ಶಾಲಾ ಶೈಕ್ಷಣಿಕ ಯೋಜನೆ: ವೈ. ಬಿ. ಕಡಕೋಳ

ಸ್ವಂತ ಜ್ವಾಲೆಯಿಂದ ಉರಿಯುವ ದೀಪ ಮತ್ತೊಂದು
ದೀಪವನ್ನು ಹೇಗೆ ಹೊತ್ತಿಸಲಾರದೋ ಹಾಗೆಯೇ ಸ್ವತಃ
ಕಲಿಯದೇ ಇದ್ದ ಶಿಕ್ಷಕನು ಸಮರ್ಥವಾಗಿ ಬೋಧಿಸಲಾರ
-ರವೀಂದ್ರನಾಥ ಠಾಗೂರ್

ಜೂನ್ ತಿಂಗಳು ಬಂತೆಂದರೆ ಶಾಲೆಗಳ ಪ್ರಾರಂಭ. ಇಲ್ಲಿ ಪಾಲಕರು. ಮಕ್ಕಳು ಶಿಕ್ಷಕರು ತಮ್ಮದೇ ಆದ ತಯಾರಿ ಮಾಡಿಕೊಳ್ಳುವ ಮೂಲಕ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಿದ್ದರಾಗುವ ಸಮಯ. 2018-19 ಶೃಕ್ಷಣಿಕ ವರ್ಷ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾಗುವ ಮೊದಲು ವೇಳಾಪತ್ರಿಕೆ, ವರ್ಗದ ಶೈಕ್ಷಣಿಕ ರೂಪರೇಷೆಗಳ ಅಂದಾಜು ಪತ್ರಿಕೆ,ಅಭ್ಯಾಸ ಪತ್ರಿಕೆ, ದಿನಚರಿ ಹೀಗೆ ಒಂದಲ್ಲಾ ಹಲವು ದಾಖಲೆಗಳ ದಾಖಲೆಗಳೊಂದಿಗೆ ತರಗತಿ ಪ್ರವೇಶ ಮಾಡುವ ಶಿಕ್ಷಕರು ಇವುಗಳ ಜೊತೆಗೆ 2008-09 ರಲ್ಲಿ ಜಾರಿಗೆ ತರಲಾದ ಶಾಲಾ ಶೈಕ್ಷಣಿಕ ಯೋಜನೆಯ ತಯಾರಿಕೆಯೂ ಕೂಡ ಅಷ್ಟೇ ಪ್ರಮುಖವಾಗಿದೆ. ಪ್ರತಿವರ್ಷ ತಯಾರಿಸುತ್ತಿರುವ ಈ ಶೈಕ್ಷಣಿಕ ಯೋಜನೆಯ ಕುರಿತು ಮತ್ತೊಮ್ಮೆ ಪುನರಾವಲೋಕನ ಮಾಡಿಕೊಳ್ಳುವುದು ಅವಶ್ಯಕ.

ಶಾಲೆ ಪ್ರಾರಂಭವಾಗುವ ಹಿಂದಿನ ದಿನ ಎಲ್ಲಾ ದಿನಪತ್ರಿಕೆಗಳಲ್ಲಿ ತಿಂಗಳ ತಿರುಳು ಪ್ರಕಟವಾಗುತ್ತದೆ. ಅದರಲ್ಲಿ ಜೂನ್ ತಿಂಗಳು ಶಾಲೆಯಲ್ಲಿ ಜರುಗಬೇಕಾದ ಕಾರ್ಯಗಳ ಸಂಕ್ಷಿಪ್ತ ವಿವರಣೆಯಿರುತ್ತದೆ. ಶಾಲಾ ಪ್ರಾರಂಭೋತ್ಸವ. ಹಾಗೂ ಸೇತುಬಂಧ ಇವು ಆರಂಭಿಕ ಹಂತಗಳಲ್ಲಿ ಪ್ರಮುಖವಾಗಿರುತ್ತವೆ. ಸೇತುಬಂಧ ಪರೀಕ್ಷೆ ಕೈಗೊಳ್ಳುವ ತರಗತಿ ಶಿಕ್ಷಕರು ಅದರ ದಾಖಲಾತಿ ನಿರ್ವಹಣೆಯಲ್ಲಿ ಮಾಡಬೇಕಾದ ಯೋಜನಾಬಧ್ದ ವಿವರ ಒಳಗೊಂಡಿರುವುದೇ ಶಾಲಾ ಶೈಕ್ಷಣಿಕ ಯೋಜನೆ.

ಶಾಲಾ ಹಂತದಲ್ಲಿ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದರೂ ಸಹ ಬಹುಪಾಲು ಯೋಜನೆಗಳು ಆರ್ಥಿಕ ಹಾಗೂ ಭೌತಿಕ ಅಂಶಗಳನ್ನು ಒಳಗೊಂಡಂತೆ ಅವುಗಳ ಮೇಲುಸ್ತುವಾರಿಗೆ ಹೆಚ್ಚಿನ ಒತ್ತನ್ನು ನೀಡಿದ್ದು ಶೈಕ್ಷಣಿಕ ಪ್ರಗತಿಗಾಗಿ ಅಪೇಕ್ಷಿತ ಮಟ್ಟದಲ್ಲಿ ಒತ್ತನ್ನು ನೀಡಿರುವುದಿಲ್ಲ. ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಶಾಲಾ ಶೈಕ್ಷಣಿಕ ಯೋಜನೆಯನ್ನು ಪರಿಚಯಿಸಲಾಯಿತು. ಇದು ಶಾಲಾ ಹಂತದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಿದ್ಧಪಡಿಸುವ ಯೋಜನೆಯಾಗಿರುತ್ತದೆ.

ಒಂದು ಶೈಕ್ಷಣಿಕ ವರ್ಷದಲ್ಲಿ ಪ್ರತಿ ವಿದ್ಯಾರ್ಥಿಯು ಪ್ರತಿ ವಿಷಯದಲ್ಲಿ ಗೊತ್ತುಪಡಿಸಿದ ಕಲಿಕೆಯನ್ನು ಅಪೇಕ್ಷಿತ ಮಟ್ಟದಲ್ಲಿ ಸಾಧಿಸಿರುವುದನ್ನು ದೃಢೀಕರಿಸಿಕೊಳ್ಳುವ ಜೊತೆಗೆ ಕಲಿಕಾ ಕೊರತೆಗಳಿದ್ದಲ್ಲಿ ಅವುಗಳನ್ನು ತುಂಬಲು ಕೈಗೊಳ್ಳುವ ಶೈಕ್ಷಣಿಕ ಕಾರ್ಯ ವಿಧಾನಗಳ ಸಮಗ್ರ ಚಿತ್ರಣವನ್ನು ಒಳಗೊಂಡಿರುವ ಜೊತೆಗೆ ವಿದ್ಯಾರ್ಥಿಗಳ ಬೋಧನೆಗೆ ಮಾರ್ಗದರ್ಶಿಯಾದ ಯೋಜನೆ ಶಾಲಾ ಶೈಕ್ಷಣಿಕ ಯೋಜನೆ.

ಮಹತ್ವ:
• ಶಾಲೆಯ ಕುರಿತು ಸ್ಥೂಲ ಪರಿಚಯ ಸಿಗುವುದು.
• ಶಾಲೆಯ ಕಲಿಕಾ ಗುಣಮಟ್ಟದ ಸ್ಥಿತಿ ತಿಳಿಯುವುದು.
• ಶೈಕ್ಷಣಿಕ ಗುರಿಗಳ ನಿರ್ಧಾರವಾಗುವುದು.
• ವಿವಿಧ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಲು ಸಹಾಯವಾಗುವುದು.
• ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಾಯವಾಗುವುದು.
• ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ ಸಾಧಿಸಲು ಸಹಾಯವಾಗುವುದು.
• ಗರಿಷ್ಠ ಪ್ರಮಾಣದಲ್ಲಿ ಮಾನವ ಸಂಪನ್ಮೂಲದ ಬಳಕೆಯಾಗುವುದು.

ಕಲಿಕಾ ಗುಣಮಟ್ಟವನ್ನು ಗುರುತಿಸುವುದಕ್ಕಾಗಿಯೇ ರಾಜ್ಯದಲ್ಲಿ ಕೆ. ಎಸ್. ಕ್ಯು. ಎ. ಓ. ಮೌಲ್ಯಮಾಪನ ಕಾರ್ಯ ಚಾಲ್ತಿಯಲ್ಲಿದೆ. ಶಾಲಾ ಹಂತದಲ್ಲಿ ಕೆ. ಎಸ್. ಕ್ಯು. ಎ. ಓ. ಫಲಿತಾಂಶ ಮತ್ತು ಅದರ ವಿಶ್ಲೇಷಣೆ ಮಾಡುವ ಜೊತೆಯಲ್ಲಿ ಅದರಲ್ಲಿ ಕಂಡುಬರುವ ಮಕ್ಕಳ ಕಲಿಕಾ ದೋಷ/ ಕೊರತೆಗಳ ನಿವಾರಣೆಗಾಗಿ ಶಿಕ್ಷಕರು ಸೇತುಬಂಧ ಹಾಗೂ ಪರಿಹಾರ ಬೋಧನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಶಿಕ್ಷಕರು ತಮ್ಮ ತರಗತಿಯ ಮಕ್ಕಳ ಕಲಿಕಾ ಕೊರತೆಯನ್ನು ತುಂಬಲು ವಿಶೇಷ ಒತ್ತನ್ನು ನೀಡಲು ಈ ಶೈಕ್ಷಣಿಕ ಯೋಜನೆಯನ್ನು ಸಿದ್ದಪಡಿಸಿಕೊಳ್ಳಬೇಕಿದೆ. . ಕೆ. ಎಸ್. ಕ್ಯು. ಎ. ಓ. ಕೇವಲ ಕಲವೇ ತರಗತಿಗಳಿಗೆ ಮಾತ್ರ ಸೀಮಿತವಾಗಿದ್ದು ಶಾಲಾ ಶೈಕ್ಷಣಿಕ ಯೋಜನೆಯು ಶಾಲೆಯಲ್ಲಿರುವ ಪ್ರತಿ ತರಗತಿಯನ್ನು( ಒಂದು ಮತ್ತು ಹತ್ತನೇ ತರಗತಿ ಹೊರತುಪಡಿಸಿ ) ಒಳಗೊಂಡಿರುತ್ತವೆ

ಯೋಜನೆ:

“ನಿರ್ದಿಷ್ಟವಾದ ಉದ್ದೇಶವನ್ನು ಪೂರೈಸಲು ಪೂರಕವಾಗಿ ಸಿದ್ಧಪಡಿಸಿರುವ ವಿವರಣಾತ್ಮಕವಾದ ಕಾರ್ಯಕ್ರಮ, ಕಾರ್ಯಹಂತ ಮತ್ತು ಕಾರ್ಯತಂತ್ರಗಳನ್ನು ಹೊಂದಿರುವ ದಾಖಲೆಯೇ ಯೋಜನೆ. ”

ಈ ಯೋಜನೆಯು ಅಗತ್ಯ ಮಾಹಿತಿಗಳನ್ನು ಒಳಗೊಂಡ ಒಂದು ದಾಖಲೆಯಾಗಿದ್ದು, ಇದಕ್ಕಾಗಿ ಹಲವು ಉಪಯುಕ್ತ ಹಾಗೂ ಸರಳವಾದ ನಮೂನೆಗಳನ್ನು ನೀಡಿರುವರು. ಈ ನಮೂನೆಗಳು ಮಕ್ಕಳ ಕಲಿಕಾ ಕೊರತೆಗಳನ್ನು ಗುರ್ತಿಸಿ ಸೇತುಬಂಧ ಕಾರ್ಯ ನಡೆಸಲು ಹಾಗೂ ಸೇತುಬಂಧ ಕಾರ್ಯದ ಫಲವನ್ನು ದಾಖಲಿಸುವ ಜೊತೆಗೆ ಕೊರತೆಗಳಿದ್ದರೆ ಪರಿಹಾರ ಬೋಧನೆ ನಡೆಸಲು ಮಾರ್ಗದರ್ಶಿಯ ರೀತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಗೊತ್ತುಪಡಿಸಿರುವ ಪ್ರತಿ ನಮೂನೆಗಳ ಬಗ್ಗೆ ಅದು ಏನನ್ನು ಒಳಗೊಂಡಿದೆ, ಅದು ಏಕೆ ಬೇಕು ಮತ್ತು ಅದನ್ನು ಹೇಗೆ ಬಳಸಬೇಕು ಎನ್ನುವ ಬಗ್ಗೆ ಗಮನ ಹರಿಸೋಣ.

