ಸಾಮಾನ್ಯ ಜ್ಞಾನ (ವಾರ 71): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಥಮ ನಿರ್ದೇಶಕರು ಯಾರು?
೨.    ಟೆಲ್ಕೊ (TELCO) ನ ವಿಸ್ತೃತ ರೂಪವೇನು?
೩.    ಕೋಟಿ ವಿದ್ಯೆಗಳಲ್ಲಿ ಮೇಟಿ ವಿಧ್ಯೆಯೇ ಮೇಲು ಎಂದು ಹೇಳಿದವರು ಯಾರು?
೪.    ಬಂಕಲೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ?
೫.    ಶೃಂಗೇರಿಯ ಶಾರದಾ ಪೀಠ ಸ್ಥಾಪಿಸಿದವರು ಯಾರು?
೬.    ಸಮೀಪ ದೃಷ್ಟಿದೋಶವನ್ನು ನಿವಾರಿಸಲು ಬಳಸುವ ಮಸೂರ ಯಾವುದು?
೭.    ರಾಸಾಯನಿಕ ಪದಾರ್ಥಗಳಿಂದ ತಯಾರಾಗುವ ದಾರ ಯಾವುದು?
೮.    ಮದ್ದೂರು ವಡೆಗೆ ಪ್ರಸಿದ್ಧವಾದರೆ ಧಾರವಾಡ ಯಾವುದಕ್ಕೆ ಪ್ರಸಿದ್ಧವಾಗಿದೆ?
೯.    ಕವನ ಸಂಕಲನ ಆಧರಿಸಿ ನಿರ್ಮಿಸಿದ ಏಕೈಕ ಕನ್ನಡ ಚಲನಚಿತ್ರ ಯಾವುದು?
೧೦.    ಸೂರ್ಯನಿಗೆ ಅತಿ ದೂರದಲ್ಲಿರುವ ಗ್ರಹ ಯಾವುದು?
೧೧.    ಕೊಲ್ಕತ್ತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್‌ಟಿಟ್ಯೂಟ್‌ನ ಸ್ಥಾಪಕರಾರು?
೧೨.    ಬೇಗಮ್ ಅಖ್ತರ್ ರವರು ಯಾವುದಕ್ಕೆ ಪ್ರಸಿದ್ಧರು?
೧೩.    ರಾಷ್ಟ್ರೀಯ ಕಲ್ಲಿದ್ದಲು ಅಭಿವೃದ್ದಿ ಮಂಡಳಿ ಸ್ಥಾಪನೆಯಾದ ವರ್ಷ ಯಾವುದು?
೧೪.    ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆಯಾದಲ್ಲಿ ಉಂಟಾಗುವ ಕಾಯಿಲೆ ಯಾವುದು?
೧೫.    ಆನಂದ ಇದು ಯಾರ ಕಾವ್ಯನಾಮವಾಗಿದೆ?
೧೬.    ಭಾರತದ ಬಾವುಟದಲ್ಲಿರುವ ಚಕ್ರವು ಯಾವ ರಾಜನಿಗೆ ಸಂಬಂಧಿಸಿದೆ?
೧೭.    ಕೃಷ್ಣದೇವರಾಯನು ತೆಲಗು ಭಾಷೆಯಲ್ಲಿ ಬರೆದ ಗ್ರಂಥ ಯಾವುದು?
೧೮.    ವಿಶ್ವ ಪ್ರಸಿದ್ಧ ನಯಾಗರ್ ಜಲಪಾತ ಯಾವ ದೇಶದಲ್ಲಿದೆ?
೧೯.    ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
೨೦.    ಭಾರತದಲ್ಲಿ ಶೇಕಡವಾರು ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ ಯಾವುದು?
೨೧.    ಅಬ್ದುಲ್ ಸಲಾಂ ಅಂತರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ ಯಾರು?
೨೨.    ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದಾಗಿತ್ತು?
೨೩.    ಹಜಾರಿಬಾಗ್ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
೨೪.    ಥರ್ಮಾಸ್  ಪ್ಲಾಸ್ಕ್ ನ್ನು ಕಂಡುಹಿಡಿದವರು ಯಾರು?
೨೫.    ನಾರ್ಥ್ ವೆಲ್ಸ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?
೨೬.    ಇಂಗ್ಲೆಂಡಿನಲ್ಲಿದ್ದ ಟಿಪ್ಪುವಿನ ಖಡ್ಗವನ್ನು ಮತ್ತೆ ಭಾರತಕ್ಕೆ ತಂದವರು ಯಾರು?
೨೭.    ಸರ್ನಿಯಾ ಫೋಟೋ ವೋಲ್ಟಾಯಿಕ್ ಪವರ್ ಪ್ಲಾಂಟ್ ಯಾವ ದೇಶದಲ್ಲಿದೆ?
೨೮.    ಕರ್ನಾಟಕದಲ್ಲಿ ಅತಿ ಹೆಚ್ಚು ದೇವಸ್ಥಾನಗಳನ್ನು ನಿರ್ಮಿಸಿದ ರಾಜ ಮನೆತನ ಯಾವುದು?
೨೯.    ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?    
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ. 


ಈ ವಾರದ ಪ್ರಸಿದ್ಧ ದಿನಾಚರಣೆ 
ಏಫ್ರಿಲ್ – ೦೫ ರಾಷ್ಟ್ರೀಯ ಸಾಗರ ಯಾನ ದಿನ


ಉತ್ತರಗಳು:
೧.    ಎ.ಎನ್ ಮೂರ್ತಿರಾವ್
೨.    ಟಾಟಾ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ
೩.    ಸರ್ವಜ್ಞ
೪.    ಸುಂಕದ ಬಂಕಣ್ಣ
೫.    ಶಂಕರಾಚಾರ್ಯರು
೬.    ನಿಮ್ನಮಸೂರ
೭.    ಟೆರೆಲಿನ್
೮.    ಪೇಡ
೯.    ಮೈಸೂರು ಮಲ್ಲಿಗೆ
೧೦.    ಯುರೇನೆಸ್
೧೧.     ಪಿ.ಸಿ.ಮೆಹಲನೋಬಿಸ್
೧೨.    ಗಜಲ್ ಹಾಡುಗಾರಿಕೆ
೧೩.    ೧೯೫೬
೧೪.    ಫೈನೋಡರ್ಮ
೧೫.    ಅಜ್ಜಂಪುರ ಸೀತಾರಾಂ
೧೬.    ಅಶೋಕ
೧೭.    ಅಮುಕ್ತ ಮೌಲ್ಯದ
೧೮.    ಅಮೇರಿಕಾ
೧೯.    ಹುಲಿ
೨೦.    ಹರಿಯಾಣ
೨೧.    ಪಿ.ಲಂಕೇಶ್
೨೨.    ಗರುಡ
೨೩.    ಬಿಹಾರ
೨೪.    ಜೇಮ್ಸ್ ದಿವಾರ್
೨೫.    ಶೂಟಿಂಗ್
೨೬.    ವಿಜಯ ಮಲ್ಯ
೨೭.    ಕೆನಡಾ
೨೮.    ಹೊಯ್ಸಳ 
೨೯.    ಐದು ಜನ
೩೦.    ಪಿ.ಸುಶೀಲಾ (ಗಾಯಕಿ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x