ಸಾಮಾನ್ಯ ಜ್ಞಾನ (ವಾರ 51): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
1.    ಕರ್ನಾಟಕದ ಗತವೈಭವ ಕೃತಿಯ ಕರ್ತೃ ಯಾರು?
2.    ಕರ್ನಾಟಕದಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆದ ಸ್ಥಳ ಯಾವುದು?
3.    ಕರ್ನಾಟಕ ಏಕೀಕರಣ ಮಹಾಸಮಿತಿಯ ಪ್ರಥಮ ಅಧ್ಯಕ್ಷರು ಯಾರು?
4.    ಅಂಕೋಲಾ ಉಪ್ಪಿನ ಸತ್ಯಾಗ್ರಹದ ಪ್ರಮುಖ ಪಾತ್ರದಾರಿ ಯಾರು?
5.    ಅರ್ಕೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ?
6.    ವಿಂಗ್ಸ್ ಆಫ್ ಫೇರ್ ಕೃತಿಯ ಕರ್ತೃ ಯಾರು?
7.    ಭೌಗೋಳಿಕವಾಗಿ ವಿಶ್ವದಲ್ಲಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ಭೂ ಖಂಡ ಯಾವುದು?
8.    ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು?
9.    ದೀನಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
10.    ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್ ಪರಮಾಣು ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ?
11.    ಒರಿಸ್ಸಾದ ಗಜಪತಿ ಮನೆತನದ ಸಂಸ್ಥಾಪಕ ಯಾರು?
12.    ಶುದ್ಧ ಅದ್ವೈತ ವೇದಾಂತವನ್ನು ಸ್ಥಾಪಿಸಿದವರು ಯಾರು?
13.    ಭಾರತದಲ್ಲಿ ಮೊದಲ ಬಾರಿಗೆ ಬಂದ ಇಂಗ್ಲೀಷ್ ಹಡಗು ಯಾವುದು?
14.    ಪ್ರಸಿದ್ಧವಾದ ಬೇಲೂರು – ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು?
15.    ಸಂಸ ಇದು ಯಾರ ಕಾವ್ಯ ನಾಮವಾಗಿದೆ?
16.    ಕಲ್ಪಕಂ ಅಣುಸ್ಥಾವರ ಯಾವ ರಾಜ್ಯದಲ್ಲಿದೆ?
17.    ಚಿತ್ತೂರಿನ ಕೀರ್ತಿ ಸ್ತಂಭ ನಿರ್ಮಿಸಿದವರು ಯಾರು?
18.    ಭಾರತದ ಯಾವ ರಾಜ್ಯವನ್ನು ಗೋಧಿಯ ಕಣಜ ಎಂದು ಕರೆಯುತ್ತಾರೆ?
19.    ನೀರನ್ನು ಸಸ್ಯದ ಮೇಲ್ಭಾಗಕ್ಕೆ ಸಾಗಿಸುವಲ್ಲಿ ಸಹಾಯ ಮಾಡುವ ಅಂಗ ಯಾವುದು?
20.    ಮಜಗಾಂವ್ ಡಾಕ್ ಲಿಮಿಟೆಡ್ ಯಾವ ರಾಜ್ಯದಲ್ಲಿದೆ?
21.    ದೇಶದ ವಿದೇಶ ವಿನಿಮಯ ಸಂಗ್ರಹ ಮಾಡುವ ಬ್ಯಾಂಕ್ ಯಾವುದು?
22.    ಸಂಸ್ಕೃತ ಎಲ್ಲಾ ಭಾಷೆಗಳ ಮಾತೃ ಎಂಬ ಅಭಿಪ್ರಾಯವನ್ನು ನೀಡಿದವರು ಯಾರು?
23.    ಯಾವ ಸೂಫಿ ಸಂತನ ದರ್ಗಾ ಅಜ್ಮೇರದಲ್ಲಿದೆ?
24.    ಲಂಡನ್ ಯಾವ ನದಿಯ ದಡದ ಮೇಲಿದೆ?
25.    ಭಾರತೀಯ ಜೀವವಿಮಾ ನಿಗಮ ಸ್ಥಾಪನೆಯಾದ ವರ್ಷ ಯಾವುದು?
26.    ಅರುಂಧತಿ ರಾಯ್ ರವರ ಯಾವ ಕೃತಿಗೆ ಬೂಕರ್ ಪ್ರಶಸ್ತಿ ದೊರಕಿದೆ?
27.    ಭಾರತ ಮತ್ತು ಶ್ರೀಲಂಕಾವನ್ನು ಭೌಗೋಳಿಕವಾಗಿ ಪ್ರತ್ಯೇಕಿಸುವ ಜಲಭಾಗ ಯಾವುದು?
28.    ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಭಕ್ಷಯೆಂದು ಹೆಸರಾಗಿದ್ದರು ಯಾರು?
29.    ಬಕ್ಸಾರ್ ಕದನ ನಡೆದ ವರ್ಷ ಯಾವುದು?
30.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

