ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 5): ಮಹಾಂತೇಶ್ ಯರಗಟ್ಟಿ

೧. ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು?

೨. ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹಿರಿಮೆಗೆ ಪಾತ್ರರಾಗಿರುವವರು ಯಾರು?

೩. ಕರ್ನಾಟಕದ ಉದ್ದವಾದ ನದಿ ಯಾವುದು?

೪. ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು?

೫. ಕನ್ನಡದಲ್ಲಿ ಅತೀ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು ಯಾರು?

೬. ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು?

೭. ರೈಡರ್ ಕಫ್ ಯಾವ ಕ್ರೀಡೆಗೆ ಸಂಬಂಧಿಸಿದುದಾಗಿದೆ?

೮. ರನ್ನ ಮಹಾಕವಿ ಬರೆದ ಗಧಾಯುದ್ಧಕ್ಕೆ ಇರುವ ಇನ್ನೊಂದು ಹೆಸರು ಏನು?

೯. ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ?

೧೦. ಸಂಸ್ಕಾರ ಕಾದಂಬರಿ ಬರೆದರು ಯಾರು?

೧೧. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಯಾವುದು?

೧೨. ಕನ್ನಡದ ಮೊದಲ ಟೆಲಿಚಿತ್ರ  ಯಾವುದು?ಮತ್ತು ನಿದೇರ್ಶಕರು ಯಾರು?

೧೩. ಕರ್ನಾಟಕದ ಭತ್ತದ ಕಣಜವೆಂದು ಹೆಸರಾಗಿರುವ ಜಿಲ್ಲೆ ಯಾವುದು?

೧೪. ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು?

೧೫. ಕೃಷ್ಣದೇವರಾಯ ರಚಿಸಿದ ಎರಡು ಕೃತಿಗಳು ಯಾವುವು?

೧೬. ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು?

೧೭. ವಿದೇಶಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡ ಕನ್ನಡ ಚಿತ್ರ ಯಾವುದು?

೧೮. ಯುದ್ಧದಲ್ಲಿ ಮೊದಲು ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡಿಗ ಯಾರು?

೧೯. ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನ ಕರೆಯಲಾಗಿದೆ?

೨೦. ಕರ್ನಾಟಕದಲ್ಲಿ ಮೊಟ್ಟ ಮೊದಲು ಸಿಮೆಂಟ್ ಕಾರ್ಖಾನೆ ಸ್ಥಾಪನೆಯಾಗಿದ್ದು ಎಲ್ಲಿ?

೨೧. ಧರ್ಮಸ್ಥಳದಲ್ಲಿರುವ ಏಕಶಿಲಾ ಬಾಹುಬಲಿ ವಿಗ್ರಹದ ಎತ್ತರವೆಷ್ಟು?

೨೨. ತುಂಗಭದ್ರಾ ಯಾವ ನದಿಗೆ ಉಪನದಿ?

೨೩. ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?

೨೪. ಮಾನವನ ರಕ್ತದೊತ್ತಡದ ಸಾಮಾನ್ಯ ವ್ಯಾಪ್ತಿ ಎಷ್ಟು?

೨೫. ಭಾರತೀಯ ವಿಜ್ಞಾನಿ ಸಂಸ್ಥೆ ಯಾವ ಊರಿನಲ್ಲಿದೆ?

೨೬. ಕೆಳದಿ ಇತಿಹಾಸ ಪ್ರಸಿದ್ಧ ಇದು ಯಾವ ಜಿಲ್ಲೆಯಲ್ಲಿದೆ?

೨೭. ಗುಬ್ಬಿವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ನಟ ಯಾರು?

೨೮. ಟೇಬಲ್ ಟೆನ್ನಿಸ್‌ಗೆ ಹೆಸರಾಗಿರುವ ಕನ್ನಡತಿ ಯಾರು?

೨೯. ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರರ ಯಾವ ಊರಿನಲ್ಲಿದೆ?

೩೦. ಈ ಭಾವಚಿತ್ರದಲ್ಲಿರುವವರು ಗುರುತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು

ಡಿಸೆಂಬರ್ – ೨ – ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನ

ಡಿಸೆಂಬರ್ – ೪ – ನೌಕಾಪಡೆ (ಭಾರತ) ದಿನ

ಡಿಸೆಂಬರ್ – ೭ – ಸೇನಾಪಡೆಗಳ ಧ್ವಜ ದಿನ

ಉತ್ತರಗಳು:

೧. ಕೊಡಗು

೨. ಡಾ||ಪ್ರಭುಶಂಕರ

೩. ಕಾವೇರಿ

೪. ರಾಮೋಹಳ್ಳಿ (ಬೆಂಗಳೂರು)

೫. ಎನ್.ನರಸಿಂಹಯ್ಯ

೬. ೧೯೩೫ ಮೈಸೂರು

೭. ಗಾಲ್ಫ್

೮. ಸಾಹಸ ಭೀಮ ವಿಜಯ

೯. ಕಾವ್ಯರ್ಥ ಚಿಂತನೆ

೧೦. ಡಾ|| ಯು.ಆರ್.ಅನಂತಮೂರ್ತಿ

೧೧. ಉತ್ತರಕನ್ನಡ

೧೨. ಬಣ್ಣದ ವೇಷ:ಗಿರೀಶ್ ಕಾಸರವಳ್ಳಿ

೧೩. ಶಿವಮೊಗ್ಗ

೧೪. ಬೆಂಗಳೂರು – ಜೋಲಾರ ಪೇಟೆ

೧೫. ಅಮುಕ್ತ ಮೌಲ್ಯದ, ಮತ್ತು ಜಾಂಬವತಿ ಕಲ್ಯಾಣ

೧೬. ನಂದಿದುರ್ಗ

೧೭. ನಾಂದಿ

೧೮. ಟಿಪ್ಪು ಸುಲ್ತಾನ್

೧೯. ಆಲೂರು ವೆಂಕಟರಾವ್

೨೦. ಭದ್ರಾವತಿ (೧೯೩೮)

೨೧. ೩೯ ಅಡಿ

೨೨. ಕೃಷ್ಣಾ

೨೩. ಆಗುಂಬೆ

೨೪. ೧೨೦/೮೦ಮಿ.ಮೀ

೨೫. ಬೆಂಗಳೂರು

೨೬. ಶಿವಮೊಗ್ಗ

೨೭. ಏಣಗಿ ಬಾಳಪ್ಪ

೨೮. ಉಷಾ ಸುಂದರರಾಜ

೨೯. ಬಾಳೆ ಹೊನ್ನೂರು

೩೦. ಡಿ.ವಿ.ಗುಂಡಪ್ಪ (ಡಿ.ವಿ.ಜಿ.)

****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಸಾಮಾನ್ಯ ಜ್ಞಾನ (ವಾರ 5): ಮಹಾಂತೇಶ್ ಯರಗಟ್ಟಿ

Leave a Reply

Your email address will not be published. Required fields are marked *