ಪ್ರಶ್ನೆಗಳು:
೧. π(ಪೈ) ಇದರ ಬೆಲೆಯನ್ನು ತೋರಿಸಿಕೊಟ್ಟ ಭಾರತೀಯ ಗಣಿತಜ್ಞ ಯಾರು?
೨. ಇಂದಿನ ಸಸ್ಯಶಾಸ್ತ್ರ (Botany) ಹಿಂದೆ ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು?
೩. ಅಂಧರಿಗಾಗಿ ಲಿಪಿ ಕಂಡು ಹಿಡಿದವರು ಯಾರು?
೪. ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರಿನ ಹೆಸರೇನು?
೫. ಭಾರತದ ಮಾನವ ಮಸ್ತಿಷ್ಕ ಯಂತ್ರ (Man Computer) ಎಂದು ಪ್ರಸಿದ್ಧಳಾದ ಮಹಿಳೆ ಯಾರು?
೬. ಭಾರತದ ರಾಷ್ಟ್ರಗೀತೆ ’ಜನಗಣಮನ’ ವನ್ನು ಪ್ರಥಮ ಬಾರಿಗೆ ರಾಷ್ಟ್ರಗೀತೆಯಾಗಿ ಹಾಡಿದ ವರ್ಷ ಮತ್ತು ಸ್ಥಳ ಯಾವುದು?
೭. ಯಾವ ಕಾದಂಬರಿಯಿಂದ ವಂದೇ ಮಾತರಂ ಗೀತೆಯನ್ನು ಆಯ್ದುಕೊಳ್ಳಲಾಗಿದೆ?
೮. ಕ್ರಿಸ್ಕೋಗ್ರಾಫ್ ಕಂಡು ಹಿಡಿದ ವಿಜ್ಞಾನಿ ಯಾರು?
೯. ತಾಮ್ರವನ್ನು ಅತಿಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?
೧೦. ಭಾರತದಲ್ಲಿ ಮೊದಲ ಬಾರಿಗೆ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಯಿತು?
೧೧. ಕಿಸಾನ್ ಕ್ರೇಡಿಟ್ ಕಾರ್ಡ್ ಯಾವ ವರ್ಷ ಯಾರಿಗೆ ತರಲಾಯಿತು?
೧೨. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು?
೧೩. ರಕ್ತದ ಒತ್ತಡ ಅಳತೆ ಮಾಡುವ ಸಾಧನ ಯಾವುದು?
೧೪. ಕನ್ನಡ ನಟ ಸುದೀಪ್ ನಟಿಸಿದ ಹಿಂದಿ ಚಲನಚಿತ್ರ ’ಪೂಂಕ್’ದ ನಿರ್ದೇಶಕರು ಯಾರು?
೧೫. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು?
೧೬. ಭಾರತದಲ್ಲಿ ಹೆಚ್ಚು ಸೀಸ ಉತ್ಪಾದಿಸುವ ರಾಜ್ಯ ಯಾವುದು?
೧೭. ಹುಣಸೆಹಣ್ಣಿನಲ್ಲಿರುವ ಆಮ್ಲದ ಹೆಸರೇನು?
೧೮. ಪಂಚಾಯತಿ ಸದಸ್ಯನಾಗಿ ಚುನಾಯಿತನಾಗಲು ಬೇಕಾದ ವಯಸ್ಸು ಎಷ್ಟು?
೧೯. ಭಾರತದಲ್ಲಿ ವರದಕ್ಷಿಣೆ ವಿರೋಧಿ ಕಾನೂನು ಯಾವಾಗ ಜಾರಿಗೆ ಬಂದಿತು?
೨೦. ವಿಷ್ಣುವಿನ ಗದೆಗೆ ಏನೆಂದು ಹೆಸರು?
೨೧. ಬುದ್ಧ ಚರಿತಂ ಗ್ರಂಥದ ಕರ್ತೃ ಯಾರು?
