ಸಂ-ಜನ: ಹೆಚ್. ಷೌಕತ್ ಆಲಿ, ಮದ್ದೂರು


ಒಂದು ತಾಲ್ಲೋಕಿನಿಂದ ಮತ್ತೊಂದು ತಾಲ್ಲೋಕಿನ ಒಂದು ಕಾಲೇಜಿನಲ್ಲಿ ನಾನು ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಿನಾ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಹೋಗಿ ಬರುವುದು ಮಾಮೂಲಿಯಾಗಿತ್ತು. ಸಮಯಕ್ಕೆ ಅರ್ಧಘಂಟೆ ಮುಂಚೆ ನಾನು ಬಸ್ಸ್ಟ್ಯಾಂಡ್ ನಿಂದ ಇಳಿದು ಕಾಲೇಜಿಗೆ ನಡೆದುಕೊಂಡೆ ಹೋಗುತ್ತಿದ್ದೆ. ನನ್ನ ಕೈಯಲ್ಲಿ ಟೀಫಿನ್ ಬಾಕ್ಸ್, ವಾಟರ್ ಬಾಟಲ್ ಅವುಗಳನ್ನು ಹೊತ್ತಿರೋ ಒಂದು ಬ್ಯಾಗ್ ಆ ಬ್ಯಾಗ್ ನನ್ನ ಕೈಯಲ್ಲಿ. ಆ ಬ್ಯಾಗ್ ಹಿಡಿದುಕೊಂಡು ನಾನು ಕಾಲೇಜಿಗೆ ಬರುವಾಗ, ಹೋಗುವಾಗ ನನ್ನ ವಾಕಿಂಗ್ ಸ್ಟೈಲ್ ಹೀಗೆ ಹಾಗೆ ಅಂತ ಒಂದಷ್ಟು ವಿದ್ಯಾರ್ಥಿಗಳು ನನ್ನ ಹಿಂದೆ ಆಡಿಕೊಂಡಿದ್ದು ಉಂಟು, ಅಂಥಹ ಸಂದರ್ಭಗಳಲ್ಲಿ ನಾನು ಕೋಪಿಸಿಕೊಳ್ಳದೆ ನಮ್ಮ ವಿದ್ಯಾರ್ಥಿಗಳಿಗೆ ಮತ್ತಷ್ಟು ಹಾಸ್ಯವನ್ನು ಸಹ ಉಣಬಡಿಸುತ್ತಿದ್ದೆ.

ಒಂದು ದಿನ ಹೀಗಾಯ್ತು ನೋಡಿ
ನಾನು ಬಸ್ಸಿನಿಂದ ಇಳಿಯುತ್ತಿದ್ದಂತೆ ಒಂದೆರಡು ಹೆಜ್ಜೆಗಳ ಅಂತರದಲ್ಲಿ ಸಂಜನ ಅಂತ ನಮ್ಮ ಕಾಲೇಜಿನ ಎರಡನೇ ಪಿ. ಯು. ಸಿ. ವಿದ್ಯಾರ್ಥಿನಿ ಸೈಕಲ್ ಮೇಲೆ ಹೋಗಿತ್ತಿದ್ದ ನನ್ನನ್ನು ನೋಡಿ ಗುಡ್ ಮಾರ್ನಿಂಗ್ ಸರ್ ಎಂದಳು ನಾನು ಸಹ ಆಕೆಗೆ ಪ್ರತಿಯುತ್ತರ ನೀಡಿದೆ. ಅವಳು ಸೈಕಲ್ ನಿಂದ ಇಳಿದು ನನ್ನೊಂದಿಗೆ ಮಾತನಾಡಿಕೊಂಡು ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದಾಗ

‘ಸಂಜನ ಪ್ರಿಪರೇಷನ್ ಜೋರಾ?’
‘ಏನೋ ತಕ್ಕ ಮಟ್ಟಕ್ಕೆ ಸಾರ್!’
‘ಹಾಗಂದರೇ ಸ್ಕೋರ್ ಮಾಡೋದು ಕಷ್ಟ ಅಲ್ಲವಾ’
‘ಇನ್ನು ಪೋರ್ಷನ್ ಕಂಪ್ಲೀಟ್ ಆಗಿಲ್ಲ ಸಾರ್’
‘ನೀನು ಅಡ್ವಾನ್ಸ್ ಆಗಿರಬೇಕು ಸಂಜನ’
‘ಕೆಲವು ಚಾಪ್ಟರ್ ಎಷ್ಟು ಓದಿದರು ಅರ್ಥ ಆಗೊಲ್ಲ ಸರ್’
‘ಹೌದಾ ಪ್ರಿನ್ಸಿ ಹತ್ರ ಸಜೆಷನ್ ತಗೋ’
ಅಷ್ಟರಲ್ಲೆ ಒಬ್ಬಾತ ಬೈಕ್ ನಮ್ಮ ಹತ್ತಿರ ತಂದು, ‘ಸಂಜನ ಯಾಕೆ ನಡೆದುಕೊಂಡು ಬರ್ತಿದ್ದೀಯ’ ಎಂದನು. ಮತ್ತೆ ನನ್ನ ನೋಡಿ ಮುಂದುವರೆಸಿದ

‘ಯಾರದು?’
‘ಏನ್ ಮಾತಾಡ್ತಾ ಇದ್ದಿ’
‘ಹತ್ತು ಸೈಕಲ್’
‘ಹುಂ ನಿನಗೆ ಹೇಳ್ತಿರೋದು’
‘ಹತ್ತು’

ಸಂಜನ ನನ್ನ ಕಡೆ ನೋಡ್ದೇನೆ ಸೈಕಲ್ ಹತ್ತಿ ಕಾಲೇಜ್ ದಾರಿ ಹಿಡಿದಳು. ಆತ ನನ್ನನ್ನು ಬೈಕ್ ರನ್ನಿಂಗ್ನಲ್ಲಿಟ್ಟುಕೊಂಡೆ ಮೂರು ಬಾರಿ ತಿರುಗಿ ತಿರುಗಿ ನೋಡಿದ ನಾನು ಏನು ಮಾಡೋಕೆ ಸಾಧ್ಯ ನಾನು ನೋಡ್ದೆ ನೋಡ್ತಾ ಇದ್ದಂಗೆ ಆತ ವೇಗವಾಗಿ ಹೊರಟು ಹೋದ!

ನನ್ನ ಬಗ್ಗೆ ಆತ ಅಪಾರ್ಥ ಮಾಡಿಕೊಂಡಿದ್ದಾನೆ ಎಂದು ನಾನು ಭಾವಿಸಿದೆ. ಸರಿ ಕಾಲೇಜಿನಲ್ಲಿ ಸಂಜನನ ಭೇಟಿ ಮಾಡಿ ಯಾರದು ಏಕೆ ಈ ರೀತಿಯಾಗಿ ನಿನಗೆ ರೇಗಿದ ಮುಂತಾದ ಪ್ರಶ್ನೆಗಳ ಉತ್ತರ ಪಡೆದುಕೊಳ್ಳುವ ಕೂತುಹಲ ನನಗೂ ಇದ್ದಿತು, ಇವೆಲ್ಲ ದೊಡ್ಡ ವಿಷಯ ಅಲ್ಲ. ನಾನೇಕೆ ತಲೆ ಕೆಡಸಿಕೊಳ್ಳಲಿ ಎಂದು ಕಾಲೇಜಿಗೆ ಹೋಗಿ ಬಂದೇ ಮೆಟ್ರಿಕ್ನಲ್ಲಿ ಅಟೆಂಡೆನ್ಸ್ ಹಾಕಿದೆ. ಪ್ರಿನ್ಸಿಯವರು ನನ್ನ ಕರೆದರು ಎಂದು ಅಟೆಂಡರ್ ಹೇಳಿದಾಗ ನಾನು ಪ್ರಿನ್ಸಿ ಛೇಂಬರ್ನತ್ತ ಹೆಜ್ಜೆ ಹಾಕಿದೆ.

