ಹೆಲ್ದೀ ಲೈಫ್ ಅನ್ನೋದು ಈಗ ಉಳ್ಳವರ ಅಥವಾ ಪೇಟೆಯವರ ಸ್ವತ್ತಾಗಿ ಮಾತ್ರ ಉಳಿದಿಲ್ಲ.. ಬದಲಾಗಿ ಹಳ್ಳಿಯ ಮೂಲೆ ಮೂಲೆಗೂ ಅದರ ಛಾಪು ಪಸರಿಸಿದೆ..ನನ್ ಹೊಟ್ಟೆ ಸಣ್ಣಗಾಗಬೇಕು, ನನ್ ಟೆನ್ಶನ್ ಕಡಿಮೆಯಾಗಬೇಕು, ಬಳುಕುವ ಸೊಂಟ ನಂಗಿರಬೇಕು ಎಂಬ ಬೇಕುಗಳ ನಡುವೆಯೇ, ಜನರಲ್ಲಿ ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅರಿವು ಮೂಡಿದೆ. ರೋಗ ಬಂದ್ಮೇಲೆ ಕಡಿಮೆ ಮಾಡೋದಿಕ್ಕೆ ಸಾಹಸ ಪಡೋದಕ್ಕಿಂದ, ಬರದೇ ಇದ್ದ ರೀತಿ ಜೀವನಶೈಲಿ ರೂಢಿಸಿಕೊಳ್ಳಬೇಕೆಂಬ ಮನಸ್ಥಿತಿಯೂ ಇಂದು ಹೆಚ್ಚಾಗ್ತಾ ಇದೆ. ಆರೋಗ್ಯಕರ ಜೀವನ ನಮ್ಮದಾಗಬೇಕಾದ್ರೆ ಬೆಳಗಿನ ನಿದ್ರೆಗೆ ಸ್ವಲ್ಪ ಕತ್ತರಿ ಹಾಕೋಣ ಬನ್ನಿ..
ಕೆಲವೊಂದು ವರ್ಷಗಳ ಹಿಂದಷ್ಟೇ ಬೆಳಿಗ್ಗೆ ವಾಕಿಂಗ್ ಹೋಗೋದು ಅಂದ್ರೆ ಅದು ಪೇಟೆಯ ಮಂದಿಗೆ ಮಾತ್ರ ಲಾಯಕ್ಕು ಅನ್ನೋ ಮಾತಿತ್ತು.. ಹಳ್ಳಿಯಜನರಿಗೆ ಅದರ ಅವಶ್ಯಕತೆಯೂ ತುಂಬಾ ಬರ್‍ತಾ ಇರಲಿಲ್ಲ..ಆದರೆ ಈಗ ಜೀವನಶೈಲಿಯೂ ಬದಲಾಗಿದೆ.. ಇಡೀ ದಿನ ಆಫೀಸಿನಲ್ಲಿ ಕೂತು ಕೂತು ಹೊಟ್ಟೆಯ ಭಾಗ ಉಬ್ಬಿದರೆ, ಏನೇನೋ ಕೆಲಸ ಅಂತ ಮನಸ್ಸಿಗೊಂದಿಷ್ಟು ಟೆನ್ಷನ್.. ಇದೆಲ್ಲದರ ಮಧ್ಯೆನೂ ನಾ ಸುಂದರವಾಗಿ ಕಾಣಬೇಕೆಂಬ ಬಯಕೆಆ॒ದ್ದರಿಂದಲೇ ಶುರುವಾಗಿದೆ ವಾಕಿಂಗ್ ಬಗೆಗಿನ ಅರಿವು.. ವಾಕಿಂಗ್ ಅನ್ನೋದು ಚಿಕ್ಕ ಮಕ್ಕಳಿಂದ ಹಿಡಿದು, ಯುವಕ ಯುವತಿಯರು, ಆಂಟಿ ಅಂಕಲ್, ಅಲ್ಲದೇ ಅಜ್ಜ ಅಜ್ಜಿಯವರೆಗೂ ನಿದ್ರೆಯನ್ನು ಕೆಡಿಸಿದೆ ಎಂದರೆ ಲೆಕ್ಕಾ ಹಾಕಿ ವಾಕಿಂಗ್‌ನ ಫವರು ಏನೆಂದು..
ಇಂದು ವಾಕಿಂಗ್‌ನ ಪರಿಮಳ ದಿಲ್ಲಿಯಿಂದ ಹಳ್ಳಿಗೂ ಹರಿದಿದೆ. ಬೆಳಿಗ್ಗೆ ಹಂಗೇ ಸುಮ್ನೆ ಕಣ್ ಹಾಯ್ಸಿದ್ರೆ ಸಾಕು..ರಸ್ತೆಯಲ್ಲಿ ಒಂದಿಷ್ಟು ಜನ ಬ್ರಿಸ್ಕ್ ವಾಕ್ ಮಾಡ್ತಾ ಇದ್ರೆ, ಮೈದಾನದಲ್ಲಿ ತಾ ಮುಂದೆ ತಾ ಮಂದೆ ಎಂದು ನಡೆದಾಡುವ ಜನರು.. ಅವರ ಮಧ್ಯದಲ್ಲಿಯೇ ಇರುವಷ್ಟು ದಿನ ಆರೋಗ್ಯದಿಂದ ಬದುಕಬೇಕೆಂದು ಮನಸ್ಥಿತಿ ಹೊತ್ತು ನಿಧಾನವಾಗಿ ಸಾಗುತ್ತಿರುವ ಹಿರಿಯಜೀವಗಳು.. ಜೀವನದಲ್ಲಿ ಎಲ್ಲಾ ಇದ್ದೂ ಮನಸ್ಸು ನೆಮ್ಮದಿಯಿಂದ ಇಲ್ಲದಿದ್ದರೆ ಏನು ಪ್ರಯೋಜನ ಎಂದು, ಮಾನಸಿಕ ಉಲ್ಲಾಸಕ್ಕಾಗಿ ಬರುವ ಇನ್ನೊಂದಿಷ್ಟು ಜನರು.. ಅಪ್ಪ ಅಮ್ಮ ಬರ್‍ತಾರೆ ಅಂತ ಜೊತೆಗೇ ಬರೋ ಮಕ್ಕಳು.. ಒಟ್ಟಾರೆ ಎಲ್ಲರೂ ಒಂದಲ್ಲ ಒಂದು ಆರೋಗ್ಯದ ದೃಷ್ಟಿಯಿಂದ ಉದ್ದೇಶವನ್ನು ಹೊತ್ತೇ ಬಂದವರು..
ಹಿಂದೆಲ್ಲಾ ಗದ್ದೆಯಲ್ಲಿ, ತೋಟದಲ್ಲಿ ಮೈಬಗ್ಗಿಸಿ ದುಡಿಯೋದ್ರಿಂದೋ ಏನೋ, ಗಟ್ಟಿ ಮುಟ್ಟಾಗಿ ಸಂಚೂರಿ ಬಾರ್‍ಸೋವರೆಗೂ ಬದುಕುಳಿಯುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ..ಆದ್ರೆ ಇಂದು ಇಪ್ಪತ್ತು ವರ್ಷವಾದವನೂ ಬೆನ್ನುನೋವು, ಮಂಡಿನೋವು ಎಂದು ಬಳಲಿದರೆ ಆಶ್ಚರ್ಯಪಡಬೇಕಾದ್ದೇನಿಲ್ಲ.. ಎಲ್ಲಾ ರೋಗ ಬರೋಕ್ಕಿಂತ ಮುಂಚೆ ಒಳ್ಳೇ ಅಭ್ಯಾಸವನ್ನು ರೂಢಿಸಿಕೊಳ್ಳೋ ಮನಸ್ಥಿತಿ ಇತ್ತೀಚಿಗೆ ಬೆಳೀತಾ ಇದೆ..
