ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 41): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ ಯಾರು?
೨.    ಚದುರಂಗ ಇದು ಯಾರ ಕಾವ್ಯ ನಾಮ?
೩.    ೧೯೬೦ರಲ್ಲಿ ವಿ.ಕೃ.ಗೋಕಾಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೪.    ಹೆಲಿಕ್ಟಾಪ್ಟರ್‌ನ ಸಂಶೋಧಕರು ಯಾರು?
೫.    ಟೈಲ್ಸ್ ಸ್ವಚ್ಛಗೊಳಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು?
೬.    ’ಸೆಕೆಂಡ್’ ಗ್ರಂಥದ ಕರ್ತೃ ಯಾರು? 
೭.    ವಿದ್ಯುತ್ಕಾಂತೀಯ ಪರಿಣಾಮವನ್ನು ಮೊದಲು ಆವಿಷ್ಕರಿಸಿದವರು ಯಾರು?
೮.    ತಮಿಳು ಸಾಹಿತ್ಯದಲ್ಲಿ ’ತಮಿಳು ತಾತಾ’ ಎಂದೂ ಹೆಸರಾದವರು ಯಾರು?
೯.    ಗರಿಬಿ ಹಠಾವೋ ಎಂಬ ಘೋಷಣೆಯು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಬರುತ್ತದೆ?
೧೦.    ಗ್ರಾಮೊಫೋನ್ ಕಂಡು ಹಿಡಿದವರು ಯಾರು?
೧೧.    ಯಾವ ದೇಶವನ್ನು ನೈದಿಲೆಗಳ ನಾಡು ಎಂದು ಕರೆಯುತ್ತಾರೆ?
೧೨.    ೧೯೯೪ರಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೩.    ಎಲ್ಲರಂತವನಲ್ಲ ನನ್ನ ಗಂಡ ಕಾವ್ಯದ ಕರ್ತೃ ಯಾರು?
೧೪.    ಬಿ.ಡಿ.ಎ. ನ ವಿಸ್ತೃತ ರೂಪವೇನು?
೧೫.    ಟಾವೋ ಧರ್ಮದ ಸಂಸ್ಥಾಪಕ ಯಾರು?
೧೬.    ಬೆಕ್ಕಿಗಿರುವ ವೈಜ್ಞಾನಿಕ ಹೆಸರು ಯಾವುದು?
೧೭.    ಹಾಕಿ ಎಂಬ ರಾಷ್ಟ್ರೀಯ ಆಟ ಪ್ರಾರಂಭವಾದ ವರ್ಷ ಯಾವುದು?
೧೮.    ಕಾಗದವನ್ನು ಮೊಟ್ಟಮೊದಲ ಬಾರಿಗೆ ಯಾವ ದೇಶದಲ್ಲಿ ಬಳಸಲಾಯಿತು?
೧೯.    ತೆವಳಿಕೊಂಡು ಚಲಿಸುವ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ?
೨೦.    ಬಾಯಲ್ಲಿ ಜೊಲ್ಲು ರಸ ಉತ್ಪತ್ತಿ ಮಾಡುವ ಗ್ರಂಥಿ ಯಾವುದು?
೨೧.    ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ೧೯೭೬ರಲ್ಲಿ ಜಾರಿಗೊಳಿಸಿಲಾದ ಶಾಸನ ಯಾವುದು?
೨೨.    ಚಿಕಾಗೋದಲ್ಲಿ ವಿಶ್ವ ಧಾರ್ಮಿಕ ಸಮ್ಮೇಳನ ನಡೆದ ವರ್ಷ ಯಾವುದು?
೨೩.    ೨೦೦೦ನೇ ಸಾಲಿನ ವಿಶ್ವಸುಂದರಿ ಪ್ರಶಸ್ತಿ ಪಡೆದ ಬೆಂಗಳೂರಿನ ಸುಂದರಿ ಯಾರು?
೨೪.    ೧೯೩೦ರಲ್ಲಿ ನಡೆದ ಮೊದಲ ವಿಶ್ವಕಪ್ ಫುಟ್‌ಬಾಲ್‌ನ ವಿಜೇತರು ಯಾರು?
೨೫.    ೨೦೦೭ರಲ್ಲಿ ಮಾನವ ಜಿತ್ ಸಿಂಗ್ ಸಿಂಧು ಅವರ ಯಾವ ಕ್ರೀಡೆಗೆ ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆಯಿತು?
೨೬.    ೨೦೧೪ರ ಕಾಮನವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು?
೨೭.    ಕೀಟಗಳ ಬಗೆಗಿನ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ?
೨೮.    ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಾರ್ಮಿಕ ಸಂಘಟನೆ ಸ್ಥಾಪನೆಯಾ ವರ್ಷ ಯಾವುದು?
೨೯.    ಭಾರತದಲ್ಲಿ ಯಾವ ವರ್ಷ ಪ್ರಥಮ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಿತು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.


ಉತ್ತರಗಳು:
೧.    ಮೇಡಂ ಕ್ಯೂರಿ
೨.    ಸುಬ್ರಹ್ಮಣ್ಯ ರಾಜೇ ಅರಸು
೩.    ದ್ಯಾವಾ ಪೃಥ್ವಿ
೪.    ಇ.ಒಹ್ನಿಚೆನ್ (ಪ್ರಾನ್ಸ್)
೫.    ಹೈಡ್ರೋಕ್ಲೋರಿಕ್ ಆಮ್ಲ
೬.    ಚರ್ಚಿಲ್
೭.    ವೋಲ್ವಾ
೮.    ಕಿ.ವ.ಜಗನ್ನಾಥನ್
೯.    ೫ನೇಯ
೧೦.    ಥಾಮಸ್ – ಆಲ್ವ – ಎಡಿಸನ್
೧೧.    ಕೆನಡಾ 
೧೨.    ವಿಚಾರ ಪ್ರಪಂಚ
೧೩.    ಎಚ್.ಎಂ.ಚೆನ್ನಯ್ಯಾ
೧೪.    ಬೆಂಗಳೂರು ಡೆವಲಪಮೆಂಟ್ ಅಥಾರಿಟಿ
೧೫.    ಲಾವೋ ತ್ಸೊ
೧೬.    ಪೆಲಿಸ್ ಡೊಮೆಸ್ಟಿಕ್
೧೭.    ೧೮೭೫
೧೮.    ಚೀನಾ
೧೯.    ಸರಿಸೃಪಗಳು
೨೦.    ಲಾಲಾಗ್ರಂಥಿ
೨೧.    ಜೀತ ವಿಮುಕ್ತ ಶಾಸನ
೨೨.    ೧೮೯೩
೨೩.    ಲಾರಾದತ್ತಾ
೨೪.    ಉರುಗ್ವೆ
೨೫.    ಶೂಟಿರ್
೨೬.    ಗ್ಲಾಸ್ಗೋ
೨೭.    ಎಂಟಮೊಲಜಿ
೨೮.    ೧೯೨೦
೨೯.    ೧೯೫೨
೩೦.    ಜಯದೇವಿ ತಾಯಿ ಲಿಗಾಡೆ

****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *