ಶಾಲೆಯಲ್ಲಿ ಮಕ್ಕಳಿದ್ದಾರೆ ಹುಷಾರ್: ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.

ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ. ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಆಗಲು ಬಿಡುವುದು ಅಪಾಯಕಾರಿ. ಏಕೆಂದರೆ ನಾವೆಲ್ಲಾ ಈಗ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಅಡಿಯಲ್ಲಿ ಇದ್ದೇವೆ. 

ಮರೆಯದಿರಿ ನಮ್ಮ ಮಕ್ಕಳ ಮುಂದೆ ಮಾತಾಡುವ ಸಮಯದಲ್ಲಿ ಹುಷಾರಾಗಿರಿ ಈಗ ನಮ್ಮ ಮಕ್ಕಳಿಗೂ ಒಂದು ಕಾನೂನು ಇದ್ದು ಅದು ಎಲ್ಲರ ಗಮನ ಸೆಳೆದಿದೆ. ಅದರ ಹಿನ್ನಲೆಯಲ್ಲಿ ನಾವೆಲ್ಲ ವಿಚಾರಿಸಬೇಕಾದ ಅಗತ್ಯವಿದೆ. ಈ ಕಾನೂನಿನ ಪ್ರಕಾರ ಮಕ್ಕಳಿಗೆ ಶಿಕ್ಷಿಸುವಂತಿಲ್ಲ, ದಂಡಿಸುವಂತಿಲ್ಲ, ವಾರೆ ಗಣ್ಣಿನಿಂದ ನೋಡುವಂತಿಲ್ಲ, ಯಾವುದೇ ಮಗುವಿಗೆ ಹೆದರಿಸಿ ಮಾತಾಡುವಂತಿಲ್ಲ. 

ಅದರ ಪರಿಣಾಮವಾಗಿ  ನಾವು ನಮ್ಮ ಭವಿಷ್ಯವನ್ನು ಉಳಿಸಿಕೊಳ್ಳುವ ಹಾದಿ ಈಗ ಸುಗಮವಾಗಿದೆ. ನಮ್ಮ ಮಕ್ಕಳಿಗೆ ನಾವೆಲ್ಲ ಬರಿ ಪ್ರೀತಿ ಕೊಟ್ಟರೆ ಸಾಲದು. ಅವರ ಹಕ್ಕುಗಳು ಕೊಡುವುದು ಅಷ್ಟೆ ಅವಶ್ಯಕತೆಯ ಕೆಲಸವಾಗಿದೆ. ಅವರಿಗೆ ಅನುಕಂಪದ ಅವಶ್ಯಕತೆಯ ಜೊತೆಗೆ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಈ ಕಾನೂನು ಸಾಹಾಯ ಮಾಡುತ್ತದೆ. ಯಾರೇ ಇರಲಿ ಮಕ್ಕಳನ್ನು ಒಬ್ಬ ವ್ಯಕ್ತಿಯಾಗಿ ಮಾನವ ಕುಲದ ಶಕ್ತಿಯಾಗಿ ಇಂದು ಮಕ್ಕಳನ್ನು ನಾವು ನೋಡಬೇಕಿದೆ. 

ಅದರ ಹಿನ್ನಲೆಯಲ್ಲಿ ನಾವೆಲ್ಲಾ ಈ ಕಾನೂನು ನಮ್ಮ ಮಕ್ಕಳನ್ನು ರಕ್ಷಿಸುವ ಒಂದು ಬಲವಾದ ಅಸ್ತ್ರವಾಗಿದೆ. ಆದರೆ ಅದನ್ನು ಕೆಲವು ಜನ ತಪ್ಪಾಗಿ ಅರ್ಥಮಾಡಿಕೊಂಡು ಮಕ್ಕಳಿಗೆ ಬುದ್ದಿವಾದ ವಿದ್ಯೆ ಕಲಿಸುವ ಪರಿಪಾಠವನ್ನು ಬಿಡುತ್ತಿದ್ದಾರೆ. ಜೊತೆಗೆ ಕುಂಟು ನೆಪ ಹೇಳಿ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. 

ನಮಗೆ ಕಾನೂನು ಇರುವುದು ಇನ್ನೊಬ್ಬರ ಉದ್ಧಾರಕ್ಕಾಗಿಯೆ ಹೊರತು ಅವರ ಅವಹೇಳನ ಮಾಡಿ ಅವರ ಹಕ್ಕಿನ ಜೊತೆಗೆ ಅವರ ಬದುಕು ಕಸಿದುಕೊಳ್ಳಲು ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಈ ಕಾನೂನು ಎಲ್ಲರಿಗೂ ಅನ್ವಯಸುತ್ತದೆ. ಮಕ್ಕಳೊಂದಿಗೆ ಕೆಲಸ ಮಾಡುವ ಮಕ್ಕಳನ್ನು ಹೆರುವ ಪ್ರತಿಯೊಬ್ಬರಿಗೂ  ಈ ಕಾನೂನು ಅನ್ವಯಸುತ್ತದೆ.

