ವಿದೇಶದಲ್ಲಿ ಮಕ್ಕಳ ಹಕ್ಕುಗಳು- ಸ್ಥಿತಿಗತಿ: ಶಶಿ ರಾವ್

ಆಸ್ಟ್ರೇಲಿಯಾ ಮದುವೆಯನ್ನು ಒಂದು ಬಂಧನವೆಂದು ಅಷ್ಟಾಗಿ ಇಷ್ಟಪಡದ ದೇಶ. ಇಲ್ಲಿ ಮಗುವಿಗಾಗಿ ಮದುವೆಯೇ ಆಗಬೇಕಿಲ್ಲ, ಸಾಮಾನ್ಯವಾಗಿ ಇಲ್ಲಿನ ಜನ ಡಿಫ್ಯಾಕ್ಟೋ ಅಥವಾ ಬರಿಯ ಪಾರ್ಟನರ್ಸ್ ಆಗಿಯೇ ಬಹಳಷ್ಟು ವರ್ಷ ಜೊತೆಯಲ್ಲಿ ಕಳೆಯುತ್ತಾರೆ. ಸರಿ ಸುಮಾರು ೪/೫ ವರ್ಷಗಳ ನಂತರ ಕೂಡುಜೀವನದಲ್ಲಿ ಬೇಸರ ಬಂದೊಡನೆ ಪರಸ್ಪರ ಒಪ್ಪಂದದಿಂದಲೋ, ಕಚ್ಚಾಡುತ್ತಲೋ ಬೇರೆಯಾಗುತ್ತಾರೆ. ಈ ಮಧ್ಯೆ ಒಂದೆರಡು ಮಕ್ಕಳ ಹೆತ್ತಿರುತ್ತಾರಾದ್ದರಿಂದ ಆ ಮಕ್ಕಳನ್ನು ಒಂದು ವಸ್ತುವಿನಂತೆ ಪರಿಗಣಿಸಿ ಅವುಗಳ ಲಾಲನೆ ಪಾಲನೆ, ಬೆಳೆಯುವ ಸ್ಥಳ, ಯಾರೊಡನೆ ಬೆಳೆಯ ಬೇಕೆಂಬುದೆಲ್ಲ ಪರಸ್ಪರ ಚರ್ಚೆಯಿಂದಲೋ ಅಥವಾ ಕೋರ್ಟಿನ ಮುಖಾಂತರವೋ  ನಿರ್ಧರಿಸಿಕೊಂಡು ಮುಂದಿನ ಸಂಗಾತಿಯ ಅನ್ವೇಷಣೆಯಲ್ಲಿ ತೊಡಗುತ್ತಾರೆ.

ಇಲ್ಲಿಯ ಮಕ್ಕಳಿಗೆ ಇನ್ನು ಭ್ರೂಣದಲ್ಲಿರುವಾಗಲೇ (೧೬ ವಾರದ ನಂತರ) ಸರ್ಕಾರದ ರಕ್ಷಣೆ ಲಭ್ಯವಾಗುವದು. ೧೬ನೇ ವಾರದ ನಂತರ ಉದ್ದೇಶ ಪೂರ್ವಕ ಭ್ರೂಣಕ್ಕೆ ಹಾನಿ ಮಾಡುವಂತಿಲ್ಲ. ಮಗು ಹುಟ್ಟಿದ ಕೂಡಲೇ ಸರ್ಕಾರವು ಅದರ ಅದರ ಹೆತ್ತವರಿಗೆ "ಬೇಬಿ ಬೋನಸ್" ಎಂದು AUD $ ೭೦೦೦ ಕೊಡುತ್ತದೆ ( ಮಗುವಿನ ಪಾಲನಾವೆಚ್ಚವೆಂದು). ಅಷ್ಟಲ್ಲದೇ ತಾಯಿ ಕೆಲಸ ಮಾಡುತ್ತಿದ್ದಲ್ಲಿ ಆಕೆಗೆ ೧೮ ವಾರ ವೆಚ್ಚಭರಿತ ರಜೆ ಕೊಡುತ್ತದೆ ( paid parental leave). ಮಗುವಿಗೆ ಕಾಲಕಾಲಕ್ಕೆ ಸರಿಯಾಗಿ ( ೩,೬,೧೮ ತಿಂಗಳಿಗೆ) ಎಲ್ಲ ಚುಚ್ಚುಮದ್ದುಗಳ ಕೊಡಿಸಲೇಬೇಕೆಂಬ ನಿಯಮವಿದ್ದು ಹಾಗೆ ಮಾಡಲಿಲ್ಲವಾದಲ್ಲಿ ಆ ಮಗುವಿನ ಹೆತ್ತವರಿಗೆ ಸಂದಾಯವಾಗುತ್ತಿದ್ದ ಚೈಲ್ಡ್ ಕೇರ್ ಬೆನಿಫಿಟ್ ( ಶಿಶು ಪಾಲನಾ ವೆಚ್ಚ, ಮಗುವು ೧೮ ವರ್ಷ ತುಂಬುವ ವರೆಗೂ ಹಂತ ಹಂತವಾಗಿ ದೊರೆಯುವ) ಅನುದಾನವನ್ನು ನಿಲ್ಲಿಸಲಾಗುತ್ತದೆ. 

