ಸಾಮಾನ್ಯ ಜ್ಞಾನ (ವಾರ 20): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ೦೩.೦೨.೨೦೧೩ರಂದು ಬಿಡುಗಡೆಯಾದ ಖುಷ್ವಂತನಾಮ ದಿ ಲೆಸೆನ್ಸ್ ಆಫ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು?
೨.    ವಾರಣಾಸಿ ಯಾವ ನದಿ ದಡದ ಮೇಲಿದೆ?
೩.    ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು?
೪.    ಟೆನ್ನಿಸ್‌ನಲ್ಲಿ ಗ್ರಾಂಡ್ ಸ್ಲ್ಯಾಮ್ ಟೆನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು?
೫.    ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು?
೬.    ೭೪ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ?
೭.    ೨೦೧೨ ಡಿಸೆಂಬರ್ ೨೯ ರಿಂದ ನಡೆದ ಕೇರಳ ರಾಜ್ಯ ೫ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವದ ಅಧ್ಯಕ್ಷರಾಗಿದ್ದವರು ಯಾರು?
೮.    ೨೦೧೨ ನವೆಂಬರ್ ತಿಂಗಳಲ್ಲಿ ಯಾವ ರಾಷ್ಟ್ರ ಹೊಸ ಸಂವಿಧಾನ ಕರಡನ್ನು ಅಂಗೀಕರಿಸಿತು?
೯.    ೨೦೧೩ರ ಡಿಎಸ್‌ಸಿ ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಖ್ಯಾತಿ ಪೆಡದ ಸಾಹಿತಿ ಯಾರು?
೧೦.     ೧೮೫೭ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಿದವರು ಯಾರು?
೧೧.    ಪೊಲಿಟಿಕಲ್ ಡೈನಾಮಿಕ್ ಆಫ್ ಪಂಚಾಯತ್ ರಾಜ್ ಗ್ರಂಥ ಕರ್ತೃ ಯಾರು?
೧೨.    ವಿಶ್ವದ ಮೊದಲನೆ ಮಹಾಯುದ್ಧ ಜರುಗಿದ ವರ್ಷ ಯಾವುದು?
೧೩.    ವಿಶ್ವಸಂಸ್ಥೆ ಆರಂಭವಾಗುವ ಮೊದಲು ಇದ್ದ ಸಂಸ್ಥೆ ಯಾವುದು?
೧೪.    ಭಾರತದ ಪ್ರಥಮ ಸ್ವಾತಂತ್ಯ್ರ ಸಂಗ್ರಾಮ ೧೮೫೭ರ ಮೇ ೧೦ ರಂದು ಎಲ್ಲಿ ಆರಂಭವಾಯಿತು?
೧೫.    ಪ್ರಪ್ರಥಮ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಮಹಿಳಾ ಅಧ್ಯಕ್ಷೆ ಯಾರು?
೧೬.    ೧೯೯೮ರ ಮೇ ೧೧ರಂದು ಭಾರತ ಎಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು?
೧೭.    ಆಲಿಪ್ತ ಚಳುವಳಿ ಸ್ಥಾಪಿಸಿದ ಮೂರು ದೇಶಗಳ ಪೈಕಿ ಭಾರತ ಒಂದು ಉಳಿದವು ಯಾವುವು?
೧೮.    ಶ್ರವಣಬೆಳಗೋಳದ ಗೊಮ್ಮಟೇಶ್ವರ ಮೂರ್ತಿಯನ್ನು ನಿರ್ಮಿಸಿದವರು ಯಾರು?
೧೯.    ಮಧ್ಯಪ್ರದೇಶ ಸರ್ಕಾರ ಖ್ಯಾತ ಹಿನ್ನೆಲೆ ಗಾಯಕಿಯೊಬ್ಬರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಿದೆ ಆ ಗಾಯಕಿ ಯಾರು?
೨೦.    ಬಿಜಾಪುರದ ಮೂಲ ಹೆಸರೇನು?
೨೧.    ಮಾನವನ ರಕ್ತಕಣಗಳನ್ನು ಗುರುತಿಸಿದ ವಿಜ್ಞಾನಿ ಯಾರು?
೨೨.    ನೈಟ್‌ಹುಡ್ ಪುರಸ್ಕಾರವನ್ನು ಯಾವ ದೇಶ ನೀಡುತ್ತದೆ?
೨೩.    ಪೆರಿಯಾರ್ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೨೪.    ಪ್ರಕಾಶ ಪಡುಕೋಣೆ ಯಾವ ಕ್ರೀಡೆಗೆ ಹೆಸರಾಗಿದ್ದಾರೆ?
೨೫.    ಬಾಂಬೆಯನ್ನು ಮಹಾರಾಷ್ಟ್ರ ಸರ್ಕಾರ ಮುಂಬಯಿ ಎಂದು ಯಾವ ವರ್ಷ ಬದಲಿಸಿತು?
೨೬.    ಸಾಹಿತ್ಯದಲ್ಲಿ ನವರಸಗಳೆಂದರೆ ಯಾವುವು?
೨೭.    ಶಬ್ದದ ವೇಗ ಎಷ್ಟು?
೨೮.    ಜೇಡರ ಹುಳ ತನ್ನ ಬಲೆಯನ್ನು ಹೆಣೆಯಲು ತೆಗೆದುಕೊಳ್ಳುವ ಕಾಲ ಎಷ್ಟು?
೨೯.    ಪಿನ್ ಕೋಡ್ ಎಂದರೇನು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆ
ಮಾರ್ಚ್ ೨೭ ವಿಶ್ವ ರಂಗಭೂಮಿ ದಿನ