ಮೊನ್ನೆ ಶಾಲೆಯೊಂದರಲ್ಲಿ ಮನೆಗೆಲಸ ಮಾಡಿಲ್ಲ ಎಂದು ಮಗುವನ್ನು ಶಿಕ್ಷಿಸಿದ  ಶಿಕ್ಷಕಿಗೆ ಆದ ಗತಿ ಎಲ್ಲರಿಗೂ ಗೊತ್ತೆ ಇದೆ. ಆದರೆ ಅದರ ತಾತ್ಪರ್ಯ ಇಷ್ಟೆ ನಮ್ಮ ಮಕ್ಕಳನ್ನು ಕಾಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದರ ಫಲ ನಾವೆಲ್ಲ ಪಡೆಯಬೇಕು ಎನ್ನುವುದು ಅದರ ಆಶಯವಾಗಿದೆ.  ನಮ್ಮ ಮಕ್ಕಳಿಗಾಗಿ ನಾವು ಸಾವಿರಾರು ಎಕರೆ ಜಮೀನು ಮಾಡುವುದು ಆಸ್ತಿ ಪಾಸ್ತಿ ಮಾಡುವುದು ಬೇಡ. ನಾವು ನಮ್ಮ ಮಕ್ಕಳನ್ನು ಉತ್ತಮವಾಗಿ ಶಾಲೆಗೆ ಕಳುಹಿಸಿ ಕಳುಹಿಸಿದ ಮಕ್ಕಳನ್ನು ಸರಿಯಾಗಿ ಕಲಿಸಿ ಅವರನ್ನೇ ಆಸ್ತಿಯಾಗಿ ಮಾಡೋಣ.  

ನಮ್ಮ ಪ್ರೀತಿಯ ಮಕ್ಕಳನ್ನು ನಾವೆಲ್ಲ ಪ್ರೀತಿಯಿಂದ ಗೆಲ್ಲೋಣ. ಅವರ ಆಸೆ ಆಕಾಂಕ್ಷೆಯನ್ನು ಈಡೇರಿಸಲು ಪ್ರಯತ್ನಿಸೋಣ. ಅವರತ್ತ ನಮ್ಮ ಚಿತ್ತ ಹರಿಸೋಣ. ಅವರ ಬದುಕು ಹಸನಾಗಿಸಲು ನಾವೆಲ್ಲ ಶ್ರಮಿಸೋಣ. ಏಕೆಂದರೆ ಅವರೆ ನಮ್ಮ ಮಕ್ಕಳು ಮುಂದಿನ ಭವಿಷ್ಯದ ಬದುಕಲ್ಲವೆ.

ಈ ಕಾನೂನು ನಮ್ಮ ದೇಶದ ಜಮ್ಮು ಕಾಶ್ಮೀರ ಹೊರತುಪಡೆಸಿ ಉಳಿದ ಎಲ್ಲಾ ರಾಜ್ಯಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆ . ಈ ಕಾನೂನಿನಲ್ಲಿ ಪಾಲಕರ ಸ್ಪಷ್ಟ ಜವಾಬ್ದಾರಿಗಳನ್ನು ತಿಳಿಸಲಾಗಿದೆ. ಪ್ರತಿಯೊಬ್ಬರು ತಮ್ಮ ಕೆಲಸದ ಕರ್ತವ್ಯದ ಬಾಗವನ್ನು ಈ ಕಾನೂನು ಒತ್ತಿ ಹೇಳುತ್ತದೆ. 

ಈ ಕಾನೂನಿನ ಅನ್ವಯ ಖಾಸಗಿ ಶಾಲೆಗಳು ದುರ್ಬಲ ವರ್ಗದ ಮಕ್ಕಳಿಗೆ ವಿಶೇಷ ಮೀಸಲಾತಿಯನ್ನು ನೀಡಬೇಕು ಅವರಿಗಾಗಿಯೇ ಶೇಕಡಾ 25 ರಷ್ಟು ಸ್ಥಾನಗಳನ್ನು ಕೊಡಬೇಕು ಎಂದು ಸ್ಪಷ್ಟವಾದ ಉಲ್ಲೇಖ ನೀಡುತ್ತದೆ. ಈ ಉಲ್ಲೇಖದಿಂದ ಶಿಕ್ಷಣ ಶ್ರೀಮಂತರ ಸ್ವತ್ತು ಅಲ್ಲ ಇದು ಸಮಾನತೆಯನ್ನು ಎತ್ತಿ ತೋರಿಸುತ್ತದೆ. ಸಾರ್ವಜನಿಕ ವಲಯದಲ್ಲಿ ಈ ಕಾನೂನು ಈಗ ತುಂಬಾ ಚರ್ಚೆಗೆ ಈಡಾಗುತ್ತಿದ್ದೆ. 

