ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 7): ಮಹಾಂತೇಶ್ ಯರಗಟ್ಟಿ

 

 

 

 

 

 

1. ಭಾರತ ರತ್ನ ಪಡೆದ ಮೊದಲಿಗ ಯಾರು?
2. ಭಾರತದ ಪ್ರಥಮ ಮಹಿಳಾ ಚಿತ್ರ ನಿರ್ದೇಶಕಿ ಯಾರು?
3. ಭಾರತದ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರು ಯಾರು?
4. ಅಬ್ದುಲ್ ಕಲಾಂರ ಪೂರ್ಣ ಹೆಸರೇನು?
5. ಭಾರತದ ವಿಸ್ತೀರ್ಣವೆಷ್ಟು?
6. ಟೆಸ್À್ಟ ಕ್ರಿಕೆಟ್‍ನಲ್ಲಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಪ್ರಥಮ ಭಾರತೀಯ ಯಾರು?
7. ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯನಾದ ಪ್ರಥಮ ಭಾರತೀಯ ಯಾರು?
8. ವಿಶ್ವ ಬಿಲಿಯಡ್ಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ ಯಾರು?
9. ಇಂಗ್ಲೀಷ್ ಕಾಲುವೆಯನ್ನು ಈಜಿದ ಪ್ರಥಮ ಭಾರತೀಯ ಯಾರು?
10. ಭಾರತರತ್ನ ಪ್ರಶಸ್ತಿ ಪಡೆದ ಮೊದಲ ರಾಜಕೀಯ ವ್ಯಕ್ತಿ ಯಾರು?
11. ಒಂದೇ ಇನ್ನಿಂಗ್ಸ್‍ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಭಾರತೀಯ ಯಾರು?
12. ಮೊದಲ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಯಾರು?
13. ಭಗವದ್ಗೀತೆಯಲ್ಲಿರುವ ಒಟ್ಟು ಅಧ್ಯಾಯಗಳೆಷ್ಟು?
14. ಗೌತಮ ಬುದ್ಧನ ತಂದೆಯ ಹೆಸರೇನು?
15. ‘ಸಸ್ಯಗಳಿಗೂ ಜೀವವಿದೆ’ ಎಂದು ನಿರೂಪಿಸಿದ ಆಧುನಿಕ ಭಾರತೀಯ ಸಸ್ಯ ವಿಜ್ಞಾನಿ ಯಾರು?
16. ‘ಓಂ’ ಕಾರದಲ್ಲಿರುವ ಮೂರು ಅಕ್ಷರಗಳು ಯಾವವು?
17. ವಾಲ್ಮೀಕಿ ರಾಮಾಯಣದಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು?
18. ಹಿಂದಿ ಭಾಷೆಯಲ್ಲಿ ಪ್ರಸಿದ್ಧವಾದ ರಾಮಾಯಾಣ ಗ್ರಂಥ ಯಾವುದು?
19. ರವೀಂದ್ರನಾಥ  ಠಾಗೋರ್ ರವರ ಯಾವ ಕೃತಿಗೆ  ನೊಬೆಲ್ ಪಾರಿತೋಷಕ ದೊರಕಿದೆ?
20. ಸಿಂಡಿಕೇಟ್ ಬ್ಯಾಂಕಿನ ಘೋಷಣಾ ವಾಕ್ಯ ಏನು?
21. ಹಿಂದೂಸ್ತಾನಿ ಸಂಗೀತದಲ್ಲಿನ ಮಳೆಗಾಲದ ರಾಗ ಯಾವುದು?
22. ಮೆಣಸುಕಾಳನ್ನು ಅಧಿಕವಾಗಿ ಬೆಳೆಯುವ ರಾಜ್ಯ ಯಾವುದು?
23. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?
24. ರಾಜೀವ್‍ಗಾಂಧಿ ಜನಿಸಿದ ಊರು ಯಾವುದು?
25. ರಾಣಿಖೇತ್ ಗಿರಿಧಾಮ ಭಾರತದ ಯಾವ ರಾಜ್ಯದಲ್ಲಿದೆ?
26. ಆಧುನಿಕ ಭಾರತದ ಶ್ರೇಷ್ಠ ಗಣಿತಜ್ಞ ಯಾರು?
27. ಅಮೀರ್ ಖುಸ್ರೋ ಯಾವ ಭಾಷೆಯ ಕವಿ?
28. ಭಾರತದ ಜ್ಯೋತಿಷ ಶಾಸ್ತ್ರದ ಪಿತಾಮಹ ಯಾರು?
29. ಅಧಿಕಾರದಲ್ಲಿದ್ದಾಗಲೇ ತಿರಿಕೊಂಡ ಪ್ರಥಮ ರಾಷ್ಟ್ರಪತಿ ಯಾರು?
30. ಈ ಪೋಟೊದಲ್ಲಿರುವವರನ್ನು ಗುರುತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ

ಡಿಸೆಂಬರ್ – 23 ಕಿಸಾನ್ ದಿವಸ (ರೈತರ ದಿನ)

ಉತ್ತರಗಳು: 1. ಡಾ||ಎಸ್.ರಾಧಾಕೃಷ್ಣನ್  2. ಬೇಗಂ ಫಾತಿಮಾ ಸುಲ್ತಾನ್   3. ಲೀಲಾ ಸೇಥಾ  4. ಅವುಲ್ ಪಕೀರ್ ಜಲಾಲುದ್ಧೀನ್ ಅಬ್ದುಲ್ ಕಲಾಂ  5. 32,87,263 ಚದರ ಕಿಲೋಮೀಟರ್‍ಗಳು  6. ಸುನೀಲ್ ಗವಾಸ್ಕರ್   7. ದಾದಾಬಾಯಿ ನವರೋಜಿ  8. ವಿಲ್ಸನ್ ಜೋನ್ಸ್   9. ಮಿಹಿರ್ ಸೇನ್  10. ಸಿ.ರಾಜಗೋಪಾಲಚಾರಿ  11. ಅನಿಲ್ ಕುಂಬ್ಳೆ  12. ಸತ್ಯಜಿತ್ ರೇ  13. ಹದಿನೆಂಟು  14. ಶುದ್ಧೋಧನ  15. ಜಗದೀಶ್ ಚಂದ್ರ ಬೋಸ್  16. ಅ.ಉ.ಮ್  17. 24,000 ಶ್ಲೋಕಗಳು  18. ರಾಮ ಚರಿತ ಮಾನಸ (ತುಲಸಿ ರಾಮಾಯಣ)  19. ಗೀತಾಂಜಲಿ  20. ವಿಶ್ವಸನೀಯ ಹಿತ್ಯೇಷೀ  21. ಮೇಘಮಲ್ಹಾರ   22. ಕೇರಳ  23. ರಾಜಾರಾಮ ಮೋಹನರಾಯ  24. ಮುಂಬಯಿ  25. ಉತ್ತರ ಪ್ರದೇಶ  26. ಶ್ರೀನಿವಾಸ ರಾಮಾನುಜಮ್  27. ಹಿಂದಿ   28. ವರಾಹಮಿಹಿರ  29. ಡಾ|| ಜಾಕೀರ್ ಹುಸೇನ್  30. ಸುಂದರಲಾಲ್ ಬಹುಗುಣ

*****

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *