ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 8): ಮಹಾಂತೇಶ್ ಯರಗಟ್ಟಿ

 

 

 

 

 

 

ಪ್ರಶ್ನೆಗಳು:

೧. ಶಾಲಿವಾಹನ ಶಕೆ ಯಾವಾಗ ಪ್ರಾರಂಭಿಸಲಾಯಿತು?

೨. ಭಾರತದಲ್ಲಿ ಮೊದಲ ಮಸೀದಿ ಎಲ್ಲಿ ನಿರ್ಮಿಸಲಾಯಿತು?

೩. ತಾಜ್ ಮಹಲ್‌ದ ಮುಖ್ಯ ಶಿಲ್ಪಿ ಯಾರು?

೪. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ ಯಾರು?

೫. ಭಾರತದಲ್ಲಿ ಮೊದಲ ಬಾರಿಗೆ ಏಡ್ಸ್‌ನ್ನು ಗುರುತಿಸಿದ ವರ್ಷ ಯಾವುದು?

೬. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಟ್ಟೆ ಗಿರಣಿ ಪ್ರಾರಂಭಿಸಿದವರು ಯಾರು?

೭. ಮಹಿಳಾ ಕ್ರಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ ಯಾರು?

೮. ’ವಂಗಾಲ’ ಯಾವ ರಾಜ್ಯದ ನೃತ್ಯ ಶೈಲಿ?

೯. ಭಾರತದ ದೊಡ್ಡ ಪ್ಲಾನಿಟೇರಿಯಂ ಎಲ್ಲಿದೆ?

೧೦. ’ವೇದಗಳಿಗೆ ಹಿಂತಿರುಗಿ’ ಈ ಕರೆಯನ್ನು ಯಾರು ನೀಡಿದರು?

೧೧. ಶಬ್ದಮಣಿ ದರ್ಪಣದ ಕರ್ತೃ ಯಾರು?

೧೨. ಮೊನಾಲಿಸಾ ಚಿತ್ರವನ್ನು ಯಾರು ರಚಿಸಿದರು?

೧೩. ಭಾರತದ ಉದ್ದವಾದ ನದಿ ಯಾವುದು?

೧೪. ಭಾರತದಲ್ಲಿ ಅತೀ ಹೆಚ್ಚು ಉಪ್ಪನ್ನು ಉತ್ದಾದನೆ ಮಾಡುವ ಸರೋವರ ಯಾವುದು?

೧೫. ಶಬ್ದ ಪ್ರಮಾಣವನ್ನು ಅಳೆಯಲು ಬಳಸುವ ಮಾನ ಯಾವುದು?

೧೬. ಭಾರತದ ಪ್ರಥಮ ರೈಲು ಎಂಜಿನ್ ಚಾಲಕಿ ಯಾರು?

೧೭. ಭಾರತದಲ್ಲಿ ಕಾಲುಚೀಲಗಳ ತಯಾರಿಕೆಗೆ ಹೆಸರಾದ ನಗರ ಯಾವುದು?

೧೮. ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯ ಯಾವುದು?

೧೯. ಭಾರತದ ಯಾವ ರಾಜ್ಯದಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ?

೨೦. ಭಾರತದ ಯಾವ ರಾಜ್ಯದಲ್ಲಿ ಅಲ್ಯೂಮಿನಿಯಂ ದೊರೆಯುತ್ತದೆ?

೨೧. ಭಾರತದ ಪ್ರಥಮ ಸಿನಿಮಾಸ್ಕೋಪ್ ಚಿತ್ರ  ಯಾವುದು?

೨೨. ಎಂ.ಎ. ಮುಗಿಸಿದ ಭಾರತದ ಪ್ರಥಮ ಮಹಿಳೆ ಯಾರು?

೨೩. ಉತ್ತರ ಪ್ರದೇಶದ ಯಾವ ನಗರ ಆಟದ ಸಾಮಾನು ತಯಾರಿಕೆಗೆ ಪ್ರಸಿದ್ಧ?

೨೪. ಭಾರತೀಯ ವಿದ್ಯಾಭವನ ಸ್ಥಾಪಿಸಿದ ಮಹನೀಯ ಯಾರು?