ಮಗು ತನಗೆ ಬೇಕಾದಾಗ ಶಾಲೆಗೆ ಸೇರಿಸಿಕೊಳ್ಳುವ ಹಾಗೂ ಬೇರೆ ಶಾಲೆಗೆ ವರ್ಗಾವಣೆ ಹೊಂದುವ ಹಕ್ಕು ಈ ಕಾನೂನು ಎತ್ತಿ ಹಿಡಿದಿದೆ. ಈ ಕಾನೂನಿನ ಅನ್ವಯ ಮಕ್ಕಳಿಗೆ ಎಲೆಮೆಂಟರಿ ಶಿಕ್ಷಣ ಮುಗಿಯುವ ತನಕ ನಪಾಸು ಮಾಡುವಂತಿಲ್ಲ. ಅವನ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನೆಯನ್ನು ಒತ್ತಿ ಹೇಳುತ್ತದೆ. ಆಟದ ಮೂಲಕ ಚಟುವಟಿಕೆಯ ಮೂಲಕ ಕಲಿಕೆಯನ್ನು ಶುದ್ಧಗೊಳಿಸಿ ಅವನ ಬದುಕಿನ ಶಿಕ್ಷಣ ನೀಡಬೇಕು ಎಂದು ಈ ಕಾನೂನು ತಿಳಿಸುತ್ತದೆ. 

ಈ ಕಾನೂನಿನ ನಿಯಮದ ಪ್ರಕಾರ ಶಾಲೆಗಳ ಶಿಕ್ಷಕರ ಮತ್ತು ಮಕ್ಕಳ ಅನುಪಾತ 25 ಮಕ್ಕಳಿಗೆ ಒಬ್ಬ ಶಿಕ್ಷಕ ಬೋದಿಸಬೇಕು,  ತರಗತಿವಾರು, ವಿಷಯವಾರು ಶಿಕ್ಷಕರು, ಸೂಕ್ತ ತರಗತಿ ಕೋಣೆ ಇರಬೇಕು ಎಂದು ಹೇಳುತ್ತದೆ. ಆದರೆ ವಿಪರ್ಯಾಸವೆಂದರೆ ಸರ್ಕಾರವೆ ಇದಕ್ಕೆ ತಕ್ಕುದಾಗಿ ನಡೆಯುತ್ತಿಲ್ಲ. ಅದಕ್ಕಾಗಿಯೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಬದುಕು ಸರ್ಕಾರವೆ ಕೊಲ್ಲುತ್ತಿದೆ ಎಂದು ಕೆಲವೊಮ್ಮೆ ಅನಿಸುತ್ತದೆ. 

ಬುದ್ಧಿವಂತರಾದ ಶಿಕ್ಷಕರು, ಪಾಲಕರು, ಸಮುದಾಯ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಈ ಕಾನೂನನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಮಕ್ಕಳ ಭವಿಷ್ಯ ದೃಷ್ಠಿಯಿಂದ ಅವರನ್ನು ಉತ್ತಮ ನಾಗರಿಕರನ್ನಾಗಿ ಬೆಳಿಸುವ ದೃಷ್ಠಿಯಿಂದ ಅವರ ಉತ್ತಮ ಬದುಕಿಗೆ ನಾವೆಲ್ಲ ಸಾಕ್ಷಿಯಾಗಲು ಉತ್ತಮ ಮತ್ತು ಗುಣಾತ್ಮಕ ಶಿಕ್ಷಣ ನೀಡಬೇಕಾಗಿದೆ ಈ ಕಾನೂನು ಸರಿಯಾಗಿ ಅನುಷ್ಠಾನಗೊಳಿಸಬೇಕಿದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Anil
Anil
10 years ago

ಆತ್ಮಿಯ ವಿಶ್ವ ಲೇಖನ ಚೆನ್ನಾಗಿದೆ ನಾವೆಲ್ಲರು ಮಕ್ಕಳಿಗೆ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಈಗ ಬಂದಿರುವ ಆರ್ ಟಿ ಈ ಬಗ್ಗೆ ನಮಗೆ ಜ್ಞಾನವಿರಬೇಕು ನಿಮ್ಮ ಲೇಖನಕ್ಕೆ ನನ್ನ ಸಮ್ಮತಿ ಇದೆ ಉತ್ತಮ 

Santhoshkumar LM
10 years ago

ಚಿಂತನಾತ್ಮಕ ಬರಹ. ಕೊಂಚ ಅಲ್ಲಲ್ಲಿ ವ್ಯಾಕರಣ ದೋಷಗಳಿವೆ. ದಯವಿಟ್ಟು ಪ್ರಕಟಿಸುವ ಮುನ್ನ ಮೂರ್ನಾಲ್ಕು ಬಾರಿ ಓದಿ ನಂತರವೇ ಪ್ರಕಟಿಸಿ ಎಂಬ ಪ್ರೀತಿಯ ಮಾತಿನೊಂದಿಗೆ….