೨೨. ಕಾನ್ವೆಡರೇಷನ್ ಕಪ್ ಯಾವ ಆಟಕ್ಕೆ ಸಂಬಂಧಿಸಿದೆ?
೨೩. ಗಾಂಧೀಜಿಯವರನ್ನು ಬಾಪೂ ಎಂದು ಕರೆದವರು ಯಾರು?
೨೪. ಟಿ.ಚೌಡಯ್ಯನವರು ಯಾವ ವಾದ್ಯ ಸಂಗೀತಕ್ಕೆ ಹೆಸರಾಗಿದ್ದರು?
೨೫. ಭಾರತ ಮತ್ತು ಪಾಕಿಸ್ತಾನ ಗಡಿ ರೇಖೆಯನ್ನು ಏನೆಂದು ಕರೆಯುವರು?
೨೬. ’ರೂಬಲ್’ ಎಂಬುದು ಯಾವ ದೇಶದ ನಾಣ್ಯ?
೨೭. ಭಾರತದಲ್ಲಿ ಮೊದಲು ಬದಲಿ ಮೂತ್ರಕೋಶದ ಶಸ್ತ್ರ ಚಿಕಿತ್ಸೆ ಯಾವಾಗ ನಡೆಯಿತು?
೨೮. ಲಿಗ್ನೈಟ್ ಉತ್ಪಾದಿಸುವ ರಾಜ್ಯ ಯಾವುದು?
೨೯. ಗಂಧದ ಮರ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಈ ವಾರದ ಪ್ರಸಿದ್ಧ ದಿನಾಚರಣೆಗಳು
ಫೆಬ್ರವರಿ – ೨೪ ಕೇಂದ್ರೀಯ ಸುಂಕ (ಸೆಂಟ್ರಲ್ ಎಕ್ಸೈಸ್) ದಿನ
ಫೆಬ್ರವರಿ – ೨೮ ರಾಷ್ಟ್ರೀಯ ವಿಜ್ಞಾನ ದಿನ
ಉತ್ತರಗಳು:
೧. ಆರ್ಯಭಟ
೨. ವೃಕ್ಷಾರ್ಯವೇದ
೩. ಲೂಯಿಬ್ರೇಲ್
೪. ’ಪರಮ್’
೫. ಶಕುಂತಲಾದೇವಿ
೬. ೧೯೧೧ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದ ಕಾಲಕ್ಕೆ
೭. ಆನಂದ ಮಠ
೮. ಸರ್ ಜಗದೀಶ್ ಚಂದ್ರಬೋಸ್
೯. ಬಿಹಾರ
೧೦. ಪಂಜಾಬ್
೧೧. ೧೯೯೮-೯೯
೧೨. ೨೦೦೦ (ಡಿಸೆಂಬರ್)
೧೩. ಸ್ಪಿಗ್ಮೋಮಾನೋ ಮೀಟರ್
೧೪. ರಾಮಗೋಪಾಲವರ್ಮಾ
೧೫. ಕೆಂಪುರಂಜಕ
೧೬. ರಾಜಸ್ಥಾನ
೧೭. ಟಾರ್ಟಾರಿಕ್ ಆಮ್ಲ
೧೮. ೨೧
೧೯. ೧೯೬೧ರಲ್ಲಿ
೨೦. ಕೌಮೋದಕೀ
೨೧. ಅಶ್ವಘೋಷ
೨೨. ಪುಟ್ಬಾಲ್
೨೩. ಸರ್ದಾರ್ ವಲ್ಲಭಬಾಯಿ ಪಟೇಲ್
೨೪. ಪಿಟೀಲು
೨೫. ರ್‍ಯಾಡ್‌ಕ್ಲಿಪ್ ಲೈನ್
೨೬. ರಷ್ಯಾ
೨೭. ೧೯೭೧
೨೮. ತಮಿಳುನಾಡು
೨೯. ಕರ್ನಾಟಕ
೩೦. ಲಕ್ಷ್ಮಿ ನಾರಾಯಣ ಮಿತ್ತಲ್
******