ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 61): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು?
೨.    ಎಪಿಎಮ್‌ಸಿ (APMC) ನ ವಿಸ್ತೃತ ರೂಪವೇನು?
೩.    ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ?
೪.    ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು?
೫.    ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ?
೬.    ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?
೭.    ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು?
೮.    ಪ್ರಥ್ವಿವಲ್ಲಭ ಎಂದು ಬಿರುದು ಹೊಂದಿದ್ದ ರಾಷ್ಟ್ರಕೂಟರ ದೊರೆ ಯಾರು?
೯.    ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ ಯಾವುದು?
೧೦.    ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೧.    ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದ ಸ್ಥಳ ಯಾವುದು?
೧೨.    ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿದೆ?
೧೩.    ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ ಇಲಕಲ್ ಯಾವುದಕ್ಕೆ ಪ್ರಸಿದ್ಧವಾಗಿದೆ?
೧೪.    ಟಿಬೇಟಿಯನ್ ಸನ್ಯಾಸಿಗಳನ್ನ ಏನೆಂದು ಕರೆಯುತ್ತಾರೆ?
೧೫.    ಶ್ರೀ ಕೃಷ್ಣ ಇದು ಯಾರ ಅಂಕಿತನಾಮವಾಗಿದೆ?
೧೬.    ಜಲಜನಕವನ್ನು ಕಂಡು ಹಿಡಿದವರು ಯಾರು?
೧೭.    ಶ್ರೀ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದವರು ಯಾರು?
೧೮.    ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಯಾರು?
೧೯.    ವಿಶ್ವಾಮಿತ್ರನ ಆಶ್ರಮದ ಹೆಸರೇನು?
೨೦.    ಸತತವಾಗಿ ನಾಲ್ಕು ಬಾರಿ ಅಮೇರಿಕಾದ ಅಧ್ಯಕ್ಷ ಹುದ್ದೆ ಅಲಂಕರಿಸಿದವರು ಯಾರು?
೨೧.    ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ?
೨೨.    ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ ತಯಾರಿಸುತ್ತಾರೆ?
೨೩.    ಝೂನ್ಸಿ ರಾಣಿ ಲಕ್ಷ್ಮಿಬಾಯಿಯ ದತ್ತು ಪುತ್ರನ ಹೆಸರೇನು?
೨೪.    ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು?
೨೫.    ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು?
೨೬.    ಕ್ಯಾಲ್ಸಿಯಂ ಸಲ್ಫೇಟ್‌ನ್ನು ಸಾಮಾನ್ಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ?
೨೭.    ಆಧುನಿಕ ಶಿಕ್ಷಣದ ಪಿತಾಮಹಾನೆಂದು ಕರೆಯಲ್ಪಡುವ ಶಿಕ್ಷಣ ತಜ್ಞ ಯಾರು?
೨೮.    ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ?
೨೯.    ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು 
ಜನವರಿ ೧೨ – ರಾಷ್ಟ್ರೀಯ ಯುವ ದಿನ
ಜನವರಿ ೧೫ – ಭೂ ಸೇನಾ ದಿನ

ಉತ್ತರಗಳು:
೧.    ಸಾಂಗ್ಸ್ ಆಫ್ ದಿ ಮಾರ್ನಿಂಗ್
೨.    ಅಗ್ರಿಕಲ್ಚರ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಕಮಿಟಿ
೩.    ಬೆಂಗಳೂರು
೪.    ವಿದ್ಯಾ ಸರಸ್ವತಿ
೫.    ಅಂಕೋಲ
೬.    ಫ್ರಾನ್ಸ್ 
೭.    ಬಿಹಾರ
೮.    ದಂತಿದುರ್ಗ
೯.    ಕೊಡಗು
೧೦.    ಮುಂಬೈ 
೧೧.    ಮೈಸೂರು
೧೨.    ವಿಜಯ ವಿಠಲ
೧೩.    ಸೀರೆಗಳು
೧೪.    ಲಾಮೋಗಳು
೧೫.    ವ್ಯಾಸರಾಯರು
೧೬.    ಕ್ಯಾವೆಂಡಿಸ್
೧೭.    ಶ್ರೀ ರಾಮಾನುಜಾಚಾರ್ಯರು
೧೮.    ಫರ್ಡಿನಾಂಡ್ ಕಿಟೆಲ್
೧೯.    ಸಿದ್ಧಾಶ್ರಮ
೨೦.    ಫ್ರಾಂಕಲಿನ್ ರೂಜ್‌ವೆಲ್ಟ್
೨೧.    ಕುಂಚೂರು ಬಾರಿಕೇರ ಸದಾಶಿವ
೨೨.    ತಾಮ್ರ ಮತ್ತು ತವರ
೨೩.    ದಾಮೋದರ
೨೪.    ಘಜ್ನಿ ಮಹಮ್ಮದ್
೨೫.    ಜವಹರಲಾಲ್ ನೆಹರು
೨೬.    ಜಿಪ್ಸಂ
೨೭.    ರೋಸೋ
೨೮.    ಹುಬ್ಬಳಿ
೨೯.    ೦೯.೧೧.೨೦೦೦
೩೦.    ಹಾ.ಮಾ.ನಾಯಕ್

******

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.