 

ಈ ವಾರದ ಪ್ರಸಿದ್ಧ ದಿನಾಚರಣೆ
ನವೆಂಬರ್ – 09 – ಕಾನೂನು ಸೇವೆಗಳ ದಿನ

ಉತ್ತರಗಳು:

1.    ಆಲೂರು ವೆಂಕಟರಾಯರು
2.    ಧಾರವಾಡ 
3.    ಎಸ್. ನಿಜಲಿಂಗಪ್ಪ
4.    ಆರ್.ಆರ್.ದಿವಾಕರ್
5.    ಮಧುವಯ್ಯ
6.    ಎಪಿಜೆ ಅಬ್ದುಲ್ ಕಲಾಂ
7.    ಏಷ್ಯಾ ಖಂಡ
8.    ಪಣ 
9.    ಶ್ರೀ ಸಿ.ಎಫ್.ಆಂಡ್ರೋಸ್
10.    ಕೇರಳ
11.    ಕಪಿಲೇಂದ್ರ
12.    ವಲ್ಲಭಾಚಾರ್ಯ
13.    ರೆಡ್ ಡ್ರಾಗನ್
14.    ಶಾಂತಲೆ
15.    ಎ.ಎನ್.ಸ್ವಾಮಿ ವೆಂಕಟಾದ್ರಿ ಐಯ್ಯರ್
16.    ತಮಿಳುನಾಡು
17.    ರಾಣಾ ಪ್ರತಾಪ್
18.    ಪಂಜಾಬ್
19.    ಕ್ಲ್ಯೆಲಮ್
20.    ಗೋವಾ
21.    ಭಾರತೀಯ ರಿಸರ್ವ್ ಬ್ಯಾಂಕ್
22.    ಜೇಮ್ಸ್ ಮಿಲ್
23.    ಸಲೀಂ ಚಿಸ್ತಿ
24.    ಥೇಮ್ಸ್
25.    1956
26.    ಗಾಡ್ ಆಫ್ ದಿ ಸ್ಮಾಲ್ ಥಿಂಗ್ಸ್
27.    ಪಾಕ್ ಜಲಸಂಧಿ
28.    ಕುತುಬ್ ಉದ್ದಿನ್ ಐಬಕ್
29.    1764
30.    ಹರ್ಡೇಕರ್ ಮಂಜಪ್ಪ (ಕರ್ನಾಟಕದ ಗಾಂಧಿ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
narayan babanagar
narayan babanagar
9 years ago

ಸಸ್ಯಗಳಲ್ಲಿ ಅಂಗ ವ್ಯವಸ್ಥೆ ಇರುವುದಿಲ್ಲ,ಅಂಗಾಂಶ ವ್ಯವಸ್ಥೆ ಮಾತ್ರ ಇರುವುದು…ಕ್ಸೈಲಮ್ ಅಂಗಾಂಶ,ಅಂಗವಲ್ಲ

1
0
Would love your thoughts, please comment.x
()
x