ಸಾಮಾನ್ಯ ಜ್ಞಾನ (ವಾರ 15): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:

೧.    ಭಾರತದಲ್ಲಿ ಇಂಗ್ಲೀಷ್ ವಿಧ್ಯಾಭ್ಯಾಸವನ್ನು ಜಾರಿಗೆ ತಂದವರು ಯಾರು?

೨.    ’ನೆಲಗಡಲೆ’ ಇದು ಮೂಲತಃ ಯಾವ ದೇಶದ ಬೆಳೆ?

೩.    ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆಯುಳ್ಳ (Combined net sales) ದಿನ ಪತ್ರಿಕೆ ಯಾವುದು?

೪.    ಹತ್ತು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?

೫.    ಭಾರತದ ನೈಟಿಂಗೇಲ್ ಎಂದು ಯಾರನ್ನು ಕರೆಯುತ್ತಾರೆ?

೬.    ರೋಮಿಯೋ ಜೂಲಿಯೆಟ್ ನಾಟಕದ ಕರ್ತೃ ಯಾರು?

೭.    ನೇತ್ರಾದಾನದಲ್ಲಿ ಕಣ್ಣಿನ ಯಾವ ಭಾಗವನ್ನು ಬೇರೆಯವರಿಗೆ ಅಳವಡಿಸಬಹುದು?

೮.    ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘ ಸ್ಥಾಪಿಸಿದವರು ಯಾರು?

೯.    ಅಭ್ರಕ ಹೆಚ್ಚಾಗಿ ಉತ್ಪಾದಿಸುವ ರಾಷ್ಟ್ರ ಯಾವುದು?

೧೦.    ವಿಶ್ವ ವಿಖ್ಯಾತ ಪ್ರೇಮಕಥೆ ಲೈಲಾ ಮಜ್ನೂ ಕೃತಿ ರಚಿಸಿದವರು ಯಾರು?

೧೧.    ಹಿಜಿರಾ ಶಕವರ್ಷ ಪ್ರಾರಂಭವಾದದ್ದು ಯಾವಾಗ?

೧೨.    ಪ್ರಸಿದ್ಧ ಉದ್ಯಮಿ ದಿವಂಗತ ಧೀರೊಬಾಯಿ ಅಂಬಾನಿಯವರ ಪತ್ನಿಯ ಹೆಸರೇನು?

೧೩.    ಖ್ಯಾತ ನ್ಯಾಯಾವಾದಿ ರಾಮ್ ಜೇಠ್ಮಲಾನಿಯವರು ೧೯೯೪ರಲ್ಲಿ ಸ್ಥಾಪಿಸಿದ ಪಕ್ಷದ ಹೆಸರೇನು?

೧೪.    ಪ್ರತಿದಿನ ನಮ್ಮ ಆಹಾರದಲ್ಲಿ ಎಷ್ಟು ಗ್ರಾಂ ಕೊಬ್ಬು ಇರಬೇಕು?

೧೫.    ಹೆಚ್.ಐ.ವಿ (HIV) ವಿಸೃತ ರೂಪವೇನು?

೧೬.    ಬುದ್ಧ ಪೌರ್ಣಮಿಗೆ ಮಹತ್ವ ಬರಲು ಕಾರಣವೇನು?

೧೭.    ರೇಷ್ಮೆಯನ್ನು ಪ್ರಥಮವಾಗಿ ಆವಿಷ್ಕರಿಸಿದ ನಾಗರೀಕರು ಯಾರು?

೧೮.    ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾದ ಪ್ರಥಮ ಭಾರತೀಯ ಯಾರು?

೧೯.    ಫೌಂಟನ್ ಪೆನ್ನನ್ನು ಕಂಡು ಹಿಡಿದವರು ಯಾರು?

೨೦.    ಸಿಂಧೂ ನದಿಯ ಉಪನದಿಗಳು ಯಾವುವು?

೨೧.    ಗಿರ್ ಅರಣ್ಯಧಾಮ ಯಾವ ರಾಜ್ಯದಲ್ಲಿದೆ?

