ಸಾಮಾನ್ಯ ಜ್ಞಾನ (ವಾರ 54): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಪರಮ್ – ೧೦೦೦೦ ಎಂಬ ಸೂಪರ್ ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ ಯಾವುದು?
೨.    ವನಮಹೋತ್ಸವವನ್ನು ಆರಂಭಿಸಿದವರು ಯಾರು?
೩.    ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು?
೪.    ಗೊರುಚ ಇದು ಯಾರ ಕಾವ್ಯನಾಮವಾಗಿದೆ?
೫.    ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್‌ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ?
೬.    ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
೭.    ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ ಕಂಡು ಬರುವ ದೇಶ ಯಾವುದು?
೮.    ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ ಅಂಕಿತನಾಮ ವಾಗಿದೆ?
೯.    ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರ್ಕಾರ ಘೋಷಿಸಿದ ವರ್ಷ ಯಾವುದು?
೧೦.    ಪೊಲಾರ್ ಪ್ರಶಸ್ತಿ ವಿಜೇತರಾದ ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರು?
೧೧.    ಅಷ್ಟ ದಿಗಜ್ಜರು ಎಂಬ ಕವಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು?
೧೨.    ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು?
೧೩.    ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ ಯಾರು?
೧೪.    ನಿದ್ರಾ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿ ಯಾವುದು?
೧೫.    ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನ ಮಂತ್ರಿ ಯಾರು?
೧೬.    ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು?
೧೭.    ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು?
೧೮.    ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?
೧೯.    ನಾಟಕರತ್ನ ಬಿರುದು ಹೊಂದಿದ ಕರ್ನಾಟಕದ ಹಿರಿಯ ರಂಗಕರ್ಮಿ ಯಾರು?
೨೦.    ಜಗತ್ತಿನ ಅತ್ಯಂತ ಚಿಕ್ಕ ಖಂಡ ಯಾವುದು?
೨೧.    ಸಾಪೇಕ್ಷತಾವಾದವನ್ನು ಮಂಡಿಸಿದ ವಿಜ್ಞಾನಿ ಯಾರು?
೨೨.    ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರು?
೨೩.    ಸತ್ಯಾಶ್ರಯ ಎಂದು ಬಿರುದು ಹೊಂದಿದ್ದ ಚಾಲುಕ್ಯರ ದೊರೆ ಯಾರು?
೨೪.    ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿ ಸ್ಥಾಪಿಸಿದ ವರ್ಷ ಯಾವುದು?
೨೫.    ನೈಲ್ ನದಿಯ ಕೊಡುಗೆ ಎಂದು ಯಾವ ದೇಶವನ್ನು ಕರೆಯುತ್ತಾರೆ?
೨೬.    ಭಾರತಕ್ಕೆ ಮೊದಲು ಗುಲಾಬಿ ಗಿಡವನ್ನು ತಂದು ಬೆಳೆಸಿದವರು ಯಾರು?
೨೭.    ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲುಕ್ಯ ದೊರೆ ಯಾರು?
೨೮.    ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘವನ್ನು ಸ್ಥಾಪಿಸಿದವರು ಯಾರು?
೨೯.    ಪೋಲೋ ಆಟದಲ್ಲಿ ಪ್ರಥಮ ಬಾರಿಗೆ ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ
ನವೆಂಬರ್ – ೨೬ ಭಾರತ ಸಂವಿಧಾನ ದಿನ

ಉತ್ತರಗಳು:
೧.    ಭಾರತ
೨.    ಡಾ|| ಕೆ.ಎಂ.ಮುನಿಶ
೩.    ಚಾಮರಾಜನಗರ
೪.    ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ
೫.    ಬೆಂಗಳೂರು
೬.    ಹಿಮಾಚಲ ಪ್ರದೇಶ
೭.    ಕ್ಯೂಬಾ
೮.    ಸೊನಲಿಗ ಸಿದ್ಧರಾಮ
೯.    ೧೯೬೩
೧೦.    ವಾದ್ಯ ಸಂಗೀತ
೧೧.    ಶ್ರೀ ಕೃಷ್ಣದೇವರಾಯ
೧೨.    ಲೋಲಕ
೧೩.    ಕುವೆಂಪು
೧೪.    ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ
೧೫.    ಜವಹರಲಾಲ್ ನೆಹರು
೧೬.    ಕೆಂಪು ರಂಜಕ
೧೭.    ತಿಟ್ಟೆ ಕೃಷ್ಣಯ್ಯಂಗಾರ್
೧೮.    ನೇಫಾ
೧೯.    ಗುಬ್ಬಿ ವೀರಣ್ಣ
೨೦.    ಅಂಟಾರ್ಟಿಕಾ
೨೧.    ಆಲ್ಬರ್ಟ್ ಐನ್ ಸ್ಟೀನ್
೨೨.    ಮೇಘಾಲಯ
೨೩.    ಕೀರ್ತಿವರ್ಮ
೨೪.    ೧೯೭೫
೨೫.    ಈಜಿಪ್ಟ್ 
೨೬.    ಬಾಬರ್ 
೨೭.    ವಿಕ್ರಮಾದಿತ್ಯ
೨೮.    ಎಂ.ಕೆ.ಗಾಂಧಿ 
೨೯.    ೧೯೫೭
೩೦.    ಲಾಲ್ ಲಜಪತ್ ರಾಯ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x