ಸಾಮಾನ್ಯ ಜ್ಞಾನ (ವಾರ 62): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
೨.    ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ?
೩.    ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ ರೂಪವೇನು?
೪.    ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ?
೫.    ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು?
೬.    ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು?
೭.    ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ ಮೀಟರುಗಳಿವೆ?
೮.    ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು?
೯.    ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ ದೊರೆ ಯಾರು?
೧೦.    ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ?
೧೧.    ವಿಜಯನಗರ ಕಾಲದ ಆಡಳಿತದ ಮುಖ್ಯ ಕಛೇರಿಯನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು?
೧೨.    ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ ದೇಶದವರು?
೧೩.    ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೧೪.    ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ?
೧೫.    ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು?
೧೬.    ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು?
೧೭.    ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ ಯೋಜನೆಯಾಗಿದೆ?
೧೮.    ಲಖ್ನೋ ನಗರ ಯಾವ ನದಿಯ ದಂಡೆಯ ಮೇಲಿದೆ?
೧೯.    ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು?
೨೦.    ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೨೧.    ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು?
೨೨.    ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು?
೨೩.    ಟೆರ್ರಾಕೂಟಾ (ಮಣ್ಣಿನ ಶಿಲ್ಪಕಲಾ) ಪ್ರಚಾರಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ ಯಾರು?
೨೪.    ಇನ್ಫೋಸಿಸ್‌ನ ಎನ್.ಆರ್.ನಾರಾಯಣಮೂರ್ತಿಯವರಿಗೆ ೨೦೧೩ನೇ ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದೆ ಧಾರ್ಮಿಕ ಸಂಸ್ಥೆ ಯಾವುದು?
೨೫.    ಎಲೆಕ್ಟ್ರಾನ್‌ಗಳನ್ನ ಸಂಶೋಧಿಸಿದವರು ಯಾರು?
೨೬.    ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು?
೨೭.    ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು?
೨೮.    ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನ ಮುಖ್ಯ ಕಛೇರಿ ಎಲ್ಲಿದೆ?
೨೯.    ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

 

ಈ ವಾರದ ಪ್ರಸಿದ್ಧ ದಿನಾಚರಣೆಗಳು
ಜನವರಿ – ೨೩ – ದೇಶ ಪ್ರೇಮ ದಿನ
ಜನವರಿ – ೨೫ – ಮತದಾರರ ದಿನ


ಉತ್ತರಗಳು:
೧.    ರಾಮಕೃಷ್ಣ ಹೆಗಡೆ
೨.    ಬಸವರಾಜ ಕಟ್ಟಿಮನಿ
೩.    ಹಿಂದೂಸ್ಥಾನ್ ಸ್ಕೀಲ್ ವರ್ಕ್ಸ ಕನ್‌ಸ್ಟ್ರಕ್ಷನ್ ಲಿಮಿಟೆಡ್
೪.    ಷಣ್ಮುಖಸ್ವಾಮಿ
೫.    ಸಿಲಿಕಾನ್
೬.    ಚಿನ್ನಮೂಲಾದ್ರಿ
೭.    ೧೦,೦೦೦
೮.    ನೀರುನಾಯಿ
೯.    ವೆಂಕಟಪ್ಪನಾಯಕ
೧೦.    ಇಲಿ
೧೧.    ದಿವಾನಖಾನೆ
೧೨.    ಐರ್‍ಲೆಂಡ್
೧೩.    ಹರಿಯಾಣ
೧೪.    ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ
೧೫.    ಪೂರ್ವ ಪಶ್ಚಿಮ ಸಮದ್ರೇಶ್ವರ
೧೬.    ಜಾನ್‌ವಾಕರ್ (ಬ್ರಿಟನ್)
೧೭.    ಹರಿಯಾಣ
೧೮.    ಗೋಮತಿ
೧೯.    ಕರಾಚಿ
೨೦.    ಬರಾಕರ್
೨೧.    ಗ್ರಾಮೀಣಿ
೨೨.    ಗೋಬಿ ಮರಭೂಮಿ (ಮಂಗೋಲಿಯಾ)
೨೩.    ಎನ್.ಪುಷ್ಪಮಾಲಾ
೨೪.    ಮುರುಘರಾಜೇಂದ್ರಮಠ (ಚಿತ್ರದುರ್ಗ)
೨೫.    ಜೆ.ಜೆ.ಥಾಮಸನ್
೨೬.    ಕಲ್ಯಾಣಸ್ವಾಮಿ
೨೭.    ಮೇದೋಜೀರಕ ಗ್ರಂಥಿ
೨೮.    ಫಿಲಿಫೈನ್ಸನ ಮನಿಲಾದಲ್ಲಿ
೨೯.    ಶ್ರೀಲಂಕಾ
೩೦.    ಜಾನ್.ಎಫ್.ಕೆನಡಿ (ಅತ್ಯಂತ ಸಣ್ಣ ವಯಸ್ಸಿನಲ್ಲಿ ಅಮೇರಿಕಾದ ಅಧ್ಯಕ್ಷರಾದವರು)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x