ಸಾಮಾನ್ಯ ಜ್ಞಾನ (ವಾರ 76): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
1.    ಪರ್ಪಂಚ್ ಇರೋತನಕ ಕನ್ನಡ ಪದಗೋಳನುಗ್ಗಿ ಎಂದು ನುಡಿದವರು ಯಾರು?
2.    ಐ.ಐ.ಟಿ (IIT) ಯ ವಿಸ್ತೃತ ರೂಪವೇನು?
3.    ಸ್ನಿಗ್ಧತೆಯನ್ನು ಅಳತೆ ಮಾಡುವ ಸಾಧನ ಯಾವುದು?
4.    ನಾಲ್ ಸರೋವರ ಪಕ್ಷಿಧಾಮ ಎಲ್ಲಿದೆ?
5.    ಬಾವೂಲ್ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಕಲೆಯಾಗಿದೆ?
6.    2011 ರ ಪ್ರಾಥಮಿಕ ಜನಗಣತಿ ಅಂಕಿ ಸಂಖ್ಯೆಗಳ ಪ್ರಕಾರ ಕರ್ನಾಟಕದ ಸಾಕ್ಷಾರತಾ ಪ್ರಮಾಣ ಎಷ್ಟು?
7.    ಕರ್ನಾಟಕದ ವಾಯುವ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ ಎಲ್ಲಿದೆ?
8.    ಭಾರತದ ಮೊದಲ ಮಹಿಳಾ ವಸ್ತು ಸಂಗ್ರಹಾಲಯ ‘ಶಾಶ್ವತಿ’ಯನ್ನು ಸ್ಥಾಪಿಸಿದವರು ಯಾರು?
9.    ಅನುವಂಶೀಯತೆಗೆ ಸಂಬಂಧಿಸಿದ ನಿಯಮಗಳನ್ನು ನಿರೂಪಿಸಿದ ವಿಜ್ಞಾನಿ ಯಾರು?
10.    ಕನ್ನಡದ ರಸಶಾಸ್ತ್ರದ ಮೊದಲ ಸ್ವಾತಂತ್ರ ಗ್ರಂಥ ಯಾವುದು?
11.    ಜೋಡಿ ಕಟ್ಟಡಗಳನ್ನು ಹೊಂದಿರುವ ಆದಿಲ್ ಶಾಹಿಗಳ ಪ್ರಮುಖ ಸ್ಮಾರಕ ಯಾವುದು?
12.    ಸಿಖ್ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸ್ ಪಂಥವನ್ನು ಆರಂಭಿಸಿದವರು ಯಾರು?
13.    ಕೆಮರಾಗಳಲ್ಲಿ ಬಳಸುವ ಮಸೂರ ಯಾವುದು?
14.    “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಈ ಕವನ ಯಾವ ಸಂಕಲನದಲ್ಲಿದೆ?
15.    ಕೈಗಡಿಯಾರಗಳಿಗೆ ಜಗತ್ ಪ್ರಸಿದ್ಧವಾದ ಸ್ವಿಜರ್‍ಲ್ಯಾಂಡ್‍ನ ನಗರ ಯಾವುದು?
16.    ಮೈಸೂರು ದೊರೆಗಳಿಂದ ಬಿನಂಶ್ರೀ ಯವರಿಗೆ ದೊರೆತ ಬಿರುದು ಯಾವುದು?
17.    ಎಲ್ಲಾ ಖನಿಜಾಮ್ಲಗಳಲ್ಲಿಯೂ ಸಾಮಾನ್ಯವಾಗಿರುವ ಅನಿಲ ಯಾವುದು?
18.    “ಡಾಟರ್ ಆಫ್ ದಿ ಈಸ್ಟ್” ಇದು ಯಾರ ಆತ್ಮ ಕಥೆಯ ಕೃತಿಯಾಗಿದೆ?
19.    ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತ ವರ್ಷ ಯಾವುದು?
20.    ಸಂಸತ್ ಭವನದ ಶಂಕು ಸ್ಥಾಪನೆಯಾದ ವರ್ಷ ಯಾವುದು?
21.    ಯುನಾನಿ ವೈಧ್ಯ ಪದ್ಧತಿಯು ಉಗಮವಾಗಿದ್ದು ಎಲ್ಲಿ?
22.    ಭಾರತದಲ್ಲಿ ಅತ್ಯಂತ ಹಳೆಯ ಮೃಗಾಲಯ ಎಲ್ಲಿದೆ?
23.    ಕ್ಲೊರೋಫಾರಂನ ರಾಸಾಯನಿಕ ಹೆಸರೇನು?
24.    “ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಇದು ಜ್ಞಾನ ದೇಗುಲ” ಎಂದು ಜ್ಞಾನ ದೇಗುಲದ ಬಗ್ಗೆ ಹೇಳಿದವರು ಯಾರು?
25.    2015ರ ಫೀಪಾ ಮಹಿಳಾ ವಿಶ್ವಕಪ್ ಪಂದ್ಯಾವಳಿ ಯಾವ ದೇಶದ ಆತಿಥ್ಯದಲ್ಲಿ ನಡೆಯಿತು?
26.    ಬಾಲ ವಿಜ್ಞಾನ ಮಾಸ ಪತ್ರಿಕೆ ಪ್ರಾರಂಭವಾದ ವರ್ಷ ಯಾವುದು?
27.    ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರ ತರಬನಕತೆಯ ನಿರ್ದೇಶಕರು ಯಾರು?
28.    ಜಗತ್ತಿನಲ್ಲಿ ಚಲನಚಿತ್ರ ಉಧ್ಯಮಕ್ಕೆ ಹೆಸರಾದ ಅಮೇರಿಕಾದಲ್ಲಿರುವ ನಗರ ಯಾವುದು?
29.    ಯುನೆಸ್ಕೋ ವಿಶ್ವಪರಂಪರೆಯ ಸ್ಮಾರಕ ಎಂದು ಪರಿಗಣಿಸಿದ ಪಟ್ಟದಕಲ್ಲು ಯಾವ ಜಿಲ್ಲೆಯಲ್ಲಿದೆ?
30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.