ಇನ್ನು ಮನೆ ಮದ್ದು ಗೊತ್ತೆಂದು ಮಕ್ಕಳಿಗೆ ಏನೋ ಕೊಡುವಂತೆಯೂ ಇಲ್ಲ ( ಇತ್ತೀಚೆಗಷ್ಟೇ ದಕ್ಷಿಣ ಭಾರತದ ದಂಪತಿಗಳಿಗೆ ಜೈಲು ಶಿಕ್ಷೆಯಾಯಿತು, ಕಾರಣ ಅವರು ತಮ್ಮ ಅನಾರೋಗ್ಯ ಪೀಡಿತ ಮಗುವಿಗೆ ಹೋಮಿಯೋಪತಿ ಚಿಕಿತ್ಸೆ ಮಾಡಿಸಿ ಫಲಕಾರಿಯಾಗದೆ ಮಗು ಮೃತಪಟ್ಟಿತಾದ್ದಾರಿಂದ ಹಾಗೂ ಇಲ್ಲಿ ಹೋಮಿಯೋಪತಿ ಪದ್ದತಿಯ ಬಗ್ಗೆ ಕಾನೂನಿನಡಿಯಲ್ಲಿ ಏನೂ ಹೇಳಿಲ್ಲವಾದ್ದರಿಂದ ಆ ದಂಪತಿಗಳಿಗೆ ಸೆರೆವಾಸ ವಿಧಿಸಲಾಯಿತು.
 
ಇನ್ನು ಮಕ್ಕಳ ಕ್ಷೇಮಾಭಿವೃದ್ದಿಗಾಗಿಯೇ ಇರುವ ಸರ್ಕಾರದ ಶಾಖೆಗಳಾದ ಚೈಲ್ಡ್ ಪ್ರೊಟೆಕ್ಷನ್ ಸರ್ವಿಸಸ್, ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಸರ್ವಿಸಸ್, ಡಿಪಾರ್ಟ್ಮೆಂಟ್ ಆಫ್ ಸೋಶಿಯಲ್ ಸೆಕ್ಯೂರಿಟಿಗಳು ಯಾವದೇ ಮಗು ಶೋಷಣೆಗೆ, ದೌರ್ಜನ್ಯಕ್ಕೆ, ಹಿಂಸೆಗೆ ಒಳಗಾದ (ಸಾಮಾನ್ಯವಾಗಿ ಇದಕ್ಕೆ ಮಲತಂದೆ ಅಥವಾ ಮಲತಾಯಿ ಕಾರಣರಾಗಿರುತ್ತಾರೆ) ವಿಚಾರ ತಿಳಿದೊಡನೆ ಅಂತಹ ಮಗುವನ್ನು ತಕ್ಷಣವೆ ಅಂತಹ ವ್ಯಕ್ತಿ ಹಾಗು ವಾತಾವರಣದಿಂದ ಬೇರೆ ಮಾಡಿ ಫಾಸ್ಟರ್ ಕೇರ್ ( ಸರಿಯಾಗಿ ನೋಡಿಕೊಳ್ಳಬಯಸುವ ಕುಟುಂಬ) ಫ್ಯಾಮಿಲಿಗೆ ಕೊಡುತ್ತಾರೆ. ಹೆತ್ತವರು ಮಗುವು ಬೇಕಿದ್ದಲ್ಲಿ ಕೋರ್ಟಿನ ಮುಖೇನ  ಕಾನೂನು ಬದ್ದವಾಗಿಯೇ ಪಡೆಯಬೇಕಿರುತ್ತೆ. ಈ ಎಲ್ಲ ಪ್ರಕರಣಗಳು ಹಾಗು ನಡುವಳಿಕೆಗಳು ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರಿ ಆ ಮಗುವು ADHD (attention deficit hyperactivity disorder) ನಂತಹ ಮೆಡಿಕಲ್ ಕಂಡಿಶನ್ ಜೊತೆ ಬೆಳೆಯುವ ಸಾದ್ಯತೆ ಅತೀ ಹೆಚ್ಚು. ಹಾಗು ಇಲ್ಲಿನ ಮಕ್ಕಳಲ್ಲಿ ಇಂತಹ ಕಂಡೀಶನ್ ತೀರ ಸಾಮಾನ್ಯವಾಗಿಹೋಗಿದೆ. 