Ashok
Ashok
10 years ago

ಈ ಲೇಖನದ ವಿಷಯ ಅರ್ಥಗರ್ಭಿತವಾಗಿದೆ. ಸಮಾಜದ ಹಲವು ಕಾನೂನುಗಳು ಯಾವುದೆ ಲಗ್ಗೆಯಿಲ್ಲದೆ ಓಡುತ್ತಿವೆ ಉತ್ತಮ ವಿಷಯದ ಲೇಖನ 
ನನಗೆ ಕಂಡಂತೆ ಕಾನೂನು ಬಿಟ್ಟರೆ ಎಲ್ಲಿ ತಪ್ಪಿಲ್ಲಾ ಅನಿಸುತ್ತದೆ ಎಲ್.ಎಂ. ರವರು ತಪ್ಪು ತಿಳಿಸಿದರೆ ಸೂಕ್ತ ಅನಿಸುತ್ತೆ ಬಟ್ ಗುಡ್ ಅಬ್ ಜರವೇಷನ್ ಎಲ್.ಎಂ. 

niharika
niharika
10 years ago

ಬಹಳಷ್ಟು ಅಕ್ಷರದೋಷಗಳಿವೆ. ಚಿನ್ಹೆಗಳು ನಾಪತ್ತೆಯಾಗಿವೆ. ಓದಲು ಕಷ್ಟವಾಗುತ್ತಿದೆ. ಪಂಜು ಆಸಕ್ತಿ ಕಳೆದುಕೊಳ್ಳುತ್ತಿದೆ.. 🙁 🙁

Vasudeva Sharma
Vasudeva Sharma
10 years ago

Good attempt. Keep on writing and take responses and criticism to improve your writings. 

ಮಡಿವಾಳ
ಮಡಿವಾಳ
10 years ago

Dear Vishwa sir
ur words are very true this is very helpfull for our teachers there is no mistake take it easy 

Mahes
Mahes
10 years ago

very nice sir this shows ur interest towords children 

Bhagya bangalore
Bhagya bangalore
10 years ago

Dear Sir
Now ur growing ur article is very good i like it see u 

ಅಶೋಕ
ಅಶೋಕ
10 years ago

ವಿಶ್ವ ರವರೆ ಈ ಲೇಖನದಲ್ಲಿ ನಿಮಗೆ  ಮಕ್ಕಳ ಬಗ್ಗೆ ಇರುವ ಕಾಳಜಿ ಎದ್ದು ಕಾಣುತ್ತಿದೆ.

ಬಾಬುರಾವ್ ಕರುಣಾಕರ್
ಬಾಬುರಾವ್ ಕರುಣಾಕರ್
10 years ago

ಸರ್ ಮೊದಲಿನಿಂದಲೂ ಮಕ್ಕಳೊಂದಿಗೆ ಕೆಲಸ ಮಾಡಿರುವ ನೀವು ಮಕ್ಕಳ ಬಗ್ಗೆ ಬರೆದಿದ್ದು ತುಂಬಾ ಸೂಕ್ತವಿದೆ ಒಂದು ಕಾನೂನು ಚೆನ್ನಾಗಿ ತಿಳಿಸಿದ್ದೀರಿ ಸಾಧ್ಯವಾದರೆ JJACT ಬಗ್ಗೆ ಬರೆಯಿರಿ 

K.M.Vishwanath
10 years ago

ಮಾನ್ಯ ಓದುಗರಿಗೆಲ್ಲಾ ನನ್ನ ಅನಂತ ಅನಂತ ಧನ್ಯವಾದಗಳು. ನಿಮ್ಮ ಸಲಹೆಗಳನ್ನು ಸ್ವೀಕರಿಸುತ್ತೇನೆ. ನೀವು ಹೇಳಿದ ಹಾಗೂ ನನಗೆ ಎಚ್ಚರಿಸಿದ ಮಾತಿಗೆ ನಾನು  ಆಭಾರಿಯಾಗಿದ್ದೇನೆ. ನನ್ನ ಮುಂದಿನ ಬರವಣಿಗೆಯಲ್ಲಿ ಬಳಸಿಕೊಳ್ಳುತ್ತೇನೆ.
 
ವಿಷೇಶವಾಗಿ ಶ್ರೀ ವಾಸುದೇವ ಶರ್ಮಾ ಸರ್ ರವರಿಗೆ ಅನಂತ ಧನ್ಯವಾಗಳು 

11
0
Would love your thoughts, please comment.x
()
x