೨೫. ಭಾರತದ ಮಾಜಿ ಕ್ರಿಕೆಟ್ ನಾಯಕ ಕಪಿಲ್‌ದೇವ್ ಬರೆದ ಪುಸ್ತಕ ಯಾವುದು?

೨೬. ಕಥಕ್ಕಳಿ ನೃತ್ಯ ಯಾವ ರಾಜ್ಯದ ಕಲೆ ಯಾಗಿದೆ?

೨೭. ರವೀಂದ್ರನಾಥ ಠಾಕೂರ್ ನಟಿಸಿರುವ ಚಿತ್ರ ಯಾವುದು?

೨೮. ಶಿವಾಜಿ ಗಣೇಶ ಅಭಿನಯದ ಕನ್ನಡ ಚಲನಚಿತ್ರ ಯಾವುದು?

೨೯. ಪ್ರಪಂಚದಲ್ಲಿಯೇ ಪ್ರಖ್ಯಾತರಾದ ಭಾರತದ ಪಕ್ಷಿಶಾಸ್ತ್ರಜ್ಞರು ಯಾರು?

೩೦. ಈ ಚಿತ್ರದಲ್ಲಿರುವವರನ್ನು  ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ

ಜನವರಿ – ೧ ಹೊಸ ವರ್ಷ  ಆರಂಭದ ದಿನ

ಜನವರಿ ೪ ರಿಂದ ೧೦ – ಇಂಧನ ಸಂರಕ್ಷಣಾ ಸಪ್ತಾಹ

ಉತ್ತರಗಳು: ೧. ಕ್ರಿ.ಶ.೭೮  ೨. ದೆಹಲಿ  ೩. ಉಸ್ತಾದ್ ಅಹ್ಮದ್ ಲಾಹೋರಿ  ೪. ಜೆ.ಆರ್.ಡಿ.ಟಾಟಾ   ೫. ೧೯೮೩  ೬. ಜೆಮಷೆಡಜಿ  ೭. ಭಾರತದ ಶಾಂತಾ ರಂಗಸ್ವಾಮಿ   ೮. ಮೇಘಾಲಯ  ೯. ಕಲ್ಕತ್ತಾ  ೧೦. ದಯಾನಂದ ಸರಸ್ವತಿ  ೧೧. ಕೇಶಿರಾಜ  ೧೨. ಲಿಯೋನಾರ್ಡೋ ಡಾ – ವಿಂಚಿ  ೧೩. ಗಂಗಾನದಿ  ೧೪. ಸಾಂಬಾರ್ ಸರೋವರ (ರಾಜಸ್ತಾನ್)  ೧೫. ಡೆಸಿಬಲ್  ೧೬. ಸುರೇಖಾ ಶಂಕರ ಯಾದವ್  ೧೭. ಲೂಧಿಯಾನ  ೧೮. ಮಧ್ಯ ಪ್ರದೇಶ  ೧೯. ಪಶ್ಚಿಮ ಬಂಗಾಳ  ೨೦. ಆಂಧ್ರ  ೨೧. ಕಾಗಜ್ ಕೆ ಫೂಲ್ (೧೯೫೯)  ೨೨. ಚಂದ್ರಮುಖಿ ಭೋಸ್  ೨೩. ಮೀರತ್  ೨೪. ಕೆ.ಎಂ.ಮುನ್ಷಿ  ೨೫. ಬೈ ಗಾಡ್ಸ ಡಿಕ್ರಿ  ೨೬. ಕೇರಳ  ೨೭. ವಾಲ್ಮೀಕಿ ಪ್ರತಿಮಾ  ೨೮. ಸ್ಕೂಲ್ ಮಾಸ್ಟರ್  ೨೯. ಡಾ|| ಸಲೀಂ ಅಲಿ  ೩೦. ಪಿ.ಟಿ.ಉಷಾ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಸಾಮಾನ್ಯ ಜ್ಞಾನ (ವಾರ 8): ಮಹಾಂತೇಶ್ ಯರಗಟ್ಟಿ

Leave a Reply

Your email address will not be published. Required fields are marked *