ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 29): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು ?
೨.    ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಸ್ಥಾಪನೆಯಾದ ವರ್ಷ ಯಾವುದು ?
೩.    ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ ?
೪.    ಅಖಿಲ ಭಾರತ ವಾಖ್‌ಶ್ರವಣ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ ?
೫.    ಇತಿಹಾಸದ ಪಿತಾಮಹ ಯಾರು ?
೬.    ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ ?
೭.    ಭಾರತ ದೇಶಿಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು ?
೮.    ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ವಿಧಿ ಯಾವುದು ?
೯.    ಗೋದಾವರಿ ನದಿ ಉಗಮ ಸ್ಥಳ ಯಾವುದು ?
೧೦.    ವಿದ್ಯುತ್‌ಚ್ಛಕ್ತಿಯ ಮೂಲ ಮಾನವೇನು ?
೧೧.    ರಾಜಾ ದಿನಕರ ಕೆಳಕರ್ ವಸ್ತು ಸಂಗ್ರಾಹಾಲಯ ಎಲ್ಲಿದೆ ?
೧೨.    ಭಾರತದ ಕ್ರಿಕೆಟ್ ತಂಡದ ನಾಯಕರದ ಮೊದಲ ಕನ್ನಡಿಗ ಯಾರು ?
೧೩.    ಅಭಿಮಾನ್ ಸ್ಟುಡಿಯೋ ನಿರ್ಮಿಸಿದವರು ಯಾರು ?
೧೪.    ನಲಿ _ ಕಲಿ ಶಿಕ್ಷಣ ಪದ್ದತಿ ಜಾರಿಗೆ ಬಂದ ವರ್ಷ ಯಾವುದು ?
೧೫.    ಲೇಥಯಂತ್ರ ಕಂಡು ಹಿಡಿದವರು ಯಾರು ?
೧೬.    ಹಾಲು ಉತ್ಪಾದನೆಗೆ ಸಂಬಂಧಿಸಿದ ಕ್ರಾಂತಿ ಯಾವುದು ?
೧೭.    ಜನನಿ ಸುರಕ್ಷ ಯೋಜನೆ ಪ್ರಾರಂಭವಾದ ವರ್ಷ ಯಾವುದು ?
೧೮.    ಭಾರತದಲ್ಲಿ ಅತಿ ಹೆಚ್ಚಿನ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಜ್ಯ ಯಾವುದು ?
೧೯.    ಜನಶ್ರೀ ವಿಮೆ ಯೋಜನೆಯ ರಾಜ್ಯ ಸರ್ಕಾರದ ಯಾವ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ?
೨೦.    ಮಧ್ಯ ಪ್ರದೇಶ ಸರ್ಕಾರ ನಿಯೋಜಿಸಿರುವ ಹಿಂದುಸ್ಥಾನಿ ಸಂಗೀತ ಕ್ಷೇತ್ರದ ಗಣ್ಯರಿಗೆ ಕೊಡಲಾಗುವ ಪ್ರಶಸ್ತಿ ಯಾವುದು ?
೨೧.    ಹಾರಂಗಿ ನದಿಗೆ ಎಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ ?
೨೨.    ಗ್ರಾಮೀಣ ಯುವಕರಿಗೆ ಮೀನುಗಾರಿಕೆ ಕುರಿತು ತರಬೇತಿ ನೀಡುತ್ತಿರುವ ಕರ್ನಾಟಕದ ಪ್ರಮುಖ ಕೇಂದ್ರಗಳು ಯಾವುವು ?
೨೩.    ತಗಡೂರು ಸುಬ್ಬಣ್ಣ ಪ್ರಶಸ್ತಿ ಪಡೆದ ಕರ್ನಾಟಕದ ಖ್ಯಾತ ಉದ್ಯಮಿ ಯಾರು ?
೨೪.    ತುರ್ತು ಪರಿಸ್ಥತಿ ಹೇಳಿಕೆಯನ್ನು ವಿರೋಧಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಕನ್ನಡ ಲೇಖಕರು ಯಾರು ?
