ಪ್ರಶ್ನೆಗಳು
1. ರಾಜ್ಯದ ಪ್ರಥಮ ಕ್ಷೀರೋತ್ಪನ್ನ ಘಟಕ ಸ್ಥಾಪನೆಯಾದ ಜಿಲ್ಲೆ ಯಾವುದು?
2. ಐಬಿಆರ್‍ಡಿ ನ ವಿಸ್ತೃತ ರೂಪವೇನು?
3. ಭೂಮಿ ಒಂದು ಕಾಂತ ಎಂಬ ಪರಿಕಲ್ಪನೆಯನ್ನು ಪ್ರತಿಪಾಧಿಸಿದವರು ಯಾರು?
4. ಸೋಲಾರ್ ವ್ಯವಸ್ಥೆಯ ಬಳಿ ತೆರಳಿದ ಪ್ರಥಮ ಬಾಹ್ಯಾಕಾಶ ನೌಕೆ ಯಾವುದು?
5. ಭಾರತೀಯ ಕೃಷಿ ಸಂಶೋಧನಾ ಮಂಡಳಿ ನೀಡುವ ಪ್ರಶಸ್ತಿ ಯಾವುದು?
6. ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಲ್ಲಿದೆ?
7. ಪ್ರಸಿದ್ಧ ಇತಿಹಾಸ ಕೃತಿ ತೊಘಲಕ್ ನಾಮಾ ಬರೆದವರು ಯಾರು?
8. 2013 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗ ಸಭೆಯ ಅಧ್ಯಕ್ಷರು ಯಾರಾಗಿದ್ದರು?
9. ದೂರದರ್ಶಕ ಉಪಕರಣದ ರೀಮೋಟ್ ಕಂಟ್ರೋಲ್‍ನಲ್ಲಿ ಉಪಯೋಗಿಸುವ ವಿಕಿರಣ ಯಾವುದು?
10. ಕೆಲಸದ ಅಳತೆಯ ಮಾನ ಯಾವುದು?
11. ಗಾಲಿಬ್ ಪ್ರಶಸ್ತಿಯನ್ನು ನೀಡುವ ಸಂಸ್ಥೆ ಯಾವುದು?
12. ಕನ್ನಡದ ಜ್ಞಾನ ಭೋದಕ ಎಂಬ ಪತ್ರಿಕೆಯನ್ನು ಸ್ಥಾಪಿಸಿದವರು ಯಾರು?
13. ಮನಮಂದಿರ ಅರಮನೆ ಎಲ್ಲಿದೆ?
14. ವಿಶ್ವದ ಅತ್ಯಂತ ಉದ್ದದ ಸೇತುವೆ ಅಕಾಷಿಕೈಕ್ಯೂ ಬ್ರಿಡ್ಜ್ ಯಾವ ರಾಷ್ಟ್ರದಲ್ಲಿದೆ?
15. ಗೂಡು ಕಟ್ಟುವ ಒಂದೇ ಒಂದು ಜಾತಿಯ ಹಾವು ಯವುದು?
16. ಎಂ.ಚಿದಾನಂದಮೂರ್ತಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
17. ಸ್ವಾತಂತ್ರ್ಯ ಕಾಲದ ಪತ್ರಿಕೆಯಾದ ‘ತಲವಾರ’ ಇದರ ಸಂಪಾದಕರು ಯಾರಾಗಿದ್ದರು?
18. ಕನ್ನಡದ ಮೊದಲ ಹಾಸ್ಯ ಪತ್ರಿಕೆ ಯಾವುದು?
19. ಪೋಲಿಯೋ ಸಂಶೋಧನಾ ಕೇಂದ್ರ ಭಾರತದಲ್ಲಿ ಎಲ್ಲಿದೆ?
20. ತ್ರಿಪುರಾ ರಾಜ್ಯದ ರಾಜ್ಯಧಾನಿ ಯಾವುದು?
21. ನೆದರ್‍ಲ್ಯಾಂಡ್ ರಾಷ್ಟ್ರದ ನಾಣ್ಯದ ಹೆಸರೇನು?