ನನ್ನ ಮನಸ್ಸಿನಲ್ಲಿ ಏನೇನೋ ಅನುಮಾನಗಳು ಒಂದರ ಹಿಂದೆ ಒಂದು ಎಂಬಂತೆ ಗೊಂದಲ ಉಂಟು ಮಾಡಿದವು.
‘ಏನಾಯ್ತು’
‘ಆತ ನನ್ನ ಬಗ್ಗೆ ಪ್ರಿನ್ಸಿ ಹತ್ತಿರ ಕಂಪ್ಲೇಂಟ್ ಮಾಡಿರುವನೆ?
ಸಂಜನಗೂ ವಿಚಾರಣೆ ನಡೆದಿರಬಹುದೆ?’
ಯೋಚನೆ ಮಾಡಿಕೊಂಡು ಹೋಗುತ್ತಿದ್ದಂತೆ ಒಬ್ಬರು ಮೇಡಂ ‘ನಮಸ್ಕಾರ ಸರ್’ ಎಂದರು ನಾನು, ‘ಅಂ, ನಮಸ್ಕಾರ’ ಎಂದವನೆ ಹೊರಟೆ “ಯಾಕೆ ಸರ್ ಏನೋ ಟೆನ್ಷನ್ ನಲ್ಲಿರುವ ಹಾಗಿದೆ” ಎಂದರು,
ನಾನು “ಏನು ಇಲ”್ಲ ಎಂದೆ,
“ಸರ್ ಪ್ರಿನ್ಸಿಯವರನ್ನು ಅರ್ಜೆಂಟ್ ನೋಡಬೇಕಂತೆ” ಇನ್ನೊಬ್ಬ ಅಟೆಂಡರ್ ಹೇಳಿದಾಗ. . . . . . . .
ನನಗೆ ಮತ್ತೊಷ್ಟು ಗಾಬರಿಯಾಯ್ತು
“ಸರಿಯಪ್ಪ ಅಲ್ಲಿಗೇನೆ ಹೋಗ್ತಿರೋದು, ”
‘ಅಯ್ಯೋ ನನಗೇನಾಗಿದೆ?’
‘ಯಾಕಿದು ಗಾಬರಿ?’’
‘ಸರಿ ಹೋಗಿ ನೋಡೋಣ ಏನೇ ಆದರೂ ಧೈರ್ಯ ಮಾಡಿ ಹೋಗಿ ಭೇಟಿಯಾಗುವುದೊಂದೆ ದಾರಿ’ ಎಂದು ಮುನ್ನೆಡೆದೆ.

ಗುಡ್ ಮಾರ್ನಿಂಗ್ ಸರ್, ಎಂದೆ,
ವೆರಿ ಗುಡ್ ಮಾರ್ನಿಂಗ್ ಸರ್ ಎಂದ ಪ್ರಿನ್ಸಿ ಬ್ಯುಸಿ ಇದ್ರು
‘ಸರ್ ಈ ದಿನ ಬೇರೆ ಒಂದು ತಾಲ್ಲೋಕಿನಲ್ಲಿ ಆನ್ ಲೈನ್ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಕಾರ್ಯಗಾರ ಇದೆ, ಆಕ್ಚುಯಲಿ ನಾನು ಹೋಗಬೇಕು, ಆದರೆ ನಾನು ಆಡಳಿತ ಮಂಡಳಿಯವರ ಜತೆ ಒಂದು ಮೀಟಿಂಗ್ನಲ್ಲಿ ಭಾಗವಹಿಸಿ ಕಂಪ್ಯೂಟರ್ ಸೆಕ್ಷನ್ ಗೆ ಹೊಸ ಕಂಪ್ಯೂಟರ್ ಡೊನೇಟ್ ಮಾಡುವ ಕೆಲವು ವ್ಯಕ್ತಿಗಳಿಗೆ ಸಂಪೂರ್ಣ ಮಾಹಿತಿ ನೀಡಬೇಕಂತೆ ಅದರ ಸಿದ್ಧತೆಯಲ್ಲಿದ್ದೇನೆ ನೀವು ಕಾರ್ಯಗಾರನ ಗುಡ್ ಅಟೆಂಡೆನ್ಸ್ ಮಾಡಿ ಸರ್ ಪ್ಲೀಸ್’ ಎಂದರು ಪ್ರಿನ್ಸಿ

