ಪ್ರಶ್ನೆಗಳು :
೧. ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಇಬ್ಬರು ಕನ್ನಡಿಗರು ಯಾರು?
೨. ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ?
೩. ಗಾಂಧಿ ೧೯೧೯ರಲ್ಲಿ ನವ ಜೀವನ್ ಪತ್ರಿಕೆ ಸಂಪಾದಕೀಯಕ್ಕೆ ಇಳಿದರು. ಯಾವ ಭಾಷೆಯಲ್ಲಿ ಈ ಪತ್ರಿಕೆ ಇದ್ದಿತು?
೪. ಮಹಿಳೆಯರು ಒಲಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದು ಯಾವ ವರ್ಷ?
೫. ಟೆಲಿಫೋನ್ ಕಂಡು ಹಿಡಿದವರು ಯಾರು?
೬. ಮೃತ ಸಮುದ್ರ (ಡೆಡ್‌ಸೀ) ಯಾವ ದೇಶದಲ್ಲಿದೆ?
೭. ಅಮೇರಿಕಾದ ಸಿಲಿಕಾನ್ ವ್ಯಾಲಿ ಎಂಬುದು ಏತಕ್ಕೆ ಪ್ರಸಿದ್ಧವಾಗಿದೆ?
೮. ಭಾರತದ ಮೊದಲ ಜಾಗೃತ ಆಯುಕ್ತರಾಗಿದ್ದ ಕನ್ನಡಿಗ ಯಾರು?
೯. ಕರ್ನಾಟಕ ಸಂಗೀತಾಭ್ಯಾಸಿಗಳು ಕಲಿಯುವ ಮೊದಲ ಗೀತೆ ಕನ್ನಡದ ಲಂಬೋದರ ಲಕುಮಿಕರ ಗೀತೆಯ ಕರ್ತೃ ಯಾರು? ಇದು ಯಾವ ರಾಗದಲ್ಲಿದೆ?
೧೦. ಧ್ಯಾನ್‌ಚಂದ ಎಂಬ ಹಾಕಿ ಆಟಗಾರ ಮೊದಲು ಯಾವ ವೃತ್ತಿಯಲ್ಲಿದ್ದವರು?
೧೧. ಮಾರ್ನಿಂಗ್ ಸ್ಟಾರ್ ಎಂದು ಕರೆಯಲ್ಪಡುವ ಗ್ರಹ ಯಾವುದು?
೧೨. ಹಡಗುಗಳ ವೇಗವನ್ನು ಅಳೆಯುವ ಮಾಪನ ಯಾವುದು?
೧೩. ಜಾರ್ಜಬೂಲ್ ಬರೆದ ಗಣಿತದ ಕೃತಿ ಯಾವುದು?
೧೪. ಮಾನವ ದೇಹದ ಅತಿ ಚಿಕ್ಕ ಮೂಳೆ ಯಾವುದು? ಅದು ಎಲ್ಲಿದೆ?
೧೫. ಬಾಹ್ಯಾಕಾಶದಲ್ಲಿ ಛಿದ್ರಗೊಂಡ ಬಾಹ್ಯಾಕಾಶ ನೌಕೆ ಯಾವುದು?
೧೬. ರಾಜ್ಯ ಸರ್ಕಾರವು(ಕರ್ನಾಟಕ) ೨೦೧೧-೧೨ ನೇ ಸಾಲಿನ ರಾಜೇವ್ ಗಾಂಧಿ ಗ್ರಾಮೀಣ ವಸತಿ ನಿಗಮ ಜಾರಿಗೆ ತರಲಾದ ಹೊಸ ಯೋಜನೆ ಯಾವುದು?
೧೭. ಅಂತರಿಕ್ಷಕ್ಕೆ ತೆರಳಿದ ಮೊಟ್ಟಮೊದಲ ಜೀವಿ ಯಾವುದು?
೧೮. ಯುರೋಪಿಗೆ ಹಿಂದೂ ಅಂಕಿಗಳ ಮತ್ತು ಗಣಿತವನ್ನು ಪರಿಚಯಿಸಿದ್ದು ಯಾವ ಕೃತಿ?
೧೯. ರಾಜಸ್ಥಾನಗೆ ಸಂಭಂದಿಸಿದ ಗಿರಿಧರ್‌ವ್ಯಾಸ್ ಸಮಿತಿ ತನ್ನ ವರದಿಯನ್ನು ಯಾವ ವರ್ಷದಲ್ಲಿ ಅರ್ಪಿಸಿತು?
೨೦. ಆರೋಗ್ಯಶಾಲಿ ಮನುಷ್ಯನ ರಕ್ತದೊತ್ತಡ ಎಷ್ಟಿರುತ್ತದೆ?
೨೧. ಗಾಂಧೀಜಿಯವರು ತಮ್ಮ ಯಾವ ವಯಸ್ಸಿನಲ್ಲಿ ಕಸ್ತೂರಬಾರನ್ನು ಮದುವೆಯಾದರು?