ಶಾಲಾ ಶೈಕ್ಷಣಿಕ ಯೋಜನೆ ಸಿದ್ಧಪಡಿಸಲು ಅಗತ್ಯ ಮಾಹಿತಿಗಳು:

ನಮೂನೆ 1: ಶಾಲೆಯ ಸಾಮಾನ್ಯ ಮಾಹಿತಿ
• ಇದರಲ್ಲಿ ಜನವಸತಿಗೆ ಸಂಬಂಧಿಸಿದಂತೆ ಕುಟುಂಬ ಸಂಖ್ಯೆ ಹಾಗೂ ಜನಸಂಖ್ಯೆಯ ಮಾಹಿತಿಯನ್ನು ಒಳಗೊಂಡಂತೆ ಶಾಲೆಯ ಮಾದರಿ, ಭೌತಿಕ ಸವಲತ್ತು ಹಾಗೂ ಕಲಿಕೋಪಕರಣಗಳ ಮಾಹಿತಿಯನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

• ಈ ನಮೂನೆಯಲ್ಲಿ ಭರ್ತಿ ಮಾಡಿರುವ ಮಾಹಿತಿಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರುವ ಜೊತೆಗೆ ಅಗತ್ಯತೆ/ ಕೊರತೆಗಳನ್ನು ಪೂರೈಸಿಕೊಳ್ಳಲು ಕಾರ್ಯತಂತ್ರ ರೂಪಿಸಿ ಕಾರ್ಯ ಪ್ರವೃತ್ತರಾಗುವುದು

ನಮೂನೆ2ಎ: ಪ್ರಾಥಮಿಕ ಶಾಲಾ ಶಿಕ್ಷಕರ ಮಾಹಿತಿ

ನಮೂನೆ2ಬಿ: ಪ್ರೌಢಶಾಲಾ ಶಿಕ್ಷಕರ ಮಾಹಿತಿ
• ಇದರಲ್ಲಿ ಶಿಕ್ಷಕರ ಸಾಮಾನ್ಯ ಮಾಹಿತಿಯ ಜೊತೆಗೆ ಅವರು ಪಡೆದಿರುವ ತರಬೇತಿಗಳ ಮಾಹಿತಿಯನ್ನು ಹಾಗೂ ಶಿಕ್ಷಕರು ತಮ್ಮ ಕಾರ್ಯದಕ್ಷತೆ ಹೆಚ್ಚಿಸಿಕೊಳ್ಳಲು ಅಪೇಕ್ಷಿಸುವ ತರಬೇತಿ/ ಮಾರ್ಗದರ್ಶನದ ವಿವರವನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
• ಮುಂದೆ ಅಗತ್ಯ ಸಂದರ್ಭದಲ್ಲಿ ಶಿಕ್ಷಕರ ಮಾಹಿತಿ ಮತ್ತು ತರಬೇತಿಯ ವಿವರಕ್ಕಾಗಿ ಈ ಮಾಹಿತಿಯನ್ನು ಬಳಸಿಕೊಳ್ಳುವುದು. ಅಂತೆಯೇ ಶೈಕ್ಷಣಿಕ ಮಾರ್ಗದರ್ಶಕರ ಗಮನ ಸೆಳೆದು ಶಿಕ್ಷಕರು ಅಪೇಕ್ಷಿಸುವ ತರಬೇತಿ/ ಮಾರ್ಗದರ್ಶನವು ದೊರಕುವಂತೆ ಕ್ರಮ ಕೈಗೊಳ್ಳಲು ಮುಂದಾಗುವುದು.

ನಮೂನೆ3: ಅತೀ ಅಗತ್ಯ/ ಬುನಾದಿ ಸಾಮಥ್ರ್ಯಗಳ/ ಕಲಿಕಾಂಶಗಳ ಪಟ್ಟಿ ಒಂದರಿಂದ ಹತ್ತನೇ ತರಗತಿಯವರೆಗೆ ವಿಷಯವಾರು ನೀಡಲಾಗಿದೆ.
• ಪ್ರತಿ ತರಗತಿ ಹಾಗೂ ವಿಷಯಗಳಲ್ಲಿ ಅನೇಕ ಸಾಮಥ್ರ್ಯಗಳು/ ಕಲಿಕಾಂಶಗಳನ್ನು ಮಾತ್ರ ಪಟ್ಟಿ ಮಾಡಿ ನೀಡಲಾಗಿದೆ.
• ಗೊತ್ತುಪಡಿಸಿದ ತರಗತಿಯ ವಿದ್ಯಾರ್ಥಿಗೆ, ಗೊತ್ತುಪಡಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಆ ವಿದ್ಯಾರ್ಥಿಯು ಕಳೆದ ವರ್ಷ ವ್ಯಾಸಂಗ ಮಾಡಿದ ತರಗತಿಯ ವಿಷಯಕ್ಕೆ ಸಂಬಂಧಿಸಿದಂತೆ ಗೊತ್ತುಪಡಿಸಿದ ಅತೀ ಅಗತ್ಯ/ ಬುನಾದಿ ಸಾಮಥ್ರ್ಯದ/ಕಲಿಕಾಂಶದ ಆಧಾರದಲ್ಲಿ ನೈದಾನಿಕ ಪರೀಕ್ಷೆ ನಡೆಸಬೇಕು. ಅಂತೆಯೇ ಅದರ ಸಾಧನೆಯ ಫಲವನ್ನು ನಮೂನೆ4ಎ/4ಬಿನಲ್ಲಿ ಭರ್ತಿ ಮಾಡಬೇಕಿದೆ. ನಮೂನೆ 4ಎ/4ಬಿನಲ್ಲಿ ವಿದ್ಯಾರ್ಥಿಯ ಸಾಧನೆಗಳನ್ನು ಭರ್ತಿ ಮಾಡುವಾಗ ಮೌಲ್ಯಮಾಪನಕ್ಕೆ ಗೊತ್ತುಪಡಿಸಿದ ಬುನಾದಿ ಸಾಮಥ್ರ್ಯದ/ ಕಲಿಕಾಂಶದ ವಿವರವನ್ನು ಬರೆಯುವ ಬದಲಿಗೆ ಅದರ ಕ್ರಮಸಂಖ್ಯೆಯನ್ನು ನಿಗದಿತ ಕಾಲಂನಲ್ಲಿ ಬರೆಯಬೇಕು.
• ಗುರ್ತಿಸಿರುವ ಬುನಾದಿ ಸಾಮಥ್ರ್ಯಗಳು/ ಕಲಿಕಾಂಶಗಳು ಸಹ ಸಂಬಂಧವಿರುವ ಅನೇಕ ಸಾಮಥ್ರ್ಯಗಳು/ ಕಲಿಕಾಂಶಗಳನ್ನು ಒಳಗೊಂಡಿವೆ ಎಂಬುದನ್ನು ಗಮನಿಸಬೇಕು. .
• ನೈದಾನಿಕ ಪರೀಕ್ಷೆ ಪ್ರಸಕ್ತ ತರಗತಿಗೆ ಪೂರಕವಾಗಿ ವಿದ್ಯಾರ್ಥಿ ಗಳಿಸಿರಬೇಕಾದ ಕನಿಷ್ಠ ಸಾಮಥ್ರ್ಯ,ಈ ಸಾಮಥ್ರ್ಯಗಳ ಗಳಿಕೆಯನ್ನು ಪರೀಕ್ಷಿಸಲು ಬೇಕಾದ ಒಂದು ಪ್ರಶೆಪತ್ರಿಕೆಯ ರಚನೆ ಮಾಡಿ ತಗೆದುಕೊಳ್ಳುವುದು.
• ಈ ಪರೀಕ್ಷೆಗೆ ತರಗತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಒಳಪಡಿಸುವುದು.
• ಸೇತುಬಂಧ ಹಾಗೂ ಪರಿಹಾರ ಬೋಧನೆ ನಡೆಸಲು ಮಾತ್ರ ಅತೀ ಅಗತ್ಯ/ ಬುನಾದಿ ಸಾಮಥ್ರ್ಯಗಳ/
ಕಲಿಕಾಂಶಗಳ ಪಟ್ಟಿಯನ್ನು ಬಳಕೆ ಮಾಡಬೇಕು. .
• ನಲಿ-ಕಲಿ ತರಗತಿಯಾಗಿದ್ದಲ್ಲಿ ಪ್ರಸ್ತುತ ಎರಡನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಕಳೆದ ಸಾಲಿನ ಅವರ ಒಂದನೇ ತರಗತಿಯ ಪ್ರಗತಿ ನೋಟದ ದಾಖಲೆಯಲ್ಲಿ ಕಲಿಕಾ ಮಟ್ಟವನ್ನು ಆಧರಿಸಿ ನೈದಾನಿಕ ಪರೀಕ್ಷೆಯನ್ನು ನಡೆಸಿದ ನಂತರ ಸೇತುಬಂಧ/ ಪರಿಹಾರ ಬೋಧನೆ ಮಾಡಬೇಕಿದೆ, ಹಾಗಾಗಿ ಈ ವಿದ್ಯಾರ್ಥಿಗಳಿಗೆ ನಮೂನೆ 3ರಸಾಮಥ್ರ್ಯಗಳು ಅನ್ವಯವಾಗುವುದಿಲ್ಲ.