‘ಇನ್ನೇನಾದರು ಸರ್?’
‘ಏನಿಲ್ಲ ಕಾರ್ಯಗಾರದಲ್ಲಿ ಊಟದ ಕಾಫಿ ತಿಂಡಿಯ ವ್ಯವಸ್ಥೆ ಇರುತ್ತೆ
ನಮ್ಮ ಕಾಲೇಜಿನ ಸಂಪೂರ್ಣ ಮಾಹಿತಿ ಕ್ಲರ್ಕ ಹತ್ರ ಪಡೆದುಕೊಂಡು ಹೋಗಿ’ ಎಂದರು.
ಖರ್ಚಿಗೆ 500 ರೂಪಾಯಿ ತಗೆದುಕೊಂಡು ಹೋಗಿ ಎಂದರು.
ನನಗೆ ಸಮಾಧಾನ ವಾಯ್ತು.
ಸರಿ ಸರ್ ಎಂದು ಕಾರ್ಯಗಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆಕ್ಟ್ ಮಾಡಿ ಅಲ್ಲಿಂದ ಬಸ್ ಸ್ಟ್ಯಾಂಡ್ನಲ್ಲಿ ಬಸ್ ಹತ್ತಿ ಕಾರ್ಯಗಾರಕ್ಕೆ ತೆರಳಿದೆ.

ನನ್ನ ತಲೆಯಲ್ಲಿ ಸಂಜನಗೆ ರೇಗಿದ ವ್ಯಕ್ತಿ ಮುಖನೇ ಕಾಣ್ತಿತ್ತು, ಆತ ಮತ್ತೆ ಮತ್ತೆ ನನ್ನತ್ತ ನೋಡಿದ ನೋಟ ಅದರಲ್ಲಿ ಆತ ನನಗೆ ಡೈರೆಕ್ಟ್ ಆಗಿ ಏನೋ ವಾರ್ನಿಂಗ್ ಮಾಡಿದ ಹಾಗೆ ಅನಿಸುತ್ತಿತ್ತು, ಅದೇ ಟೆನ್ಷನ್ ಅವತ್ತು ಒಂದಷ್ಟು ಬೆವರು ನನಗರಿವಿಲ್ಲದ ಹರಿದು ಹೋಯ್ತು, ಇಡೀ ದಿನ ಕಾರ್ಯಗಾರ ಆನ್ ಲೈನ್ ನಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ನೀಡುವಂತೆ, ಸ್ಕಾಲರ್ ಶಿಪ್ ಜಾತಿವಾರು ಲಿಸ್ಟ್ ಮಾಡುವಂತೆ ಮತ್ತು Student Attendance, Lecturer Qualification, Date of Joining, Fee structure ಇವುಗಳ ಬಗ್ಗೆ D. D. P. I (PU)ರವರು ಮತ್ತು ಕೆಲವು ಅಧಿಕಾರಿಗಳು ಅನೇಕ ಮಾಹಿತಿಯನ್ನು ವಿಡಿಯೋ ಮೂಲಕ ತಿಳಿಸಿಕೊಟ್ರು.

ನನಗೆ ಗೊತ್ತಾದ ಮಟ್ಟಕ್ಕೆ ನಾನು ಒಂದಷ್ಟು ಪಾಯಿಂಟ್ಸ್ ಹಾಕಿಕೊಂಡು ಕಾರ್ಯಗಾರ ಮುಗಿಸಿ ವಾಪಾಸ್ಸು ಬರುವ ಹೊತ್ತು ಸಂಜೆ ಆರಾಗಿತ್ತು ನಾನು ಸೀದಾ ಮನೆಗೆ ಬಂದೆ, ಮನೆಗೆ ನಮ್ಮ ಅಕ್ಕ, ಭಾವ ಬಂದಿದ್ದರು. ಅವರೊಂದಿಗೆ ಮಾತನಾಡುತ್ತಾ ರಾತ್ರಿ ಊಟವಾಯ್ತು ನಿದ್ರೆಗೆ ಜಾರಿದೆ.

ಸುಮಾರು ಎರಡು ಘಂಟೆಯ ಸಮಯ ನನಗೆ ಎಚ್ಚರವಾಯ್ತು ಎದ್ದೆ ಮಲಗುವ ಮುನ್ನ ಹಾಲು ಕುಡಿದು ಮಲಗುವ ಅಭ್ಯಾಸ ನನಗೆ. ಆದರೆ ಅಂದು ರಾತ್ರಿ ಹಾಲು ಕುಡಿಯದೆ ಮಲಗಿದ್ದೆ, ಸರಿ ಹಾಲು ಕುಡಿಯುತ್ತ ಮಧ್ಯರಾತ್ರಿಯಲ್ಲಿ ಕುಳಿತಿದ್ದೆ.