ಇಲ್ಲಿನ ಚೈಲ್ಡ್ ಕೇರ್ ನಲ್ಲಿ ಮಕ್ಕಳನ್ನು  ಪ್ರೀಸ್ಕೂಲ್ ಗೆ  ಸೇರಿಸಲು ಪ್ರಿಪೇರ್ ಮಾಡಲೇ ಬೇಕೆಂದು ನಿಯಮವಿದೆ. ಅಷ್ಟಲ್ಲದೇ ಚೈಲ್ಡ್ ಕೇರ್ ನಲ್ಲಿ ಮಕ್ಕಳಿಗೆ ಸಾಮಾನ್ಯ ವಿಷಯಗಳು, ಟೇಬಲ್ ಮ್ಯಾನರ್ಸ್, ಮಾತನಾಡುವ, ನಡೆದುಕೊಳ್ಳುವ ರೀತಿ ನೀತಿಗಳನ್ನು ಕಲಿಸಲಾಗುತ್ತದೆ ಹಾಗು ಈ ಚೈಲ್ಡ್ ಕೇರ್ ಗಳನ್ನು  ಸ್ಥಳೀಯ ಕೌನ್ಸಿಲ್ಗಳು   ನಡೆಸುತ್ತವೆ( ಕೆಲವೊಂದು ಖಾಸಗಿ  ಸಂಸ್ಥೆಗಳು ಈಗೀಗ ಮುಂದೆ ಬರುತ್ತಿವೆ). ಇಲ್ಲಿ ಮಕ್ಕಳಿಗೆ ಶಾಲೆಯಲ್ಲಾಗಲಿ, ಡೇ ಕೇರ್ನನಲ್ಲಾಗಲಿ ಯಾರೂ bully (ಜಬರ್ದಸ್ತ್ ) ಮಾಡುವದು ಆಗಲಿ ಮೈಯನ್ನು ಮುಟ್ಟಿ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ. ಇನ್ನು ಶಾಲೆಗಳಲ್ಲಿ ಟೀಚರ್ ಗಳು ಹೊಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  