ನಮೂನೆ4ಎ: ನೈದಾನಿಕ ಪರೀಕ್ಷೆ ಹಾಗೂ ಸೇತುಬಂಧ ಕಾರ್ಯದ ಪ್ರಗತಿಯ ದಾಖಲೆ( 2ರಿಂದ 4ನೇ ತರಗತಿ )

ನಮೂನೆ4ಬಿ: ನೈದಾನಿಕ ಪರೀಕ್ಷೆ ಹಾಗೂ ಸೇತುಬಂಧ ಕಾರ್ಯದ ಪ್ರಗತಿಯ ದಾಖಲೆ(5ರಿಂದ 10ನೇ ತರಗತಿ )
• ವಿದ್ಯಾರ್ಥಿಯ ನೈದಾನಿಕ ಪರೀಕ್ಷೆ ಹಾಗೂ ಸೇತುಬಂಧ ಕಾರ್ಯದ ಪ್ರಗತಿಯನ್ನು ದಾಖಲಿಸಲು ಸಿದ್ದಪಡಿಸಿರುವ ಈ ನಮೂನೆಯಲ್ಲಿ ವಿದ್ಯಾರ್ಥಿಯು ನೈದಾನಿಕ ಪರೀಕ್ಷೆಯಲ್ಲಿ ಪ್ರದರ್ಶಿಸಿದ ಸಾಧನೆಯನ್ನು ವಿಷಯವಾರು ಗೊತ್ತುಪಡಿಸಿದ ಅತೀ ಅಗತ್ಯ ಸಾಮಥ್ರ್ಯಗಳ/ ಕಲಿಕಾಂಶಗಳ ಸಂಖ್ಯೆ ಸಹಿತ ಭರ್ತಿ ಮಾಡಬೇಕು.
• ಈ ನಮೂನೆಯ ಎರಡು ಹಂತಗಳಲ್ಲಿ ಬಳಕೆಯಾಗುತ್ತದೆ. ಮೊದಲ ಹಂತದಲ್ಲಿ ವಿದ್ಯಾರ್ಥಿವಾರು ನೈದಾನಿಕ ಪರೀಕ್ಷೆ ನಡೆಸಲು ಗೊತ್ತುಪಡಿಸಿರುವ ಸಾಮಥ್ರ್ಯದ ಸಂಖ್ಯೆಯನ್ನು ಬರೆಯುವ ಜೊತೆಗೆ ನೈದಾನಿಕ ಪರೀಕ್ಷೆಯಲ್ಲಿನ ಸಾಧನೆಯನ್ನು ಭರ್ತಿ ಮಾಡುವುದು. ಈ ಮಾಹಿತಿಯ ಆಧಾರದಲ್ಲಿ ಸಾಮಥ್ರ್ಯ/ ಕಲಿಕಾಂಶ ಆಧಾರಿತವಾಗಿ ಸೇತುಬಂಧ ಕಾರ್ಯ ನಡೆ¸ಬೇಕು. ಸೇತುಬಂಧ ಕಾರ್ಯದ ನಂತರ ಎರಡನೇ ಹಂತದಲ್ಲಿ ಈ ನಮೂನೆಯನ್ನು ಬಳಸಬೇಕಿದ್ದು ವಿದ್ಯಾರ್ಥಿಯು ಸೇತುಬಂಧ ಕಾರ್ಯದಲ್ಲಿ ಪ್ರದರ್ಶಿಸಿದ ಸಾಧನೆಯನ್ನು ಸಾಮಥ್ರ್ಯವಾರು/ ಕಲಿಕಾಂಶವಾರು ದಾಖಲಿಸಬೇಕು.
• ವಿದ್ಯಾರ್ಥಿಗಳು ಸಾಧನೆ/ ಶ್ರೇಣಿಯನ್ನು ಆಂಗ್ಲ “ಎ” ಅಥವಾ “ಬಿ” ಅಕ್ಷರದಿಂದ ಗುರ್ತಿಸುವುದು.
• ಮೊದಲ ಹಂತದಲ್ಲಿ ವಿದ್ಯಾರ್ಥಿಯು ನೈದಾನಿಕ ಪರೀಕ್ಷೆಯಲ್ಲಿ ಅಪೇಕ್ಷಿತ ಸಾಧನೆಯನ್ನು ಪ್ರದರ್ಶಿಸಿದರೆ ಆ ವಿದ್ಯಾರ್ಥಿಯ ಹೆಸರಿನ ಮುಂದೆ ಸಂಬಂಧಿಸಿದ ಸಾಮಥ್ರ್ಯದ ಸಂಖ್ಯೆಯ ಮುಂದೆ “ಎ” ಎಂದು ಬರೆಯುವುದು. ಅಂತೆಯೇ ಸಾಧನೆಯನ್ನು ಪ್ರದರ್ಶಿಸಿಲ್ಲದಿದ್ದರೆ “ಬಿ” ಎಂದು ಬರೆಯುವುದು. ಸೇತುಬಂಧ ಕಾರ್ಯದ ನಂತರವೂ ಅವರ ಸಾಧನೆಯನ್ನು ಇದೇ ಕ್ರಮದಲ್ಲಿ ದಾಖಲಿಸುವುದು.
