ಪ್ರಶ್ನೆಗಳು:
೧. ಇತ್ತೀಚಿಗೆ ೨೦೧೫ ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು?
೨. ಫೀಫಾ (FIFA) ನ ವಿಸ್ತೃತ ರೂಪ?
೩. ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು?
೪. ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ?
೫. ಕೇಂದ್ರ ಆರ್ಯುವೇದ ಸಂಶೋಧನಾ ಸಂಸ್ಥೆ ಎಲ್ಲಿದೆ?
೬. ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು?
೭. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ ರಾಜ್ಯದಲ್ಲಿದೆ?
೮. ದಕ್ಷಿಣ ಭಾರತದಿಂದ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದವರು ಯಾರು?
೯. ಸ್ಕರ್ವಿ ಖಾಯಿಲೆ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?
೧೦. ಡಿಸ್ಕವರ್, ಪಲ್ಸರ್, ಬೈಕ್ ಗಳ ತಯಾರಿಕಾ ಕಂಪನಿ ಯಾವುದು?
೧೧. ಯಕ್ಷಗಾನ ಇದು ಯಾವ ರಾಜ್ಯದ ಸಾಂಸ್ಕೃತಿಕ ಕಲೆಯಾಗಿದೆ?
೧೨. ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳ ಯಾವುದು?
೧೩. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?
೧೪. ಧೂಮಕೇತುಗಳಲ್ಲಿ ಅತ್ಯಂತ ಜನಪ್ರಿಯ ಧೂಮಕೇತು ಯಾವುದು?
೧೫. ಕಪ್ಪೆಯ ಹೃದಯದಲಿ ಎಷ್ಟು ಬಾಗಗಳಿವೆ?
೧೬. ಗಾಳಿಯ ದಿಕ್ಕನ್ನು ತೋರಿಸುವ ಸಾಧನ ಯಾವುದು?
೧೭. ಭಾರತದ ಅತಿ ಹೆಚ್ಚು ಲಿಪಿಗಳು ಯಾವ ಲಿಪಿಯ ಮೂಲವನ್ನು ಹೊಂದಿವೆ?
೧೮. ಪ್ರಪಂಚದಲ್ಲಿ ಯಾವ ಕ್ರೀಡೆಯ ಕುರಿತು ಅತಿ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ?
೧೯. ಕಿಸಾನ್ ಘಾಟ್ ಇದು ಯಾವ ವ್ಯಕ್ತಿಗೆ ಸಂಬಂಧಿಸಿದೆ. ಸ್ಶಳವಾಗಿದೆ?
೨೦. ೧೯೦೯ ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸಂಗ್ರಹಿಸಿ ಪ್ರಕಟಿಸಿದವರು ಯಾರು?
೨೧. ಮದ್ರಾಸ್ – ತಮಿಳುನಾಡು ಎಂದು ನಾಮಕರಣಗೊಂಡ ವರ್ಷ ಯಾವುದು?
೨೨. ರೆಕ್ಕೆಗಳೇ ಇಲ್ಲದ ಪಕ್ಷಿ ಯಾವುದು?
೨೩. ಹೋರಾಟದ ಹಾದಿ ಇದು ಯಾವ ವ್ಯಕ್ತಿಯ ಆತ್ಮಕಥನವಾಗಿದೆ?
೨೪. ರಾಮಾಯಣ ನಡೆಯಿತೆನ್ನಲಾಗುವ ಯುಗ ಯಾವುದು?
೨೫. ಐ.ಪಿ.ಎಲ್ ನ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕರು ಯಾರು?
೨೬. ಚೋಮನದುಡಿ ಚಲನಚಿತ್ರದ ನಿರ್ದೇಶಕರು ಯಾರು?
೨೭. ರೈಟ್ ಲೈವ್ಲಿ ಹುಡ್ ಪ್ರಶಸ್ತಿ ಪ್ರಧಾನ ಮಾಡುವ ದೇಶ ಯಾವುದು?
೨೮. ಮೂರನೇ ಕಣ್ಣು ಹೊಂದಿರುವ ಟ್ವಿಟಾರ್ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತವೆ?
೨೯. ಅತೀ ವೇಗವಾಗಿ ಬೆಳೆಯುವ ಮರ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಏಪ್ರೀಲ್ ೨೨ – ವಿಶ್ವ ಭೂ ದಿನ
ಏಪ್ರೀಲ್ ೨೩ – ವಿಶ್ವ ಪುಸ್ತಕ ಮತ್ತು ಗ್ರಂಥ ಸ್ವಾಮ್ಯ ದಿನ
ಉತ್ತರಗಳು
೧. ಡಾ|| ಎಸ್. ಎಸ್. ಅರಕೇರಿ
೨. ಪೆಡರೇಷನ್ ಇಂಟರ್ ನ್ಯಾಷನಲ್ ಡಿ ಪುಟ್ಬಾಲ್ ಅಸೋಸಿಯೇಷನ್
೩. ಆರ್ಥರ್ ವೈನಿ (ಇಂಗ್ಲೆಂಡ್)
೪. ದೊಡ್ಡ ಬೆಲೆ ಲಕ್ಷ್ಮೀನರಸಿಂಹಚಾರ್ಯ
೫. ಭುವನೇಶ್ವರ
೬. ಹಮ್ಮಿಂಗ್ ಬರ್ಡ್
೭. ಮೇಘಾಲಯ
೮. ಪಿ. ವಿ. ನರಸಿಂಹ ರಾವ್
೯. ವಿಟಮಿನ್ – ಸಿ
೧೦. ಬಜಾಜ್ ಆಟೋಮೊಬೈಲ್ಸ್
೧೧. ಕರ್ನಾಟಕ
೧೨. ಮೇಕೆದಾಟು
೧೩. ವೆಲ್ಲೆಸ್ಲಿ
೧೪. ಹ್ಯಾಲಿ ಧೂಮಕೇತು
೧೫. ಮೂರು
೧೬. ಅನಿಮೊಮೀಟರ್
೧೭. ಬ್ರಾಹ್ಮಿ
೧೮. ಚದುರಂಗ
೧೯. ಚರಣಸಿಂಗ್
೨೦. ಶಾಮಾಶಾಸ್ತ್ರಿ
೨೧. ೧೯೬೯
೨೨. ಕಿವಿ ಎಂಬ ಪಕ್ಷಿ
೨೩. ಹೆಚ್. ನರಸಿಂಹಯ್ಯ
೨೪. ತ್ರೇತಾಯುಗ
೨೫. ಪ್ರೀತಿ ಜಿಂಟಾ
೨೬. ಬಿ. ವಿ. ಕಾರಂತ
೨೭. ಸ್ವೀಡನ್
೨೮. ನ್ಯೂಜಿಲ್ಯಾಂಡ್
೨೯. ಬಿದಿರು
೩೦. ವ್ಯಾಸರಾಯ ಬಲ್ಲಾಳ
*****