ಪ್ರಶ್ನೆಗಳು:
೧. ಮಾವು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?
೨. ನವದೆಹಲಿಯಲ್ಲಿ ನಡೆದ ಐವತ್ತೆನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
೩. ೧೯೭೧ರಲ್ಲಿ ರಾಜಸ್ಥಾನ ಕೋಟಾ ಜಿಲ್ಲೆಯಲ್ಲಿ ಸ್ಥಾಪಿಸಲಾದ ಅಣು ವಿದ್ಯುತ್ ಕೇಂದ್ರ ಯಾವುದು?
೪. ಖ್ಯಾತ ಸಂಗೀತ ವಿದ್ವಾನ್ ಡಾ|| ಬಾಲ ಮುರಳಿ ಕೃಷ್ಣ ಅವರು ಮೊದಲ ಬಾರಿಗೆ ಕರ್ನಾಟಕದಲ್ಲಿ ಸಂಗೀತ ಕಛೇರಿ ನೀಡಿದ್ದು ಎಲ್ಲಿ?
೫. ಮಂಗನ ಬಾವು ಬರಲು ಕಾರಣವಾದ ರೋಗಕಾರಕ ವೈರಸ್ ಯಾವುದು?
೬. ಭಾರತದಲ್ಲಿಯೇ ಮೊದಲ ಬಾರಿಗೆ ಎಎಂ ರೆಡಿಯೋ ಮೊಬೈಲ್ ಹೊರತಂದ ಕಂಪೆನಿ ಯಾವುದು?
೭. ಪ್ರಖ್ಯಾತ ಪಾಪ್ ಗಾಯಕಿ ಉಷಾ ಉತ್ತಪ್ಪ ಯಾವ ಊರಿನವರು?
೮. ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
೯. ಪಕ್ಷಿಗಳ ಖಂಡ ಎಂದು ಯಾವುದಕ್ಕೆ ಕರೆಯುತ್ತಾರೆ?
೧೦. ಜಿಮ್ಮಿ ಕಾನರ್ಸ ಯಾವ ಕ್ರೀಡೆಯಲ್ಲಿ ಖ್ಯಾತರಾದವರು?
೧೧. ಗುಬ್ಬಿವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ಹಿರಿಯ ರಂಗಕರ್ಮಿ ಮತ್ತು ನಟ ಯಾರು?
೧೨. ಮಹಾತ್ಮ ಗಾಂಧೀಜಿಯವರಿಂದ ರಾಜರ್ಷಿ ಎಂಬ ಬಿರುದು ಪಡೆದ ಕನ್ನಡಿಗ ಯಾರು?
೧೩. ಶಂಕರಾಚಾರ್ಯರ ತಂದೆ ತಾಯಿಯ ಹೆಸರೇನು?
೧೪. ರೇಡಿಯೋವನ್ನು ಕಂಡು ಹಿಡಿದ ವಿಜ್ಞಾನಿ ಯಾರು?
೧೫. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಹಣ್ಣಾ ಹಜಾರೆ ಯಾವ ರಾಜ್ಯದವರು?
೧೬. ಜ್ಞಾನ ಪೀಠ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಯಾರು?
೧೭. ವಾಯುಧೂತ ವಿಮಾನಯಾನ ಪ್ರಾರಂಭವಾದ ವರ್ಷ ಯಾವುದು?
೧೮. ಕಸ್ತೂರಿ ಬಾ ಗಾಂಧಿ ಅವರ ಸಮಾಧಿ ಎಲ್ಲಿದೆ?
೧೯. ದಾಸಬೋಧ, ಈ ಕೃತಿ ರಚಿಸಿದವರು ಯಾರು?
೨೦. ೨೦೦೮ರ ವಿಯನ್ನಾದಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ತೀರ್ಪುಗಾರ್ತಿಯಾಗಿದ್ದ ಬಾಲಿವುಡ್ ನಟಿ ಯಾರು?
೨೧. ಭಾರತೀಯ ಗಗನಯಾತ್ರಿ ಕಲ್ಪನಾ ಚಾವ್ಲಾ ಪಯಣಿಸಿದ ನೌಕೆ ಯಾವುದು?
೨೨. ಸುರಂಗ ರೈಲ್ವೆಗಳಲ್ಲಿ ಗಾಳಿಯನ್ನು ಸೊಂಕು ರಹಿತ ಗೊಳಿಸಲು ಬಳಸುವ ಅನಿಲ ಯಾವುದು?
೨೩. ವಿಶ್ವ ಸಂಸ್ಥೆಯ ಜಾಗತಿಕ ಪ್ರವಾಸೋದ್ಯಮ ಸಂಸ್ಥೆ ಸ್ಥಾಪಿಸಲಾದ ವರ್ಷ ಯಾವುದು?
