(ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರವೆಂದು ಜನಪ್ರಿಯವಾಗಿರುವ ಅರಕಲಗೂಡು ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ "ರಾಮನಾಥ ಪುರ"ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ 17 ರಂದು ರಧೋತ್ಸವವು ಜರುಗಿದ್ದು ಮುಂದಿನ ತಿಂಗಳ(ಜನವರಿ) 16ರವರೆಗೂ ನಡೆಯುವ ಜಾತ್ರೆಗೆ ಮುನ್ನುಡಿಯಾಗಿದೆ. ಈ ನಿಮಿತ್ಯ ಜಾತ್ರಾ ವೈಭವ ಮತ್ತು ಬದಲಾಗುತ್ತಿರುವ ಸ್ವರೂಪ ಕುರಿತ ಲೇಖನವಿದು) ಪುರಾಣ ಕಾಲದಲ್ಲಿ ಸೀತೆಯನ್ನು ಅಪಹರಿಸಿದ ರಾವಣೇಶ್ವರನನ್ನು ಸಂಹರಿಸಿದ ಶ್ರೀರಾಮನು ತನಗೆ ಬ್ರಹ್ಮ ಹತ್ಯೆ ದೋಷ ಕಾಡದಿರಲೆಂದು ವಾಸವಾಪುರಿಯ […]
ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದಿರುವುದು 12ನೇ ಶತಮಾನದಿಂದ 19ನೇ ಶತಮಾನದವರೆಗೆ ಅನೇಕ ದಾಸರು ಪದಗಳನ್ನು ರಚಿಸಿದ್ದಾರೆ. ವಿಜಯದಾಸರು,ಗೋಪಾಲದಾಸರು,ಜಗನ್ನಾಥದಾಸರು,ಕನಕದಾಸರು,ಹೀಗೆ ಇನ್ನೂ ಅನೇಕ ದಾಸರು ದೇವರನ್ನು ಸ್ತುತಿಸುತ್ತ ಕೊಂಡಾಡುತ್ತ ಹಲವಾರು ಪದಗಳನ್ನು ರಚಿಸಿದ್ದಾರೆ. ಇವರಲ್ಲಿ ಪುರಂದರದಾಸರು ಶ್ರೇಷ್ಠರೆನಿಸಿಕೊಂಡಿದ್ದಾರೆ. "ದಾಸರೆಂದರೆ ಪುರಂದರದಾಸರಯ್ಯಾ…….."ಎಂದು ಸ್ವತಃ ಗುರು ವ್ಯಾಸರಾಯರಿಂದಲೇ ಕೊಡಾಡಿಸಿಕೊಂಡ ಹಿರಿಮೆ ಇವರದು. ದೇವತೆಗಳಲ್ಲಿ ಸಂಗೀತ ವಿಶಾರದ ನಾರದ ಮಹರ್ಷಿಗಳ ಅವತಾರವೇ ಪುರಂದರದಾಸರೆಂಬ ಪ್ರತೀತಿಯೂ ಇದೆ. ಶಾಲಿವಾಹನ ಶೆಕೆ 1858 ರಲ್ಲಿ ಮಹಾರಾಷ್ಟ್ರದ ಪಂಡರಪುರದ ಹತ್ತಿರದ ಗ್ರಾಮವೊಂದರಲ್ಲಿ ಬ್ರಾಹ್ಮಣ […]