ಚಿತ್ರದಲ್ಲಿ : ಹೊಂಗೆ ಮರದ ಕೃತಿ ಲೋಕಾರ್ಪಣೆ ಮಾಡಿದ, ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ) ಯವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲರವರು, 3K ಬಳಗದ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್ ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು.
ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಸಕ್ರಿಯವಾಗಿರುವ ಹಾಗು ಅಪಾರ ಕನ್ನಡ ಭಾಷಾಭಿಮಾನದ ಸಮಾನ ಮನಸ್ಕರಿಂದ ಕೂಡಿರುವ 3K – ಕನ್ನಡ ಕವಿತೆ ಕಥನ ಬಳಗದ ಮೂರನೇ ಪ್ರಸ್ತುತಿ "ಹೊಂಗೆ ಮರದಡಿ – ನಮ್ಮ ನಿಮ್ಮ ಕತೆಗಳು" ಎಂಬ 26 ಕತೆಗಳನ್ನುಳ್ಳ ಕಥಾಸಂಕಲನವನ್ನು ಲೇಖಕ ಹಾಗು ಕತೆಗಾರ, ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ) ರವರು ಲೋಕಾರ್ಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ಈ ಸಮಾರಂಭದಲ್ಲಿ ಲೇಖಕರಾದ ಶ್ರೀ ಮಂಜುನಾಥ ಕೊಳ್ಳೇಗಾಲರವರು ಅಧ್ಯಕ್ಷತೆ ವಹಿಸಿದ್ದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ, ಶ್ರೀ ಜೋಗಿಯವರು 3K ತಂಡದ ಕನ್ನಡ ಕಾಳಜಿ ಮತ್ತು ಪ್ರೀತಿಯನ್ನು ಮೆಚ್ಚಿದ್ದಲ್ಲದೆ, 26 ಉದಯೋನ್ಮುಖ ಕತೆಗಾರರಿಗೆ ವೇದಿಕೆ ಕಲ್ಪಿಸಿದಕ್ಕೆ ಶ್ಲಾಘಿಸಿದರು. ನಂತರದಲ್ಲಿ ಕತೆಗಾರರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, "ಬರವಣಿಗೆ ಎನ್ನುವುದು ಜೀವನ್ಮರಣದ ಪ್ರಶ್ನೆಯಾಗಬೇಕು. ಜೀವನದ ಸಂಕಟಗಳು, ತುಮುಲಗಳು, ಸಾಮಾಜಿಕ ಸ್ಥಿತ್ಯಂತರ ಮುಖ್ಯವಾಗಬೇಕು"ಎಂದು ಸಲಹೆ ನೀಡಿದರು. ಕನ್ನಡದಲ್ಲಿ ಸಣ್ಣ ಕತೆಗಳು ಕಣ್ಮರೆಯಾಗುತಿರುವ ಕಾಲದಲ್ಲಿ 3K ತಂಡದ ಈ ಪ್ರಯತ್ನ ಹೊಸ ಬರವಸೆ ಮೂಡಿಸಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಲೇಖಕ, ಶ್ರೀ ಮಂಜುನಾಥ ಕೊಳ್ಳೇಗಾಲರವರು ಮಾತನಾಡಿ ಕನ್ನಡ ಪ್ರೇಮದ ತಂಡವೊಂದರ ಭಾಗಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಕತೆಗಳ ಆಯ್ಕೆಯಲ್ಲಿ ಎದುರಾದ ಸವಾಲುಗಳನ್ನು ತಿಳಿಸಿದರು. ಆಯ್ಕೆಯಾದ 26 ಕತೆಗಾರರಿಗೆ ಅಭಿನಂದಿಸುತ್ತಾ, ಸಮಾಜವನ್ನು ಪ್ರತಿಬಿಂಬಿಸುವಲ್ಲಿ ಕತೆಗಳ ಪಾತ್ರ ಪ್ರಮುಖವೆಂದರು.
