ಪ್ರಶ್ನೆಗಳು:
೧. ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ ಯಾವುದು?
೨. ಮೋಹಿನಿಯಟ್ಟಂ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ?
೩. ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೪. ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳ ಪ್ರಸಿದ್ಧ ದೇವಾಲಯ ಯಾವುದು?
೫. ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು?
೬. ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?
೭. ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ ಮಾರ್ಗ ಯಾವುದು?
೮. ಭಾರತ ಸರಕಾರದಿಂದ ದಾಮೋದರ ಕಣಿವೆ ಸಂಸ್ಥೆ (ಡಿವಿಸ್) ಸ್ಥಾಪಿಸಲಾದ ವರ್ಷ ಯಾವುದು?
೯. ಹರಿಜನ ಎಂಬ ಹೆಸರನ್ನು ಮೊದಲ ಬಾರಿಗೆ ಪ್ರಯೋಗಿಸಿದವರು ಯಾರು?
೧೦. ಚಲನ ಸಿದ್ಧಾಂತವನ್ನು ಸೂತ್ರೀಕರಿಸಿದವರು ಯಾರು?
೧೧. ಜೈಸಲ್ ಮೀರ್ ಕೋಟೆ ಯಾವ ರಾಜ್ಯದಲ್ಲಿದೆ?
೧೨. ಲಾಲ್‌ಗುಳಿ ಪಾಲ್ಸ್ ಯಾವ ಜಿಲ್ಲೆಯಲ್ಲಿದೆ?
೧೩. ಹರಿಸೇನ್ ಎಂಬ ಸೈನ್ಯಾಧಿಪತಿ ಯಾವ ರಾಜನ ಆಸ್ಥಾನದಲ್ಲಿದ್ದ?
೧೪. ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಲ್ಲಿದೆ?
೧೫. ಜೈ ಹಿಂದ್ ಅಭಿನಂದನೆಯನ್ನು ಮೊದಲು ಪ್ರಾರಂಭಿಸಿದ ವ್ಯಕ್ತಿ ಯಾರು?
೧೬. ಬಿಪಿಸಿಎಲ್ ನ ವಿಸ್ತೃತ ರೂಪವೇನು?
೧೭. ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯ ತಯಾಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು?
೧೮. ಮಾಂಡೋವಿ ಭಾರತದ ಯಾವ ರಾಜ್ಯದ ಮುಖ್ಯ ನದಿಯಾಗಿದೆ?
೧೯. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?
೨೦. ಬದರಿನಾಥ ಯಾವ ನದಿ ದಡದ ಮೇಲಿದೆ?
೨೧. ಮಣಿಪುರ ರಾಜ್ಯದ ರಾಜಧಾನಿ ಯಾವುದು?
೨೨. ಪರ್ವತವಾಣಿ ಇದು ಯಾರ ಕಾವ್ಯ ನಾಮ?
೨೩. ಜಲವಿಲಾಸ್ ಅರಮನೆ ಯಾವ ರಾಜ್ಯದಲ್ಲಿದೆ?
೨೪. ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು?
೨೫. ಅಕ್ಬರ್ ಚಕ್ರವರ್ತಿಯ ಪತ್ನಿಯ ಹೆಸರೇನು?
೨೬. ಪ್ರೀನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಲ್ಲಿದೆ?
೨೭. ೧೯೯೬ – ೯೭ ನೇ ಸಾಲಿನ ಪ್ರವಾಸೋದ್ಯಮ ಉತ್ತಮ ನಿರ್ವಹಣಾ ರಾಜ್ಯ ಪ್ರಶಸ್ತಿ ಪಡೆದುಕೊಂಡ ರಾಜ್ಯ ಯಾವುದು?
೨೮. ಮುತ್ತಯ್ಯ ಭಾಗವತರ್ ರವರ ಅಂಕಿತ ನಾಮ ಯಾವುದು?
೨೯. ಸೂಕ್ಷ್ಮದರ್ಶಕ ಯಂತ್ರ ಕಂಡು ಹಿಡಿದ ವಿಜ್ಞಾನಿ ಯಾರು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಸೆಪ್ಟೆಂಬರ್ – ೨೬ ವಿಶ್ವ ಕಿವುಡರ ದಿನ
ಸೆಪ್ಟೆಂಬರ್ – ೨೭ ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನ
ಉತ್ತರಗಳು:
೧. ವಿಶ್ವ ವಾಣಿಜ್ಯ ಸಂಸ್ಥೆ
೨. ಕೇರಳ
೩. ಗುಜರಾತ್
೪. ಪಶುಪತಿನಾಥ ದೇವಾಲಯ
೫. ಖಾದಿ
೬. ಬಾರ್ಡೆಟೆಲ್ಲ ಪರ್ಟುಸಿಸ್
೭. ಚಾರ್ಮುಡಿ ಫಾಟ್
೮. ೧೯೪೮
೯. ಗಾಂಧೀಜಿ
೧೦. ಐಸಾಕ್ ನ್ಯೂಟನ್
೧೧. ರಾಜಸ್ಥಾನ್
೧೨. ಉತ್ತರಕನ್ನಡ
೧೩. ಸಮುದ್ರ ಗುಪ್ತ
೧೪. ಮುಂಬೈ
೧೫. ಸುಭಾಶ್ ಚಂದ್ರ ಬೋಸ್
೧೬. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
೧೭. ಇದ್ದಿಲು
೧೮. ಗೋವಾ
೧೯. ಫ್ರಾನ್ಸ್
೨೦. ಗಂಗೋತ್ರಿ
೨೧. ಇಂಫಾಲಾ
೨೨. ನರಸಿಂಗ್‌ರಾವ್
೨೩. ಮಧ್ಯಪ್ರದೇಶ, (ಗ್ವಾಲಿಯರ್)
೨೪. ಚಂದ್ರಹಾಸ
೨೫. ಜೋಧಾಬಾಯಿ
೨೬. ಮುಂಬೈ
೨೭. ಕರ್ನಾಟಕ
೨೮. ಹರಿಕೇಶ್
೨೯. ಲ್ಯೂವನ್ ಹಾಕ್
೩೦. ಮರಿಯಾ ಮಾಂಟೇಸರಿ
(ಮಾಂಟೇಸರಿ ವಿಧಾನದ ಮಕ್ಕಳ ಶಿಕ್ಷಣ ರೂಪಿಸಿದ ಮಹಿಳೆ)
*****