ಸಾಮಾನ್ಯ ಜ್ಞಾನ (ವಾರ 77): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
1.    ಇತ್ತೀಚಿಗೆ ವಿವಾದಕ್ಕೆ ಒಳಗಾದ ಮ್ಯಾಗಿ ನೂಡಲ್ಸ್ ಯಾವ ಕಂಪೆನಿಯದು?
2.    HUDCO(ಹುಡ್ಕೊ)ನ ವಿಸ್ತೃತ ರೂಪವೇನು?
3.    ಹಣ್ಣು ಮತ್ತು ಹಣ್ಣಿನ ತೋಟದ ಬಗೆಗಿನ ಅಧ್ಯಯನ ಶಾಸ್ತ್ರಕ್ಕೆ ಎನೆನ್ನುತ್ತಾರೆ?
4.    ಮೇಲ್ಗಾಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
5.    ಯುವ ಜನರಲ್ಲಿ ಥೈರಾಕ್ಸಿನ್ ಕೊರತೆಯಿಂದ ಬರುವ ವ್ಯಾದಿ ಯಾವುದು?
6.    ಕನ್ನಡದ ಪ್ರಥಮ ಖಾಸಗಿ ಟಿ.ವಿ.ಚಾನಲ್ ಯಾವುದು?
7.    ಭಾರತದ ರಾಜಧಾನಿಯನ್ನು ಕೊಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾದ ವರ್ಷ ಯಾವುದು?
8.    ಭಾರತದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಆದಾಯ ಮಾಪನ ಮಾಡಿದವರು ಯಾರು?
9.    ಹಸಿರುಮನೆ ಪರಿಣಾಮವನ್ನು ಉಂಟು ಮಾಡುವುದಕ್ಕೆ ಮುಖ್ಯವಾಗಿ ಕಾರಣವಾಗುವ ಅನಿಲ ಯಾವುದು?
10.    ಬೇಲೂರು ಚೆನ್ನಕೇಶವ ದೇವಾಲಯದ ಇನ್ನೊಂದು ಹೆಸರು ಯಾವುದು?
11.    ಮಯನ್ಮಾರದ ನಾಣ್ಯದ ಹೆಸರೇನು?
12.    ಕೊಡಗಿನ ಜಾನಪದ ನೃತ್ಯ ಯಾವುದು?
13.    ಮಹಾವೀರನ ಮೊದಲನೆಯ ಹೆಸರು ಯಾವುದು?
14.    ಅಲಹಾಬಾದಿನ “ಅಜಾದ್ ಪಾರ್ಕ್” ಯಾರ ಸ್ಮರಣೆಗಾಗಿ ಹೆಸರಿಡಲಾಗಿದೆ?
15.    “ಪ್ರೈಡ್ ಫ್ರೂಟ್ ಆಫ್ ಇಂಡಿಯಾ” ಎಂದು ಯಾವುದನ್ನು ಕರೆಯುತ್ತಾರೆ?
16.    ಲೋಕಸಭೆಯ ಸದಸ್ಯರಾಗಲು ಕನಿಷ್ಠ ಎಷ್ಟು ವರ್ಷ ವಯಸ್ಸಾಗಿರಬೇಕು?
17.    ಅಮೃತಸರದ ಸ್ವರ್ಣ ಮಂದಿರವನ್ನು ನಿರ್ಮಿಸಿದ ಸಿಖ್ ಗುರು ಯಾರು?
18.    ಕರ್ನಾಟಕದ ಹೆಸರಾಂತ ಪಕ್ಷಿಧಾಮ ಯಾವುದು?
19.    ಕತ್ತರಿಸಿದರೆ ಮತ್ತೆ ಬೆಳೆಯುವ ಮಾನವನ ದೇಹದ ಅಂಗ ಯಾವುದು?
20.    ಕೃತಕ ಹೃದಯವನ್ನು ಹೊಂದಿಸಿಕೊಂಡ ಪ್ರಪಂಚದ ಮೊದಲ ವ್ಯಕ್ತಿ ಯಾರು?