ಈ ಸಂದರ್ಭದಲ್ಲಿ, 3K ಬಳಗದ ಅಧ್ಯಕ್ಷೆ, ಶ್ರೀಮತಿ ರೂಪ ಸತೀಶ್ ಮಾತನಾಡಿ, ತಮ್ಮ ಬಳಗದ ಕಾರ್ಯಗಳಿಗೆ ಸಹಕರಿಸುತ್ತಿರುವ ಎಲ್ಲಾ ಸದಸ್ಯರಿಗೂ ಧನ್ಯವಾದ ಸಲ್ಲಿಸುತ್ತಾ, ಹೊಂಗೆ ಮರದಡಿ ಕತೆಗಳನ್ನ ಹಂಚಿಕೊಂಡ ಕತೆಗಾರರೆಲ್ಲರಿಗೂ ಸನ್ಮಾನಿಸಿ ಗೌರವಿಸಿದರು.
3K – 2015ನೇ ಸಾಲಿನ ರಾಜ್ಯೋತ್ಸವ ಸನ್ಮಾನವನ್ನು ಗೌರವಾನ್ವಿತ ಶ್ರೀಮತಿ ಹರಿಣಿ G N T ರವರಿಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ, ರಾಜ್ಯೋತ್ಸವ ಪ್ರಯುಕ್ತ 3K ಆಯೋಜಿಸಿದ್ದ ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ನಿರೂಪಣೆ ಸೂರತ್ಕಲ್ನ, ಶ್ರೀ ಮಹೇಶ್ ಮೂರ್ತಿ ನಡೆಸಿಕೊಟ್ಟರು.
ಬಿಡುಗಡೆಯಾದ ಹೊಂಗೆ ಮರದ ಕೃತಿ, ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಹಾಗು ಆನ್-ಲೈನ್ ನಲ್ಲಿ ಲಭ್ಯವಿರುತ್ತದೆ.
ಒಳ್ಳೆಯ ವಿವರಣೆ 🙂 ಕಾರ್ಯಕ್ರಮಕ್ಕೆ ಭೇಟಿ ಕೊಟ್ಟಿದ್ದಕ್ಕೆ, ಆ ವರದಿಯನ್ನು ಪಂಜುವಿನಲ್ಲಿ ಓದುತ್ತಿರೋದಕ್ಕೆ ಖುಷಿಯಾಗುತ್ತಿದೆ 🙂 online ನ ಗುಂಪೊಂದರ offline ಕಾರ್ಯಕ್ರಮ ಮತ್ತೊಂದು online ಪತ್ರಿಕೆಯಲ್ಲಿ ವರದಿಯಾಗಿ ಪ್ರಕಟವಾಗಿರುವುದನ್ನು ಓದೋಕೆ ನಿಜವಾಗ್ಲೂ ಖುಷಿಯಾಗುತ್ತೆ 🙂 ಜನ ಜನರ ನಡುವಿನ ಇಂತಹಾ ಕೊಡುಕೊಳ್ಳುವಿಕೆ, ಪ್ರೋತ್ಸಾಹವೇ ನಮ್ಮ ನಡುವಿನ ಸಾಹಿತ್ಯಕ್ಕೆ ಉಸಿರಾಗುತ್ತಿದೆ ಅನಿಸುತ್ತೆ.
ಉತ್ತಮ ಕಾರ್ಯಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ…ಕಥಾ ಸಂಕಲನವೂ ಚೆನ್ನಾಗಿ ಮೂಡಿ ಬಂದಿದೆ…ರೂಪ ರೂಪಿಸಿದ ೩ಕೆ ತಂಡ ಅಭಿನಂದನಾರ್ಹ….ಮುಂದುವರಿಯಲಿ ಈ ಪಯಣ…..ವರದಿಯೂ ಸೊಗಸಾಗಿದೆ…
Arehole Sir 🙂
Mangaloorininda 3K karyakramakkende thaavu bandiddu, karyakramavanna innashtu chendagolisitu. Tamagoo saha balagada paravaagi hruthpoorvaka dhanyavaada 🙂
prashasthi 🙂 dhanyavaada prashasti ishtu chennnaagi kaaryakramada varadi needideeri. nimmellara protsaaha abhimaanave 3K 🙂