ಪ್ರಶ್ನೆಗಳು:
೧. ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ?
೨. ಏಷಿಯನ್ (ASEAN) ನ ವಿಸ್ತೃತ ರೂಪವೇನು?
೩. ಮುಕ್ತೇಶ್ವರ ಗಿರಿಧಾಮ ಯಾವ ರಾಜ್ಯದಲ್ಲಿದೆ?
೪. ಅಮೇರಿಕಾದ ಛಾಯಾ ಚಿತ್ರ ಸೊಸೈಟಿಯ ಫಿಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
೫. ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಕಛೇರಿ ಎಲ್ಲಿದೆ?
೬. ಅತ್ಯಂತ ಕಡಿಮೆ ಪ್ರಮಾಣದ ಬಾವಿ ನೀರಾವರಿ ಸೌಲಭ್ಯವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
೭. ಉಂಚಳ್ಳಿ ಜಲಪಾತ ಇದು ಯಾವ ನದಿಯಿಂದ ಉಂಟಾಗಿದೆ?
೮. ಕ್ರೈಸ್ಕೊಗ್ರಾಪ್‌ನ್ನು ಏನನ್ನು ಅಳೆಯಲು ಬಳಸುತ್ತಾರೆ?
೯. ಕಾಬೂಲ್ ಇದು ಯಾವ ದೇಶದ ರಾಜಧಾನಿಯಾಗಿದೆ?
೧೦. ಪಯನೀರ್ ಇದು ಯಾವ ದೇಶದ ಬಾಹ್ಯಾಕಾಶ ನೌಕೆಯಾಗಿದೆ?
೧೧. ವತ್ಸ ಇದು ಯಾರ ಕಾವ್ಯ ನಾಮವಾಗಿದೆ?
೧೨. ಗ್ರಾಮಾಯಣ ಈ ಕಾದಂಬರಿಯ ಕರ್ತೃ ಯಾರು?
೧೩. ಮಹಾಭಾರತದಲ್ಲಿ ಒಟ್ಟು ಎಷ್ಟು ಪರ್ವಗಳಿವೆ?
೧೪. ೧೯೯೨ರಲ್ಲಿ ಕೊಪ್ಪಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೧೫. ವೀರಬೀರೇಶ್ವರ ಇದು ಯಾರ ಅಂಕಿತನಾಮವಾಗಿದೆ?
೧೬. ಯಾವುದೇ ರಾಸಾಯನಿಕವನ್ನು ಬಳಸದೇ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದಾದ ಬೆಳೆ ಯಾವುದು?
೧೭. ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು?
೧೮. ೧೯೮೨-೧೯೮೫ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?
೧೯. ಭಾರತೀಯ ತೆಂಗು ಸಂಶೋಧನಾ ಸಂಸ್ಥೆ ಎಲ್ಲಿದೆ?
೨೦. ಐದು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
೨೧. ಸೌರಯಾನ ಪಂಚಾಂಗವನ್ನು ಮೊದಲು ರೂಪಿಸಿದವರು ಯಾರು?
೨೨. ರೀನೋ ವೈರಸ್‌ನಿಂದ ಬರುವ ಕಾಯಿಲೆ ಯಾವುದು?
೨೩. ರಾಷ್ಟ್ರ ಪತಿಗಳ ಸ್ವರ್ಣ ಪದಕ ಗಳಿಸಿರುವ ಕನ್ನಡದ ಮೊದಲ ಚಲನಚಿತ್ರ ಯಾವುದು?
೨೪. ಭಾರತ ಸರ್ಕಾರ ಯಾವ ವರ್ಷ ರಾಜ್ಯಗಳ ಮರು ವಿಂಗಡಣಾ ಸಮಿತಿಯನ್ನು ನೇಮಿಸಿತು?
೨೫. ವಾಣಿಜ್ಯ ಬ್ಯಾಂಕುಗಳಲ್ಲಿಯೇ ಅತ್ಯಂತ ದೊಡ್ಡ ಬ್ಯಾಂಕ್ ಯಾವುದು?
೨೬. ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಯಾರಿಂದ ನೇಮಕವಾಗುತ್ತಾರೆ?
೨೭. ಕರ್ನಾಟಕದಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ ಯಾವುದು?
೨೮. ಅರ್ಜುನ್ ಪ್ರಶಸ್ತಿ ಪಡೆದ ಪ್ರಥಮ ಕರ್ನಾಟಕದ ಕ್ರಿಕೇಟ್ ಆಟಗಾರ ಯಾರು?
೨೯. ಇತ್ತೀಚಿಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ದ ದಿನಾಚರಣೆ
ಜನವರಿ – ೧೦ – ವಿಶ್ವ ನಗುವಿನ ದಿನ
ಉತ್ತರಗಳು:
೧. ಬೀದರ್
೨. ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್
೩. ಉತ್ತರ ಪ್ರದೇಶ
೪. ಸಿ.ರಾಜುಗೋಪಾಲ್
೫. ದೆಹಲಿ
೬. ಕೊಡಗು
೭. ಅಘನಾಶಿನಿ
೮. ಸಸ್ಯದ ಬೆಳವಣಿಗೆ
೯. ಅಫಘಾನಿಸ್ತಾನ್
೧೦. ಅಮೇರಿಕಾ
೧೧. ಪ್ರಹ್ಲಾದ್ ಬಂಡೇರಾವ್ ನರೇಗಲ್
೧೨. ರಾವ್ ಬಹದ್ದೂರ್
೧೩. ಹದಿನೆಂಟು
೧೪. ಸಿಂಪಿ ಲಿಂಗಣ್ಣ
೧೫. ಗೊಲ್ಲಾಳ
೧೬. ರಾಗಿ
೧೭. ಆರ್ಕಿಮಿಡಿಸ್
೧೮. ಡಾ|| ಮನಮೋಹನ್ ಸಿಂಗ್
೧೯. ಕಾಸರಗೂಡು (ಕೇರಳ)
೨೦. ಯುರೇನಸ್
೨೧. ಈಜಿಪ್ತಿಯನ್ನರು
೨೨. ಸಾಮಾನ್ಯ ಶೀತ(ನೆಗಡಿ)
೨೩. ಸಂಸ್ಕಾರ
೨೪. ೧೯೫೨
೨೫. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
೨೬. ರಾಷ್ಟ್ರಪತಿ
೨೭. ಉತ್ತರಕನ್ನಡ
೨೮. ಇ.ಎ.ಎಸ್.ಪ್ರಸನ್ನ
೨೯. ಮಹೇಂದ್ರ ಸಿಂಗ್ ಧೋನಿ
೩೦. ಎಂ.ಫಾತಿಮಾ ಬೀವಿ (ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ)
*****