗಳು ಹೆಚ್ಚು ಸಂಖ್ಯೆಯಲ್ಲಿ ಇರುವ ರಾಷ್ಟ್ರೀಯ ಅಭಯಾರಣ್ಯ ಯಾವುದು?
26. ಗಣಿತ ಶಾಸ್ತ್ರದಲ್ಲಿಯ ಸಾಧನೆಗೆ ನೀಡುವ ಅತ್ಯುತ್ತಮ ಬಹುಮಾನ ಯಾವುದು?
27. ಕನಸುಗಳ ಗುಟ್ಟನ್ನು ಅರಿಯುವ ಸಿದ್ಧಾಂತವನ್ನು ನಿರೂಪಿಸಿದ ಮನೋವಿಜ್ಞಾನಿ ಯಾರು?
28. ಗೀತಾ ನಾಡಕರ್ಣಿ ಇವರು ಯಾವಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
29. ಸ್ಪೇನ್ ರಾಷ್ಟ್ರದ ರಾಷ್ಟ್ರೀಯ ಕ್ರೀಡೆ ಯಾವುದು?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಡಿಸೆಂಬರ್-23- ಕಿಸಾನ್ ದಿವಸ (ರೈತರ ದಿನ)
ಉತ್ತರಗಳು
1. ಸುದತ್ತಾಚಾರ್ಯ
2. ಪ್ರೈಮ್ ಮಿನಿಸ್ಟರ್ ಅರ್ಬನ್ ಪಾವರ್ಟಿ ಇಂಡಿಕೇಷನ್ ಪ್ರೋಗ್ರಾಂ
3. ಮೇಘಾಲಯ
4. ಕಾಸ್ಮಿಕ್ ಕಿರಣ
5. ಸಾತ್ಪುರ ಪರ್ವತ ಶ್ರೇಣಿ
6. ರಕ್ತಾತೀತ ವಿಕಿರಣ
7. ಟೊಂಗೋ
8. ನಾಲ್ಕನೇ ಅಧ್ಯಾಯ
9. ಪಂಚಮ
10. 1942
11. ವಿಶಾಖ ಪಟ್ಟಣ
12. ಬಕ್ಷಿ ಮತ್ತು ಷರೀಫ್
13. ನಾರ್ವೆ
14. ಮಹಾಭಾರತ
15. ಕೆ.ಕೆ.ಹೆಬ್ಬಾರ್
16. 602 ಕೋಣೆಗಳು
17. ಭೋಪಾಲ್
18. ಪ್ಲಾಟಿನಂ ರೋಧ ಉಷ್ಣತಾ ಮಾಪಕ
19. ರಾಬರ್ಟ್ ಹುಕ್
20. ಕೋಲ್ಕತ್ತಾ
21. ಸ್ವಿಡ್ಜರ್‍ಲ್ಯಾಂಡ್
22. ಮಧ್ಯರಾತ್ರಿ
23. ವಿಲಿಯಂ ಹರ್ಷಲ್
24. ಪೋರ್ಟ್ ವಿಲಿಯಂ
25. ಕಾಜಿರಂಗ
26. ಫೀಲ್ಡ್ ಮೆಡಲ್
27. ಸಿಗ್ಮಂಡ್ ಫ್ರಾಯ್ಡ್
28. ಟೇಬಲ್ ಟೆನ್ನಿಸ್
29. ಬುಲ್ ಫೈಟಿಂಗ್
30. ಶ್ರೀ ಅರವಿಂದ ಘೋಷ (ಭಾರತೀಯ ತತ್ವಜ್ಞಾನಿ)