ಸಾಮಾನ್ಯ ಜ್ಞಾನ (ವಾರ 4): ಮಹಾಂತೇಶ್ ಯರಗಟ್ಟಿ


೧. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?

೨. ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು?

೩. ’ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು?

೪. ಏಷ್ಯಾದಲ್ಲೇ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು?

೫. ಬಿ.ಡಿ.ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು?

೬. ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ?

೭. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ?

೮. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು?

೯. ಪಟ್ಟದ ಕಲ್ಲುವಿನಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು ಕಾಲದಲ್ಲಿ ಕಟ್ಟಲಾಯಿತು?

೧೦. ಭಾರತದ ಪ್ರಥಮ ದಂಡನಾಯಕರಗಿದ್ದ ಕರ್ನಾಟಕದ ವ್ಯಕ್ತಿ ಯಾರು?

೧೧. ಶರಪಂಜರ ಕನ್ನಡ ಚಲನಚಿತ್ರ ಇದು ಯಾವ ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ?

೧೨. ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು?

೧೩. ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು?

೧೪. ಕರ್ನಾಟಕದ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು ಯಾರು?

೧೫. ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ?

೧೬. ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು?

೧೭. ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ?

೧೮. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?

೧೯. ’ಪಿಸು ಮಾತಿನ ಗ್ಯಾಲರಿ’ ಕರ್ನಾಟಕದಲ್ಲಿ ಇರುವ ತಾಣ ಯಾವುದು?

೨೦. ಕನ್ನಡ ಇಂಗ್ಲೀಷ್ ನಿಘಂಟನ್ನು ಮೊದಲು ರಚಿಸಿದವರು ಯಾರು?

೨೧. ಕರ್ನಾಟಕದಲ್ಲಿ ಮೂರುಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆಸಲ್ಲಿಸಿದ ಮಹಾನ್ ವ್ಯಕ್ತಿ ಯಾರು?

೨೨. ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು?

೨೩. ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು?

೨೪. ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು?

೨೫. ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು?

೨೬. ಕನ್ನಡ ರತ್ನತ್ರಯರು ಯಾರು?

೨೭. ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ?

೨೮. ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು?

೨೯. ಪಿಲಿಕುಳ ನಿಸರ್ಗಧಾಮ ಎಲ್ಲಿದೆ?

೩೦. ಈ ಭಾವಚಿತ್ರದಲ್ಲಿರುವವರನ್ನು ಗುರ್ತಿಸಿ.

 

 

ಈ ವಾರದ ಪ್ರಸಿದ್ದ ದಿನಾಚರಣೆಗಳು 

ನವೆಂಬರ್ ೨೬ ಭಾರತ ಸಂವಿಧಾನ ದಿನ

ಡಿಸೆಂಬರ್ ೧ ವಿಶ್ವ ಏಡ್ಸ್ ದಿನ

ಉತ್ತರಗಳು

೧. ಕುಮಾರವ್ಯಾಸ

೨. ಬೆಂಗಳೂರು (೧೯೦೫ರಲ್ಲಿ)

೩. ಆರ್.ಕೆ.ನಾರಾಯಣ್

೪. ಕುದುರೆಮುಖ

೫. ಪಾಂಡಿಚೇರಿ

೬. ಮೈಸೂರು

೭. ಕಯ್ಯಾರ ಕಞ್ಞಣ್ಣ್‌ರೈ

೮. ರಂಗನತಿಟ್ಟು ಪಕ್ಷಿಧಾಮ

೯. ಚಾಲುಕ್ಯರು

೧೦. ಜನರಲ್ ಕಾರಿಯಪ್ಪ

೧೧. ತ್ರಿವೇಣಿಯವರ  ’ ಶರಪಂಜರ’ ಕಾದಂಬರಿ

೧೨. ಚನ್ನಗಿರಿ ಸಮೀಪದ ಶಾಂತಿನಗರ (ಸೂಳಿಕೆರೆ)

೧೩. ಕಲ್ಲಿದ್ದಲು

೧೪. ಸರ್.ಸಿದ್ದಪ್ಪ ಕಂಬಳಿ

೧೫. ತಾಳೆ ಸಸ್ಯ 

೧೬. ಹಿಂದೂಸ್ಥಾನಿ ಸಂಗೀತ

೧೭. ಹಂಪಿ (ಬಳ್ಳಾರಿ ಜಿಲ್ಲೆ)

೧೮. ಎಂ.ಪಿ.ಗಣೇಶ್

೧೯. ಬಿಜಾಪುರದ ಗೋಳಗುಮ್ಮಟ

೨೦. ವಿಲಿಯಂ ರೀವ್ಸ್ 

೨೧. ಸಿದ್ದವನಹಳ್ಳಿ ನಿಜಲಿಂಗಪ್ಪನವರು

೨೨. ಕೊಡಗು

೨೩. ಸರ್.ಮಿರ್ಜಾ ಇಸ್ಮಾಯಿಲ್ 

೨೪. ವೈಧ್ಯಾನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುಶೇಶ್ವರ, ಅರ್ಕೇಶ್ವರ

೨೫. ಬೇಡರಕಣ್ಣಪ್ಪ

೨೬. ರನ್ನ, ಪೊನ್ನ, ಪಾಪ

೨೭. ನಾಗರಹೊಳೆ

೨೮. ಒಂಭತ್ತು ಅಡಿ

೨೯. ಮಂಗಳೂರು

೩೦. ಜಿ.ಪಿ.ರಾಜರತ್ನಂ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
c.s.mathapati
c.s.mathapati
10 years ago

Good and Collective info………..

1
0
Would love your thoughts, please comment.x
()
x