ನಿಖಿಲ್
೩ ನೇ ತರಗತಿ
ಜಿ ಪಿ ಎಚ್ ಎಸ್
ನಂಜೈಗರಹಳ್ಳಿ
ಕಿಟ್ಟು ಪುಟ್ಟು
ಕಿಟ್ಟು ಪುಟ್ಟು ಇಬ್ಬರು
ತುಂಬಾ ಒಳ್ಳೆ ಗೆಳೆಯರು
ಅಕ್ಕ-ಪಕ್ಕದ ಮನೆಯ ಹುಡುಗರು
ಒಂದೇ ಊರು ಒಂದೇ ಶಾಲೆ
ಅಣ್ಣ-ತಮ್ಮನಂತೆ ಇವರು
ತುಂಬಾ ಒಳ್ಳೇ ಹುಡುಗರು
ಕಿಟ್ಟು ಅಮ್ಮ ತಿಂಡಿ ಕೊಡಲು
ಪುಟ್ಟು ಜೊತೆಗೆ ಹಂಚಿ ತಿನುವ
ಪುಟ್ಟು ಕೂಡ ಅಪ್ಪ ತರುವ
ಪೇಟೆ ತಿಂಡಿ ಹಂಚಿ ತಿನುವ
ಕಿಟ್ಟು ಜೊತೆಯಲೇ..
ಜೊತೆಗೆ ಆಟ ಜೊತೆಗೆ ಪಾಠ
ಜಗಳವಿಲ್ಲ ಮುನಿಸು ಇಲ್ಲ
ಓದಿನಲ್ಲೂ ಮುಂದು ಇವರು
ತುಂಬಾ ಒಳ್ಳೆ ಹುಡುಗರು
ಕೇಳಿ ಜಾಣ ಮಕ್ಕಳೇ
ನೀವು ಅವರ ಹಾಗೆಯೇ
ಗೆಳೆಯರಾಗಿ ಬಾಳಿರಿ
ತುಂಬಾ ಒಳ್ಳೇತನದಲಿ.
-ನವೀನ್ ಮಧುಗಿರಿ
🙂 Good one naveen!
nice
nice….