ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ (ವಾರ 2) : ಮಹಾಂತೇಶ್ ಯರಗಟ್ಟಿ


೧. ಮಹಮದ್ ರಫಿ ಕನ್ನಡ ಚಿತ್ರವೊಂದರಲ್ಲಿ ಹಾಡಿದ್ದಾರೆ. ಆ ಚಿತ್ರ ಯಾವುದು?

೨. ಅಚ್ಚ ಕನ್ನಡದ ಮೊದಲ ಕರ್ನಾಟಕ ದೊರೆ ಯಾರು?

೩. ಒಂದು ವರ್ಷದ ಪಿ.ಯು.ಸಿ ಶಿಕ್ಷಣವನ್ನು ಯಾವ ವರ್ಷದಲ್ಲಿ ೨ವರ್ಷಕ್ಕೆ ಹೆಚ್ಚಿಸಲಾಯಿತು?

೪. ಕರ್ನಾಟಕ ಯಾವ ಜಿಲ್ಲೆಯಲ್ಲಿ ಒಂಟೆಗಳ ಜಾತ್ರೆ ನಡೆಯುತ್ತದೆ?

೫. ಕನ್ನಡದ ಮೊದಲ ನಾಟಕ ಯಾವುದು?

೬. ಅಂಚೆ ಚೀಟಿಯ ಮೇಲೆ ಪ್ರಪ್ರಥಮವಾಗಿ ಮೂಡಿ ಬಂದ ಕನ್ನಡ ಸಾಹಿತಿ ಯಾರು?

೭. ಮ್ಯಾಗ್ಸೆಸೆ ಪ್ರಶಸ್ತಿ ಪಡೆದ (ರಂಗಭೂಮಿ ಸೇವೆಗೆ) ಮೊದಲ ಕನ್ನಡಿಗ ಯಾರು?

೮. ಕರ್ನಾಟಕ ಪ್ರಥಮ ಶಾಖೋತ್ಪನ್ನ ವಿದ್ಯುದಾಗಾರ ಎಲ್ಲಿದೆ?

೯. ಕನ್ನಡದ ಮೊದಲ ಕೃತಿ ಯಾವುದು?

೧೦. ರಗಳೆಯ ಕವಿ ಎಂದು ಯಾರನ್ನು ಕರೆಯುತ್ತಾರೆ?

೧೧. ಕರ್ನಾಟಕದ ಸಿಂಹವೆಂದು ಯಾರಿಗೆ ಹೇಳುವರು?

೧೨. ಕರ್ನಾಟಕದಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು?

೧೩. ಬೀಚಿ ಇದು ಯಾರ ಕಾವ್ಯನಾಮ?

೧೪. ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಯಾವುದು?

೧೫. ಪೃಥ್ವಿರಾಜ ಕಪೂರ್ ನಟಿಸಿರುವ ಕನ್ನಡ ಚಿತ್ರ ಯಾವುದು?

೧೬. ಕನ್ನಡದ ಮೊದಲ ಶಿಲಾಶಾಸನ ಯಾವುದು?

೧೭. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

೧೮. ಕರ್ನಾಟದಲ್ಲಿ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?

೧೯. ಕನ್ನಡದ ಮೊದಲ ಕಾದಂಬರಿ ಯಾವುದು?

೨೦. ಕನಕದಾಸರ ಹುಟ್ಟೂರು ಯಾವುದು?

೨೧. ನೊಬೆಲ್ ಪ್ರಶಸ್ತಿ ಪಡೆದ ಕನ್ನಡಿಗ ವಿಜ್ಞಾನಿ ಯಾರು?

೨೨. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ ಯಾವುದು?

೨೩. ಇಪ್ಪತೆರಡು ಭಾಷೆಗಳನ್ನು ಕಲಿತಿದ್ದ ಏಕೈಕ ಕನ್ನಡಿಗ ಯಾರು?

೨೪. ಕರ್ನಾಟಕದ ಪ್ರಥಮ ರಾಜ್ಯಪಾಲರು ಯಾರು?

೨೫. ಕನ್ನಡದ ಚಲನಚಿತ್ರದ ಮೊದಲ ನಾಯಕ ನಟ ಯಾರು?

೨೬. ಕರ್ನಾಟಕದಲ್ಲಿ ಬಾಹ್ಯಾಕಾಶ ಕೇಂದ್ರ ಎಲ್ಲಿ ಸ್ಥಾಪನೆಯಾಗಿದೆ?

೨೭. ಏಷಿಯಾದ ಮೊಟ್ಟಮೊದಲನೆ ಜಲವಿದ್ಯುತ್‌ಚ್ಛಕ್ತಿ ಕೇಂದ್ರ ಯಾವುದು?

೨೮. ಕನ್ನಡದಲ್ಲಿ ಮಹಾಭಾರತವನ್ನು ಒಂದು ಕಾದಂಬರಿಯಾಗಿ ಬರೆದ ಕಾದಂಬರಿಕಾರ ಯಾರು? ಕಾದಂಬರಿ ಹೆಸರೇನು?