೨೨.    ವಿಶ್ವ ರೆಡ್‌ಕ್ರಾಸ್ ದಿನಾಚರಣೆಯನ್ನು ಎಂದು ಆಚರಿಸುವರು?

೨೩.    ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಬಳಸಿದ ನೌಕೆ ಯಾವುದು?

೨೪.    ರೆಡ್‌ಕ್ರಾಸ್ ಸಂಸ್ಥೆಯ ಸ್ಥಾಪಕ ಯಾರು?

೨೫.    ಎರಡು ಮೆದುಳುಗಳಿದ್ದ ಪ್ರಾಣಿ ಯಾವುದು?

೨೬.    ಮಾನವನ ದೇಹದ ರಕ್ತದ ಗುಂಪುಗಳಾವುವು?

೨೭.    ಮನುಷ್ಯ ದೇಹದಲ್ಲಿನ ಸಣ್ಣಕರುಳಿನ ಉದ್ದ ಎಷ್ಟು?

೨೮.    ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸುತ್ತದೆ?

೨೯.    ’ಆಸ್ಕರ್’ ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಭಾರತೀಯ ಚಲನಚಿತ್ರ ಯಾವುದು?

೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಉತ್ತರಗಳು:

೧.    ಮೆಕಾಲೆ

೨.    ದಕ್ಷಿಣ ಅಮೇರಿಕಾ

೩.    ದಿ ಟೈಮ್ ಆಫ್ ಇಂಡಿಯಾ

೪.    ಭಾರತದ ರಿಸರ್ವ್ ಬ್ಯಾಂಕಿನ ಗರ್ವನರ್

೫.    ಸರೋಜಿನಿ ನಾಯ್ಡು

೬.    ವಿಲಿಯಮ್ ಷೇಕ್ಸ್ ಫಿಯರ್ 

೭.    ಕಾರ್ನಿಯಾ

೮.    ಎಂ.ಕೆ.ಗಾಂಧಿ

೯.    ಭಾರತ 

೧೦.    ಅಮೀರ್ ಖುಸ್ರು

೧೧.    ಕ್ರಿ.ಶ.೬೨೨

೧೨.    ಕೋಕಿಲಾ ಬೆನ್

೧೩.    ಭಾರತೀಯ ಲೋಕ ಪಂಚಾಯತ್

೧೪.    ೮೦ ಗ್ರಾಂ

೧೫.    ಹ್ಯೂಮನ್ ಇಮ್ಮೂನೋ ಡಿಫಿಸಿಯನ್ಸಿ ವೈರಸ್

೧೬.    ಗೌತಮ ಬುದ್ಧನು ಹುಟ್ಟಿದ್ದು, ಜ್ಞಾನೋದಯವಾಗಿದ್ದು ಮತ್ತು ನಿರ್ವಾಣ ಹೊಂದಿದ ದಿನ

೧೭.    ಚೀನಿಯರು

೧೮.    ಸುಬಾಷ್ ಚಂದ್ರ ಬೋಸ್

೧೯.    ಜಿ.ಡಿ.ನಾಯ್ಡು 

೨೦.    ರಾವಿ, ಜೀಲಂ, ಸೆಟ್ಲೇಜ್

೨೧.    ಗುಜರಾತ್

೨೨.    ಮೇ ೮

೨೩.    ಸೂಯೇಜ್ ಟಿ – ||

೨೪.    ಹೆನ್ರಿ ಡುನಾಂಟ್

೨೫.    ಡೈನೋಸಾರ್

೨೬.    ಎ, ಬಿ, ಎಬಿ ಮತ್ತು ಒ

೨೭.    ೮ ಮೀಟರ್

೨೮.    ೭೬ ವರ್ಷಗಳಿಗೊಮ್ಮೆ

೨೯.    ಮದರ್ ಇಂಡಿಯಾ

೩೦.    ಡಾ|| ಸಲೀಂ ಅಲಿ (ಖ್ಯಾತ ಪಕ್ಷಿ ತಜ್ಞರು) 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
prashanth
prashanth
10 years ago

29th question is not the valid one… Still now no indian movie has won oscar award

2
0
Would love your thoughts, please comment.x
()
x