ಈ ಸಂಜನನ ನೆನಪಾಯ್ತು . . . . . . !
ಹೌದಲ್ಲ ಏನಾಯ್ತು ಅಂತ ಗೊತ್ತಾಗಲೆ ಇಲ್ಲ.
ನಾಳೆ ವಿಚಾರಿಸೋಣ ಎಂದು ಮನಸ್ಸಿಗೆ ಸಮಾಧಾನ ಮಾಡಿ ಮಲಗಿದೆ. ನಿದ್ರೇನೆ ಬರ್ತಿಲ್ಲ! ಅಯ್ಯೋ ಇದಾವ ಮಹಾ ವಿಷಯ ನಾನೇಕೆ ತಲೆಕೆಡಸಿಕೊಳ್ಳಲಿ ಮಲಗೋಣ ಅಂತ ಮತ್ತೆ ಮಲಗಿದೆ. ನಿದ್ರೇ ಬಿಲ್ಕುಲ್ ಬರ್ತಿಲ್ಲ
ಒಳ್ಳೆ ಸಂಜನ ಅವಳು ಈವತ್ತು ಯಾಕಾದರೂ ಸಿಕ್ಕಿದಳೋ ಅದು ಆಕಸ್ಮಿಕ ಅಲ್ಲವೇ ಪಾಪ ಅವಳದೇನು ತಪ್ಪು
ಸರಿ ಹೊರಳಾಡಿ ಹೊರಳಾಡಿ ಮಲಗಿದ್ದೆ ಬೆಳಕಾಯ್ತು.

ಎಂದಿನಂತೆ ತಿಂಡಿ ತಿಂದು ಬ್ಯಾಗ್ ರೆಡಿ ಮಾಡಿಕೊಂಡು ಬಸ್ ಸ್ಟಾಪ್ಗೆ ಬಂದು ಬಸ್ ಹತ್ತಿದೆ. ಬಸ್ ಮುಂದೆ ಮುಂದೆ ಸಾಗ್ತಿತ್ತು ಒಂದೊಂದು ಹಳ್ಳಿ ಹಿಂದಕ್ಕೆ ಬಿಟ್ಟು ನಾವು ಮುಂದೆ ಹೋಗುತ್ತಿದ್ದರು, ಆತನ ನೋಟ ನೋಡಿದ ಬಗ್ಗೆ ಮತ್ತು ಏನು ಹೇಳದೆನೆ ಹೊರಟು ಹೋದ ಚಿತ್ರ ಕಣ್ಮುಂದೆ ಹಾದು ಹೋದ್ಹಂಗಾಯ್ತು ಇದೊಂದು ರೀತಿಯಲ್ಲಿ ನನಗೆ ಮನೋ ರೋಗ ದಂತಯೇ ಪರಿಣಾಮ ಬೀರಿತು. ಯೋಚನೆ ಮಾಡೋಕೆ ಏನಿದೆ?ಬ್ಯಾಗ್ನಲ್ಲಿ ಒಂದು ವಾರಪತ್ರಿಕೆ ಇತ್ತು ಅದನ್ನು ತಿರುವು ಹಾಕುತ್ತಾ ಪುಟಗಳಲ್ಲಿರುವ ಚಿತ್ರಗಳನ್ನು ವೀಕ್ಷಿಸುತ್ತಾ ಪ್ರಯಾಣ ಬೆಳಸಿದೆ.

ಬಸ್ ಸ್ಟಾಪ್ ಬರುತ್ತಿದ್ದಂತೆ ನನಗೆ ಏನೇನೋ ಚಿತ್ರಗಳು ನನ್ನ ಜನರೇಷನ್ನಂತೆ ಕಾಣಿಸಿಕೊಂಡವು.
ಆತನ ಈ ದಿನ ಇನ್ನಷ್ಟು ಜನರೊಂದಿಗೆ ಬಂದಿರಲು ಬಹುದೆ?
ನನಗಿಂತ ಮುಂಚೆ ಬಂದು ನನ್ನ ಭೇಟಿ ಮಾಡಿ ಜಗಳವಾಡಬಹುದೆ?
ತಾಳ್ಮೆಯಿಂದ ಕೇಳುವುದಾದರೇ ನಡೆದ ಸಂಗತಿ ನಾನಂತು ವಿವರಿಸಬಲ್ಲೆ!
ಆದರೆ ಆದರೆ ಏನು ಮಾಡೋದು?

