ಪ್ರಶ್ನೆಗಳು:
೧. ಪರ್ವ ಕೃತಿಯ ಕರ್ತೃ ಯಾರು?
೨. ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೩. ವಿಸೀ ಇದು ಯಾರ ಕಾವ್ಯನಾಮ?
೪. ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೫. ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ?
೬. ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು?
೭. ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ?
೮. ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು?
೯. ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?
೧೦. ಥಾಯಲ್ಯಾಂಡ್ ದೇಶದ ರಾಜಧಾನಿ ಯಾವುದು?
೧೧. ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಮಹಿಳೆ ಯಾರು?
೧೨. ಖಗೇಂದ್ರಮಣಿದರ್ಪಣ ಎಂಬ ವೈದ್ಯ ಶಾಸ್ತ್ರದ ಗ್ರಂಥ ರಚಿಸಿದವರು ಯಾರು?
೧೩. ಲೋಕ್‌ಟಕ್ ಸರೋವರವಿರುವ ರಾಜ್ಯ ಯಾವುದು?
೧೪. ಕ್ರೈಯೋ ಸರ್ಜರಿಯ ಸಂಶೋಧಕರು ಯಾರು?
೧೫. ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೧೬. ಏರ್ ಕಂಡೀಶನಿಂಗ್‌ನ ಸಂಶೋಧಕರು ಯಾರು?
೧೭. ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?
೧೮. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕಾ) ಗೆ ಇದ್ದ ಮೊದಲ ಹೆಸರು ಯಾವುದು?
೧೯. ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ?
೨೦. ಗಾಯತ್ರಿ ಜಪವನ್ನು ರಚಿಸಿದವರು ಯಾರು?
೨೧. ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
೨೨. ರಾಮಾಯಣದಲ್ಲಿ ಶ್ರೀರಾಮನನ್ನು ಯಾವ ವಂಶದವನೆಂದು ನಂಬಲಾಗಿದೆ?
೨೩. ೧೮೨೦ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
೨೪. ಸ್ಕೂಲ್ ಆಫ್ ಏವಿಯೇಷನ್ ಮೆಡಿಸನ್ ಕರ್ನಾಟಕದಲ್ಲಿ ಎಲ್ಲಿದೆ?
೨೫. ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು?
೨೬. ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು?
೨೭. ೨೦೧೦ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು?
೨೮. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ ರಾಜವಂಶ ಯಾವುದು?
೨೯. ಹಬೆ ಇಂಜಿನನ್ನು ಜೇಮ್ಸ್‌ದಾಟ್ ಕಂಡು ಹಿಡಿದ ವರ್ಷ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಆಗಸ್ಟ್ ೨೯ ರಾಷ್ಟ್ರೀಯ ಕ್ರೀಡಾ ದಿನ
ಉತ್ತರಗಳು:
೧. ಡಾ|| ಎಸ್.ಎಲ್.ಬೈರಪ್ಪ
೨. ಸುವರ್ಣ ಪುತ್ಥಳಿ
೩. ವಿ.ಸೀತಾರಾಮಯ್ಯ
೪. ಉತ್ತರ ಪ್ರದೇಶ
೫. ಕೊಯಮತ್ತೂರು
೬. ಸೂರತ್
೭. ನೆಹರು ಹೌಸ್
೮. ಬೆಂಗಳೂರು ಮೆಟ್ರೋಪಾಲಿಟಿನ್ ಟ್ರಾನ್ಸ್‌ಪೋರ್ಟ್
೯. ನೆನಪಿನ ದೋಣಿಯಲ್ಲಿ
೧೦. ಬ್ಯಾಂಕಾಕ್
೧೧. ಶ್ರೀಮತಿ ಮೇನಕಾ ಗಾಂಧಿ (೩೪ನೇ ನಯನಿನಲ್ಲಿ)
೧೨. ಮಂಗರಾಜ
೧೩. ಮಣಿಪುರ
೧೪. ಹೆನ್ರಿಸ್ವಾನ್ (ಯುಎಸ್‌ಎ)
೧೫. ಕಮಲಾ ಹಂಪನಾ
೧೬. ಕ್ಯಾರಿಯರ್ (ಯುಎಸ್‌ಎ)
೧೭. ಆರ್ಕಿಮೆಡಿಸ್
೧೮. ಗೌರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ
೧೯. ೨೪೦೦ ಕಿ.ಮೀ
೨೦. ವಿಶ್ವಾಮಿತ್ರ
೨೧. ರಾಂಡ್
೨೨. ರಘುವಂಶ
೨೩. ಥಾಮಸ್ ಮನ್ರೋ
೨೪. ಬೆಂಗಳೂರು
೨೫. ೮.೮೪೮ ಮೀಟರ್‍ಸ್
೨೬. ಚೇತಕ್
೨೭. ನವದೇಹಲಿ
೨೮. ಹೊಯ್ಸಳರು
೨೯. ೧೮೮೯
೩೦. ಗೀತಾ ನಾಗಭೂಷಣ್
*****