ಸಾಮಾನ್ಯ ಜ್ಞಾನ (ವಾರ 58): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಬಿಎಮ್‌ಟಿಸಿ ಕೊಡುಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು?
೨.    ೧೨ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು?
೩.    ಇತ್ತೀಚೆಗೆ ಅಮೇರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು?
೪.    ಇಸ್ರೋ ಇತೀಚಿಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್ – ೩ ರಾಕೆಟ್‌ನ್ನು ಉಡಾವಣೆ ಮಾಡಲಾಯಿತು?
೫.    ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ?
೬.    ಐಶ್ವರ್ಯ ರೈ ಮೇಣದ ಪ್ರತಿಮೆ ಲಂಡನ್‌ನ ಯಾವ ಮ್ಯೂಸಿಯಂನಲ್ಲಿದೆ?
೭.    ನಾ ಕಸ್ತೂರಿ ಇದು ಯಾರ ಕಾವ್ಯನಾಮವಾಗಿದೆ?
೮.    ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?
೯.    ಗೋಕಾಕ್ ಕರದಂಟುಗೆ ಪ್ರಸಿದ್ಧವಾದರೆ ಮುಧೋಳು ಯಾವುದಕ್ಕೆ ಪ್ರಸಿದ್ಧವಾಗಿದೆ?
೧೦.    ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?
೧೧.    ಡ್ರೆಮಾಕ್ರೇಷಿಯಾ ಎಂಬ ಪದವು ಯಾವ ಭಾಷೆಯ ಪದವಾಗಿದೆ?
೧೨.    ಕ್ವಾಂಟಂ ಸಿದ್ಧಾಂತಕ್ಕಾಗಿ ಐನ್‌ಸ್ಟೈನ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತ ವರ್ಷ ಯಾವುದು?
೧೩.    ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ?
೧೪.    ಕೆ.ಎಂ.ಎಫ್ (ಏಒಈ) ನ ವಿಸ್ತೃತ ರೂಪವೇನು?
೧೫.    ಫ್ರೀಡಮ್ ಇನ್ ಎಕ್ಸೈಲ್ ಇದು ಯಾರ ಆತ್ಮಕಥನವಾಗಿದೆ?
೧೬.    ಕಿರು ಅಥವಾ ಮಿನಿ ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು?
೧೭.    ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
೧೮.    ಪ್ರಪಂಚದ ಅತಿದೊಡ್ಡ ಬಂದರು ಯಾವುದು?
೧೯.    ಕರ್ನಾಟಕದ ಯಾವ ಜಿಲ್ಲೆಯನ್ನು ಸಾಹಸಿಗರ ಜಿಲ್ಲೆ ಎಂದು ಕರೆಯಲಾಗುತ್ತದೆ?
೨೦.    ನ್ಯಾಷನಲ್ ಬುಕ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?
೨೧.    ಕದಂಬರ ಪತನದ ನಂತರ ಆಡಳಿತಕ್ಕೆ ಬಂದ ರಾಜವಂಶ ಯಾವುದು?
೨೨.    ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ ವಿಶ್ವದ ನಗರ ಯಾವುದು?
೨೩.    ಗೋಕಾಕ್ ಜಲಪಾತ ಯಾವ ನದಿಯಿಂದ ಉಂಟಾಗಿದೆ?
೨೪.    ವಿಶ್ವ ಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಯ ಮುಖ್ಯ ಕಛೇರಿ ಎಲ್ಲಿದೆ?
೨೫.    ವಾತಾಪಿಗೊಂಡ ಎಂಬ ಬಿರುದು ಯಾವ ರಾಜನಿಗಿತ್ತು?
೨೬.    ಅಮಿಬಿಕ್ ಡೀಸೆಂಟ್ರ ಎಂಬ ಆಮಶಂಕೆಗೆ ಕಾರಣವಾಗುವ ಏಕಕೋಶ ಜೀವಿ ಯಾವುದು?
೨೭.    ಇರಾನ್ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
೨೮.    ನೌಟಂಕಿ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ?
೨೯.    ಮೂರನೇ ಕಣ್ಣು ಹೊಂದಿರುವ ಟ್ವಿಟಾರ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ
ಡಿಸೆಬಂರ್ – ೨೩ – ಕಿಸಾನ್ ದಿವಸ್ (ರೈತರ ದಿನ)


ಉತ್ತರಗಳು:
೧.    ಕುಂ.ವೀರಭದ್ರಪ್ಪ
೨.    ವಿಜಯಪುರ
೩.    ಡಾ. ವಿವೇಕ ಮೂರ್ತಿ (ಕರ್ನಾಟಕ)
೪.    ಸತೀಶ್‌ಧವನ್ ಬಾಹ್ಯಾಕಾಶ ಕೇಂದ್ರ ಶ್ರೀ ಹರಿಕೋಟಾ
೫.    ಆನೆ
೬.    ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
೭.    ಕಸ್ತೂರಿ ರಂಗನಾಥ್ ನಾರಾಯಣ ಶರ್ಮ
೮.    ಬಿಕನೆರ್ (ರಾಜಸ್ಥಾನ)
೯.    ನಾಯಿಗಳಿಗೆ
೧೦.    ಬೆಂಗಳೂರು
೧೧.    ಗ್ರೀಕ್
೧೨.    ೧೯೧೮
೧೩.    ಲಕ್ಕಮ್ಮ
೧೪.    ಕರ್ನಾಟಕ ಮಿಲ್ಕ್ ಫೆಡರೇಷನ್
೧೫.    ದಲೈಲಾಮಾ
೧೬.    ೪೨ನೇ ತಿದ್ದುಪಡಿ
೧೭.    ಬಸವರಾಜ ಕಟ್ಟ್ಟಿಮನಿ
೧೮.    ಹಾರ್ವಾರಾ (ನ್ಯೂಯಾರ್ಕ್)
೧೯.    ದಕ್ಷಿಣ ಕನ್ನಡ
೨೦.    ಡಾ||ಯು.ಆರ್.ಅನಂತಮೂರ್ತಿ
೨೧.    ಬಾದಾಮಿ ಚಾಲುಕ್ಯರು
೨೨.    ಬ್ಯಾಂಕಾಕ್
೨೩.    ಘಟಪ್ರಭಾ
೨೪.    ವಿಯೆನ್ನಾ
೨೫.    ನರಸಿಂಹವರ್ಮ
೨೬.    ಎಂಟಮೀಬಾ ಹಿಸ್ಟಲಿಕ
೨೭.    ರೀಯಲ್
೨೮.    ಉತ್ತರ ಪ್ರದೇಶ
೨೯.    ನ್ಯೂಜಿಲ್ಯಾಂಡ್
೩೦.    ಗಂಗಾಧರ್ ಚಿತ್ತಾಲ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x