ಸರಿ ಐಡಿಯಾ ಬಂತು, ಮುಂದಿನ ಸ್ಟಾಪ್ನಲ್ಲಿ ಇಳಿದು ಕೊಂಡು ಸ್ವಲ್ಪ ದೂರವಾದರೂ ಸರಿಯೇ ಆಟೋ ಮಾಡಿಕೊಂಡು ಸೀದಾ ಕಾಲೇಜಿಗೆ ಹೋಗೊದು ಸರಿ, ಈ ಐಡಿಯ ಸರಿಯಾಗಿದೆ ಈ ಲೆಕ್ಕಚಾರ ಹಾಕಿ ಹಾಗೆ ಮಾಡಿ ಕಾಲೇಜಿಗೆ ಹೋದೆ. ಇವತ್ತು ಅವಳು ಬಂದೆ ಇಲ್ಲ ಎಲ್ಲಾ ಪಿರಿಯಡ್ಸ್ನಲ್ಲಿ ಅವಳ ತರಗತಿಗೆ ಹೋಗಿ ಯಾರಿಗೂ ಅನುಮಾನ ಬರದಂತೆ ನೋಡಿ ಬರುತ್ತಿದ್ದೆ, ನನಗೆ ಈಗ ನಿಜವಾಗಿಯೂ ಟೆನ್ಷನ್ ಆಗಿತ್ತು ಸರಿ ಮಧ್ಯಾಹ್ನ ಹಾಫ್ ಡೇ ಸಿಎಲ್ ಹಾಕಿ ಮನೆಗೆ ಹೋಗೋದಾ ನಾನೊಬ್ಬನೆ ಇದ್ರೆ ಈ ಟೆನ್ಷನ್ ನನ್ನನ್ನು ಕವರ್ ಅಪ್ ಮಾಡಿಬಿಡುತ್ತಾ ಬೇಡಪ್ಪ ಇಲ್ಲೆ ಇದ್ರೆ ಏನಾದರೂ ಅವಳ ಬಗ್ಗೆ ಸುಳಿವು ಸಿಕ್ಕರು ಸಿಗಬಹುದು, ಈಗ ನಾನು ಪತ್ತೆದಾರಿಕೆ ಮಾಡ್ತಾ ದಿನ ಕಳೆದೆ ಕಾಲೇಜ್ ಬಿಡ್ತು ನಾನು ಬಸ್ ಹತ್ತಿ ಮನೆಗೆ ಬಂದೆ.

ಏನ್ರೀ ಹುಷಾರಿಲ್ಲವ ಅಂತ ನನ್ನಾಕೆ ಕೇಳಿದಾಗ ನಾನು ಅವಳನ್ನು ಅನುಮಾನವಾಗಿಯೇ ನೋಡಿದೆ. ಇಲ್ಲ ಹಾಗೇನಿಲ್ಲ ಓಕೆ ಎಂದೆ, ಟೀ ಕುಡಿಯುತ್ತ ನಡೆದ ವಿಷಯ ನನ್ನಾಕೆಗೆ ಹೇಳಿ ಮನಸ್ಸು ಸ್ವಲ್ಪ ಹಗುರ ಮಾಡಿಕೊಂಡೆ. ನೀವು ನಡೆದ ವಿಷಯ ನನಗಲ್ಲ ಹೇಳಬೇಕಾದುದ್ದು ನಿಮ್ಮ ಪ್ರಿನ್ಸಿಪಾಲರಿಗೆ ಎಂದಳು ಸರಿ ಸ್ವಲ್ಪ ಧೈರ್ಯ ಬಂತು ಹೌದಲ್ಲ ಹೇಳಿ ನೋಡೋಣ ಈ ಸನ್ನಿವೇಷಕ್ಕೆ ಮುಕ್ತಿ ಸಿಗಬಹುದಾ ಟ್ರೈ ಮಾಡೋಣ. ತಾಳಿದವನು ಬಾಳಿಯಾನು ಎಂಬ ಮಾತಿದೆ, ಅದರಂತೆ ದುಡುಕಿ, ಇಲ್ಲದ ಅನಾಹುತಕ್ಕೆ ಕಾರಣ ವಾಗಬಾರದು.

