ಪ್ರಶ್ನೆಗಳು:
೧. ಭಾರತದ ಪ್ರಥಮ ಉಪಗ್ರಹ ಆರ್ಯಭಟವನ್ನು ಯಾವ ದೇಶದ ಉಡವಣಾ ಕೇಂದ್ರದಿಂದ ಹಾರಿಬಿಡಲಾಯಿತು?
೨. ಪಂಜಾಬ್ ರಾಜ್ಯವಾಗಿ ಆಸ್ತಿತ್ವಕ್ಕೆ ಬಂದ ವರ್ಷ ಯಾವುದು?
೩. ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು?
೪. ಮೊದಲ ಭಾರತ – ಪಾಕ್ ಯುದ್ಧ ನಡೆದಾಗ ಭಾರತದ ಕಮಾಂಡರ್ ಆಗಿ ಸೇವೆಯಲ್ಲಿದ್ದ ಕನ್ನಡಿಗ ಯಾರು?
೫. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಎಲ್ಲಿದೆ?
೬. ೧೯೫೭-೫೮ರ ಅವಧಿಯಲ್ಲಿ ವಿಶ್ವದಾದ್ಯಂತ ವಿಜ್ಞಾನಿಗಳು ಒಟ್ಟುಗೂಡಿ ಭೂಮಿ ಮತ್ತು ಪರಿಸರಗಳ ಅಧ್ಯಯನ ನಡೆಸಿದರು. ಅದನ್ನು ಏನೆಂದು ಕರೆಯುತ್ತಾರೆ?
೭. ಸಿಳ್ಳು ಹೊಡೆದಂತೆ ದನಿ ಹೊರಡಿಸುವ ಹಕ್ಕಿ ಯಾವುದು?
೮. ಜಪಾನ್ ಮೇಲೆ ಹಾಕಲ್ಪಟ್ಟ ಪರಮಾಣು ಬಾಂಬ್‌ನ ಸಾಂಕೇತಿಕ ಹೆಸರೇನು?
೯. ನೇತ್ರ ತಜ್ಞರು ಪರೀಕ್ಷೆ ಮಾಡುವ ಮೊದಲು ರೋಗಿಯ ಕಣ್ಣುಗಳಿಗೆ ಸಾರರಹಿತ ದ್ರಾವಣ ಹಾಕುತ್ತಾರೆ. ಆ ದ್ರಾವಣವು ಯಾವುದು?
೧೦. ವಿಶ್ವದ ಗಡಿಯಾರಗಳ ಸಮಯವನ್ನು ಯಾವ ಖಗೋಳ ವೀಕ್ಷಣಾಲಯದ ಪ್ರಕಾರ ಹೊಂದಿಸಲಾಗಿದೆ?
೧೧. ೨೦೦೮-೨೦೧೩ರ ಅವಧಿಯ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?
೧೨. ಮಹಾರಾಷ್ಟ್ರ ರಾಜ್ಯ ಆಡಳಿತದ ಭಾಷೆ ಯಾವುದು?
೧೩. ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
೧೪. ರಾಜವರ್ಧನ ಸಿಂಗ್ ರಾಥೋರ್ ಯಾವ ಕ್ರೀಡೆಗೆ ಹೆಸರುವಾಸಿ?
೧೫. ಸಿಖ್ಖರ್ ಹತ್ತನೇಯ ಮತ್ತು ಕೊನೆಯ ಗುರು ಯಾರು?
೧೬. ವಿಶ್ವದ ಅತಿ ದೊಡ್ಡ ಸಾಗರ ಯಾವುದು?
೧೭. ಯಾವ ರಾಷ್ಟ್ರವು ಮೊದಲ ಬಾರಿಗೆ ಯುದ್ಧದಲ್ಲಿ ವಿಮಾನವನ್ನು ಉಪಯೋಗ ಮಾಡಿತು?
೧೮. ಭಾರತದ ಆಡಳಿತ ಸುಧಾರಣೆ ಬಗ್ಗೆ ಮುತುವರ್ಜಿ ವಹಿಸಿದ ಮೊದಲ ಅಫ್ಘಾನ್ ದೊರೆ ಯಾರು?
೧೯. ಕೊಯ್ನಾ ನೀರಾವರಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ರಾಜ್ಯ ಯಾವುದು?
೨೦. ಕೈಗಾ ಅಣುವಿದ್ಯುತ್ ಕೇಂದ್ರ ಪ್ರಾರಂಭವಾದ ವರ್ಷ ಯಾವುದು?
೨೧. ಗ್ರೀನ್‌ಪಾರ್ಕ್ ಕ್ರೀಡಾಂಗಣ ಎಲ್ಲಿದೆ?
