ವಾರ ಮೂರು….. :)))

 

ಕಳೆದ ವಾರ ಫೇಸ್ ಬುಕ್ ನಲ್ಲಿ ಚಿಕ್ಕಲ್ಲೂರು ಅನ್ನೋ ಹೆಸರು ನೋಡಿ ಆಶ್ಚರ್ಯವಾಗಿತ್ತು.  ಹಿರಿಯ ಪತ್ರಕರ್ತರಾದ ಕುಮಾರ ರೈತ ಅವರು ಚಿಕ್ಕಲ್ಲೂರು ಜಾತ್ರೆಯ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವುದರ ಜೊತೆಗೆ "ಜನಪದ ನಾಯಕ ಸಿದ್ದಪ್ಪಾಜಿ ಸ್ಮರಣೆಗೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಜಾತ್ರೆ ನಡೆಯುತ್ತದೆ. ಜ. 27ರಂದು ನಾನು ಹೋಗಿದ್ದೆ. ಅಲ್ಲಿನ ಚಂದ್ರಮಂಡಲದ ಬೆಂಕಿ ಎತ್ತ ಹೆಚ್ಚು ಉರಿಯುವುದೋ ಅತ್ತ ಮುಂದಿನ ಹಂಗಾಮಿನಲ್ಲಿ ಸಮೃದ್ಧತೆ ಇರುತ್ತದೆ ಎಂಬುದು ನಂಬಿಕೆ" ಎಂಬ ಸಾಲನ್ನು  ಫೋಟೋಗಳ ಮೇಲೆ ವಿವರಣೆಯಂತೆ ಬರೆದಿದ್ದರು. 

ಸಿದ್ದಪ್ಪಾಜಿ ನಮ್ಮಜ್ಜಿ (ತಾಯಿಯ ತಾಯಿ) ಮನೆ ದೇವರು. ನಮ್ಮಜ್ಜಿಗೆ ಆ ದೇವರ ಮೇಲಿರುವ ಭಕ್ತಿ ಅಪಾರ ಎನ್ನಬಹುದು. ಅಂತಹ ದೇವರ ಜಾತ್ರೆಯ ದೃಶ್ಯಗಳನ್ನು ಅಂತರ್ಜಾಲ ತಾಣದಲ್ಲಿ ಫೋಟೋಗಳ ರೂಪದಲ್ಲಿ ನೋಡಿದಾಗ, ಎಲ್ಲೋ ಕಳೆದು ಹೋಗುತ್ತಿರುವ ನಮ್ಮ ಸಂಸ್ಕೃತಿಗಳನ್ನು  ಒಮ್ಮೆ ನೋಡಿ ಎಂದು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿದ ಹಾಗೆ ಭಾಸವಾಗುತ್ತದೆ. ಇಂತಹ ಜಾತ್ರೆಯ ದೃಶ್ಯಗಳನ್ನೋ ಇಲ್ಲ ಮತ್ಯಾವುದೋ ಆಚರಣೆಯ ದೃಶ್ಯಗಳನ್ನೋ ಛಾಯಾಚಿತ್ರ ರೂಪದಲ್ಲೋ ವಿಡೀಯೋ ರೂಪದಲ್ಲೋ ನೋಡಿದಾಗ ಇಂತಹ ಆಚರಣೆಗಳನ್ನು ನಮ್ಮ ಸಂಸ್ಕೃತಿಗಳನ್ನು ಅಕ್ಷರಗಳಲ್ಲಿ ಕಟ್ಟಿ ಕೊಡುವ ಪ್ರಯತ್ನ ಯಾಕೆ ಆಗುತ್ತಿಲ್ಲ ಎಂಬ ಮಾತನ್ನು ಆಗಾಗ ನಾನು ಹೇಳುತ್ತಲೇ ಬಂದಿದ್ದೇನೆ. 

ಸಾಹಿತ್ಯ ಅಂದರೆ ಬರೀ ಕವನಗಳು ಎಂದುಕೊಂಡಿರುವ ಯುವ ಸಾಹಿತಿಗಳು ನಮ್ಮ ಸಂಸ್ಕೃತಿಗಳನ್ನು ತಮ್ಮ ಬರಹಗಳಲ್ಲಿ ಕಟ್ಟಿಕೊಡಬೇಕು. ಆಗಷ್ಟೇ ನಮ್ಮ ಸಂಸ್ಕೃತಿಗಳನ್ನು ಅಕ್ಷರ ರೂಪದಲ್ಲಾದರೂ ಜೀವಂತವಾಗಿಡಬಹುದು. 