ವಿಧ್ಯಾರ್ಥಿಗಳಿಗೆ ಶಾಲಾಮಕ್ಕಳಿಗೆಂದೇ ಮೀಸಲಾಗಿರುವ ( ಶಾಲಾ ಸಮಯದಲ್ಲಿ ಮಾತ್ರ ಅಂದರೆ ಬೆಳಿಗ್ಗೆ ೮:೦೦ – ೯:೩೦, ಮಧ್ಯಾಹ್ನ ೨:೩೦-೪:೦೦ ಮೀಸಲಾಗಿರುತ್ತದೆ) ಬಸ್ ಗಳಲ್ಲಿ, ಟ್ರೈನ್ ಗಳಲ್ಲಿ,  ಫೇರೀ ( ದೋಣಿ, ಬೋಟ್)ಗಳಲ್ಲಿ ಉಚಿತ ಪಾಸು ಇರುತ್ತದೆ. ಅಷ್ಟಲ್ಲದೇ ಯಾವದೇ ಜೂ, ಪಾರ್ಕ್ಗಳಿಗೆ ಹಾಗು ಮ್ಯೂಸಿಯಂ, ಆರ್ಟ್ ಸೆಂಟರ್ ಗಳಿಗೆ ರಿಯಾಯತಿ ದರದಲ್ಲಿ ಪ್ರವೇಶಾವಕಾಶವಿರುತ್ತದೆ. ಶಾಲಾವೇಳೆಯಲ್ಲಿ ವಾಹನಚಾಲಕರು ೪೦ ಕಿ. ಮಿ ಗಿಂತ ಹೆಚ್ಚು ವೇಗವಾಗಿ ಶಾಲೆಗಳ ಹತ್ತಿರ ( school zone) ಚಲಿಸುವಂತಿಲ್ಲ.  ಶಾಲಾಮಕ್ಕಳು ಶಾಲಾ ಸಮಯದಲ್ಲಿ ಚಕ್ಕರ್ ಹೊಡೆದು ಹೊರಗೆ ಎಲ್ಲೂ ಅಡ್ಡಾಡುವಂತಿಲ್ಲ, ಹಾಗೆ ಮಾಡಿ ಸಿಕ್ಕಿಕೊಂಡರೆ ಆ ವಿದ್ಯಾರ್ಥಿಗೆ ಸಿಗುವ ಎಲ್ಲ ಸವಲತ್ತುಗಳನ್ನು ತಡೆಹಿಡಿಯಲಾಗುತ್ತದೆ ಮತ್ತು ಹೆತ್ತವರಿಗೆ ಸಂದಾಯವಾಗುತ್ತಿದ್ದ ಅನುದಾನವನ್ನು ತಡೆಹಿಡಿಯಲಾಗುತ್ತದೆ. ೧೮ ವರ್ಷದವರೇನಾದರೂ ಅಕೃತ್ಯವನ್ನೆಸಗಿದರೆ ಅದರ ಬೆಲೆ ಹೆತ್ತವರಿಂದ ವಸೂಲಿ ಮಾಡಲಾಗುತ್ತದೆ. 

ಇಷ್ಟೆಲ್ಲಾ ಸವಲತ್ತು, ಸೌಕರ್ಯ ಹಾಗು ಅನುದಾನಗಳಿದ್ದರೂ ಅಂತಿಮ ಫಲಿತಾಂಶ ಮಾತ್ರ (ನಿರಾಸೆ ತರಿಸುವಂತೆ) ಶೇಕಡಾ ೧೦ ಭಾಗ ವಿಧ್ಯಾರ್ಥಿಗಳಷ್ಟೇ ಉನ್ನತ ವ್ಯಾಸಾಂಗ ಅಥವ ಕಾಲೇಜ್ ವ್ಯಾಸಂಗವನ್ನು ಮುಂದುವರೆಯುತ್ತಾರೆ.  ಉಳಿದ ೯೦ ಭಾಗ ಶೈಕ್ಷಣಿಕ ಹಾದಿಯ ಬಿಟ್ಟು ಸೂಪರ್ ಮಾರ್ಕೆಟ್ ಗಳಲ್ಲಿ, ಮ್ಯಾಕ್ ಡೊನಾಲ್ಡ್ ಗಳಲ್ಲಿ ಕೆಲಸಗಿಟ್ಟಿಸಿಕೊಂಡು ( ಇಂತಹವರು ಶಾಲಾಮಟ್ಟ ಮುಗಿಸುವುದೇ ಚಿಕ್ಕದೊಂದು ಕೆಲಸ ಸಿಕ್ಕರೆ ಸಾಕು ಎಂಬ ಮನೋಬಾವನೆಯಿಂದ, ಇದಕ್ಕೆ ಶೈಕ್ಷಣಿಕವಾಗಿ ಉತ್ತಮರಲ್ಲದ ಹೆತ್ತವರು, ಹಾಗು ಬೆಳೆದ ವಾತಾವರಣ ಎರಡೂ ಕಾರಣಗಳಾಗಿವೆ.)    ಆರ್ಥಿಕವಾಗಿ ನರಳುತ್ತಾ ಬದುಕು ನಡೆಸುತ್ತಾರೆ. 