• ನೈದಾನಿಕ ಪರೀಕ್ಷೆಯಲ್ಲಿ “ಬಿ” ಶ್ರೇಣಿ ಪಡೆದಿರುವ ವಿದ್ಯಾರ್ಥಿಗೆ ಸಂಬಂಧಿಸಿದ ಸಾಮಥ್ರ್ಯದ/ ಕಲಿಕಾಂಶದ
ಕಲಿಕೆಗಾಗಿ ಕಾರ್ಯ ಕೈಗೊಳ್ಳುವುದು. ಸೇತುಬಂಧ ಕಾರ್ಯದ ನಂತರ ಕೆಲವು ಮಕ್ಕಳು ಕೆಲವು ಸಾಮಥ್ರ್ಯದಲ್ಲಿ/ ಕಲಿಕಾಂಶದಲ್ಲಿ “ಎ” ಶ್ರೇಣಿಯನ್ನು ಗಳಿಸಬಹುದು ಅಥವಾ “ಬಿ” ಶ್ರೇಣಿಯಲ್ಲಿ ಉಳಿಯಬಹುದು,ಈ ರೀತಿ “ಬಿ” ಶ್ರೇಣಿಯಲ್ಲಿ ಉಳಿದಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಾಮಥ್ರ್ಯದ ಕಲಿಕೆಗಾಗಿ ಪರಿಹಾರ ಬೋಧನೆ ಕಾರ್ಯ ಕೈಗೊಳ್ಳುವುದು.
• ನೈದಾನಿಕ ಪರೀಕ್ಷೆಯಲ್ಲಿ ಗೊತ್ತುಪಡಿಸಿದ ಸಾಮಥ್ರ್ಯದಲ್ಲಿ “ಎ” ಶ್ರೇಣಿ ಪಡೆದಿರುವ ವಿದ್ಯಾರ್ಥಿಗೆ ಸೇತುಬಂಧ ಚಟುವಟಿಕೆಯ ಅಗತ್ಯವಿರುವುದಿಲ್ಲ. ಹಾಗಾಗಿ ಸದರಿ ವಿದ್ಯಾರ್ಥಿಯ ಸಹಾಯವನ್ನು ಇತರ ವಿದ್ಯಾರ್ಥಿಯ ಕಲಿಕೆಗೆ ಬಳಸಿಕೊಳ್ಳಬಹುದು.
• ನಲಿ-ಕಲಿ ತರಗತಿಯಾಗಿದ್ದಲ್ಲಿ ಪ್ರಸ್ತುತ ಎರಡನೇ ತರಗತಿಯಲ್ಲಿರುವ ಮಕ್ಕಳು ಕಳೆದ ಸಾಲಿನ ಅವರ ಪ್ರಗತಿ ನೋಟದಲ್ಲಿ ದಾಖಲಾಗಿರುವ ಅವರ ಕಲಿಕಾ ಮಟ್ಟದಿಂದಲೇ ಕಲಿಕೆಯನ್ನು ಮುಂದುವರಿಸಬೇಕಿದೆ. ಹಾಗಾಗಿ ಈ ಮಕ್ಕಳ ಮಾಹಿತಿಯನ್ನು 4ಎ ನಮೂನೆಯಲ್ಲಿ ಬರೆಯುವ ಹಾಗಿಲ್ಲ

ನಮೂನೆ 5ಎ: ಪರಿಹಾರ ಬೋಧನೆಗೆ ಒಳಪಡುವ ಮಕ್ಕಳ ವಿವರ ಹಾಗೂ ಕಾರ್ಯ ಯೋಜನೆ (2ರಿಂದ 4ನೇತರಗತಿ)
ನಮೂನೆ 5ಬಿ: ಪರಿಹಾರ ಬೋಧನೆಗೆ ಒಳಪಡುವ ಮಕ್ಕಳ ವಿವರ ಹಾಗೂ ಕಾರ್ಯ ಯೋಜನೆ (5ರಿಂದ 10ನೇ ತರಗತಿ)

ಪರಿಹಾರ ಬೋಧನೆಗೆ ಒಳಪಟ್ಟಿರುವ ವಿದ್ಯಾರ್ಥಿಗಳ ಹೆಸರು ಸಹಿತ ಸಂಬಂಧಿಸಿದ ಸಾಮಥ್ರ್ಯದ/ ಕಲಿಕಾಂಶದ ಸಂಖ್ಯೆ, ಸಾಮಥ್ರ್ಯದ/ ಕಲಿಕಾಂಶದ ಕಲಿಕೆಗೆ ಅಳವಡಿಸುವ ಚಟುವಟಿಕೆ ಸಂಖ್ಯೆ ಹಾಗೂ ಸಾಧನೆಯನ್ನು ದಾಖಲಿಸಲು ಸಹಾಯವಾಗುವಂತೆ ಈ ನಮೂನೆಯನ್ನು ಸಿದ್ಧಪಡಿಸಲಾಗಿದೆ.