ನಮ್ಮ ಕಲೆ ಮತ್ತು ಸಂಸ್ಕೃತಿಗಳನ್ನು ಅಂತರ್ಜಾಲದಲ್ಲಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವವರನ್ನು ಪ್ರೋತ್ಸಾಹಿಸುವ ಆಶಯವನ್ನೂ ಸಹ ಹೊತ್ತಿರುವ "ಪಂಜು" ಮೂರನೇ ವಾರದ ಸಂಚಿಕೆಯನ್ನು ಹೊತ್ತು ನಿಮ್ಮ ಮುಂದೆ ನಿಂತಿದೆ. ಎಂದಿನಂತೆ ಕಥಾಲೋಕದಿಂದ ಹಿಡಿದು ವ್ಯಂಗ್ಯಚಿತ್ರವನ್ನು ಪ್ರಕಟಿಸುವ ಪಂಜು, ಈ ವಾರದ ಸಂಚಿಕೆಯಲ್ಲಿ ಛಾಯಾಚಿತ್ರ ವಿಭಾಗದಲ್ಲಿ ಮೊದಲ ಬಾರಿಗೆ ಛಾಯಾಚಿತ್ರಗಳನ್ನು ಹೊತ್ತು ತಂದಿದೆ. ಪಂಜುವಿನ ಮೇಲೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಆಶಿಸುತ್ತಾ ಪಂಜುವಿನ ಮೂರನೆಯ ವಾರದ ಸಂಚಿಕೆ ಇಗೋ ನಿಮ್ಮ ಮಡಿಲಿಗೆ.. 

ಮತ್ತೆ ಸಿಗೋಣ..

ನಿಮ್ಮ ಪ್ರೀತಿಯ

ನಟರಾಜು  

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
PARTHASARATHY N
11 years ago

ನಿಮ್ಮ ಮಾತು ನಿಜ ನಮ್ಮ , ವಿದೇಶಿ ಪ್ರಭಾವಕ್ಕೆ ಸಿಕ್ಕಿ ನಶಿಸಿ ಹೋಗುತ್ತಿರವ ನಮ್ಮ ಸಂಸ್ಕೃತಿ ಯನ್ನು ಅಕ್ಷರಗಳಲ್ಲಿ ಕಟ್ಟುವ ಅಗತ್ಯವಿದೆ ! ಆದರೆ ಅದೇನೊ   ಮೂರು ಪುಟಗಳನ್ನು ಓದುವಷ್ಟು ತಾಳ್ಮೆ ಈಗಿನ ಓದುಗರಿಗೆ ಕಡಿಮೆ ! ಮೂರು ಸಾಲು ಪದ್ಯಗಳೆ ಹೆಚ್ಚು ಮೆಚ್ಚು !

chinmay mathapati
chinmay mathapati
11 years ago

ನಿಜವಾದ ಅಭಿಪ್ರಾಯವನ್ನು ಸಂಪಾದಕೀಯ ಮೂಲಖ ವ್ಯಕ್ತ ಪಡಿಸಿದ್ದೀರಿ. ಅಳಿದು ಹೋಗುತ್ತಿರುವ ನಮ್ಮ ಅಗಣಿತ ಸಂಸ್ಕೃತಿಗಳನ್ನು, ಸಾಹಿತ್ಯದ ಮೂಲಖ ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಗಳಿಗಾಗಿ ಕಟ್ಟಿ ಕೊಡುವ ಅನಿವಾರ್ಯತೆ ಬಂದೊದಗಿದೆ. ಇವತ್ತಿನ ಪುಟ್ಟ ಮಕ್ಕಳನ್ನು ಹಾಲು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿದರೆ, ಆ ಮಕ್ಕಳು ಬಾಟಲ್ ನಿಂದ ಎಂದು ಯಾವ ಅಳುಕಿಲ್ಲದೇ ಹೇಳುವಂತಾಗಿದೆ. ಆದ್ದರಿಂದ ಸಾಹಿತ್ಯ ಕೃಷಿ ನಮ್ಮ ಶ್ರೀಮಂತ ಸಂಸ್ಕೃತಿಯಡೆಗೆ ತನ್ನ ಒಲವನ್ನು ತೋರಲಿ. ………………..!!!!!!ಶುಭವಾಗಲಿ ಪಂಜು…!!!!!!

