ಪ್ರಶ್ನೆಗಳು
೧. ಬಾಹ್ಯಾಕಾಶದಲ್ಲಿ ಪ್ರಥಮ ಬಾರಿ ಆಡಲಾದ ಕ್ರೀಡೆ ಯಾವುದು?
೨. ಸಿತಾರ್‌ನ್ನು ಕಂಡು ಹಿಡಿದ ಕೀರ್ತಿ ಯಾರದು?
೩. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರು?
೪. ತಂಬಾಕಿನಲ್ಲಿರುವ ವಿಷ ಪದಾರ್ಥ ಯಾವುದು?
೫. ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಎಲ್ಲಿದೆ?
೬. ಮೊದಲ ಪಾಣಿಪತ್ ಕದನ ನಡೆದ ವರ್ಷ ಯಾವುದು?
೭. ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?
೮. ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದವರು ಯಾರು?
೯. ಎಂ.ಎಸ್.ಸುಬ್ಬಲಕ್ಷ್ಮಿಯವರಿಗಿದ್ದ ಜನಪ್ರಿಯ ಬಿರುದು ಯಾವುದು?
೧೦. ನಿಕೋಬಾರ್ ದ್ವೀಪಗಳಲ್ಲಿರುವ ಅತ್ಯಂತ ಎತ್ತರದ ಶಿಖರ ಯಾವುದು?
೧೧. ಭಾರತದ ವೃದ್ಧ ಪಿತಾಮಹ ಎಂದೂ ಕರೆಯಲ್ಪಡುವ ವ್ಯಕ್ತಿ ಯಾರು?
೧೨. ಮಾರ್ಟಿನ್ ಲೂಥರ್ ಕಿಂಗ್ ಸ್ಥಾಪಿಸಿದ ಕ್ರಿಶ್ಚಿಯನ್ ಪಂಥ ಯಾವುದು?
೧೩. ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೧೪. ಕಾವೇರಿ ನದಿಗೆ ತಮಿಳುನಾಡಿನಲ್ಲಿ ನಿರ್ಮಿಸಲಾದ ಅಣೆಕಟ್ಟು ಯಾವುದು?
೧೫. ದೇಹದ ಯಾವ ಅಂಗವು ಕ್ಷಯ ರೋಗಕ್ಕೆ ತುತ್ತಾಗುತ್ತದೆ?
೧೬. ಭಾರತದ ನ್ಯಾಷನಲ್ ಫಿಲ್ಮ್ ಆರ್ಕಿವ್ ಎಲ್ಲಿದೆ?
೧೭. ದರಿಯಾ ದೌಲತ್ ಇದು ಯಾರಿಗೆ ಸೇರಿದ ಅರಮನೆ?
೧೮. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ ಯಾವುದು?
೧೯. ಸ್ವಾಮಿ ವಿವೇಕಾನಂದರ ಗುರು ಯಾರು?
೨೦. ವಿಜಯ ಸ್ತಂಭ (ಟವರ್ ಆಫ್ ವಿಕ್ಟರಿ) ಎಲ್ಲಿದೆ?
೨೧. ದೆಹಲಿಯಲ್ಲಿ ಜಂತರ್ ಮಂತರ್ ನಿರ್ಮಿಸಿದವರು ಯಾರು?
೨೨. ೧೯೦೪ರಲ್ಲಿ ಸಾವರ್ಕರ್ ಕ್ರಾಂತಿಕಾರ ರಹಸ್ಯ ಸಂಘವನ್ನು ಸ್ಥಾಪಿಸಿದವರು ಅದರ ಹೆಸರೇನು?
೨೩. ಖುಷ್‌ವಂತ್ ಸಿಂಗ್‌ರ ಪ್ರಥಮ ಕೃತಿ ಯಾವುದು?
೨೪. ಮೆಕ್ ಮೋಹನ್ ರೇಖೆಯು ಯಾವ ರಾಷ್ಟ್ರಗಳ ಗಡಿಯಾಗಿದೆ?
೨೫. ಮಿದುಳಿನ ಶಸ್ತ್ರ ಚಿಕಿತ್ಸೆಯ ಜನಕ ಯಾರು?
೨೬. ಹಿಡಿಕಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೨೭. ಭಾರತದ ಕರ್ಣಂ ಮಲ್ಲೇಶ್ವರಿಗೆ ಒಲಂಪಿಕ್ಸ್‌ನಲ್ಲಿ ಯಾವ ಕ್ರೀಡೆಗೆ ಪ್ರಶಸ್ತಿ ದೊರಕಿದೆ?