ನಮೂನೆ4ಎ/ಬಿಯಲ್ಲಿ ಸೇತುಬಂಧ ಕಾರ್ಯದ ನಂತರವೂ ಗೊತ್ತುಪಡಿಸಿದ ಸಾಮಥ್ರ್ಯದಲ್ಲಿ/ ಕಲಿಕಾಂಶದಲ್ಲಿ ಎ ಶ್ರೇಣಿಯನ್ನು ಪಡೆದಿರುವ ಮಕ್ಕಳ ಮಾಹಿತಿ ಇರುತ್ತದೆ. ಮೊದಲಿಗೆ ಸದರಿ ಮಕ್ಕಳ ಹೆಸರು ಹಾಗೂ ಸಂಬಂಧಿಸಿದ ಸಾಮಥ್ರ್ಯಗಳ/ ಕಲಿಕಾಶಂಗಳ ಸಂಖ್ಯೆಯನ್ನು ನಮೂನೆಯ (5ಎ/5ಬಿ) ಸಂಬಂಧಿಸಿದ ಕಾಲಂಗಳಲ್ಲಿ ಬರೆದುಕೊಳ್ಳಬೇಕು.

ಈ ರೀತಿ ಸಾಮಥ್ರ್ಯಗಳ/ ಕಲಿಕಾಂಶದ ಸಂಖ್ಯೆಯನ್ನು ಬರೆದ ಮೇಲೆ ಪ್ರತಿ ಸಾಮಥ್ರ್ಯದ/ ಕಲಿಕಾಂಶದ ಕಲಿಕೆಗಾಗಿ ಸೂಕ್ತವಾದ ಚಟುವಟಿಕೆಯನ್ನು ಚಟುವಟಿಕೆ ಬ್ಯಾಂಕನಲ್ಲಿ ಗುರ್ತಿಸಿಕೊಂಡು ಆ ಚಟುವಟಿಕೆಗೆ ನೀಡಿರುವ ಕ್ರಮ ಸಂಖ್ಯೆಯನ್ನು ಸದರಿ ಸಾಮಥ್ರ್ಯಗಳ/ ಕಲಿಕಾಂಶಗಳ ಮುಂದಿನ ಕಾಲಂನಲ್ಲಿ ಬರೆಯುವುದು. ಈ ರೀತಿ ಮಾಡುವುದರಿಂದ ಯಾವ ಸಾಮಥ್ರ್ಯವನ್ನು/ ಕಲಿಕಾಂಶವನ್ನು ಯಾವ ಚಟುವಟಿಕೆಯ ಮೂಲಕ ಕಲಿಸಲಾಗುತ್ತದೆ/ ಕಲಿಸಬೇಕು/ ಎನ್ನುವ ಬಗ್ಗೆ ಸ್ಪಷ್ಟತೆ ಇರುತ್ತದೆ.

ಪ್ರತಿ ಸಾಮಥ್ರ್ಯಕ್ಕೆ/ ಕಲಿಕಾಂಶಕ್ಕೆ ಚಟುವಟಿಕೆಯನ್ನು ಗುರ್ತಿಸಿಕೊಂಡ ನಂತರ ಎಷ್ಟು ದಿನಗಳಲ್ಲಿ ಸದರಿ ಚಟುವಟಿಕೆಯ ಮೂಲಕ ಕಲಿಕೆಯನ್ನು ತರಲಾಗುತ್ತದೆ ಎಂಬುದನ್ನು ನಿರ್ಧರಿಸಿ ಸಂಬಂಧಿಸಿದ ಚಟುವಟಿಕೆಯ ಸಂಖ್ಯೆಯು ಮುಂದೆ ನೀಡಿರುವ ಕಾಲಮಿತಿ ಕಾಲಂನಲ್ಲಿ ದಿನಾಂಕವನ್ನು ನಮೂದಿಸಬೇಕು.

ನಮೂನೆ5ಎ/5ಬಿಯಲ್ಲಿ ಮೊದಲ ಹಂತದ ಭರ್ತಿ ಕಾರ್ಯದ ನಂತರ ಗೊತ್ತುಪಡಿಸಿದ ವಿದ್ಯಾರ್ಥಿಗೆ, ಗೊತ್ತುಪಡಿಸಿದ ಸಾಮಥ್ರ್ಯದ/ ಕಲಿಕಾಂಶದ ಕಲಿಕೆಗಾಗಿ ಗೊತ್ತುಪಡಿಸಿದ ಚಟುವಟಿಕೆಯನ್ನು ಗೊತ್ತುಪಡಿಸಿಕೊಂಡ ಅವಧಿಯಲ್ಲಿ ಮಾಡಬೇಕು

ಹಂತ-2:

ಗೊತ್ತುಪಡಿಸಿದ ಕಾಲಮಿತಿಯಲ್ಲಿ ಗೊತ್ತುಪಡಿಸಿದ ಸಾಮಥ್ರ್ಯ/ ಕಲಿಕಾಂಶದ ಕಲಿಕೆ ಆಗಿದೆಯೆ ಎಂಬುದನ್ನು ಆಯಾಯ ಕಾಲದಲ್ಲಿ ಮೌಲ್ಯಮಾಪನಕ್ಕೆ ಒಳಪಡಿಸಿ, ಸಾಧನೆಯಾಗಿದ್ದರೆ ಸಾಮಥ್ರ್ಯ/ ಕಲಿಕಾಂಶ ಗಳಿಸಿದ ತಿಂಗಳು ಕಾಲಂನಲ್ಲಿ ಸದರಿ ದಿನಾಂಕವನ್ನು ಬರೆಯುವುದು. ಒಂದು ವೇಳೆ ಗೊತ್ತುಪಡಿಸಿದ ಕಾಲಮಿತಿಯಲ್ಲಿ ಸಾಧನೆಯಾಗಿಲ್ಲದಿದ್ದರೆ ಮತ್ತೆ ಕಾಲಮಿತಿಯನ್ನು ನಿರ್ಧರಿಸಿ ಕಾಲಮಿತಿ-2 ಕಾಲಂನಲ್ಲಿ ದಿನಾಂಕವನ್ನು ನಮೂದಿಸುವುದು. ಇದೇ ರೀತಿ ಕಾಲಮಿತಿಗೆ ಅನುಗುಣವಾಗಿ ವಿದ್ಯಾರ್ಥಿಯನ್ನು ಸಾಮಥ್ರ್ಯವಾರು / ಕಲಿಕಾಂಶವಾರು ಮೌಲ್ಯಮಾಪನಕ್ಕೆ ಒಳಪಡಿಸುತ್ತ ಪರಿಹಾರ ಬೋಧನೆಗೆ ಗೊತ್ತುಪಡಿಸಿದ ಎಲ್ಲ ಸಾಮಥ್ರ್ಯಗಳನ್ನು/ ಕಲಿಕಾಂಶವನ್ನು ಹೊಂದುವಂತೆ ಮಾಡಿ ಸದರಿ ಮಾಹಿತಿಯನ್ನು ದಾಖಲಿಸುವುದು. ಪರಿಹಾರ ಬೋಧನೆಯನ್ನು ಮಾಡಿ ವಿದ್ಯಾರ್ಥಿಗಳಲ್ಲಿ ಸಾಮಥ್ರ್ಯ/ ಕಲಿಕಾಂಶ ಬಂದಿದೆ ಎಂದು ತಿಳಿದುಬಂದ ನಂತರ ಈ ಮಾಹಿತಿಯನ್ನು ಶಾಲಾ ಮುಖ್ಯ ಶಿಕ್ಷಕರ ಮೂಲಕ ಅದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರುವುದು. ಪ್ರತಿ ತಿಂಗಳು ಪರಿಹಾರಬೋಧನೆಯ ಪ್ರಗತಿ ಪರಿಶೀಲಿಸಬೇಕು. ಈ ವಿವರ ಸಮುದಾಯದತ್ತ ಶಾಲೆಯ ದಿನದಂದು ಕೂಡ ಪರಿಶಿಲಿಸಲಾಗುತ್ತದೆ.