22. ಸ್ಪೀಡನ್ ರಾಷ್ಟ್ರದ ಸಂಸತ್ತಿನ ಹೆಸರೇನು?
23. ನೆಗೆಯುವ ವಂಶವಾಹಿಗಳ ತತ್ವವನ್ನು ಪ್ರತಿಪಾದಿಸಿದವರು ಯಾರು?
24. ಮಹಾಮಾನವ ಎಂಬ ಬಿರುದಾಂಕಿತ ವ್ಯಕ್ತಿ ಯಾರು?
25. ವಾಯುಧೂತ್ ವಿಮಾನಯಾನ ಪ್ರಾರಂಭವಾದ ವರ್ಷ ಯಾವುದು?
26. 1904ರಲ್ಲಿ ಹತ್ತಿ ಬಟ್ಟೆ ಉಧ್ಯಮದ ಬೆಳವಣಿಗೆಗೆ ಪ್ರೇರಣೆಯಾದ ಚಳುವಳಿ ಯಾವುದು?
27. ಸಸ್ಯಗಳು ಚೆನ್ನಾಗಿ ಬೆಳೆದು ಅಧಿಕ ಇಳುವರಿ ನೀಡಲು ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ ಯಾವುದು?
28. ವ್ಯಾಸರಾಯ ಬಲ್ಲಾಳ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
29. ಕ್ವಾಷಿಯೋರ್‍ಕಾರ್ ಕಾಯಿಲೆ ಮೊದಲ ಬಾರಿಗೆ ಯಾವ ರಾಷ್ಟ್ರದಲ್ಲಿ ಕಂಡು ಬಂದಿತು?
30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಡಿಸೆಂಬರ್-07-ಸೇನಾಪಡೆಗಳ ಧ್ವಜ ದಿನ
ಡಿಸೆಂಬರ್-10-ವಿಶ್ವಮಾನವ ಹಕ್ಕುಗಳ ದಿನ
ಉತ್ತರಗಳು
1. ಮಂಡ್ಯ
2. ಇಂಟರ್‍ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್‍ಸ್ಟ್ರಕ್ಷನ್ ಆಂಡ್ ಡೆವಲಪ್‍ಮೆಂಟ್
3. ಗಿಲ್‍ಬರ್ಟ್
4. ಅಮೇರಿಕಾದ ಪಯೋನೀರ್-II
5. ಕೃಷಿ ಪಂಡಿತ
6. ಮುಂಬಯಿ
7. ಅಮೀರ್ ಖುಸ್ರೋ
8. ಕಿಲರಾಜ ರಝಮಿ
9. ಆವಕೆಂಪು
10. ಜೂಲ್
11. ಗಾಲಿಬ್ ಇನ್‍ಸ್ಟಿಟ್ಯೂಟ್ ದೆಹಲಿ
12. ವೆಂಕಟ ರಂಗೋಕಟ್ಟಿ
13. ಗ್ವಾಲಿಯರ್
14. ಜಪಾನ್
15. ಕಾಳಿಂಗ ಸರ್ಪ
16. ಹೊಸತು ಹೊಸತು
17. ವೀರೇಂದ್ರನಾಥ ಚಟ್ಟೋಪಧ್ಯಾಯ
18. ವಿಕಟ ಪ್ರತಾಪ
19. ಮುಂಬಯಿ (ಮಹಾರಾಷ್ಟ್ರ)
20. ಅಗರತಾಲ
21. ಗೈಲ್ಡರ್
22. ರಿಕ್ಸ್‍ಡ್ಯಾಗ್
23. ಬಾರ್ಬರ್ ಮ್ಯಾಕ್‍ಕ್ಲಿನ್ ಟಾಕ್
24. ಮದನ್ ಮೋಹನ್ ಮಾಳವಿಯಾ
25. 1981
26. ಸ್ವದೇಶಿ ಚಳುವಳಿ
27. ರಂಜಕ
28. ಬಂಡಾಯ
29. ಆಫ್ರಿಕಾ
30. ಬಿ.ಆರ್.ಪಂತಲು (ನಟ, ನಿರ್ದೇಶಕ, ನಿರ್ಮಾಪಕ)