ಪ್ರಶ್ನೆಗಳು:
೧. ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?
೨. ಯುನಿಸೆಫ್ (UNICEF) ವಿಸ್ತೃತ ರೂಪವೇನು?
೩. ವೀಚಿ ಇದು ಯಾರ ಕಾವ್ಯನಾಮವಾಗಿದೆ?
೪. ೧೯೧೮ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ ಸಂಪಾದಕರು ಯಾರಾಗಿದ್ದರು?
೫. ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ ಯಾವ ಮ್ಯೂಸಿಯಂನಲ್ಲಿದೆ?
೬. ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಿರಣ ಬೇಡಿಯವರು ಇತ್ತೀಚೆಗೆ ಯಾವ ಪಕ್ಷ ಸೇರಿಕೊಂಡರು?
೭. ಭಾರತಕ್ಕೆ ಸ್ವತಂತ್ರ್ಯ ದೊರೆತಾಗ ಇಂಗ್ಲೆಂಡಿನ ಪ್ರಧಾನಿ ಯಾರಾಗಿದ್ದರು?
೮. ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು?
೯. ಸಂಗೀತ ಗಂಗಾದೇವಿ ಎಂದು ಕರ್ನಾಟಕದ ಯಾವ ಮಹಿಳೆಯನ್ನು ಕರೆಯುತ್ತಾರೆ?
೧೦. ಮೊದಲ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು ಯಾರು?
೧೧. ಕೆಳದಿ ರಾಜ್ಯದ ಸಂಸ್ಥಾಪಕರು ಯಾರು?
೧೨. ಸಾರೆ ಜಹಾಂಸೆ ಅಚ್ಚಾ ಈ ಗೀತೆಯ ಶೀರ್ಷಿಕೆ ಯಾವುದು?
೧೩. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಯಾವ ವರ್ಷ ಆರಂಭಿಸಲಾಯಿತು?
೧೪. ಭಾರತೀಯ ಸೆಣಬು ಸಂಶೋಧನಾ ಸಂಸ್ಥೆ ಎಲ್ಲಿದೆ?
೧೫. ಭಾತರದ ಸಂವಿಧಾನದಲ್ಲಿ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಆರಿಸಿಕೊಳ್ಳಲಾಗಿದೆ?
೧೬. ಅಶೋಕನ ಮನ ಪರಿವರ್ತಿಸಿದ ಕಳಿಂಗ ಯುದ್ಧ ನಡೆದ ಸ್ಥಳ ಇಂದಿನ ಯಾವ ರಾಜ್ಯದಲ್ಲಿ ಬರುತ್ತದೆ?
೧೭. ಅಜಗಣ್ಣ ತಂದೆ ಇದು ಯಾರ ಅಂಕಿತನಾಮವಾಗಿದೆ?
೧೮. ಗಾಯಗಳು ಬೇಗ ವಾಸಿಯಾಗಲು ಬೇಕಾಗುವ ವಿಟಮಿನ್ ಯಾವುದು?
೧೯. ಮಾನವನ ಉಸಿರಾಟವನ್ನು ಅಳೆಯಲು ಬಳಸುವ ಉಪಕರಣ ಯಾವುದು?
೨೦. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?
೨೧. ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದವರು ಯಾರು?
೨೨. ನಂದರ ವಂಶ ಸ್ಥಾಪಕ ಯಾರು?
೨೩. ಪ್ರಪಂಚದ ಅತೀ ವೇಗದ ರೈಲು ಯಾವುದು?
೨೪. ಭಾರತದ ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಯಾರು?
೨೫. ಅತಿ ಹೆಚ್ಚು ಅಂತರಾಷ್ಟ್ರೀಯ ಪುಟ್ಬಾಲ್ ಪಂದ್ಯಗಳನ್ನು ಆಡಿದ ಆಟಗಾರ ಯಾರು?
೨೬. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ಕಲ್ಚರ್ ಕರ್ನಾಟಕದಲ್ಲಿ ಎಲ್ಲಿದೆ?
೨೭. ಗೋಕಾಕ್ ಕರದಂಟಿಗೆ ಪ್ರಸಿದ್ಧಯಾದರೆ ಮದ್ದೂರು ಯಾವುದಕ್ಕೆ ಪ್ರಸಿದ್ಧವಾಗಿದೆ?
೨೮. ೨೪ ಘಂಟೆಗಳ ನಿರಂತರ ಶಾಸ್ತ್ರೀಯ ಗಾಯನದಲ್ಲಿ ಗಿನ್ನಿಸ್ ದಾಖಲೆ ಮಾಡಿದ ಕನ್ನಡಿಗ ಯಾರು?
೨೯. ಇತ್ತೀಚಿಗೆ ಬಿಡುಗಡೆಯಾದ ತಮಿಳು ಲಿಂಗ ಚಿತ್ರದ ನಿರ್ಮಾಪಕರು ಯಾರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಜನವರಿ – ೨೬ ಗಣರಾಜ್ಯೋತ್ಸವ ದಿನ ಮತ್ತು ವಿಶ್ವ ಸುಂಕ ದಿನ
ಜನವರಿ – ೩೦ ಹುತಾತ್ಮರ ದಿನ, ಮತ್ತು ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ
ಉತ್ತರಗಳು:
೧. ಪ್ಯಾರಿಸ್
೨. ಯುನೈಟೆಡ್ ನೇಷನ್ಸ್ ಇಂಟರ್‌ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್
೩. ವೀ.ಚಿಕ್ಕವೀರಯ್ಯಾ
೪. ಎ.ಆರ್.ಕೃಷ್ಣಶಾಸ್ತ್ರಿ
೫. ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
೬. ಬಿಜೆಪಿ
೭. ಕ್ಲೆಮೆಂಟ್ ಆಟ್ಲೆ
೮. ರಾಜಶೇಖರ ಚರಿತ್ರಮು
೯. ಗಂಗೂಬಾಯಿ ಹಾನಗಲ್
೧೦. ಪ್ರೊ.ಎಲ್.ಎಸ್.ಶೇಷಗಿರಿರಾವ್
೧೧. ಚೌಡಪ್ಪ ಮತ್ತು ಭದ್ರಪ್ಪ ಸಹೋದರರು
೧೨. ತರಾನಾ – ಯೇ – ಹಿಂದಿ
೧೩. ೧೯೬೧
೧೪. ಬ್ಯಾರಕ್‌ಪುರ (ಪ.ಬಂಗಾಳ)
೧೫. ಐರ್‍ಲೆಂಡ್
೧೬. ಒರಿಸ್ಸಾ
೧೭. ಮುಕ್ತಾಯಕ್ಕ
೧೮. ಸಿ ವಿಟಮಿನ್
೧೯. ಕೈಮೊಗ್ರಾಫ್
೨೦. ನೇಫಾ
೨೧. ಡಾ|| ರಾಜೇಂದ್ರಪ್ರಸಾದ
೨೨. ಮಹಾಪದ್ಮನಂದ
೨೩. ಜಪಾನಿನ ಮೋನೋ ರೈಲ್
೨೪. ೨ನೇ ಬಹುದ್ದೂರ್ ಶಾ
೨೫. ಮಾಜೀದ್ ಅಬ್ದುಲ್ಲಾ (ಸೌದಿ ಅರೇಬಿಯಾ)
೨೬. ಬೆಂಗಳೂರು
೨೭. ವಡೆ
೨೮. ಪ್ರಸನ್ನ ಮಾಧವಗುಡಿ
೨೯. ರಾಕ್‌ಲೈನ್ ವೆಂಕಟೇಶ್
೩೦. ಸಿದ್ದಯ್ಯಾ ಪುರಾಣಿಕ
*****