ಪ್ರೌಢಶಾಲೆಗೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಸಾಮಥ್ರ್ಯ/ ಕಲಿಕಾಂಶ ಗಳಿಕೆ ಆಗಿದೆಯೇ ಎಂದು ದೃಢಪಡಿಸಿಕೊಳ್ಳಲು ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ರಚಿಸಿಕೊಂಡು ಶಾಲೆಗೆ ಭೇಟಿ ನೀಡಿ ಸರಳ ಪರೀಕ್ಷೆಗಳ ಮೂಲಕ ಮಕ್ಕಳಲ್ಲಿ ಸಾಮಥ್ರ್ಯ/ ಕಲಿಕಾಂಶದ ಕಲಿಕೆ ಆಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಮತ್ತು ಶಾಲಾ ಶೈಕ್ಷಣಿಕ ಯೋಜನೆಯ ಚಾರ್ಟ್ನಲ್ಲಿ ಅದನ್ನು ನಮೂದಿಸಬೇಕು. ನಂತರ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಯ ಸಾಮಥ್ರ್ಯ/ ಕಲಿಕಾಂಶಗಳ ಪರಿಹಾರ ಬೋಧನೆ ಅಗತ್ಯವಿದ್ದಲ್ಲಿ ಅದನ್ನು ಮುಂದುವರೆಸಬೇಕು ಅಥವಾ ಅಗತ್ಯವಿರುವ ಎಲ್ಲಾ ಸಾಮಥ್ರ್ಯ/ ಕಲಿಕಾಂಶಗಳ ಕಲಿಕೆಯಾದಲ್ಲಿ ಆ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆಯನ್ನು ನಿಲ್ಲಿಸಬಹುದಾಗಿದೆ

• ಪ್ರತಿ ಸಾಮಥ್ರ್ಯ/ ಕಲಿಕಾಂಶವನ್ನು ಎರಡು ಕಾಲಮಿತಿಯೊಳಗೆ ಮಾತ್ರ ಕಲಿಸಲು ಅವಕಾಶವಿರುತ್ತದೆ.
• ಕಾಲಮಿತಿಯನ್ನು ನಿರ್ಧರಿಸುವಾಗ ವಿದ್ಯಾರ್ಥಿಯ ಕಲಿಕಾಮಟ್ಟ ಕಲಿಕಾ ವೇಗ, ಚಟುವಟಿಕೆಯ ಕಠಿಣತೆಯನ್ನು ಗಮನದಲ್ಲಿಡಬೇಕು.
• ಕಲಿಕೆಗೆ ಒಂದು ಚಟುವಟಿಕೆಯನ್ನು ಗುರ್ತಿಸಿಕೊಂಡಿದ್ದರೂ ಸಹ ಅಗತ್ಯತೆ/ ಕಲಿಕೆಗೆ ಪೂರಕವಾಗಿ ಹೆಚ್ಚು ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.
• ಚಟುವಟಿಕೆ ಬ್ಯಾಂಕಿನ ಪರಿಚಯ ಎಂಬ ಶೀರ್ಷಿಕೆಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒಳಗೊಂಡ ಪುಸ್ತಕಗಳನ್ನು ಈ ಹಿಂದೆ ನೀಡಿರುವರು.
• ತರಗತಿ ನಿರ್ವಹಣಾ ಕ್ರಮ ಎಂಬ ಶೀರ್ಷಿಕೆಯಲ್ಲಿ ಪರಿಹಾರ ಬೋಧನೆಯನ್ನು ಯಾರು, ಯಾವಾಗ, ಹೇಗೆ ಮಾಡಬೇಕು ಎನ್ನುವ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
• ಗೊತ್ತುಪಡಿಸಿದ ಸಾಮಥ್ರ್ಯ/ ಕಲಿಕಾಂಶದಲ್ಲಿ ಎ ಶ್ರೇಣಿಯನ್ನು ಪಡಿದಿರುವ ವಿದ್ಯಾರ್ಥಿಯ ಸಹಾಯವನ್ನು ಅಗತ್ಯತೆಗೆ ಅನುಗುಣವಾಗಿ ಇತರೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಬಳಸಿಕೊಳ್ಳಬಹುದಾಗಿದೆ.
• ಶೈಕ್ಷಣಿಕ ಮಾರ್ಗದರ್ಶಕರು ಇದೇ ನಮೂನೆಯನ್ನು ಆಧರಿಸಿಕಲಿಕಾ ಪ್ರಕ್ರಿಯೆ ಹಾಗೂ ಮಕ್ಕಳ ಕಲಿಕೆಯನ್ನು ದೃಢೀಕರಿಸುತ್ತಾರೆ ಹಾಗೂ ಈ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.