೨೪. ಮಹೇಶ್ವರ ಅಣೆಕಟ್ಟು ಯೋಜನೆ ಯಾವ ರಾಜ್ಯದ್ದಾಗಿದೆ?
೨೫. ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?
೨೬. ಖ್ಯಾತ ಹಿಂದಿನಟ ಅನಿಲ್ ಕಪೂರ್ ನಾಯಕನಾಗಿ ಅಭಿನಯಿಸಿದ ಕನ್ನಡ ಚಿತ್ರ ಯಾವುದು?
೨೭. ಮೊಟ್ಟ ಮೊದಲ ಬಾರಿಗೆ ೨೦೦೪ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆ ಯಾವುದು?
೨೮. ವಿದೇಶಿ ನಟಿಯೊಬ್ಬಳು ನಟಿಸಿದ ಪ್ರಥಮ ಕನ್ನಡ ಚಲನಚಿತ್ರ ಯಾವುದು?
೨೯. ಕೈಗಾರಿಕಾಭಿವೃದ್ಧಿ ಬ್ಯಾಂಕ್‌ನ್ನು (ಐಡಿಬಿಐ) ಸ್ಥಾಪಿಸಿದ ವರ್ಷ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಮೇ ೧೨ – ಅಂತರಾಷ್ಟ್ರೀಯ ದಾದಿಯರ ದಿನ
ಮೇ ೧೫ – ಅಂತರಾಷ್ಟ್ರೀಯ ಕುಟುಂಬ ದಿನ
ಮೇ ೧೭ – ವಿಶ್ವದೂರ ಸಂಪರ್ಕ ದಿನ
ಉತ್ತರಗಳು:
೧. ಭಾರತ
೨. ಜಿ.ಪಿ.ರಾಜರತ್ನಂ
೩. ರಾಣಾ ಪ್ರತಾಪ್ ಸಾಗರ ಅಣು ವಿದ್ಯುತ್ ಕೇಂದ್ರ
೪. ಬೆಂಗಳೂರಿನಲ್ಲಿ (೧೯೪೨)
೫. ಮಂಪ್ಸ್ ವೈರಸ್
೬. ಸೋನಿ ಎರಿಕ್‌ಸನ್
೭. ಮೈಸೂರು
೮. ವಿಶಿಷ್ಟಾದ್ವೈತ
೯. ದ.ಅಮೇರಿಕಾ
೧೦. ಟೆನಿಸ್
೧೧. ಏಣಗಿ ಬಾಳಪ್ಪ
೧೨. ನಾಲ್ವಡಿ ಕೃಷ್ಣರಾಜ ಒಡೆಯರ್
೧೩. ಶಿವಗುರು ಆರ್ಯಾಂಬ
೧೪. ಮಾರ್ಕೋನಿ
೧೫. ಮಹಾರಾಷ್ಟ್ರ
೧೬. ಆಶಾ ಪೂರ್ಣದೇವಿ
೧೭. ೧೯೮೧
೧೮. ಆಗಾಖಾನ್ ಅರಮನೆ ಆವರಣ ಪುಣೆ
೧೯. ಸಮರ್ಥ ರಾಮದಾಸ
೨೦. ಇಷಾ ಕೊಫಿಕರ್
೨೧. ಕೊಲಂಬಿಯಾ
೨೨. ಓಜೋನ್
೨೩. ೧೯೮೦
೨೪. ಮಧ್ಯಪ್ರದೇಶ
೨೫. ಮೈಸೂರು
೨೬. ಪಲ್ಲವಿ ಅನುಪಲ್ಲವಿ
೨೭. ತಮಿಳು
೨೮. ಬಿಳಿ ಹೆಂಡ್ತಿ(ಮಾರ್ಗರೇಟ್)
೨೯. ೧೯೬೪
೩೦. ಏಣಗಿ ಬಾಳಪ್ಪ
******
Very useful information .. congratulations
ಪಂಚುವಿಗೆ ಮೊದಲ ವರ್ಷದ ಹುಟ್ಟು ಹಬ್ಬದ ಶುಭಾಷಯಗಳು…
ಹೀಗೆ ಇನ್ನು ಉತ್ತಮ ಲೇಖನಗಳೊಂದಿಗೆ ಇನ್ನು ಹೆಚ್ಚು ವರ್ಣರಂಜಿತವಾಗಿ ಮೂಡಿಬರಲಿ. . .
ಎಲ್ಲರಿಗೂ ಶುಭಾಷಯಗಳು
Thanku Gavi sir………………