೨೨. ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
೨೩. ೧೮೯೦ರಲ್ಲಿ ಧಾರವಾಡದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಸ್ಥಾಪಿಸಲಾದ ಸಂಘ ಯಾವುದು?
೨೪. ಭಾರತದ ಸಂವಿಧಾನ ರಚಿಸಲು ತೆಗೆದುಕೊಂಡ ಅವಧಿ ಎಷ್ಟು?
೨೫. ಭಾರತದ ಬಿಸ್ಮಾರ್ಕ್ ಎಂದು ಜನಪ್ರಿಯರಾದವರು ಯಾರು?
೨೬. ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
೨೭. ಆರೋಗ್ಯಶಾಲಿಯ ವ್ಯಕ್ತಿಯ ನಾಡಿ ಮಿಡಿತ ಒಂದು ನಿಮಿಷಕ್ಕೆ ಎಷ್ಟಿರುತ್ತದೆ?
೨೮. ೨೦೧೪ರಲ್ಲಿ ನಡೆದ ಟಿ-೨೦ ವಿಶ್ವ ಕಪ್‌ನ ಆತಿಥ್ಯ ವಹಿಸಿದ ದೇಶ ಯಾವುದು?
೨೯. ಆಪಲ್ ಇಂಟರ್ ನ್ಯಾಷನಲ್ ಕಂಪೆನಿ ತಯಾರಿಸುವ ಐಫೋನ್‌ಗಳು ಮೊದಲು ಪರಿಚಯವಾಗಿದ್ದು, ಯಾವಾಗ ?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ದ ದಿನಾಚರಣೆಗಳು
ಏಪ್ರಿಲ್ ೧೫ – ವಿಶ್ವ ವಿಶೇಷ ಗ್ರಂಥಪಾಲಕರ ದಿನ
ಏಪ್ರಿಲ್ ೧೭ – ವಿಶ್ವ ಹಿಮೋಫೀಲಿಯಾ ದಿನ
ಏಪ್ರಿಲ್ ೧೮ – ವಿಶ್ವ ಸಂಸ್ಕೃತಿ ದಿನ
ಉತ್ತರಗಳು:
೧. ರಷ್ಯಾ
೨. ೧ ಮೇ ೧೯೬೦
೩. ಚಕ್ರವರ್ತಿ ರಾಜಗೋಪಾಲಾಚಾರಿ
೪. ಫೀಲ್ಡ್ ಮಾರ್ಷ್‌ಲ್ ಕಾರ್ಯಪ್ಪ
೫. ವಾರಣಾಸಿ
೬. ಇಂಟರ್ ನ್ಯಾಷನಲ್ ಜೊಯೋಫಿಸಿಕಲ್ ಇಯರ್
೭. ಲೋರಾ
೮. ಲಿಟಲ್ ಬಾಯ್
೯. ಅಲ್ಕಾಲಾಯಿಡ್ ಆಟ್ರೊಫೈನ್
೧೦. ಯು.ಕೆ.ರಾಯಲ್ ಗ್ರೀನ್‌ವಿಚ್ ವೀಕ್ಷಣಾಲಯ
೧೧. ಡಿ.ಸುಬ್ಬರಾವ್
೧೨. ಮರಾಠಿ
೧೩. ಮುಂಬಯಿ
೧೪. ಶೂಟಿಂಗ್
೧೫. ಗುರು ಗೋವಿಂದ ಸಿಂಗ್
೧೬. ಪೆಸಿಫಿಕ್ ಸಾಗರ
೧೭. ಇಟಲಿ
೧೮. ಶೇರ ಶಹಾ ಸೂರಿ
೧೯. ಮಹಾರಾಷ್ಟ್ರ
೨೦. ೨೦೦೦
೨೧. ಕಾನ್ಫುರ
೨೨. ದ್ವೈತ ಸಿದ್ದಾಂತ
೨೩. ಕರ್ನಾಟಕ ವಿದ್ಯಾವರ್ಧಕ ಸಂಘ
೨೪. ೨ ವರ್ಷ ೧೧ ತಿಂಗಳು ೧೮ ದಿನಗಳು
೨೫. ಸರ್ದಾರ್ ವಲ್ಲಭಬಾಯಿ ಪಟೇಲ್
೨೬. ಭಾರತ
೨೭. ೭೨
೨೮. ಬಾಂಗ್ಲಾದೇಶ
೨೯. ಜನವರಿ – ೦೯ – ೨೦೦೭
೩೦. ಅಶ್ವಿನಿ ನಾಚಪ್ಪ
*****
good job
super
Thank u…………….
sir please submit PDO related information
ok sir………..