Santhoshkumar LM
11 years ago

ಚಿಕ್ಕಲ್ಲೂರು ನಮ್ಮೂರಿಂದ ಸ್ವಲ್ಪವೇ ದೂರದಲ್ಲಿದೆ.
ಆ ಊರಿನಲ್ಲಿ ಜಾತ್ರೆ ನಡೆದರೆ ನಮ್ಮೂರಿಂದ ಬಂಡಿ ಕಟ್ಕೊಂಡು ಊರವರೆಲ್ಲ ಹೋಗ್ತಿರ್ತಾರೆ.
ಅವೆಲ್ಲ ನೆನಪಿಗೆ ಬಂದವು.

ನೆನಪಿಸಿದ್ದಕ್ಕೆ ಥ್ಯಾಂಕ್ಸ್ 🙂

ಪಂಜು ಉರಿಯುತ್ತಿರಲಿ……ಹೀಗೆಯೇ!! all the best

Prasad V Murthy
11 years ago

ಮೂರನೇ ಸಂಚಿಕೆ ಚೆನ್ನಾಗಿದೆ, ಅಭಿನಂದನೆಗಳು ಪಂಜು ಬಳಗಕ್ಕೆ. 🙂
– ಪ್ರಸಾದ್.ಡಿ.ವಿ.

Utham danihalli
11 years ago

Samskruthi sampradaya yendakashanna nenapige barodhe balya amma ajjiya kai hididu jathreyali sambromisodhe ondu kushi
Nimma sampadakiya adhelavanu nenapisithu odhugarige horayagadanthe enastu vibina ankannagallu mudi barali panju prajvalisali

ಆತ್ರಾಡಿ ಸುರೇಶ ಹೆಗ್ಡೆ

"ಸಂಪಾದಕೀಯ" ಅನ್ನುವುದು ಪಂಜುವಿನ  ನೂತನ  ಸಂಚಿಕೆಯನ್ನು ಓದುಗನ ಕೈಗೆ ತಲುಪಿಸುವ "ಅಂಚೆ ಮಾಮನ" ವರದಿಯಾಗಿ ಉಳಿಯದೇ, ತಾವು ಪ್ರತಿ ವಾರ ಆರಿಸಿಕೊಳ್ಳುವ ವಿಷಯದ ಬಗೆಗಿನ ಈ ಬರಹ ಇನ್ನೂ ಸಮೃದ್ಧವಾಗಿ, ಓದುಗನ ಪಾಲಿಗೆ "ತಟ್ಟೆ ಊಟ" ದಂತಾಗಿರದೇ "ಪೂರ್ತಿ ಊಟ" ವಾಗಿರಲೆಂಬುದು ನನ್ನ ಆಶಯ.

ಅಭಿನಂದನೆಗಳು ಹಾಗೂ ಅಭಿವಂದನೆಗಳು

Nataraju S M
11 years ago

ಸಹೃದಯಿಗಳೇ, 
ನಿಮ್ಮ ಸಹಕಾರ ಸದಾ ಹೀಗೆಯೇ ಇರಲಿ..
ಮಾನ್ಯ ಆ ಸು ಹೆಗ್ಡೆಯವರೇ, ಲೇಖನಗಳನ್ನು ಬರೆಯಲು ನನ್ನ ಇತರ ಗೆಳೆಯರೂ ಸಹ ತಿಳಿಸಿದ್ದಾರೆ.. ಖಂಡಿತಾ ಬರೆಯಲು ಪ್ರಯತ್ನಿಸುವೆ..
ಧನ್ಯವಾದಗಳು..

Dr. Ganesh Hegde,Neelesara
Dr. Ganesh Hegde,Neelesara
11 years ago

ಪಂಜು ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿಯ ಕಿಚ್ಚು ಹಚ್ಚಲಿ

8
0
Would love your thoughts, please comment.x
()
x