ಇಲ್ಲಿ ಹೊರದೇಶದಿಂದ ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಅಂತವರು ಇಲ್ಲಿ ನೆಲೆಸಿ ಉನ್ನತ ಕೆಲಸ ಪಡೆಯುತ್ತಿರುವದನ್ನು ಕಾಣಬಹುದಾಗಿದೆ. ಇಲ್ಲಿ ವಲಸಿಗರ (immigrants) ಮಕ್ಕಳು ಉನ್ನತ ವ್ಯಾಸಂಗದಲ್ಲಿ ಸಿಂಹಪಾಲು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀರ ಇತ್ತೀಚಿಗೆ ಹೊಸ ರೀತಿಯೊಂದು ಶುರುವಾಗುತ್ತಲಿದೆ, ಇಲ್ಲಿನ ಗಂಡಸರು ಬೇರೆ ಬಡ ದೇಶಗಳಿಂದ ಹೆಣ್ಣನ್ನು ತರುತ್ತಿದ್ದಾರೆ. ಹಾಗೆ ಬರುವ ಹೆಣ್ಣಿನ ಜೊತೆ ವೈವಾಹಿಕ ಸಂಬಂಧ ಇರಲೇ ಬೇಕೆಂಬ ಕಾನೂನಿರುವದರಿಂದ ರಿಜಿಸ್ಟರ್ಡ್ ಮದುವೆ ಆಗಿಯೇ ಕರೆತರುತ್ತಿದ್ದಾರೆ. ಇವರ ಮಕ್ಕಳು ಪ್ರಾರಂಭದಲ್ಲಿ ವರ್ಣ ಬೇಧವನ್ನನುಭವಿಸಿದರೂ ಭವಿಷ್ಯ ಉಜ್ವಲಗೊಳಿಸುವಲ್ಲಿ ಸಫಲರಾಗುತ್ತಾರೆ.  ಇನ್ನೊಂದು ಸಂತಸದ ಸಂಗತಿಯೆಂದರೆ ಇಲ್ಲಿನ ಮೂಲನಿವಾಸಿಗಳೂ ( ಆದಿವಾಸಿ, aboriginal  people) ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ  ಹಾಕಲು ಪ್ರಯತ್ನಿಸುತ್ತಿರುವದು. ಈ ಮೊದಲೆಲ್ಲ ಈ ವರ್ಗದ ಜನ ತಮಗೆ ಸರ್ಕಾರದಿಂದ ಬರುವ ಅಪಾರ ಗೌರವ ಧನ ಹಾಳುಮಾಡುತ್ತಾ ತಮ್ಮ ಮಕ್ಕಳನ್ನು ಅಧೋಗತಿಯ, ಅನಾಗರೀಕ ಅವನತಿಯ ಹಾದಿಗೆ ತಳ್ಳುತ್ತಾ ಕಾಲ ಕಳೆಯುತ್ತಿದ್ದು ಈಗೀಗ  ತಮ್ಮ ತಪ್ಪಿನ್ನು ಅರಿತು ಬದಲಾಗುತ್ತಿರುವದ ಕಾಣಬಹುದು. ಇಷ್ಟೆಲ್ಲಾ ಅನುಕೂಲ, ಸರ್ಕಾರದ ಬೆಂಬಲ, ಸವಲತ್ತುಗಳಿದ್ದರೂ ಇಲ್ಲಿನ ಮಕ್ಕಳ ಶೈಕ್ಷಣಿಕ ಮಟ್ಟ ಮಾತ್ರ ಮುಂದುವರೆದ ದೇಶಗಳ ಪಟ್ಟಿಯಲ್ಲಿ ೧೩ ನೇ ಸ್ಥಾನದಲ್ಲಿದೆ. ಹಲ್ಲಿದ್ದವರಿಗೆ ಕಡಲೆ ಇಲ್ಲವೆಂಬ ಗಾದೆ ನಿಜವಾಗುತ್ತಲಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Arathi ghatikar
9 years ago

Australia dalli makkala hakkugalu ,  haagu  sarkaara da soulabhyagala bagge savivaravaagi barediddeeri . Viparvyaasa vendare shekhada 10 rasthu  makkalu maatra ve shikshana poooraisuvaralli safalaraaguttiruvudu . Idara baggeyoo kooda anadre school drop outs college drop outs bagge sarakaara enadru chintane maadidre olitu . Lekana chennagide.