ಉತ್ತರಗಳು:
೧.    ಖುಷ್ವಂತ್ ಸಿಂಗ್
೨.    ಗಂಗಾ
೩.    ಮೂರಾರ್ಜಿ ದೇಸಾಯಿ
೪.    ಮಹೇಶ್ ಭೂಪತಿ
೫.    ಬಿ.ಆರ್.ಪಂತಲು
೬.    ನಗರ ಪಾಲನೆ
೭.    ಮನು ಬಳಿಗಾರ 
೮.    ಈಜಿಪ್ಟ್
೯.    ಜೀತ್ ತುಯ್ಯಿಲ್
೧೦.     ವಿ.ಡಿ.ಸಾವರ್ಕರ್
೧೧.     ಪಿ.ಸಿ.ಮಾಥುರ್
೧೨.     ೧೯೧೪ ರಿಂದ ೧೯೧೯
೧೩.     ಲೀಗ್ ಆಫ್ ನೇಷನ್ಸ್ 
೧೪.     ಮೀರತ್ 
೧೫.     ವಿಜಯಲಕ್ಷ್ಮಿ ಪಂಡಿತ್
೧೬.     ಪೋಖಾರಣ್
೧೭.     ಯುಗೋಸ್ಲಾವಿಯ, ಈಜಿಪ್ಟ್
೧೮.     ಚಾವುಂಡರಾಯ
೧೯.     ಲತಾ ಮಂಗೇಶ್‌ಕರ್
೨೦.     ವಿಜಯಪುರ
೨೧.     ಕಾರ್ಲ್‌ಲ್ಯಾಂಡ್ ಸ್ಲೈನರ್
೨೨.     ಇಂಗ್ಲೆಂಡ್
೨೩.     ಕೇರಳ
೨೪.     ಬ್ಯಾಂಡ್ಮಿಂಟನ್
೨೫.     ೧೯೯೫
೨೬.     ರತಿ, ಶೋಕ, ಕ್ರೋಧ, ಜಿಗುಪ್ಸೆ, ಶಮ, ಹಾಸ್ಯ, ಉತ್ಸಾಹ, ಭಯ ಮತ್ತು ವಿಸ್ಮಯ
೨೭.     ೧ ನಿಮಿಷಕ್ಕೆ ೨೦ಕಿ.ಮೀ ವೇಗದಲ್ಲಿ ಪ್ರಸಾರವಾಗುತ್ತದೆ
೨೮.     ಕೇವಲ ೯೦ ಸೆಕೆಂಡುಗಳು
೨೯.     ಪೋಸ್ಟಲ್ ಇಂಡೆಕ್ಸ್ ನಂಬರ್
೩೦.     ಆಶಾ ಬೋಸ್ಲೆ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
K.M.Vishwanath
10 years ago

ಪಂಜುವಿನ ಈ ಹೊಸತನ ಹಿಡಿಸಿತು ಮುಂದುವರೆಯಲಿ 

mahantesh yaragatti
mahantesh yaragatti
10 years ago

Dhanyavadagalu K.M.Vishwanath avare…………

2
0
Would love your thoughts, please comment.x
()
x