21.    ರಾಯಿಟರ್ಸ್ ಸುದ್ಧಿ ಸಂಸ್ಥೆ ಯಾವ ದೇಶದ್ದು?
22.    ಅಂಡಮಾನ್-ನಿಕೋಬಾರ್ ನÀಡುಗಡ್ಡೆಗಳ ರಾಜಧಾನಿ ಯಾವುದು?
23.    ಸಂಸತ್ತಿನ ಜಂಟಿ ಅಧಿವೇಶನವನ್ನು ಯಾರು ಕರೆಯುತ್ತಾರೆ?
24.    ಲಾಲ್‍ಬಾಗ್ ಗಾಜಿನ ಮನೆಗೆ ಮೊದಲಿದ್ದ ಹೆಸರು ಯಾವುದು?
25.    ಲತಾ ಮಂಗೇಶ್ಕರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ ವರ್ಷ ಯಾವುದು?
26.    ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆಯಲಾದ ಕಾಲ್ಪನಿಕ ರೇಖಗಳಿಗೆ ಏನೆನ್ನುತ್ತಾರೆ?
27.    ಏಕರೂಪ ನಾಗರಿಕ ಸಂಹಿತೆಯನ್ನು ಭಾರತದಲ್ಲಿ ಜಾರಿಗೆ ತರಲು ಅವಕಾಶ ನೀಡಿರುವ ವಿಧಿ ಯಾವುದು?
28.    ಹರಿಪ್ರಸಾದ ಚೌರಾಸಿಯಾ ಅವರು ಯಾವ ವಾದ್ಯ ನುಡಿಸುವಿಕೆಯಲ್ಲಿ ಪ್ರಸಿದ್ಧಿ ಪಡೆದವರು?
29.    ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೇಟಿಗೆ ವಿದಾಯ ಹೇಳಿದ ನ್ಯೂಜಿಲೆಂಡ್ ತಂಡದ ಆಟಗಾರ ಯಾರು?
30.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್ – 14 ವಿಶ್ವ ಮಾಪಕ ದಿನ
ಅಕ್ಟೋಬರ್ – 16 ವಿಶ್ವ ಆಹಾರ ದಿನ


ಉತ್ತರಗಳು:
1.    ನೆಸ್ಲೆ
2.    ಹೌಸಿಂಗ್ ಅಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಷನ್
3.    ಪಾಮಾಲಜಿ
4.    ಮಹಾರಾಷ್ಟ್ರ
5.    ಮೆಕ್ಸೇಡಿಮಾ
6.    ಉದಯ ಟಿ.ವಿ
7.    1911
8.    ದಾದಾಬಾಯಿ ನವರೋಜಿ
9.    ಇಂಗಾಲದ ಡಯಾಕ್ಸೈಡ್
10.    ವಿಜಯನಾರಾಯಣ ದೇವಾಲಯ
11.    ಕ್ಯಾಟ್
12.    ಕುಫರಿಯಾ
13.    ವರ್ಧಮಾನ
14.    ಚಂದ್ರಶೇಖರ ಆಜಾದ್
15.    ಮಾವು
16.    25
17.    ಅಮರದಾಸ್
18.    ರಂಗನತಿಟ್ಟು
19.    ಪಿತ್ತಜನಕಾಂಗ
20.    ಬಾನಿಕ್ಲಾರ್ಕ್
21.    ಬ್ರಿಟನ್
22.    ಪೋರ್ಟ್ ಬ್ಲೇರ್
23.    ರಾಷ್ಟ್ರಪತಿ
24.    ಆಲ್ಬರ್ಟ್ ವಿಕ್ಟರ್ ಹಾಲ್
25.    1989
26.    ರೇಖಾಂಶಗಳು
27.    44ನೇ ವಿಧಿ
28.    ಕೊಳಲು 
29.    ಡೇನಿಯಲ್ ವಿಟ್ಟೋರಿ
30.    ಸತೀಶ್ ಧವನ (ಇಸ್ರೋಗೆ ಅತೀ ಹೆಚ್ಚಿನ ಅವಧಿಗೆ ಅಧ್ಯಕ್ಷರಾಗಿದ್ದವರು)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x