ನಿಯಮಿತವಾಗಿ ವಾಕಿಂಗ್ ಮಾಡೋದ್ರಿಂದ, ಬೊಜ್ಜು, ಕಾಲುನೋವು, ಸಂಧಿವಾತ, ಬೆನ್ನುಬಾಗುವುದು, ಗ್ಯಾಸ್‌ಟ್ರಿಕ್ ಮುಂತಾದ ಎಷ್ಟೋ ಭೌತಿಕವಾದ ಖಾಯಿಲೆಗಳು ಕಡಿಮೆಯಾಗೋದಲ್ದೇ, ಮಾನಸಿಕತೆಗೆ ಸಂಬಂಧಿಸಿದ ಸಿಟ್ಟು, ಟೆನ್ಷನ್, ಗೊಂದಲಗಳೆಲ್ಲಾ ದೂರವಾಗ ಮನಸ್ಸು ಪ್ರಶಾಂತಗೊಳ್ಳುತ್ತದೆ..ನಸುಕಿನ ಚುಮುಚುಮು ಚಳಿಯ ಶಕ್ತಿಯೇ ಅಂತದ್ದು, ಸೂರ್‍ಯನ ಎಳೆಬಿಸಿಲಿನಿಂದ ವಿಟಮನ್‌ಗಳೂ ದೊರಕುತ್ತವೆ.. ಒಂದು ಗಂಟೆ ವಾಕಿಂಗ್ ಮಾಡೋದ್ರಿಂದ ಇಡೀ ದಿನವೂ ಚಟುವಟಿಕೆಯಿಂದಲೇ ಕೂಡಿರುತ್ತದೆ.. ಯಾವುದೇ ಕೆಲಸ ಮಾಡೋದಿಕ್ಕೆ ಹೋದ್ರೂ ಏಕಾಗ್ರತೆಯಿರುತ್ತದೆಯೆಂದ್ರೆ, ಅತಿಶಯೋಕ್ತಿಯಾಗಲಾರದು…
ಈ ವಾಕಿಂಗ್‌ನಿಂದ ಆರೋಗ್ಯಕರ ಜೀವನದ ಜೊತೆಗೆ ಸಾಮಾಜಿಕ ಸಂಬಂಧವೂ ಬೆಳೆಯುತ್ತದೆ.. ವಾಕಿಂಗ್ ಮಾಡುತ್ತಲೇ ಪರಿಚಯವಾದ ಅದೆಷ್ಟೋ ಮಂದಿ ದಿನ ಕಳೆದಂತೆ, ಸ್ನೇಹಿತರಾಗಿಬಿಡುತ್ತಾರೆ.. ಚುಮ್ಮೆನ್ನುವ ಆ ಚಳಿಯ ವಾತಾವರಣದ ಸವಿಯ ಜೊತೆಗೆ ಮನಸ್ಸೊಂದಷ್ಟು ಹೊತ್ತು, ಕಲ್ಪನೆಯಲ್ಲಿ ಮುಳುಗುವುದೆಂದರೆ, ತಪ್ಪಾಗಲಾರದು..ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಾಕಿಂಗ್ ಮಾಡೋದ್ರಿಂದ ರೋಗದಿಂದ ದೂರ ಇರಬಹುದೆಂದೇ ಹೇಳುತ್ವೆ..ನೋಡಿ ವಾಕಿಂಗ್ ಎಂದರೆ ದೇಹಕ್ಕೂ ಮನಸ್ಸಿಗೂ ಬೊಂಬಾಟ್‌ಭೋಜನವಿದ್ದಂತೆ.
*****
ಹೂಂ… ಚೆನ್ನಾಗಿದೆ ಚೆನ್ನಾಗಿದೆ. ಆದರೆ ವಾಕಿಂಗ್ ಹೋಗುವಾಗ ಹೆಡ್ ಫೋನ್ ಹಾಕ್ಕೊಳ್ಳದೇ ಹೋದರೆ ಇನ್ನೂ ಒಳ್ಳೆಯದು ಅಲ್ಲವೇ…