ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 69): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಯಿತು?
೨.    ಬಿಸಿಸಿಐ (BCCI) ನ ವಿಸ್ತೃತ ರೂಪವೇನು?
೩.    ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು?
೪.    ಕಲಾಂತಕ ಭೀಮೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ?
೫.    ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು?
೬.    ಅಂತರರಾಷ್ರ್ಟೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ ಯಾರು?
೭.    ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?
೮.    ಷೇಕ್ಸ್ ಫಿಯರ್ ವಿರಚಿತ ಕಾಮಿಡಿ ಆಫ್ ಎರರ್ಸ್ ಆಧರಿಸಿ ತಯಾರಾದ ಕನ್ನಡ ಚಲನಚಿತ್ರ ಯಾವುದು?
೯.    ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೦.    ತೆಲುವಿಕೆಯ ನಿಯಮವನ್ನು ರೂಪಿಸಿದವರು ಯಾರು?
೧೧.    ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ ಯಾವುದು?
೧೨.    ಯೋಗದ ಮೂಲ ತತ್ವಗಳನ್ನು ತಿಳಿಸಿದ ಪ್ರಥಮ ಭಾರತೀಯ ಯಾರು?
೧೩.    ೨೦೦೩-೨೦೦೮ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?
೧೪.    ರಾವಣನ ತಾಯಿಯ ಹೆಸರೇನು?
೧೫.    ನೊಬೆಲ್ ಪರ್ಯಾಯ ಪ್ರಶಸ್ತಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆದ ಕನ್ನಡಿಗ ಯಾರು?
೧೬.    ಪಂಜಾಬ್ ರಾಜ್ಯವಾಗಿ ಅಸ್ತತ್ವಕ್ಕೆ ಬಂದ ವರ್ಷ ಯಾವುದು?
೧೭.    ಏನಾದರು ಸರಿಯೇ ಮೊದಲು ಮಾನವನಾಗು ಇದು ಯಾವ ಕವಿಯ ರಚನೆಯಾಗಿದೆ?
೧೮.    ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು?
೧೯.    ಓಜೋನ್ ರಂಧ್ರವನ್ನು ಗುರುತಿಸಿದ ಉಪಗ್ರಹ ಯಾವುದು?
೨೦.    ಕೇಫ ಇದು ಯಾರ ಕಾವ್ಯನಾಮವಾಗಿದೆ?
೨೧.    ಮರೀನಾ ಬೀಚ್ ಎಲ್ಲಿದೆ?
೨೨.    ವಚನ ಸಾಹಿತ್ಯ ಯಾವ ಅರಸರ ಕಾಲದಲ್ಲಿ ರೂಪಗೊಂಡಿತು?
೨೩.    ಮುಂಬೈನಲ್ಲಿರುವ ಗೇಟ್ ವೇ ಆಫ್ ಇಂಡಿಯಾ ನಿರ್ಮಾಣವಾದ ವರ್ಷ ಯಾವುದು?
೨೪.    ರಾಷ್ಟ್ರೀಯ ಮಹಿಳಾ ಕೋಶ ಸಹಕಾರಿ ಸಂಸ್ಥೆ ಸ್ಥಾಪನೆಯಾದ ವರ್ಷ ಯಾವುದು?
೨೫.    ಭಾರತದ ನೈರುತ್ಯ ರೈಲ್ವೆ ವಲಯ ಮುಖ್ಯ ಕಛೇರಿ ಎಲ್ಲಿದೆ?
೨೬.    ಮಾನವ ಶರೀರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಾಂಶ ಯಾವುದು?
೨೭.    ಜೈನರ ದೇವಾಲಯಗಳಿಗೆ ಬಸದಿ ಅಂತ ಕರೆದರೆ ಬುದ್ಧರ ದೇವಾಲಯಗಳಿಗೆ ಏನೆಂದು ಕರೆಯುತ್ತಾರೆ?
೨೮.    ಇಟಲಿ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
೨೯.    ಇತ್ತೀಚೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಎಲ್ಲಿ ನಡೆಯಿತು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ

ಮಾರ್ಚ್- ೧೫ ವಿಶ್ವ ಗ್ರಾಹಕರ ಹಕ್ಕುಗಳ ದಿನ


ಉತ್ತರಗಳು:
೧.    ಓಂ.ಪ್ರಕಾಶ್ 
೨.    ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ
೩.    ವಪೆ
೪.    ಡಕ್ಕೆಯ ಬೊಮ್ಮಣ್ಣ
೫.    ಬೆಂಗಾಲಿ
೬.    ಸಿ.ಡಿ.ನರಸಿಂಹಯ್ಯ 
೭.    ಪೆಟ್ರೋಲಿಯಂ 
೮.    ಉಲ್ಟಾಪಲ್ಟಾ
೯.    ಕಾರ್ನಲ್ (ಹರಿಯಾಣ)
೧೦.    ಆರ್ಕಿಮಿಡಿಸ್
೧೧.    ಪೋಟೋಸೆಲ್
೧೨.    ಪತಂಜಲಿ
೧೩.    ಡಾ||ವೈ.ವಿ.ರೆಡ್ಡಿ
೧೪.    ಕೈಕಸಿ
೧೫.    ಆರ್.ಸುದರ್ಶನ್
೧೬.    ೧೯೬೬
೧೭.    ಸಿದ್ಥಯ್ಯಾ ಪುರಾಣಿಕ
೧೮.    ಜೆ.ಎಂ.ಕೇನ್ಸ್
೧೯.    ನಿಂಬಸ್ – ೭
೨೦.    ಎ.ವಿ.ಕೇಶವಮೂರ್ತಿ
೨೧.    ಚೆನ್ನೈ
೨೨.    ಕಲಚೂರಿ ಅರಸರು 
೨೩.    ೧೯೧೧
೨೪.    ೧೯೯೩
೨೫.    ಹುಬ್ಬಳ್ಳಿ
೨೬.    ಕ್ಯಾಲ್ಸಿಯಂ
೨೭.    ವಿಹಾರ
೨೮.    ಲೀರಾ
೨೯.    ಮೈಸೂರು
೩೦.    ದೀನಾ ವಕೀಲ್ (ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮೊದಲ ಮಹಿಳಾ ಸಂಪಾದಕಿ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಸಾಮಾನ್ಯ ಜ್ಞಾನ (ವಾರ 69): ಮಹಾಂತೇಶ್ ಯರಗಟ್ಟಿ

Leave a Reply

Your email address will not be published. Required fields are marked *