 

 

 

 

 

ಈ ವಾರದ ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್-08    –    ಭಾರತೀಯ ವಾಯುಪಡೆ ದಿನ
ಅಕ್ಟೋಬರ್-09    –    ವಿಶ್ವ ಅಂಚೆ ದಿನ
ಅಕ್ಟೋಬರ್-10    –    ಭಾರತೀಯ ಅಂಚೆ ದಿನ

ಉತ್ತರಗಳು
1.    ಜಿ.ಪಿ.ರಾಜರತ್ನಂ
2.    ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
3.    ವಿಸ್ಕೋಮೀಟರ್
4.    ಅಹ್ಮದಾಬಾದ್
5.    ಪಶ್ಚಿಮ ಬಂಗಾಳ
6.    75.6%
7.    ಹುಬ್ಬಳ್ಳಿ
8.    ಚಿ.ನ.ಮಂಗಳಾ
9.    ಮೆಂಡಲ್
10.    ಕವಿಕಾಮನ ಶೃಂಗಾರ ರತ್ನಾಕರ
11.    ಇಬ್ರಾಹಿಂ ರೋಜಾ
12.    ಗುರುಗೋವಿಂದ್ ಸಿಂಗ್
13.    ಪೀನ ಮಸೂರ
14.    ನಾದಲೀಲೆ
15.    ಜಿನಿವಾ
16.    ರಾಜಸೇವಾಶಕ್ತ
17.    ಜಲಜನಕ
18.    ಬೆನ್‍ಜೀರ್ ಭುಟ್ಟೋ
19.    1930
20.    1921
21.    ಗ್ರೀಸ್
22.    ತಿರುವನಂತಪುರ
23.    ಟ್ರೈಕ್ಲೋ ರೋಮಿಥೆನ್
24.    ಕುವೆಂಪು
25.    ಕೆನಡಾ
26.    1978
27.    ಗಿರೀಶ್ ಕಾಸರವಳ್ಳಿ
28.    ಹಾಲಿವುಡ್
29.    ಬಾಗಲಕೋಟೆ
30.    ಎಂ.ಜಿ.ರಾಮಚಂದ್ರನ್ (ತಮಿಳು ನಟ, ನಿರ್ದೇಶಕ ಭಾರತ ರತ್ನ ಪುರಸ್ಕøತ)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x