೨೯. ಕರ್ನಾಟಕದ ದೊಡ್ಡ ದೇವಾಲಯ ಯಾವುದು?

೩೦. ಈ ಪೋಟೋದಲ್ಲಿರುವವರನ್ನು ಗುರುತಿಸಿ.

*****

ಈ ವಾರದ ಪ್ರಸಿದ್ದ ದಿನಾಚರಣೆಗಳು

ನವೆಂಬರ್ ೧೪ – ಮಕ್ಕಳ ದಿನಾಚರಣೆ ಮತ್ತು ಮಧುಮೇಹ ದಿನ

ನವೆಂಬರ್ ೧೬ – ಅಂತರರಾಷ್ಟ್ರೀಯ ಸಹಿಷ್ಣುತಾ ದಿನ

*****

ಉತ್ತರಗಳು

೧. ಒಂದೇ ಬಳ್ಳಿಯ ಹೂಗಳು 

೨. ಮಯೂರವರ್ಮ(ಕದಂಬರು)

೩. ೧೯೭೧-೭೨

೪. ಬೀದರ್

೫. ಮಿತ್ರಾವಿಂದಾ ಗೋವಿಂದ

೬. ಡಿ.ವಿ.ಜಿ

೭. ಕೆ.ವಿ.ಸುಬ್ಬಣ್ಣ

೮. ಶಕ್ತಿನಗರ

೯. ಕವಿರಾಜಮಾರ್ಗ 

೧೦. ಹರಿಹರ

೧೧. ಗಂಗಾಧರ ದೇಶಪಾಂಡೆ

೧೨. ಗೌರಿಬಿದನೂರು

೧೩. ರಾಯಸಂ ಭೀಮಸೇನರಾವ್

೧೪. ಮೈಸೂರು ವಿಶ್ವವಿದ್ಯಾನಿಲಯ

೧೫. ಸಾಕ್ಷಾತ್ಕಾರ

೧೬. ಹಲ್ಮಿಡಿ ಶಾಸನ (ಕ್ರಿ,ಶ,೪೫೦)

೧೭. ವಿ.ಶಾಂತಾರಾಂ

೧೮. ಉತ್ತರ ಕನ್ನಡ ಜಿಲ್ಲೆಯ ಸೂಪ (೧೦೧ಮೀ) 

೧೯. ಇಂದಿರಾಬಾಯಿ(ಗುಲ್ವಾಡಿ ವೆಂಕಟರಾವ್ ವಿರಚಿತ)

೨೦. ಬಾಡ (ಹಾವೇರಿ ಜಿಲ್ಲೆ)

೨೧. ಸರ್.ಸಿ.ವಿ.ರಾಮನ್

೨೨. ೧೯೧೫

೨೩. ಗೋವಿಂದಪೈ

೨೪. ಜಯಚಾಮರಾಜ ಒಡೆಯರು

೨೫. ಎಂ.ವಿ.ಸುಬ್ಬಯ್ಯನಾಯ್ಡು

೨೬. ಹಾಸನ

೨೭. ಶಿವನಸಮುದ್ರ ಯೋಜನೆ

೨೮. ಎಸ್.ಎಲ್.ಬೈರಪ್ಪ – ಪರ್ವ

೨೯. ಶ್ರೀ ಕಂಠೇಶ್ವರ ದೇವಾಲಯ (ನಂಜನಗೂಡು)

೩೦. ಸಾಲು ಮರದ ತಿಮ್ಮಕ್ಕ

******

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಸಾಮಾನ್ಯ ಜ್ಞಾನ (ವಾರ 2) : ಮಹಾಂತೇಶ್ ಯರಗಟ್ಟಿ

  1. 1)? 2)ನೃಪತುಂಗ 5)ಮಿತ್ರವಿಂದಗೋವಿಂದ 7)ಕೆ.ವಿ.ಸುಬ್ಬಣ್ಣ 8)ರಾಯಚೂರು9)ಕವಿರಾಜಮಾರ್ಗ10)ಹರಿಹರ11)ಆಲೂರು ವೆಂಕಟರಾಯ 13)ಭೀಮಸೇನರಾಯ 14)ಮೈಸೂರು 15)ಸಾಕ್ಷಾತ್ಕಾರ 16)ಹಲ್ಮಿಡಿ 17)ರಾಜಕುಮಾರ್18)ಆಲಮಟ್ಟಿ19)ಇಂದಿರಾಬಾಯಿ20)ಬಾಡ 21)ಸಿ.ವಿ.ರಾಮನ್ 22)1915 24) ಜಯಚಾಮರಾಜೇಂದೃ ಒಡೆಯರ್ 25)ಹೊನ್ನಪ್ಪ ಭಾಗವತರ್26)ಹಾಸನ 27)ಲಿಂಗನಮಕ್ಕಿ 28)ಎಸ್.ಎಲ್.ಭೈರಪ್ಪ,ಪರ್ವ 29) ಸೋಮನಾಥೇಶ್ವರ ದೇವಾಲಯ 30)ಸಾಲುಮರದ ತಿಮ್ಮಕ್ಕ

Leave a Reply

Your email address will not be published. Required fields are marked *