ಪ್ರಶ್ನೆಗಳು
೧. ಇತ್ತೀಚಿಗೆ ಭಾರತ ರತ್ನ ಪುರಸ್ಕಾರಕ್ಕೆ ಯಾರನ್ನು ಆಯ್ಕೆ ಮಾಡಲಾಯಿತು?
೨. ಜಿಎಮ್‌ಟಿ (GMT)ಯ ವಿಸ್ತೃತ ರೂಪವೇನು?
೩. ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು?
೪. ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ?
೫. ಅಶ್ವಿನಿ ಇದು ಯಾರ ಕಾವ್ಯ ನಾಮವಾಗಿದೆ?
೬. ಪ್ರಸಿದ್ಧ ಶಿರಹಟ್ಟಿಯ ಫಕಿರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೭. ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು?
೮. ಡೆನ್ಮಾರ್ಕ್ ವಿಶಿಷ್ಟವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ?
೯. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
೧೦. ಮೌಸಾರಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೧. ವಸ್ತುವಿನ ಸಾಪೇಕ್ಷ ವೇಗವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು?
೧೨. ಕರ್ನಾಟಕದಲ್ಲಿ ಪ್ರಥಮ ಹಾಲು ಉತ್ಪನ್ನ ಘಟಕ ಸ್ಥಾಪನೆ ಎಲ್ಲಿ ಆಯಿತು?
೧೩. ಸೆಂಟ್ರಲ್ ಇನ್‌ಸ್ಟಿಟ್ಯೂಷನ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಕರ್ನಾಟಕದಲ್ಲಿ ಎಲ್ಲಿದೆ?
೧೪. ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯಾ ಲಿಟರೇಚರ್ ಪತ್ರಿಕೆಯ ಸಂಪಾದಕರಾದ ಮೊದಲ ಕನ್ನಡಿಗ ಯಾರು?
೧೫. ತೆಲುಗಿನಲ್ಲಿ ಪಂಚರತ್ನ ಕೀರ್ತನೆಗಳನ್ನು ಬರೆದವರು ಯಾರು?
೧೬. ಪಾಟಲಿಪುತ್ರ ಯಾವ ವಂಶದ ಅರಸರ ರಾಜಧಾನಿಯಾಗಿತ್ತು?
೧೭. ಶ್ಯಾಮ್ ಚಿ ಆಯಿ ಈ ಪ್ರಸಿದ್ಧ ಕೃತಿ ಯಾವ ಭಾಷೆಯಲ್ಲಿದೆ?
೧೮. ಬೀಡಿ ಹೊಗೆಸೊಪ್ಪನ್ನು ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?
೧೯. ಕ್ರೈಸ್ತರ ಪವಿತ್ರಗ್ರಂಥ ಬೈಬಲ್‌ನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು ಯಾರು?
೨೦. ಸಬಲೇಶ್ವರ ದೇವ ಇದು ಯಾರ ಅಂಕಿತನಾಮವಾಗಿದೆ?
೨೧. ಕರ್ನಾಟಕದ ಅತ್ಯಂತ ದೊಡ್ಡ ವಿವಿದೋದ್ದೇಶ ನದಿ ಕಣಿವೆ ಯೋಜನೆ ಯಾವುದು?
೨೨. ಸಮೀಪದ ದೃಷ್ಟಿದೋಷ ನಿವಾರಿಸಲು ಬಳಸುವ ಮಸೂರ ಯಾವುದು?
೨೩. ಟಾನ್ಸಿಲ್ ಕಾಯಿಲೆ ಯಾವ ಭಾಗಕ್ಕೆ ಸಂಬಂಧಿಸಿದೆ?
೨೪. ೧೮೫೭ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು ಯಾರು?
೨೫. ಭಕ್ತಿ ಪಂಥ ಚಳುವಳಿಯಲ್ಲಿ ರಾಮ ಮತ್ತು ರಹೀಮ ಒಬ್ಬನೇ ಎಂದು ಹೇಳಿದವರು ಯಾರು?
೨೬. ದಾಖಲೆಯ ಪ್ರದರ್ಶನ ನೀಡಿದ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರು ಯಾರು?
೨೭. ಟೊಮೋಟೊ ಸಾಸ್‌ನಲ್ಲಿರುವ ಆಮ್ಲ ಯಾವುದು?
೨೮. ಖಿಲಾಫತ್ ಚಳುವಳಿ ಭಾರತದಲ್ಲಿ ಆರಂಭವಾದ ವರ್ಷ ಯಾವುದು?
೨೯. ವಿಜಯ ಪಥ್ ಸಿಂಘಾನಿಯಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
೩೦. ಈ ಚಿತ್ರದಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಜನವರಿ – ೧ – ಹೊಸ ವರ್ಷದ ಆರಂಭ ದಿನ
ಉತ್ತರಗಳು:
೧. ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್ ಮಾಳವೀಯ
೨. ಗ್ರೀನ್‌ವಿಚ್ ಮೀನ್ ಟೈಮ್
೩. ಸೋಡಿಯಂ ಕ್ಲೋರೈಡ್
೪. ಕ್ಯಾಲೋರಿ
೫. ಎಂ.ವಿ.ಕನಕಮ್ಮ
೬. ಗದಗ
೭. ೨೦೦೪ ನವೆಂಬರ್ ೧೪
೮. ಎಮ್ಮೆ
೯. ಕಪ್ಪೆ ಅರೆಭಟ್ಟನ ಶಾಸನ
೧೦. ಉತ್ತರಾಂಚಲ
೧೧. ಡಾಪ್ಲರ್ ರೇಡಾರ್
೧೨. ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ
೧೩. ಮೈಸೂರು
೧೪. ಎಚ್.ಎಸ್.ಶಿವಪ್ರಕಾಶ್
೧೫. ತ್ಯಾಗರಾಜ
೧೬. ಮಗದುರು
೧೭. ಮರಾಠಿ
೧೮. ಗುಜರಾತ್
೧೯. ಜಾನ್ ಹ್ಯಾಂಡ್
೨೦. ಸಕಲೇಶ ಮಾದರಸ
೨೧. ಕೃಷ್ಣ ಮೇಲ್ದಂಡೆ ಯೋಜನೆ
೨೨. ನಿಮ್ನ ಮಸೂರ
೨೩. ನಾಲಿಗೆ
೨೪. ವಿ.ಡಿ.ಸಾವರ್ಕರ್
೨೫. ಕಬೀರ ದಾಸರು
೨೬. ಸಿದ್ದಲಿಂಗಯ್ಯ
೨೭. ಅಸಿಟಿಕ್ ಆಮ್ಲ
೨೮. ೧೯೧೮
೨೯. ವಾಯುಯಾನ
೩೦. ಪ್ರೊ|| ಎಲ್.ಎಸ್.ಶೇಷಗಿರಿರಾವ್
*****