ನಮೂನೆ 6: ಸಹ ಪಠ್ಯ ಚಟುವಟಿಕೆಗಳ ಕ್ರಿಯಾ ಯೋಜನೆ:

ಅನುಷ್ಠಾನಗೊಳಿಸಬೇಕೆಂದು ಗೊತ್ತುಪಡಿಸಲಾಗಿರುವ ಸಹಪಠ್ಯ ಚಟುವಟಿಕೆಗಳು, ಅವುಗಳ ವಸ್ತುಸ್ಥಿತಿ ಹಾಗೂ ಅವುಗಳ ಯಶಸ್ವಿ ಅನುಷ್ಠಾನಕ್ಕೆ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ತುಂಬಲು ಈ ನಮೂನೆಯನ್ನು ಸಿದ್ಧಪಡಿಸಲಾಗಿದ್ದು ಶೈಕ್ಷಣಿಕ ವರ್ಷದ ಆರಂಭದಲ್ಲಿ ಮುಖ್ಯ ಶಿಕ್ಷಕರು ಸಹ ಶಿಕ್ಷಕರೊಡಗೂಡಿ ಈ ನಮೂನೆಯನ್ನು ಆಧರಿಸಿ ತಮ್ಮ ಶಾಲೆಯಲ್ಲಿ ಅಳವಡಿಸಿಕೊಳ್ಳಬೇಕಾದ/ ಪುನಶ್ಚೇತನ ಗೊಳಿಸಬೇಕಾದ ಸಹ ಪಠ್ಯ ಚಟುವಟಿಕೆಗಳನ್ನು ನಿರ್ಧರಿಸಿಕೊಳ್ಳುವರು.
ನಿರ್ಧರಿಸಿಕೊಂಡ ಪ್ರತಿ ಸಹ ಪಠ್ಯ ಚಟುವಟಿಕೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಶಕ್ತಿಯನ್ನು ಆಧರಿಸಿ ಪ್ರತಿಯೊಬ್ಬರೂ ಒಂದೊಂದು ಚಟುವಟಿಕೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಜೊತೆಗೆ ನಮೂನೆಯಲ್ಲಿ ಸದರಿ ಮಾಹಿತಿ ತುಂಬಿಕೊಳ್ಳಬೇಕು.
ಜವಾಬ್ದಾರಿಯನ್ನು ಹಂಚಿಕೊಂಡ ಮೇಲೆ ಪ್ರತಿ ಚಟುವಟಿಕೆಯ ಅಡಿಯಲ್ಲಿ ಆದ್ಯತೆ ಮೇಲೆ ನಿರ್ವಹಿಸಬೇಕಾದ ಕಾರ್ಯಕ್ರಮಗಳು ಯಾವುದು ಎಂದು ನಿರ್ಧರಿಸಿಕೊಳ್ಳುವ ಜೊತೆಗೆ ಅದಕ್ಕೆ ಕಾಲಮಿತಿಯನ್ನು ನಿರ್ಧರಿಸಿಕೊಂಡು ನಮೂನೆಯ ಸಂಬಂಧಿಸಿದ ಕಾಲಂದಲ್ಲಿ ಬರೆದುಕೊಳ್ಳಬೇಕು.
ಕಾರ್ಯಕ್ರಮದ ಅನುಷ್ಠಾನಕ್ಕೆ ಪರಸ್ಪರ ಸಹಕಾರದೊಂದಿಗೆ ಕಾರ್ಯಪ್ರವೃತ್ತರಾಗುವ ಜೊತೆಗೆ. ಕಾರ್ಯಕ್ರಮವು ಅನುಷ್ಠಾನದಲ್ಲಿ ಇರುವುದನ್ನು ಕಾಲಕಾಲಕ್ಕೆ ಖಾತ್ರಿಪಡಿಸಿಕೊಳ್ಳುವುದು.
ಮುಖ್ಯ ಶಿಕ್ಷಕರು ಸಹ ಶಿಕ್ಷಕರೊಡಗೂಡಿ ಗೊತ್ತುಪಡಿಸಿದ ಕಾರ್ಯಗಳು ಕಾಲಮಿತಿಗೆ ಅನುಗುಣವಾಗಿ ಅನುಷ್ಠಾನದಲ್ಲಿ ಖಾತ್ರಿಪಡಿಸಿಕೊಳ್ಳುವುದು. ಯಶಸ್ವಿ ಅನುಷ್ಠಾನಕ್ಕೆ ಕಾರಣರಾದವರನ್ನು ಅಭಿನಂದಿಸುವುದು. ಕೊರತೆಗಳಿದ್ದರೆ ಸೂಕ್ತ ಮಾರ್ಗದರ್ಶನದೊಂದಿಗೆ ಕಾರ್ಯಪ್ರವೃತ್ತರಾಗಲು ಉತ್ತೇಜಿಸುವುದು. :
ಈ ನಮೂನೆಯ ಸಂಗಡ ಪಠ್ಯೇತರ ಚಟುವಟಿಕೆವಾರು ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಉದಾಹರಣೆಯಾಗಿ ಕೆಲವು ಕಾರ್ಯಗಳ ಪಟ್ಟಿಯನ್ನು ನೀಡಲಾಗಿದ್ದು. ಇದೇ ಅಂತಿಮವಲ್ಲ. ತಮ್ಮ ಶಾಲಾ ಸನ್ನಿವೇಶ, ಆಸಕ್ತಿ ಮತ್ತಿತರ ಅಂಶಗಳ ಆಧಾರದಲ್ಲಿ ಹೆಚ್ಚುವರಿ ಕಾರ್ಯಗಳನ್ನು ಹಮ್ಮಿಕೊಳ್ಳಬಹುದು.

ಒಟ್ಟಾರೆ ಹಿಂದಿನ ತರಗತಿಯಿಂದ ಉತ್ತೀರ್ಣರಾಗಿ ಬಂದ ವಿದ್ಯಾರ್ಥಿಗಳಲ್ಲಿ ಈಗಿನ ತರಗತಿಯ ಕಲಿಕೆಗೆ ಬೇಕಾದ ಕನಿಷ್ಠ ಸಾಮಥ್ರ್ಯ/ಕಲಿಕಾಂಶಗಳು ಎಷ್ಠರಮಟ್ಟಿಗೆ ಇವೆ ಎಂಬುದನ್ನು ದೃಡಪಡಿಸಿಕೊಳ್ಳುವ ಜೊತೆಗೆ ಈಗ ಕಲಿಯುತ್ತಿರುವ ತರಗತಿಯನ್ನು ನಿರ್ವಹಣೆ ಮಾಡುವ ಜೊತೆಗೆ ಪರಿಹಾರ ಬೋಧನೆ ಮಾಡುವ ಮೂಲಕ ಪ್ರತಿಯೊಬ್ಬ ಶಿಕ್ಷಕ/ಕಿ ಯರು ತಮ್ಮ ತಮ್ಮ ಕಾರ್ಯ ನಿರ್ವಹಿಸಲು ಮಾಡಿಕೊಂಡ ಈ ಶಾಲಾ ಶೈಕ್ಷಣಿಕ ಯೋಜನೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಮೂಲಕ ಗುಣಾತ್ಮಕ ಶಿಕ್ಷಣದತ್ತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಸಾಧಿಸಬೇಕು.
-ವೈ. ಬಿ. ಕಡಕೋಳ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x