ಸಾಮಾನ್ಯ ಜ್ಞಾನ (ವಾರ 56): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
1.    ವಿಶ್ವದ ಪ್ರಥಮ ಔದ್ಯೋಗಿಕ  ರಾಷ್ಟ್ರ ಯಾವುದು?
2.    ಭಾರತದಲ್ಲಿ ಆಡಳಿತ ಸುಧಾರಣಾ ಆಯೋಗದ ಪ್ರಥಮ ಅಧ್ಯಕ್ಷರು ಯಾರಾಗಿದ್ದರು?
3.    ಕರ್ನಾಟಕ ರಾಜ್ಯ ಡಾ||ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಎಲ್ಲಿದೆ?
4.    ಅಮುಗೇಶ್ವರ ಇದು ಯಾರ ಅಂಕಿತ ನಾಮವಾಗಿದೆ?
5.    ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ ನಿರ್ವಹಿಸುವ ಭಾಗ ಯಾವುದು?
6.    ಕುವೆಂಪು ರವರ ಮೊದಲ ಕಾವ್ಯನಾಮ ಯಾವುದು?
7.    ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ ಸಂಬಂಧಿಸಿದ ಯುದ್ಧ ಕಲೆಯಾಗಿದೆ?
8.    ಫ್ರೈಡೆಟೈಮ್ ಇದು ಯಾವ ದೇಶದ ಪ್ರಮುಖ ಪತ್ರಿಕೆಯಾಗಿದೆ?
9.    ಬನವಾಸಿಗಿದ್ದ ಪ್ರಾಚೀನ ಹೆಸರು ಯಾವುದು?
10.    ಟಿ.ಎಮ್.ಸಿ (TMC) ಯ ವಿಸ್ತೃತ ರೂಪವೇನು?
11.    ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು?
12.    ಕನ್ನಡದ ಚಂದನ ವಾಹಿನಿ ಪ್ರಾರಂಭವಾದ ವರ್ಷ ಯಾವುದು?
13.    ಭಾರತದ ಏಕಪೌರತ್ವ ಪದ್ಧತಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?
14.    ಅನಾಮಧೇಯ ಇದು ಯಾರ ಕಾವ್ಯನಾಮವಾಗಿದೆ?
15.    ತಾಲಿಬಾನ್ ಸಂಘಟನೆ ಯಾವ ದೇಶಕ್ಕ ಸೇರಿದ್ದಾಗಿದೆ?
16.    ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆಯನ್ನು ಹೊಂದಿದ ನದಿ ಯಾವುದು?
17.    ಇರುಪು ಜಲಪಾತವನ್ನು ಉಂಟುಮಾಡಿದ ನದಿ ಯಾವುದು?
18.    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಶುಗರ್‍ಕೇನ್ ರಿಸರ್ಚ್ ಇರುವ ರಾಜ್ಯ ಯಾವುದು?
19.    ರೈಬೋಸೋಮಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು?
20.    ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು ಪ್ರತಿವಾದಿಸಿದವರು ಯಾರು?
21.    ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು?
22.    ಔರಂಗಜೇಬನು ರಾಜಾ ಜಗದೇವ್ ಎಂಬ ಬಿರುದನ್ನು ಯಾರಿಗೆ ನೀಡಿದ್ದನು?
23.    ಬೇಸಿಗೆಯ ಕಾಲದಲ್ಲಿ ಭಾರತದಲ್ಲಿ ಗರಿಷ್ಠ ಉಷ್ಣಾಂಶವನ್ನು ಹೊಂದುವ ನಗರ ಯಾವುದು?
24.    ಭಾರತದ ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ ಯಾವುದು?
25.    ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತ ಎರಡನೇಯ ರಾಜ್ಯ ಯಾವುದು?
26.    ಮರಣದಂಡನೆಯನ್ನು ರದ್ದುಪಡಿಸುವ ಅಧಿಕಾರ ಯಾರಿಗಿದೆ?
27.    ಅಧುನಿಕ ಭಾರತದ ನವೋದಯದ ತಾರೆ ಎಂದು ಯಾರನ್ನು ಕರೆಯುತ್ತಾರೆ?
28.    ಕರ್ನಾಟಕದ ಸೋನಂ ದೀಪ್‍ಕೌರ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
29.    ಕೇಂದ್ರ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಮೊದಲ ಕನ್ನಡಿಗ ಯಾರು?
30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ
ಡಿಸೆಂಬರ್ – 10 – ವಿಶ್ವ ಮಾನವ ಹಕ್ಕುಗಳ ದಿನ

ಉತ್ತರಗಳು:
1.    ಇಂಗ್ಲೆಂಡ್
2.    ಮುರಾರ್ಜಿ ದೇಸಾಯಿ 
3.    ಮೈಸೂರು
4.    ರಾಯಸದ ಮಂಚಣ್ಣ
5.    ಅಕ್ಷಿಪಟಲ 
6.    ಪರ್ವತವಾಣಿ
7.    ಕೇರಳ
8.    ಪಾಕಿಸ್ತಾನ
9.    ವೈಜಯಂತಿಪುರ
10.    ಥೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್
11.    ರಾಮಚರಣ್ ಯಾದವ್
12.    1994
13.    ಬ್ರಿಟನ್
14.    ಭೀಮಾಚಾರ್ಯ ಜೋಶಿ
15.    ಆಫ್ಘಾನಿಸ್ತಾನ್
16.    ಶರಾವತಿ
17.    ಕಾವೇರಿ 
18.    ಉತ್ತರ ಪ್ರದೇಶ (ಲಕ್ನೋ)
19.    ಕೊಲ್ಲಿಕಾರ
20.    ಜಯಪ್ರಕಾಶ್ ನಾರಾಯಣ್ 
21.    ರಾಜೇಂದ್ರ ಪ್ರಸಾದ್
22.    ಚಿಕ್ಕದೇವರಾಜ ಒಡೆಯರ್
23.    ಗಂಗಾನಗರ (ರಾಜಸ್ಥಾನ)
24.    ಗೋದಾವರಿ
25.    ಆಂಧ್ರಪ್ರದೇಶ
26.    ರಾಷ್ಟ್ರಪತಿ
27.    ರಾಜಾರಾಮ್ ಮೋಹನ್ ರಾಯ್
28.    ಬಾಸ್ಕೇಟ್ ಬಾಲ್
29.    ವಿ.ಪ್ರಕಾಶ್
30.    ಬಿ.ಜಿ.ಎಲ್.ಸ್ವಾಮಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x