೨೮. ಶಿವರಾಮ ಕಾರಂತರ ಯಾವ ಕಾದಂಬರಿಯನ್ನು ಬಿ.ವಿ.ಕಾರಂತರು ಚಲನಚಿತ್ರವನ್ನಾಗಿಸಿ ಪ್ರಶಸ್ತಿ ಪಡೆದು ಕೊಂಡರು?
೨೯. ಹಿರೋಸಿಮಾದ ೧೨ನೇ ಏಷ್ಯಾನ್ ಕ್ರೀಡಾ ಕೂಟದಲ್ಲಿ ಪ್ರಥಮ ಬಾರಿಗೆ ಅಳವಡಿಸಿದ ಕ್ರೀಡೆ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆ
ಜುಲೈ ೧೯ – ಬ್ಯಾಂಕುಗಳ ರಾಷ್ಟ್ರೀಕರಣ ದಿನ
ಉತ್ತರಗಳು:
೧. ಚದುರಂಗ
೨. ಅಮೀರ್ ಖುಸ್ರೋ
೩. ಪಿ.ಬಿ.ಗಜೇಂದ್ರಗಡಕರ್
೪. ನಿಕೋಟಿನ್
೫. ಹರಿಯಾಣ
೬. ೧೫೨೬
೭. ೭೬
೮. ಶಂಕರಚಾರ್ಯರು
೯. ಕೋಕಿಲಗಾನಂ ಸುಬ್ಬಲಕ್ಷ್ಮಿ
೧೦. ಮೌಂಟ್ ಥೂಯಿಲ್ಲರ್
೧೧. ದಾದಾಬಾಯಿ ನವರೋಜಿ
೧೨. ಪ್ರೊಟೆಸ್ಟೆಂಟ್
೧೩. ಜಾರ್ಖಂಡ್
೧೪. ಮೆಟ್ಟೂರು ಅಣೆಕಟ್ಟು
೧೫. ಶ್ವಾಸಕೋಶ
೧೬. ಮುಂಬೈ
೧೭. ಟಿಪ್ಪುಸುಲ್ತಾನ್
೧೮. ಸೂರ್ಯನ ಬೆಳಕು
೧೯. ರಾಮ ಕೃಷ್ಣ ಪರಮಹಂಸರು
೨೦. ಛತೀಸ್‌ಗಡ
೨೧. ಸವಾಯಿ ಜೈಸಿಂಗ್
೨೨. ಅಭಿನವ ಭಾರತ
೨೩. ದಿ ಮಾರ್ಕ್ ಆಫ್ ವಿಷ್ಣು
೨೪. ಭಾರತ, ಚೀನಾ
೨೫. ಹಾರ್ವೆ ಕುಶಿಂಗ್
೨೬. ಘಟಪ್ರಭಾ
೨೭. ವೆಯಿಟ್ ಲಿಫ್ಟಿಂಗ್
೨೮. ಚೋಮನದುಡಿ
೨೯. ಕಬಡ್ಡಿ
೩೦. ಬಿ.ವಿ.ಕಾರಂತ
*****
hi sir..
sir mahanteshravareay edannu dayavettu daily needuva prayatna made sir please
sir edu naanaa pc examgey edu bhalaupayukthavaageday..sir..
sir..
ಅಜಯ್ ರವರೇ, ಇಲ್ಲಿಯವರೆಗೆ ಮೂವತ್ತಾರು ವಾರಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಇಲ್ಲಿ ಪ್ರಕಟವಾಗಿವೆ. ಬಲಭಾಗದಲ್ಲಿರುವ ಪಂಜು ವೈವಿಧ್ಯದ ವಿಭಾಗಗಳಲ್ಲಿ ಸಾಮಾನ್ಯ ಜ್ಞಾನ ವಿಭಾಗದ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಅಷ್ಟು ವಾರಗಳ ಪ್ರಶ್ನೆಗಳು ಓದಲು ಲಭ್ಯ.. ನಿಮಗೆ ಒಳಿತಾಗಲಿ…
ಧನ್ಯವಾದಗಳೊಂದಿಗೆ..
ಸಂಪಾದಕ
i got it sir thank u very much.
ಅಭಿನಂದನೆಗಳು ಮಹಾಂತೇಶ್
Dear Ajay nimm comment nodi tumba khushi ayitu.sampadakar salahe ante samanya jnanad vibhagadalli nimage 1000 kku hecchu prashnegalu labhya………all d best
Thank u Gaviswamy sir…………