೨೨. ಶೇಕ್ಸ್ ಪಿಯರ್ ಬರೆದ ಕೊನೆಯ ಕೃತಿ ಯಾವುದು?
೨೩. ಟೆಲಿವಿಜನ್ನಿನ ಸಂಶೋಧಕರು ಯಾರು?
೨೪. ಭಾರತದಲ್ಲಿ ಖೋ-ಖೋ ಆಟದ ಮಹಿಳೆಯರಿಗಾಗಿ ಇರುವ ಝಾನ್ಸಿರಾಣಿ ಲಕ್ಷ್ಮಿ ಪ್ರಶಸ್ತಿ ಪಡೆದ ಪ್ರಥಮ ಆಟಗಾರ್ತಿ ಯಾರು?
೨೫. ವಿಶ್ವದಲ್ಲಿ ಜೀವಿಸುವತ್ತಿರುವ ಅತ್ಯಂತ ದೊಡ್ಡಹಕ್ಕಿ ಯಾವುದು?
೨೬. ಶನಿ ಮತ್ತು ಯುರೇನಸ್ ಗ್ರಹಗಳ ನಡುವೆ ಪರಿಧಿಯುಳ್ಳ ’ಶಿಕಾನ್’ ಕಂಡು ಹಿಡಿದವರು ಯಾರು?
೨೭. ವೀರಭದ್ರನ ವಿಜಯೋತ್ಸವವನ್ನು ಸಾಂಕೇತಿಸುವ ಜಾನಪದ ನೃತ್ಯ ಪ್ರಕಾರ ಯಾವುದು?
೨೮. ಗುಡವಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨೯. ಕನ್ನಡದ ಮೊದಲ ವಾಕ್ ಚಿತ್ರ ’ಸತಿ ಸುಲೋಚನಾ’ ದ ಸಂಗೀತ ನಿರ್ದೇಶಕರು ಯಾರು?
೩೦. ಈ ಚಿತ್ರದಲ್ಲಿರುವುದನ್ನು ಗುರುತಿಸಿ
ಈ ವಾರದ ಪ್ರಸಿದ್ದ ದಿನಾಚರಣೆಗಳು
ಏಪ್ರಿಲ್-೨೨-ವಿಶ್ವ ಭೂದಿನ
ಏಪ್ರಿಲ್-೨೩-ವಿಶ್ವ ಪುಸ್ತಕ
ಉತ್ತರಗಳು:
೧. ಬೆನಗಲ್ ರಾಮರಾವ್ ಮತ್ತು ಎಚ್.ವಿ.ಆರ್.ಅಯ್ಯಂಗಾರ್
೨. ಕೇರಳದ ತಿರುವನಂತಪುರ
೩. ಗುಜರಾತ್
೪. ೧೯೦೦
೫. ಅಲೆಗ್ಸಾಂಡರ್ ಗ್ರಹಾಂಬೆಲ್
೬. ಇಸ್ರೇಲ್
೭. ಕಂಪ್ಯೂಟರ್
೮. ಶ್ರೀ ನಿಟ್ಟೂರು ಶ್ರೀನಿವಾಸರಾವ್
೯. ಪುರಂದರದಾಸರು, ಮಲಹರಿ ರಾಗದಲ್ಲಿದೆ.
೧೦. ಸ್ಯೆನ್ಯದಲ್ಲಿ ಸಿಪಾಯಿ
೧೧. ಶುಕ್ರ ಗ್ರಹ
೧೨. ನಾಟ್
೧೩. ಲಾಸ್ ಆಪ್ ಥಾಟ್
೧೪. ಸ್ಟಿರಪ್ ಇದು ಕಿವಿಯಲ್ಲಿರುತ್ತದೆ
೧೫. ಚಾಲೆಂಜರ್
೧೬. ನನ್ನ ಮನೆ ನನ್ನ ಸ್ವತ್ತು
೧೭. ಲೈಕಾ ಎಂಬ ನಾಯಿ
೧೮. ಲೈಬರ್ ಅಭ್ಯಾಸಿ
೨೯. ೧೯೭೩
೨೦. ೧೨೦/೮೦
೨೧. ೧೩ನೇ ವಯಸ್ಸಿನಲ್ಲಿ
೨೨. ದಿ ಟೆಂಪೆಸ್ಟ್
೨೩. ಜೆ.ಎಲ್.ಬಿಯರ್ಡ
೨೪. ಕರ್ನಾಟಕದ ಉಷಾ ಅನಂತರಾಮನ್
೨೫. ಉಷ್ಟ್ಟ ಪಕ್ಷಿ
೨೬. ಚಾರ್ಲ್ಸ ಕೋವಾಲ್
೨೭. ವೀರಗಾಸೆ
೨೮. ಶಿವಮೊಗ್ಗ
೨೯. ಆರ್.ನಾಗೇಂದ್ರರಾವ್
೩೦. ಆನಿ ಬೆಸೆಂಟ್
*****
ನಿಮ್ಮ ಪ್ರಯತ್ನ ಒಳ್ಳೆಯದು