ಪ್ರಶ್ನೆಗಳು:
೧. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
೨. ನ್ಯಾಕೋ (NACO)ನ ವಿಸ್ತೃತ ರೂಪವೇನು?
೩. ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು?
೪. ಧರ್ಮೇಶ್ವರಾ ಇದು ಯಾರ ಅಂಕಿತನಾಮವಾಗಿದೆ?
೫. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
೬. ಬರ್ಲಾಂಗ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ?
೭. ಧನುರ್ವಾಯು ರೋಗ ಬರಲು ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?
೮. ಭಾರತದ ರಾಷ್ಟ್ರಪತಿ ಭವನದ ಉದ್ಯಾನವಕ್ಕೆ ಇರುವ ಹೆಸರು ಯಾವುದು?
೯. ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೧೦. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು?
೧೧. ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?
೧೨. ೨೦೦೭ರಲ್ಲಿ ವಿಶ್ವಗೋ ಸಮ್ಮೇಳನವನ್ನು ಆಯೋಜಿಸಿದ ಕರ್ನಾಟಕದ ಮಠ ಯಾವುದು?
೧೩. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ ಯಾರು?
೧೪. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ?
೧೫. ತರಕಾರಿಗಳು ಕೊಳೆತಾಗ ಬಿಡುಗಡೆಯಾಗುವ ಅನಿಲ ಯಾವುದು?
೧೬. ಕನ್ನಡ ಪತ್ರಿಕೋದ್ಯಮ ಜನಿಸಿದ ಜಿಲ್ಲೆ ಯಾವುದು?
೧೭. ಧರ್ಮ ಜಲಾಶಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೮. ಕರ್ನಾಟಕದಲ್ಲಿ ಮೊಟ್ಟಮೊದಲು ಕಾನೂನು ಕಾಲೇಜನ್ನು ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು?
೧೯. ರಾಜ್ಯಗಳ ಭಾಷಾವರು ಪುನರ್‌ವಿಂಗಡೆಯಾದ ವರ್ಷ ಯಾವುದು?
೨೦. ದೂರದರ್ಶಕದ ಸಹಾಯದಿಂದ ಪತ್ತೆ ಹಚ್ಚಲ್ಪಟ್ಟ ಮೊದಲನೆ ಗ್ರಹ ಯಾವುದು?
೨೧. ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು?
೨೨. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಬಳಸುವ ಅನಿಲ ಯಾವುದು?
೨೩. ದೇಶದಲ್ಲಿ ಮೊದಲ ಸಹಕಾರ ಸಂಘ ಸ್ಥಾಪಿತವಾದ ಕರ್ನಾಟಕದ ಜಿಲ್ಲೆ ಯಾವುದು?
೨೪. ಚಿನ್ನ ಇದು ಯಾರ ಕಾವ್ಯನಾಮ?
೨೫. ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಸಂಗ್ಯಾ ಬಾಳ್ಯಾ ನಾಟಕದ ಕರ್ತೃ ಯಾರು?
೨೬. ಪೊಚ್ಂಪಾಡೆ ನೀರಾವರಿ ಮತ್ತು ವಿವಿದೊದ್ದೇಶ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
೨೭. ಮಹಾಮಾನವ ಎಂದು ಬಿರುದು ಪಡೆದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೨೮. ಗಾರ್ಡನ ರಿಚರ್ಡ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದವರು?
೨೯. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅತ್ಯವಶ್ಯಕವಾಗಿ ಬೇಕಾಗುವ ಅನಿಲ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಡಿಸೆಂಬರ್ – ೧ ವಿಶ್ವ ಏಡ್ಸ್ ದಿನ
ಡಿಸೆಂಬರ್ – ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನ
ಡಿಸೆಂಬರ್ – ೪ ನೌಕಾ ಪಡೆ (ಭಾರತ) ದಿನ
ಡಿಸೆಂಬರ್ – ೭ ಸೇನಾ ಪಡೆಗಳ ಧ್ವಜಾ ದಿನ
ಉತ್ತರಗಳು:
೧. ನಾಕು ತಂತಿ
೨. ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗಾನೈಜೇಶನ್
೩. ರಾಡಾರ್ ಗನ್
೪. ಹೆಂಡದ ಮಾರಯ್ಯ
೫. ಡಾ|| ಎಸ್.ರಾಮೇಗೌಡ
೬. ಬಿಹಾರ
೭. ಕ್ಲಾಸ್ಪೀಡಿಯಂ ಟೆಟನೈ
೮. ಮೊಗಲ ಉದ್ಯಾನ್
೯. ಕೃಷ್ಣಾ
೧೦. ವಿಟಮಿನ್ ಸಿ
೧೧. ಬೆಂಗಳೂರು
೧೨. ಚಂದ್ರಾಪುರ ಮಠ
೧೩. ರಾಮ ಗಾಣಿಗ
೧೪. ಅಮೇರಿಕಾ
೧೫. ಜಲಜನಕ ಸಲ್ಫೈಡ್
೧೬. ದಕ್ಷಿಣ ಕನ್ನಡ
೧೭. ಹಾವೇರಿ
೧೮. ಬೆಳಗಾವಿ
೧೯. ೧೯೫೬
೨೦. ಯುರೇನಸ್
೨೧. ಇಂಟಲಿಜೆನ್ಸ್ ಬ್ಯೂರೋ
೨೨. ನೈಟ್ರೋಜನ್
೨೩. ಗದಗ (ಕಣಗಿನಹಾಳ)
೨೪. ಚನ್ನಕ್ಕ ಎಲಿಗಾರ
೨೫. ಡಾ|| ಚಂದ್ರಶೇಖರ ಕಂಬಾರ
೨೬. ಗೋದಾವರಿ
೨೭. ಮದನ್ ಮೋಹನ್ ಮಾಳವೀಯ
೨೮. ಕುದುರೆ ಸವಾರಿ
೨೯. ಇಂಗಾಲದ ಡೈ ಆಕ್ಸೈಡ್
೩೦. ಮೇಡಂ ಕ್ಯೂರಿ (ರೇಡಿಯಂ ಕಂಡು ಹಿಡಿದ ವಿಜ್ಞಾನಿ)
*****