೨೫.    ಆರ್.ಕೆ.ಪ್ರವೀಣ ಯಾವ ಕ್ರೀಡೆಗೆ ಸಂಬಂಧಿಸಿದವರು ?
೨೬.    ಜಕ್ಕೂರು ವಿಮಾನ ಹಾರಾಟ ಕೇಂದ್ರದಲ್ಲಿ ನಿಧನರಾದ ಪಂಚಭಾಷಾ ನಟಿ ಯಾರು ?
೨೭.    ಬ್ರೀಟಿಷರ ವಿರುದ್ದ ಹೋರಾಡಿದ ವೀರ ರಾಣಿ ಚೆನ್ನಮ್ಮನ ಸಮಾಧಿ ಎಲ್ಲಿದೆ ?
೨೮.    ವಿದ್ಯುತ್ ಬಲ್ಬ್‌ನಲ್ಲಿ ಬಳಸುವ ತಂತಿ ಯಾವುದು ?
೨೯.    ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕರು ಯಾರು?
೩೦.    ಈ ಚಿತ್ರದಲ್ಲಿರುವವರನ್ನು ಗುರುತಿಸು ?


ಈ ವಾರದ ಪ್ರಸಿದ್ದ ದಿನಾಚರಣೆಗಳು
ಮೇ – ೨೭ – ಎನ್.ಸಿ.ಸಿ ದಿನ
ಮೇ – ೩೧ – ವಿಶ್ವ ತಂಬಾಕು ರಹಿತ ದಿನ

ಉತ್ತರಗಳು:
೧)    ಭಾರತದ ಸಿಂಧೂ ರಶ್ಮಿ
೨)    ೧೯೩೪
೩)    ಕೇರಳ
೪)    ಮೈಸೂರು
೫)    ಹೆರೋಡೆಟಸ್
೬)    ೧೪೦೦ ಗ್ರಾಂಗಳು
೭)    ಐ.ಎನ್.ಎಸ್.ದೆಹಲಿ
೮)    ೫೧ ಎ ವಿಧಿ
೯)    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಿಯಂಬಕ್
೧೦)    ವ್ಯಾಟ್‌ಗಳು
೧೧)    ಪುಣೆ
೧೨)    ಜಿ.ಆರ್.ವಿಶ್ವನಾಥ
೧೩)    ನಟ ಬಾಲಕೃಷ್ಣ
೧೪)    ೨೦೦೯ – ೧೦ ರಲ್ಲಿ
೧೫)    ಹೆನ್ರಿ ಮೌಡ್ಲ್ಸೆ
೧೬)    ಶ್ವೇತ ಕ್ರಾಂತಿ
೧೭)    ೨೦೦೫ ಏಪ್ರಿಲ್
೧೮)    ಜಾರ್ಖಂಡ್ 
೧೯)    ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ
೨೦)    ತಾನ್‌ಸೇನ್ ಪ್ರಶಸ್ತಿ
೨೧)    ಸೋಮವಾರಪೇಟೆ ತಾಲೂಕು ಹುದುಗೂರಿನ ಬಳಿ
೨೨)    ಕೃಷ್ಣರಾಜ ಸಾಗರ ಮತ್ತು ಬೇತಮಂಗಲ
೨೩)    ವಿಜಯ ಸಂಕೇಶ್ವರ
೨೪)    ಶಿವರಾಮ್ ಕಾರಂತ
೨೫)    ಟೆನ್ನಿಸ್
೨೬)    ಸೌಂದರ್ಯ
೨೭)    ಬೈಲುಹೊಂಗಲ ( ಬೆಳಗಾವಿ ಜಿಲ್ಲೆ )
೨೮)    ಟಂಗ್‌ಸ್ಟನ್
೨೯)    ಆನಂದ್ ಅಪ್ಪುಗೋಳ್
೩೦)    ಹೊನ್ನಪ್ಪ ಭಾಗವತರ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.