 

 

Shashi rao
Shashi rao
9 years ago

ಧನ್ಯವಾದಗಳು ಶ್ರೀಮತಿ ಆರತಿಯವರೆ, 
ಸರ್ಕಾರದ ಮಟ್ಟಿಗೆ ಹೇಳುವದಾದರೆ, ಬಹಳಷ್ಟು ಕಾನೂನುಗಳ ಮಾಡಿದೆ, ಅವುಗಳ ಪಾಲನೆಗೆ ಜನರ ನೇಮಿಸಿದೆ. ಉದಾಹರಣೆಗೆ; 
ಶಾಲಾ ಸಮಯದಲ್ಲಿ ವಿಧ್ಯಾರ್ಥಿಗಳು ಹೊರಗೆಲ್ಲೋ ಅಡ್ಡಾಡುವಂತಿಲ್ಲ, ಹಾಗೆ ಸಿಕ್ಕಿಬಿದ್ದಲ್ಲಿ ಕ್ರಮ ಕೈಗೊಳ್ಳುವಿಕೆ, 
ಶಿಶುಗಳ ಹಿತರಕ್ಷಣೆಗೆ ಪ್ರತ್ಯೆಕವಾಗಿಹ ಖಾತೆ, ಜನ ಹಾಗು  ಹಣವನ್ನು ವ್ಯಯಿಸಿದೆ, ವಿಧ್ಯಾರ್ಥಿಗಳಿಗೆ ಎಂದೇ ಸ್ಟೂಡೆಂಟ್ಸ್ ಲೋನ್ ಕೊಡುವದು, ಅವರು ಕೆಲಸಕ್ಕೆ ಸೇರಿ ದುಡಿಯಲಾರಮ್ಬಿಸಿದ ನಂತರ ವಾಪಸ್ ಮಾಡುವಂತೆ ಏರ್ಪಾಡಿರುವದು, ವಿಧ್ಯಾರ್ಥಿಗಳು ಇನ್ನೂ ಶಾಲಾ ಕಾಲೆಗಿನಲ್ಲಿ ಇದ್ದಾಗಲೇ ಅವರಿಗೆ ವರ್ಕ್ experience ಕೊಡುವದು ಹೀಗೆ ಹತ್ತು ಹಲವು ರೀತಿಯಿಂದ ನೆರವಾಗುತ್ತಿದ್ದರೂ " ಚಿನ್ನವೆ ಸರಿಯಿಲ್ಲವೆಂದ ಮೇಲೆ ಆಚಾರಿಗೆ ಏನು ಹೇಳುವದು?" ಎಂಬಂತೆ ಮೇಲ್ಕಂಡ ಸೌಕರ್ಯಗಳ ಉಪಯೋಗಿಸಿಕೊಂಡು ಮುಂದೆ ಬರುವ ವಿಧ್ಯಾರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. 

 

 

Gaviswamy
9 years ago

ಮಾಹಿತಿಪೂರ್ಣ ಲೇಖನ.. ಇಂತಹ ಕಟ್ಟುನಿಟ್ಟಿನ ನಿಯಮಗಳನ್ನು ನಮ್ಮ ದೇಶದಲ್ಲಿಯೂ ತುರ್ತಾಗಿ ಅಳವಡಿಸಿಕೊಳ್ಳಬೇಕಿದೆ.

hemashree
9 years ago

sir 

nemma mahithigagi danyavadagalu naavu gnanavi grminabiruddi samstheyalli work mdutiddu sarkari shalegala uddarave deshoossarave kelasamaduttiddu vedeshadalli makkalabagge sakara hege javabdsri thegedu kolluttade yandu sarch maduttidde nemma barahadinda hecchina mahiti thiliyethu nanage thumba kushi aythu namma deshallu  e kaaunu baruvanthe madalu naanu shrmisusutthene nemma shakara bekagi thammalli manavi.

4
0
Would love your thoughts, please comment.x
()
x