ಪ್ರಶ್ನೆಗಳು:
೧. ಜಾಮೀಯ ಮಿಲಿಯ ಇಸ್ಲಾಮಿ ವಿಶ್ವವಿದ್ಯಾಲಯ ಎಲ್ಲಿದೆ?
೨. ಆರ್. ಎಫ್.ಕಿಟೆಲ್ಲರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾಲಯ ಯಾವುದು?
೩. ದೇವದಾಸ ಕೃತಿಯ ಲೇಖಕರು ಯಾರು?
೪. ಬಂದೂಕುಗಳಿಗೆ ಕೊಬ್ಬು ಹಚ್ಚುವುದನ್ನು ವಿರೋಧಿಸಿ ಬ್ರಿಟಿಷ್‌ರಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ ಯಾರು?
೫. ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಮೊದಲು ಪರಿಚಿಯಿಸಿದವರು ಯಾರು?
೬. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣವಾದ ಜನರಲ್ ಡಯರ್‌ನನ್ನು ಕೊಂದವರು ಯಾರು?
೭. ಅನ್ನಪೂರ್ಣ ಪರ್ವತ ಶಿಖರ ಎಲ್ಲಿದೆ?
೮. ಭಾರತದ ಪ್ರಥಮ ಪೈಲಟ್ ರಹಿತ ರಾಕೆಟ್ ಯಾವುದು?
೯. ನಾಗಾರ್ಜುನ ಸಾಗರ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
೧೦. ಬಾಸ್ಕೆಟ್‌ಬಾಲ್ ಆಟದಲ್ಲಿ ಒಂದು ತಂಡದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
೧೧. ಆಧುನಿಕ ಒಲಿಂಪಿಕ್ಸ್‌ನ ಪಿತಮಹಾ ಯಾರು?
೧೨. ವೇದಗಳು ಯಾವ ಭಾಷೆಯಲ್ಲಿ ರಚಿತವಾಗಿದೆ?
೧೩. ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯದ ರೂವಾರಿ ಯಾರು?
೧೪. ಖಾರಿಫ್ ಬೆಳೆಯನ್ನು ಯಾವ ತಿಂಗಳುಗಳ ಅವಧಿಯಲ್ಲಿ ಬೆಳೆಯಲಾಗುತ್ತದೆ?
೧೫. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೧೬. ಹಟ್ಟಿ ಚಿನ್ನದಗಣಿ ಪ್ರದೇಶ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೭. ಧಾರವಾಡ ಪೇಡಕ್ಕೆ ಪ್ರಸಿದ್ಧವಾದರೆ ಬೆಳಗಾವಿ ಏತಕ್ಕೆ ಪ್ರಸಿದ್ದ?
೧೮. ಚಾಲುಕ್ಯ ರಾಜರಿಂದ ಕವಿ ಚರ್ಕವತಿ ಎಂಬ ಬಿರುದನ್ನು ಪಡೆದ ಕವಿ ಯಾರು?
೧೯. ಭಾರತದಲ್ಲಿ ಈಸ್ಟ್ ಇಂಡಿಯ ಕಂಪನಿಯು ಮೊದಲು ಸ್ಥಾಪಿಸಿದ ವ್ಯಾಪಾರ ಮಳಿಗೆಯ ಸ್ಥಳ ಯಾವುದು?
೨೦. ಭಾರತಿಯ ಪ್ರತಿಭಟನೆಯ ನೈಜ ಜನಕನೆಂದು ಯಾರನ್ನು ಪರಿಗಣಿಸಲಾಗಿದೆ?
೨೧. ಮೊಟ್ಟೆಯಲ್ಲಿ ದೊರೆಯುವ ಶೇಕಡವಾರು ನೀರಿನ ಅಂಶವೆಷ್ಟು?
೨೨. ಉಭಯಕವಿ ಕಮಲರವಿ ಎಂಬ ಬಿರುದು ಯಾವ ಕವಿಗಿದೆ?
೨೩. ಚಿಲ್ಕ್ ಸರೋವರ ಯಾವ ರಾಜ್ಯದಲ್ಲಿದೆ?
೨೪. ಗಾಜನ್ನು ನಿಧಾನವಾಗಿ ತಂಪುಗೊಳಿಸುವ ಪ್ರಕ್ರಿಯೆಗೆ ಏನೆನ್ನುವರು?
೨೫. ಸಹಜ ದೃಷ್ಟಿಗೆ ಅವಶ್ಯಕವಾದ ವಿಟಮಿನ್ ಯಾವುದು?
೨೬. ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರವಿರುವುದು ಯಾರಿಗೆ?
೨೭. ಭಾರತೀಯ ರಬ್ಬರ್ ಸಂಶೋಧನಾ ಸಂಸ್ಥೆ ಎಲ್ಲಿದೆ?
೨೮. ಭಾರತೀಯ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆ ಎಲ್ಲಿದೆ?
೨೯. ದಿವಾನ್.ಪಿ.ಮಾಧವರಾವ್ ಅವರು ಸ್ಥಾಪಿಸಿದ ಇಲಾಖೆ ಯಾವುದು?
೩೦ . ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಜುಲೈ – ೦೧ ವೈದ್ಯರ ದಿನ
ಜುಲೈ – ೦೬ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕು ವಿರೋಧ ದಿನ
ಉತ್ತರಗಳು:-
೧. ದೆಹಲಿ
೨. ಟ್ಯುಬಿಂಗನ್
೩. ಶರತ್‌ಚಂದ್ರ ಚಟರ್ಜಿ
೪. ಮಂಗಲ್ ಪಾಂಡೆ
೫. ಇಂಡೋಗ್ರೀಕರು
೬. ಉದಮ್ ಸಿಂಗ್
೭. ನೇಪಾಳ
೮. ಲಕ್ಷ್ಯ
೯. ಕೃಷ್ಣ
೧೦. ೫
೧೧. ಫೇರೀ.ಡಿ.ಕಾಬಾರ್ಟನ್
೧೨. ಸಂಸ್ಕೃತ
೧೩. ಪಿ.ಆರ್.ತಿಪ್ಪೇಸ್ವಾಮಿ
೧೪. ಜೂನ್-ಸೆಪ್ಟೆಂಬರ್
೧೫. ಉತ್ತರಾಂಚಲ
೧೬. ರಾಯಚೂರು
೧೭. ಕುಂದಾ
೧೮. ರನ್ನ
೧೯. ಸೂರತ್
೨೦. ಬಾಲಗಂಗಾಧರ ತಿಲಕ್
೨೧. ೭೫%
೨೨. ರಾಘವಾಂಕ
೨೩. ಓಡಿಸ್ಸಾ
೨೪. ಅನಿಲನ
೨೫. ವಿಟಮಿನ್- ಎ
೨೬. ರಾಷ್ಟ್ರಪತಿಗಳಿಗೆ
೨೭. ಕೊಟ್ಟಾಯಂ (ಕೇರಳ)
೨೮. ಡೆಹ್ರಾಡೂನ್ (ಉತ್ತರಾಖಂಡ)
೨೯. ಪಶು ಸಂಗೋಪನಾ ಇಲಾಖೆ
೩೦. ಕಡಿದಾಳ ಮಂಜಪ್ಪ
*****