ಪ್ರಶ್ನೆಗಳು:
೧. ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು?
೨. ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು?
೩. ೧೯೭೮ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೪. ವಾಣಿ ಇದು ಯಾರ ಕಾವ್ಯನಾಮ?
೫. ವಾರ್ ಮೆಮೋರಿಯಲ್ ಮ್ಯುಸಿಯಂ ಎಲ್ಲಿದೆ?
೬. ಶಾಂತಿದೂತ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
೭. ರಷ್ಯಾದ ರಾಷ್ಟ್ರೀಯ ಕ್ರೀಡೆ ಯಾವುದು?
೮. ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ?
೯. ಭಾರತದ ಮೊದಲ ಇಂಗ್ಲೀಷ್ ಕಾದಂಬರಿ ಯಾವುದು?
೧೦. ವಿಶ್ವದ ಮೊದಲ ಮಹಿಳಾ ಪ್ರಧಾನಿ ಯಾರು?
೧೧. ೧೯೮೧ರಲ್ಲಿ ಚನ್ನವೀರ ಕಣವಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೧೨. ಉಜ್ಜಯಿನಿ ಯಾವ ನದಿಯ ದಡದ ಮೇಲಿದೆ?
೧೩. ಒಮ್ಮೆಯೂ ಪಾರ್ಲಿಮೆಂಟ್ ಎದುರಿಸಿದ ಪ್ರಧಾನಿ ಯಾರು?
೧೪. ಕ್ಲೋರಿನ್ ಒಂದು ಮೂವಸ್ತು ಎಂದು ತೋರಿಸಿ ಕೊಟ್ಟ ವಿಜ್ಞಾನಿ ಯಾರು?
೧೫. ಮಧ್ವಾಚಾರ್ಯರು ಜನಿಸಿದ ಸ್ಥಳ ಯಾವುದು?
೧೬. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು?
೧೭. ಬೆಂಗಳೂರಿನಲ್ಲಿ ನಿಮಾನ್ಸ್ಹ್ ಸ್ಥಾಪನೆಯಾದ ವರ್ಷ ಯಾವುದು?
೧೮. ಬಾಹ್ಯಾಕಾಶ ಯಾನ ಮಾಡಿದ ಪ್ರಥಮ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಯಾವ ರಾಜ್ಯದವರು?
೧೯. ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಎಲ್ಲಿದೆ?
೨೦. ಭಾರತ ಮೊದಲು ಸ್ಥಳೀಯವಾಗಿ ತಯಾರಿಸಿದ ಅಣು ಕ್ರಿಯಾಕಾರಕ ಯಾವುದು?
೨೧. ಭಾರತದಲ್ಲಿ ಜನಗಣತಿಯನ್ನು ಎಷಟು ವರ್ಷಕ್ಕೊಮ್ಮೆ ನಡೆಸಲಾಗುತದೆ?
೨೨. ಡಾ||ರಾಜಕುಮಾರರವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ ವರ್ಷ ಯಾವುದು?
೨೩. ಪ್ರಥಮವಾಗಿ ಭಾರತದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಭಾರತೀಯ ಮಹಿಳೆ ಯಾರು?
೨೪. ಒರಿಸ್ಸಾ ರಾಜ್ಯದ ರಾಜ್ಯಧಾನಿ ಯಾವುದು?
೨೫. ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨೬. ಸಂಗಯ್ಯಾ ಇದು ಯಾರ ಅಂಕಿತನಾಮವಾಗಿದೆ?
೨೭. ಕರ್ನಾಟಕದ ಅತ್ಯಂತ ದೊಡ್ಡ ಪುಸ್ತಕ ಮಳಿಗೆ ಯಾವುದು?
೨೮. ಜಮನಾಲಾಲ್ ಬಜಾಬ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೨೯. ನಯನ್ ಮಾಂಗೀಯಾ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್ – ೦೮ ಭಾರತೀಯ ವಾಯುಪಡೆ ದಿನ
ಅಕ್ಟೋಬರ್ – ೦೯ – ವಿಶ್ವ ಅಂಚೆ ದಿನ
ಅಕ್ಟೋಬರ್ – ೧೦ – ಭಾರತೀಯ ಅಂಚೆ ದಿನ
ಉತ್ತರಗಳು:
೧. ಪೂರ್ಣಯ್ಯ
೨. ’ಎ’ ಜೀವಸತ್ವ
೩. ಕಿತ್ನಿನಾವೋಂಮೆ ಕಿತ್ನಿಬಾರ್
೪. ಬಿ.ಎಸ್.ಸುಬ್ಬಮ್ಮ
೫. ದೆಹಲಿ
೬. ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ
೭. ಚೆಸ್
೮. ಗುರು
೯. ರಾಜ್ ಮೋಹನ್ಸ್ ವೈಫ್
೧೦. ಶ್ರೀಮತಿ ಸರಿಮಾವೋ ಬಂಡಾರ ನಾಯಕ
೧೧. ಜೀವಧ್ವನಿ
೧೨. ಶಿಪ್ರಾ (ಮಧ್ಯ ಪ್ರದೇಶ)
೧೩. ಚರಣ್‌ಸಿಂಗ್
೧೪. ಹಂಫ್ರಿ ಡೇವಿ
೧೫. ಉಡುಪಿಯ ಬಳಿ ಪಾಜಕ
೧೬. ಖುದಾದಾ ಖಾನ್
೧೭. ೧೯೭೪
೧೮. ಹರಿಯಾಣ
೧೯. ಭೂಪಾಲ್ (ಮಧ್ಯ ಪ್ರದೇಶ)
೨೦. ಟ್ರಾಂಬೆ
೨೧. ೧೦ ವರ್ಷಗಳಿಗೊಮ್ಮೆ
೨೨. ೧೯೯೫
೨೩. ಇಳಾ ಮಜುಮ್‌ದಾರ್
೨೪. ಭುವನೇಶ್ವರ
೨೫. ಉತ್ತರ ಕನ್ನಡ
೨೬. ನೀಲಾಂಬಿಕೆ
೨೭. ಸ್ವಪ್ನ ಬುಕ್ ಹೌಸ್ ಬೆಂಗಳೂರು
೨೮. ತಗಡೂರು ರಾಮಚಂದ್ರರಾವ್
೨೯. ಕ್ರಿಕೆಟ್
೩೦. ಪ್ರೇಮ್‌ಚಂದ್ (ಭಾರತದ ಪ್ರಸಿದ್ಧ ಹಿಂದಿ ಕಾದಂಬರಿಕಾರ)
*****