ಪ್ರಶ್ನೆಗಳು:
೧. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು?
೨. ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು?
೩. ಹೇಮಾವತಿ ನದಿಯ ಉಗಮ ಸ್ಥಳ ಯಾವುದು?
೪. ಭಾರತ ಸರಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು?
೫. ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು?
೬. ಸೀತಾತನಯ ಇದು ಯಾರ ಕಾವ್ಯನಾಮ?
೭. ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ?
೮. ಮಜ್ಜಿಗೆಯಲ್ಲಿ ಇರುವ ಆಮ್ಲ ಯಾವುದು?
೯. ಭಾರತೀಯ ಖನಿಜ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?
೧೦. ಊರುಕೇರಿ ಇದು ಕರ್ನಾಟಕದ ಯಾವ ವ್ಯಕ್ತಿಯ ಆತ್ಮಕಥನವಾಗಿದೆ?
೧೧. ಶರೀರದಲ್ಲೆ ತಯಾರಾಗುವ ಜೀವಸತ್ವ ಯಾವುದು?
೧೨. ಅಲ್ಮೋರ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೩. ಕನ್ನಡದ ಮೊದಲ ಮಹಿಳಾ ಪತ್ರಿಕೆ ಯಾವುದು?
೧೪. ಸಂಗನ ಬಸವಣ್ಣ ಇದು ಯಾರ ಅಂಕಿತನಾಮವಾಗಿದೆ?
೧೫. ವೃತ್ತ ಕ್ರಾಂತಿ ಇದು ಯಾವ ಬೆಳೆಗೆ ಸಂಬಂಧಿಸಿದೆ?
೧೬. ಭಾರತದಲ್ಲೆ ತಯಾರಾದ ಭಾರತ ಪ್ರಮುಖ ಯುದ್ಧ ಟ್ಯಾಂಕ್‌ದ ಹೆಸರೇನು?
೧೭. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಭಾರತದ ಪ್ರಥಮ ವ್ಯಕ್ತಿ ಯಾರು?
೧೮. ಜರ್ಮನ್ ಸಿಲ್ವರ ತಯಾರಿಸಲು ಉಪಯೋಗಿಸುವ ಲೋಹಗಳು ಯಾವುವು?
೧೯. ಗುರುನಾನಕರು ಹೆಬ್ಬಳಿನಿಂದ ಭೂಮಿಯನ್ನು ಒತ್ತಿ ನೀರು ಬರಿಸಿದರೆಂಬ ಪ್ರತೀತಿ ಇರುವ ನಾನಕ್ ಝೀರಾ ಕರ್ನಾಟಕ ಯಾವ ಜಿಲ್ಲೆಯಲ್ಲಿದೆ?
೨೦. ಭಾರತದಲ್ಲಿರುವ ದ್ವೀಪಗಳಲ್ಲಿ ಅತಿ ದೊಡ್ಡದಾದ ದ್ವೀಪ ಯಾವುದು?
೨೧. ಮಧ್ಯ ಪ್ರದೇಶದಲ್ಲಿ ಮ್ಯಾಂಗನೀಸ್ ಉತ್ಪಾದನೆಗೆ ಅತ್ಯಂತ ಹೆಸರಾದ ಜಿಲ್ಲೆಗಳು ಯಾವುವು?
೨೨. ಮುಂಜಾನೆಯ ನಕ್ಷತ್ರ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?
೨೩. ದ್ರಾಕ್ಷಿ ಹಣ್ಣಿನಲ್ಲಿರುವ ಆಮ್ಲ ಯಾವುದು?
೨೪. ಯುನೈಟೆಡ್ ಥಿಯಾಲಾಜಿಕಲ್ ಕಾಲೇಜ್ ಗ್ರಂಥಾಲಯ ಕರ್ನಾಟಕದಲ್ಲಿ ಎಲ್ಲಿದೆ?
೨೫. ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು?
೨೬. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಾರ್ಕ್ ಶೃಂಗ ಸಭೆ ನಡೆದ ನಗರ ಯಾವುದು?
೨೭. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪ್ರಥಮ ಕನ್ನಡಿಗ ಯಾರು?
೨೮. ಇತೀಚಿಗೆ ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆಯಾದ ಕರ್ನಾಟಕದ ಕ್ರಿಕೆಟ್ ಆಟಗಾರ ಯಾರು?
೨೯. ಇತ್ತೀಚಿಗೆ ವರ್ಣರಂಜಿತವಾಗಿ ಬಿಡುಗಡೆಯಾದ ಕಸ್ತೂರಿ ನಿವಾಸ ಚಿತ್ರದ ಸಂಗೀತ ನಿರ್ದೇಶಕರು ಯಾರು?
೩೦. ಈ ಚಿತ್ರದಲ್ಲಿರುವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ನವೆಂಬರ್ ೧೯ – ನಾಗರೀಕ ದಿನ
ನವೆಂಬರ್ ೨೦ – ಆಫ್ರಿಕಾ ಕೈಗಾರೀಕರಣ ದಿನ
ಉತ್ತರಗಳು:
೧. ಕೆ.ರಾಧಾಕೃಷ್ಣನ್
೨. ಡಿ.ಎಸ್.ಕರ್ಕಿ
೩. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ
೪. ೧೯೫೬
೫. ಪೀನ ಮಸೂರು
೬. ಗೋರುರು ರಾಮಸ್ವಾಮಿ ಅಯ್ಯಂಗಾರ್
೭. ಒಂಟೆ
೮. ಲ್ಯಾಕ್ಟಿಕ್ ಆಮ್ಲ
೯. ಒಡಿಸ್ಸಾ (ಧನ್‌ಬಾದ್)
೧೦. ಡಾ||ಸಿದ್ಧಲಿಂಗಯ್ಯ
೧೧. ಜೀವಸತ್ವ ಕೆ
೧೨. ಉತ್ತರಾಂಚಲ
೧೩. ಕರ್ನಾಟಕದ ನಂದಿನಿ
೧೪. ಅಕ್ಕನಾಗಮ್ಮ
೧೫. ಆಲೂಗಡ್ಡೆ ಉತ್ಪಾದನೆ
೧೬. ಅರ್ಜುನ್
೧೭. ಖುದಾದ್ ಖಾನ್
೧೮. ತಾಮ್ರ, ಸತು ಮತ್ತು ನಿಕ್ಕಲ್
೧೯. ಬೀದರ್
೨೦. ನಿಕೋಬಾರ್
೨೧. ಬಾಲಘಾಟ್ & ಚಿಂದ್ವಾರ್
೨೨. ಶುಕ್ರಗ್ರಹ
೨೩. ಸಿಟ್ರಿಕ್ ಆಮ್ಲ
೨೪. ಬೆಂಗಳೂರು
೨೫. ಎಮ್.ವಿ.ಗೋಪಾಲಸ್ವಾಮಿ
೨೬. ಬೆಂಗಳೂರು
೨೭. ಪ್ರಕಾಶ ಪಡುಕೋಣೆ
೨೮. ಕೆ.ಎಲ್.ರಾಹುಲ್
೨೯. ಜಿ.ಕೆ.ವೆಂಕಟೇಶ್
೩೦. ಹರಗೋವಿಂದ ಖೋರಾನ್ (ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ವಿಜ್ಞಾನಿ)
*****
Dr. Haragovind khorana