ಸ್ವಲ್ಪ ರಿಲಾಕ್ಸ್ ಸಿಗ್ತು ಊಟ ಮಾಡಿ ಹಾಲು ಕುಡಿದು ಮಲಗಿದೆ,
ನಿದ್ರೇನು ಹತ್ತಿತ್ತು,
ಮತ್ತದೆ ಮುಂದಿನ ಸ್ಟಾಪ್ನಲ್ಲಿ ಇಳಿದು ಆಟೋದಲ್ಲಿ ಬರುತ್ತಿರುವಾಗ ಕಾಲೇಜಿನ ಗೇಟ್ ಬಳಿ ಈತನ ನಿಂತಿದ್ದಾನೆ, ಆಟೋ ಅವನ ಮುಂದೆಯೇ ನಿಲ್ಲಿಸಿದ ನಾನು ಇಳಿದೆ, ಅಷ್ಟರಲ್ಲೆ ಸರ್ ಸರ್ ಎಂದ
ನಾನು ಗಾಬರಿಯಾಗಿದ್ದೆ ಅಂ, ಏನು ಹೇಳಿ ಎಂದೆ,
ನಾನು ನಿಮ್ಮ ಬಗ್ಗೆ ತಪ್ಪಾಗಿ ತಿಳುಕೊಂಡಿದ್ದೆ ಅದೇ ಮೊನ್ನೆ ನನ್ನ ಮಗಳು ನಿಮ್ಮ ಜತೆಲಿ . . . . . . ಹೋಗಲಿ ಬಿಡಿ ಎಂದೆ,
ದಯವಿಟ್ಟು ನನ್ನನ್ನು ಕ್ಷಮಿಸಿ ಸರ್ ಎಂದು ಕೈ ಹಿಡಿದುಕೊಂಡ,
ಏನಿದು ನಾನು ನೋಡ್ತಿರೋದು, ನಡಿತಾ ಇರೋದು, ಎಲ್ಲವು ಸಿನಿಮಯ ರೀತಿಯಲ್ಲಿ ಕಾಣಿಸಿತು, ಸರಿ ಸರ್ ಪರವಾಗಿಲ್ಲ ಬಿಡಿ. ತಾಳಿದವನು ಬಾಳಿಯಾನು ಎಂಬ ಮಾತಿದೆ, ಅದರಂತೆ ದುಡುಕಿ, ಇಲ್ಲದ ಅನಾಹುತಕ್ಕೆ ಕಾರಣ ವಾಗಬಾರದು.

ನಿಮ್ಮ ಬಗ್ಗೆ ನಾನು ಸಂಜನಳಿಗೆ ಕೇಳಿದಾಗ ನಿಮ್ಮ ಬಗ್ಗೆ ಹೇಳಿದಳು, ನಾನು ನಿನ್ನೆ ಸಹ ನಿಮ್ಮ ಬಸ್ ಸ್ಟಾಪ್ನಲ್ಲಿ ನಿಮ್ಮ ಬರುವಿಕೆಗಾಗಿ ಕಾದೆ. ನೀವು ಬರಲೇ ಇಲ್ಲ, ಇವತ್ತು ಸಹ ನೋಡಿದೆ ಸರಿ ಕಾಲೇಜ್ ಹತ್ರನೇ ಸಿಗಬಹುದು ಎಂದುಕೊಂಡು ಇಲ್ಲಿಗೆ ಬಂದೆ, I am Very sorry sir, ಎಂದಾಗ! ನನ್ನ ಮೇಲೆ ಅನುಮಾನವಾಗಿ ತಿರುಗಿ ತಿರುಗಿ ನೋಡಿದ ವ್ಯಕ್ತಿನಾ ಎಂದುಕೊಂಡು ನಿಟ್ಟುಸಿರು ಬಿಟ್ಟೆ. ಸಂಜನ ಕೂಡ sorry ಕೇಳಿದಳು Itʼs ok. Study well score more. . ಎಂದು ಹೇಳಿ ಕಳುಹಿಸಿದೆ.

-ಹೆಚ್. ಷೌಕತ್ ಆಲಿ, ಮದ್ದೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x